ಮಟ್ಕಾ ದಂಧೆ: ಇಬ್ಬರ ಸೆರೆ

ಹೊಸಂಗಡಿ: ಹೊಸಂಗಡಿ ಪೇಟೆಯಲ್ಲಿ ಮಟ್ಕಾದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಮಂಜೇಶ್ವರ ಠಾಣೆ ಎಸ್.ಐ. ನಿಖಿಲ್ ಬಂಧಿಸಿದ್ದಾರೆ. ಇವರಿಂದ ಒಟ್ಟು ೧೩೩೦ ರೂ.ವನ್ನು ವಶಪಡಿಸಿದ್ದಾರೆ. ಮಿತ್ತಕನಿಲ ನಿವಾಸಿ ರವೀನ್ ಕುಮಾರ್ (೪೧), ಸೋಮೇಶ್ವರ ನಿವಾಸಿ ಸುರೇಶ್ (೫೧) ಸೆರೆಯಾದವರು.

ಉಪ್ಪಳ ರೈಲ್ವೇ ಗೇಟ್ ಒಂದು ವಾರ ಮುಚ್ಚುಗಡೆ: ಮುಸೋಡಿ ಸಹಿತ ಪರಿಸರ ಪ್ರದೇಶದ ಜನರಿಗೆ ತೀವ್ರಗೊಂಡ ಸಮಸ್ಯೆ

ಉಪ್ಪಳ: ಉಪ್ಪಳ ರೈಲ್ವೇ ಗೇಟ್ ಪರಿಸರದಲ್ಲಿ ಇಂಟರ್ ಲಾಕ್ ಅಳವಡಿಸುವ ಕಾಮಗಾರಿ ಹಾಗೂ ಸರ್ವೀಸ್ ರಸ್ತೆ ಕಾಮಗಾರಿಯ ಹಿನ್ನೆಲೆಯಲ್ಲಿ ಒಂದು ವಾರ ತನಕ ಇಲ್ಲಿನ ರೈಲ್ವೇ ಗೇಟ್‌ನ್ನು ಮುಚ್ಚುಗಡೆಗೊಳಿಸಲಾಗುತ್ತಿದ್ದು, ಇದರಿಂದ ಮೂಸೋಡಿ, ಶಾರದಾನಗರ, ಮಣಿಮುಂಡ ಸಹಿತ ಪರಿಸರದ ಸಮುದ್ರ ತೀರದ ಜನರ ಸುಗಮ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿದೆ. ನಿನ್ನೆಯಿಂದ ಗೇಟ್ ಮುಚ್ಚುಗಡೆಗೊಳಿಸಿ ಇಂಟರ್ ಲಾಕ್ ಅಳವಡಿಸುವ ಕೆಲಸವನ್ನು ಆರಂಭಿಸಲಾಗಿದೆ. ಒಂದು ವಾರ ಮುಚ್ಚುಗಡೆಗೊಳಿಸಲಾಗುವುದಾಗಿ ತಿಳಿದುಬಂದಿದೆ. ಮಣಿಮುಂಡ ಹಾಗೂ ಮೂಸೋಡಿಯಿಂದಾಗಿ ರೈಲ್ವೇ ಅಂಡರ್ ಪಾಸ್ ಮೂಲಕ ತಾತ್ಕಾಲಿಕ …

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಚಿಕಿತ್ಸೆ ಮೊಟಕು: ಜನಕೀಯ ವೇದಿಯಿಂದ ಪ್ರತಿಭಟನೆ

