ಬಸ್ಸಿಗೆ ಹಾನಿ: ಗಾಜು ಪುಡಿಗೈಯ್ಯಲ್ಪಟ್ಟು ವಿದ್ಯಾರ್ಥಿನಿಗೆ ಗಾಯ

ಕಾಸರಗೋಡು: ಬಂದಡ್ಕ ಆನೆಕಲ್ಲಿನಲ್ಲಿ ಖಾಸಗಿ ಬಸ್‌ಗೆ ವ್ಯಕ್ತಿಯೋರ್ವ ಹಾನಿಗೈದ ಘಟನೆ ನಡೆದಿದೆ. ಇಂದು ಬೆಳಿಗ್ಗೆ ಬಂದಡ್ಕದಿಂದ ಕಾಸರಗೋಡಿಗೆ ತೆರಳುತ್ತಿದ್ದ ತತ್ವಮಸಿ ಸ್‌ಗೆ ಬೈಕ್‌ನಲ್ಲಿ ತಲುಪಿದ ವ್ಯಕ್ತಿ ಹಾನಿಯೆಸಗಿದ್ದಾನೆ. ಬಸ್‌ಗೆ ಅಡ್ಡವಾಗಿ ಬೈಕ್ ನಿಲ್ಲಿಸಿದ ಆತ ಹೆಲ್ಮೆಟ್‌ನಿಂದ ಗಾಜಿಗೆ ಹೊಡೆದು  ಪುಡಿಗೈದಿರುವುದಾಗಿ ದೂರಲಾಗಿದೆ. ಉಣ್ಣಿ ಎಂಬ ವ್ಯಕ್ತಿ ಹಾನಿನಡೆಸಿರು ವುದಾಗಿ ಹೇಳಲಾಗುತ್ತಿದೆ.  ಬಸ್ಸಿನ  ಗಾಜು ಪುಡಿಗೈಯ್ಯಲ್ಪಟ್ಟು ಸಿಡಿದ ಪರಿಣಾಮ ಓರ್ವೆ ವಿದ್ಯಾರ್ಥಿನಿಯ ಕಣ್ಣಿಗೆ ಗಾಯವಾಗಿದೆ.  ಬೇಡಗಂ ಪೊಲೀಸರು ಕೇಸು ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಆಕ್ರಮಣಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

ವಿದ್ಯುತ್ ದರ ಶೀಘ್ರ ಏರಿಕೆ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ವಿದ್ಯುತ್ ದರ ಶೀಘ್ರ ಹೆಚ್ಚಳವಾಗಲಿದೆ ಎಂಬ ಸೂಚನೆಯಿದೆ. ಇಂದು ಅಥವಾ ನಾಳೆಯೇ ಈ ಬಗ್ಗೆ ಘೋಷಣೆಯಾಗಲಿ ದೆಯೆಂದೂ ಹೇಳಲಾಗುತ್ತಿದೆ. ರಾಜ್ಯ ವಿದ್ಯುತ್ ರೆಗ್ಯುಲೇಟರಿ ಕಮಿಶನ್ ಇಂದೇ ದರ ಹೆಚ್ಚಿಸುವ ಬಗ್ಗೆ ಆಲೋ ಚಿಸಿತ್ತು. ಆದರೆ  ಕೇರಳ ರಾಜ್ಯೋತ್ಸವ ದಿನದಂದೇ ದರ ಹೆಚ್ಚಿಸಲಿರುವ ನಿರ್ಧಾರವನ್ನು ಮುಖ್ಯಮಂತ್ರಿಯ ನಿರ್ದೇಶದ ಹಿನ್ನೆಲೆಯಲ್ಲಿ ಹಿಂತೆಗೆದು ಕೊಂಡಿ ರುವುದಾಗಿ ಹೇಳಲಾಗುತ್ತಿದೆ. ನೂತನ ದರ ನಿರ್ಣಯಕ್ಕೆ  ಅಂತಿಮ ಅಂಗೀಕಾರ ನೀಡಲು ನಿನ್ನೆ ರೆಗ್ಯುಲೇಟರಿ ಕಮಿಷನ್ ಸಭೆ ನಡೆದಿತ್ತು.