ಉಪ್ಪಳ: ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲಿ ಐಪಿ, ತುರ್ತುನಿಗಾ ವಿಭಾಗವನ್ನು ಮೊಟಕು ಗೊಳಿಸಿರುವುದನ್ನು ಪ್ರತಿಭಟಿಸಿ ಜನಕೀಯ ವೇದಿ ಆಸ್ಪತ್ರೆಯ ಮುಂಭಾಗ ವಿನೂತನ ರೀತಿಯಲ್ಲಿ ಚಳವಳಿ ನಡೆಸಿತು. ವೈದ್ಯರು ಹಾಗೂ ಚಿಕಿತ್ಸೆಯಿಲ್ಲದ ಆಸ್ಪತ್ರೆಯ ಮುಂಭಾಗ ರೋಗಿಯನ್ನು ಮಲಗಿಸಿ ಸಮಾ ಧಾನಪಡಿಸುವ ದಯನೀಯ ಸ್ಥಿತಿ ಹಾಗೂ ಬಡವರಾದ ರೋಗಿಗಳ ಅಸಹನೀಯ ಕತೆಯನ್ನು ಚಳವಳಿಯಲ್ಲಿ ತೋರಿಸಲಾಯಿತು. ಇಲಾಖೆಯ ಸಚಿವೆ ರಾಜ್ಯದಾ ದ್ಯಂತ ಸಂಚರಿಸಿ ಆಸ್ಪತ್ರೆಗಳಲ್ಲಿ ಆಧುನಿಕ ರೀತಿಯ ಸೌಕರ್ಯ ಗಳನ್ನು ಏರ್ಪಡಿಸುವುದಾಗಿ ಹೇಳುತ್ತಿ ರುವಾಗ ರಾಜ್ಯದ ಉತ್ತರ ಭಾಗದ ತುತ್ತ …

ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ನಿಧಿ ಸಮರ್ಪಣಾ ಕಾರ್ಯಕ್ರಮ, ವಿಜ್ಞಾಪನಾ ಪತ್ರ ಬಿಡುಗಡೆ ೫ರಂದು

ಮಂಜೇಶ್ವರ: ಮಂಜೇಶ್ವರ ಕನಿಲ ಶ್ರೀ ಭಗವತೀ ಕ್ಷೇತ್ರದ ಪುನರ್ ನಿರ್ಮಾಣ ಗೊಳ್ಳಲಿರುವ ಸಮಗ್ರ ಕ್ಷೇತ್ರ ನಿರ್ಮಾಣ ಕಾರ್ಯಗಳ ನಿಧಿ ಸಂಗ್ರಹಕ್ಕಾಗಿ ನಿಧಿ ಸಮರ್ಪಣಾ ಕಾರ್ಯಕ್ರಮ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ ಈ ತಿಂಗಳ ೫ರಂದು ನಡೆಯಲಿದೆ. ಬೆಳಿಗ್ಗೆ ೮.೩೦ಕ್ಕೆ ೧೦೮ ಕಾಯಿಗಳ ಮಹಾಗಣಯಾಗ, ೧೧ ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ್ ಸ್ವಾಮೀಜಿ, ಕೊಂಡೆ ವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ …

ಮಧೂರು ಕ್ಷೇತ್ರದಲ್ಲಿ ರಾಜಗೋಪುರ ನಿರ್ಮಿಸಲು ತೀರ್ಮಾನ: ವೆಚ್ಚ ನಿರೀಕ್ಷೆ ಒಂದು ಕೋಟಿ ರೂ.

ಮಧೂರು: ದಕ್ಷಿಣ ಭಾರತದ ಪ್ರಧಾನ ಧಾರ್ಮಿಕ ತೀರ್ಥಾಟನಾ ಕೇಂದ್ರಗಳಲ್ಲೊಂದಾಗಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ  ರಾಜಗೋಪುರ ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಒಂದು ಕೋಟಿ ರೂ.ನಷ್ಟು ಖರ್ಚು ಅಂದಾಜಿಸಲಾಗಿದೆ. ರಾಜಗೋಪುರಕ್ಕೆ ನವೆಂಬರ್ ೨೫ರಂದು ಶಿಲಾನ್ಯಾಸ ಕಾರ್ಯ ನೆರವೇರಿಸಲು ಶ್ರೀ ಕ್ಷೇತ್ರದ ನವೀಕರಣೆ ಸಮಿತಿ ಚಿಂತನೆ ನಡೆಸಿದೆ. ಕೇಂದ್ರ ಸಚಿವರೋರ್ವರಿಂದ ಇದರ ಶಿಲಾನ್ಯಾಸ ನಡೆಸುವ ಬಗ್ಗೆಯೂ ಸಮಿತಿ ಆಲೋ ಚಿಸುತ್ತಿದೆ. ೩೦.೬ ಅಡಿ ಉದ್ದ, ೧೭.೩ ಅಡಿ  ವಿಸ್ತೀರ್ಣ ಹಾಗೂ ೪೧ ಅಡಿ ಎತ್ತರದಲ್ಲಿ ಈ ಗೋಪುರ …