ಲಾವ್ನಿನ್ ಹಗರಣ: ವಿಚಾರಣೆ ಫೆ. ೬ಕ್ಕೆ ಮುಂದೂಡಿಕೆ

ಹೊಸದಿಲ್ಲಿ: ಎನ್‌ಎಸ್‌ಸಿ ಲಾವ್ನಿನ್ ಹಗರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮತ್ತ್ತೆ ಫೆಬ್ರವರಿ ೬ಕ್ಕೆ ಮುಂದೂಡಿದೆ. ಈ ಪ್ರಕರಣದ ವಿಚಾರಣೆ ನಿನ್ನೆ ಆರಂಭಗೊಳ್ಳಬೇಕಾಗಿತ್ತು. ಆದರೆ ಸಮಯದ ಅಭಾವದಿಂದ ನ್ಯಾಯಾಲಯ ಅದನ್ನು ಬಳಿಕ ಫೆ. ೬ಕ್ಕೆ ಮುಂದೂಡಿದ್ದರು.

ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೧೦೩ ರೂ. ಹೆಚ್ಚಳ

ನವದೆಹಲಿ: ನವೆಂಬರ್ ತಿಂಗಳ ಮೊದಲ ದಿನವೇ ಜನತೆಗೆ ಬಿಗ್ ಶಾಕ್ ನೀಡಿ ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೧೦೩ ರೂ. ಏರಿಕೆ ಮಾಡಲಾಗಿದೆ. ಇದರಿಂದಾಗಿ ೧೯ ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ೧೦೩ ರೂ.ನಂತೆ ಹೆಚ್ಚಿಸಲಾಗಿದೆ. ಕಳೆದ ೩೨ ದಿನಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಒಟ್ಟು ೩೧೦ ರೂ. ತನಕ ಏರಿಕೆ ಉಂಟಾಗಿದೆ.

ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆಂಟನಿ ವಿರುದ್ಧ ಕೇಸು

ಕಾಸರಗೋಡು: ಕಾಲೇಜು ಬಳಿ ಬಸ್ ನಿಲುಗಡೆಗೊಳಿಸದ ಹೆಸರಲ್ಲಿ ಕುಂಬಳಯಲ್ಲಿ ಕೆಲವು ವಿದ್ಯಾರ್ಥಿನಿ ಯರು ಬಸ್ಸನ್ನು ತಡೆದು ನಿಲ್ಲಿಸಿದ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮತೀಯ ಭಾವನೆ ಕೆರಳಿಸುವ ರೀತಿಯ ಸಂದೇಶವನ್ನು ಚಿತ್ರಗಳ ಸಹಿತ ರವಾನಿಸಲಾಗಿದೆಯೆಂದು ಆರೋಪಿಸಿ ನೀಡಲಾದ ದೂರಿನಂತೆ ಬಿಜೆಪಿ  ರಾಷ್ಟ್ರೀಯ ವಕ್ತಾರ ಅನಿಲ್ ಆಂಟನಿ ವಿರುದ್ಧ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಹೊರತಾಗಿ ಆನಂದಿ ನಾಯರ್ ಅಲಿಯಾಸ್ ಆನಂದಿ ಸನಾತನಿ ಎಂಬವರ ವಿರುದ್ಧವೂ ಇದೇ ರೀತಿಯ ಪ್ರಕರಣ ದಾಖಲಿಸಲಾಗಿದೆ. ಎಸ್‌ಎಫ್‌ಐ …

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್ ವಿರುದ್ಧ ಕೇಸು

ಎರ್ನಾಕುಳಂ: ಮತೀಯ ಸಾಮರಸ್ಯಕ್ಕೆ ಭಂಗ ಉಂಟುಮಾಡುವ ರೀತಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರನ್‌ರ ವಿರುದ್ಧ ಕೊಚ್ಚಿ  ಸಿಟಿ ಪೊಲೀಸರು ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಂದ್ರ ಸಚಿವರ ವಿರುದ್ಧ ಮಾತ್ರವಲ್ಲ ಇದೇ ರೀತಿಯ ಆರೋಪದಂತೆ ಇತರ ೨೨ ಪ್ರಕರಣಗಳನ್ನು ಪೊಲೀಸರು ರಾಜ್ಯದಾದ್ಯಂತವಾಗಿ ದಾಖಲಿಸಿಕೊಂಡಿದ್ದಾರೆ.