ಅನಧಿಕೃತ ಬೀದಿ ವ್ಯಾಪಾರ ವಿರುದ್ಧ ವ್ಯಾಪಾರಿಗಳಿಂದ ಬೀದಿ ವ್ಯಾಪಾರ ಪ್ರತಿಭಟನೆ

ಕಾಸರಗೋಡು: ವ್ಯಾಪಾರ ಸಂಸ್ಥೆಗಳಿಗೆ ದಾರಿಯನ್ನು ಮುಚ್ಚಿ ಕಾಲುದಾರಿ ಹಾಗೂ ಪಾರ್ಕಿಂಗ್ ಸ್ಥಳವನ್ನು ಸ್ವಾಧೀನಪಡಿಸಿ ಗ್ರಾಹಕರ, ಜನರ ಪಾರ್ಕಿಂಗ್ ಸೌಕರ್ಯ, ಸಂಚಾರ ಸೌಕರ್ಯವನ್ನು ನಿಷೇಧಿಸಿ ನಡೆಸುವ ಬೀದಿ ವ್ಯಾಪಾರ ಮಾಫಿಯಾ ವಿರುದ್ಧ ಪ್ರತಿಕಾತ್ಮಕ ಬೀದಿ ವ್ಯಾಪಾರ ನಡೆಸಿ ಕಾಸರ ಗೋಡು ಮರ್ಚೆಂಟ್ಸ್ ಅಸೋಸಿ ಯೇಶನ್ ಪ್ರತಿಭಟಿಸುತ್ತಿದೆ. ನವೆಂಬರ್ ೨೮ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಳೆ ಬಸ್ ನಿಲ್ದಾಣದ ಮುಬಾರಕ್ ಮಸೀದಿ ಬಳಿಯಿಂದ ಮಾರ್ಕೆಟ್ ರಸ್ತೆವರೆಗೆ ಎಂ.ಜಿ. ರಸ್ತೆಯಲ್ಲಿ ಪ್ರತಿಭಟನೆ ವ್ಯಾಪಾರ ಎಂಬ ನೆಲೆಯಲ್ಲಿ  ಬೀದಿ ವ್ಯಾಪಾರ …

ಹಣ ಪಡೆದು ವಂಚನೆ: ಕೇಸು ದಾಖಲು

ಕುಂಬಳೆ: ಉದ್ಯೋಗ ಭರವಸೆ ಯೊಡ್ಡಿ ೧.೬೦ ಲಕ್ಷ ರೂಪಾಯಿ ಪಡೆ ದು ವಂಚಿಸಲಾಗಿದೆ ಎಂಬ ಆರೋಪ ದಂತೆ ಕುಂಬಳೆ ಪೊಲೀಸರು ಐಟಿ ಆಕ್ಟ್ ಪ್ರಕಾರ ಕೇಸು ದಾಖಲಿಸಿ ಕೊಂಡಿದ್ದಾರೆ. ಕೊಡ್ಯಮ್ಮೆ ಮುಳಿಯಡ್ಕ ಕೋಟಂ ಹೌಸ್‌ನ ಅಫ್ಸಲುದ್ದೀನ್ (೨೨) ಎಂಬವರು ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ.

ವಿದ್ಯುತ್ ದರ ಏರಿಕೆ ತೀರ್ಮಾನ ಎರಡು ದಿನಗಳೊಳಗೆ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಕುರಿತಾದ ಅಧಿಸೂಚನೆ ರಾಜ್ಯ ವಿದ್ಯುತ್ ರೆಗ್ಯುಲೇಟರಿ ಆಯೋಗ ಮುಂದಿನ ಎರಡು ದಿನಗಳೊಳಗಾಗಿ ಹೊರಡಿ ಸುವ ಸಾಧ್ಯತೆಯಿದೆ. ಜ್ಯಾರಿಯಲ್ಲಿ ರುವ ದರದ ಅವಧಿ ನವಂಬರ್ ೩೧ರಂದು ಕೊನೆಗೊಳ್ಳಲಿದೆ.

ಶ್ರೀ ಧೂಮಾವತೀ ದೈವಸ್ಥಾನ ಮಹಾದ್ವಾರ ನಿರ್ಮಾಣಕಾರ್ಯಕ್ಕೆ ಚಾಲನೆ

ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಏರೋಟಿ ಶ್ರೀ ಧೂಮಾವತೀ ದೈವಸ್ಥಾನಕ್ಕೆ ತೆರಳುವ ಮುಖ್ಯ ರಸ್ತೆ ಅಂಚಿಗೆ ಮಹಾದ್ವಾರ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸೇವಾ ಸಮಿತಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಸರ್ಪಂಗಳ ಗುದ್ದಲಿ ಪೂಜೆ ನೆರವೇರಿಸಿದರು. ಸಂಕಪ್ಪ ರೈ ಬಜಕೂಡ್ಲು, ಬಾಲಕೃಷ್ಣ  ರೈ, ಚಂದ್ರಶೇಖರ ಆಚಾರ್ಯ, ಡಾ. ಕೃಷ್ಣಮೋಹನ, ಬಾಲಕೃಷ್ಣ ಕುಲಾಲ್, ದಾಮೋದರ ಬಜಕೂಡ್ಲು, ಕರುಣಾಕರ ಬಕೂಡ್ಲು, ಮಹಾದ್ವಾರ ನಿರ್ಮಾಣ ಸಮಿತಿ ಸದಸ್ಯರು, ಊರವರು ಪಾಲ್ಗೊಂಡಿದ್ದರು. ಭಕ್ತರು ಹಾಗೂ …

ಆರಿಕ್ಕಾಡಿ ದೈವಸ್ಥಾನದ ಜೀರ್ಣೋದ್ಧಾರ ವಿಜ್ಞಾಪನಾ ಪತ್ರ ಬಿಡುಗಡೆ

ಕುಂಬಳೆ: ಆರಿಕ್ಕಾಡಿ ಶ್ರೀ ಪಿಲಿಚಾ ಮುಂಡಿ, ಅಣ್ಣಪ್ಪ ಪಂಜುರ್ಲಿ, ಕೋಮ ರಾಯ ದೈವಸ್ಥಾನದ ವಿಜ್ಞಾಪನಾ ಪತ್ರ ವನ್ನು ಸಮಿತಿಯ ಸಂರಕ್ಷಕ ಬ್ರಹ್ಮಶ್ರೀ ಚಕ್ರಪಾಣಿ ದೇವಪೂಜಿತ್ತಾಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾ ಯಿತು. ಸಮಿತಿಯ ಅಧ್ಯಕ್ಷ ಮಂಜು ನಾಥ ಆಳ್ವ ಮಡ್ವ, ದೂಮಣ್ಣ ಶೆಟ್ಟಿ ಕೊಡ್ಯಮ್ಮೆಗುತ್ತು, ನಾಗೇಶ್ ಕಾರ್ಳೆ, ರಾಮಚಂದ್ರ ಶೆಟ್ಟಿ ಬೀರಂಟಿಕೆರೆ ಹಾಗೂ ಸಮಿತಿಯ ಕಾರ್ಯದರ್ಶಿಗಳಾದ ಕೃಷ್ಣಪ್ಪ ಪೂಜಾರಿ ಶೇಣಿ, ಲಕ್ಷ್ಮಣ ಆಳ್ವ ಕುಂಡಾಪುಗುತ್ತು, ರಮೇಶ್ ರೈ ಕುಂಡಾ ಪುಗುತ್ತು, ಲೋಕನಾಥ ಶೆಟ್ಟಿ ಉಜಾರು ಸುಬ್ಬಣ್ಣ ಬಂಬ್ರಾಣಬೈಲು, ಸಂಜೀವ ಪೂಜಾರಿ …