ಖಾಸಗಿ ಬಸ್‌ಗಳ ಸೂಚನಾ ಮುಷ್ಕರ ತೀವ್ರಗೊಂಡ ಸಂಚಾರ ಸಮಸ್ಯೆ

ಕಾಸರಗೋಡು: ಖಾಸಗಿ ಬಸ್ ಮಾಲಕರು ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ಇಂದು ರಾಜ್ಯದಾದ್ಯಂತ ಬಸ್ ಮುಷ್ಕರ ನಡೆಸುತ್ತಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದ ಆರಂಭಗೊಂಡ ಮುಷ್ಕರ ಇಂದು ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ವಿದ್ಯಾರ್ಥಿಗಳ ಪ್ರಯಾಣ ದರ ಹೆಚ್ಚಿಸಬೇಕೆಂಬುವುದಾಗಿದೆ ಬಸ್ ಮಾಲಕರ ಪ್ರಧಾನ ಬೇಡಿಕೆಯಾಗಿದೆ. ಅದೇ ರೀತಿ ಬಸ್‌ಗಳಲ್ಲಿ ಕ್ಯಾಮರಾ, ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯಗೊಳಿಸಿದ ಸರಕಾರದ ನಿರ್ಧಾರವನ್ನು ಬಸ್ ಮಾಲಕರು ವಿರೋಧಿಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸದಿದ್ದಲ್ಲಿ ನವೆಂಬರ್ ೨೧ರಿಂದ  ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬಸ್ ಮಾಲಕರ ಸಂಯುಕ್ತ ಸಮಿತಿ ನಿರ್ಧರಿಸಿದೆ. ಇದೇ ವೇಳೆ …

ಅರಣ್ಯಪಾಲಕರ ಮೇಲೆ ಗುಂಡು ಹಾರಾಟ : ಜಿಲ್ಲಾ ಗಡಿಪ್ರದೇಶದಲ್ಲಿ ಕಟ್ಟೆಚ್ಚರ

ಕಾಸರಗೋಡು: ಆರಳಂ ವನ್ಯಜೀವಿ ಕೇಂದ್ರದ ಚಾವಚ್ಚ ಎಂಬಲ್ಲಿ ಅರಣ್ಯ ಪಾಲಕರ ಮೇಲೆ ಗುಂಡು ಹಾರಾಟ ನಡೆಸಿದ ಮಾವೋವಾದಿ ತಂಡವನ್ನು ಪತ್ತೆಹಚ್ಚಲು ತೀವ್ರ ಶೋಧ ನಡೆಯುತ್ತಿದೆ.  ಅರಣ್ಯ, ಪೊಲೀಸ್ ಅಧಿಕಾರಿ ಗಳು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಾವೋ ವಾದಿ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ತಂಡರ್ ಬೋಲ್ಟ್ ಕೂಡಾ ಶೋಧ ಕಾರ್ಯಕ್ಕಾಗಿ ಆರಳಂಗೆ ತಲುಪಿದೆ.  ಗುಂಡು ಹಾರಾಟ ನಡೆದ ಪ್ರದೇಶಗಳ ಸಹಿತ ವಿವಿಧೆಡೆಗಳಲ್ಲಿ ತೀವ್ರ ನಿಗಾ ಇರಿಸಲಾಗಿದೆ. ಶೋಧ ಕಾರ್ಯ ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮಾವೋವಾದಿ ಸಂಘ ಪುಳಿಂಙೋ ಚುಂಡಂ ಮೂಲಕ …

ಕಳಮಶ್ಶೇರಿ ಬಾಂಬ್ ಸ್ಫೋಟ: ಬಂಧಿತ ಕೇವಲ ದಾಳ ; ಮಾಸ್ಟರ್‌ಮೈಂಡ್ ಬೇರೆಯೆಂಬ ಶಂಕೆ

ಎರ್ನಾಕುಳಂ: ಕಳಮಶ್ಶೇರಿಯಲ್ಲಿ ಯಹೋವನ ವಲಯ ಸಮಾವೇಶದಲ್ಲಿ   ಪ್ರಾರ್ಥನಾ ಸಭೆ ನಡೆಯುತ್ತಿದ್ದಾಗ  ಸಂಭವಿಸಿದತ್ರಿವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ ಆರೋಪಿ ಚೆಲವನ್ನೂರು ವೇಲಿಕಗತ್ತ್ತ್ ವೀಟಿಲ್‌ನ ಮಾರ್ಟಿನ್ ಡೊಮಿನಿಕ್ (೫೨)ನನ್ನು ಇಂದು ಎರ್ನಾಕುಳಂ ವಿಶೇಷ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ಹಾಜರುಪಡಿಸುವ ಮೊದಲು ಆರೋಪಿಯನ್ನು  ಬಾಂಬ್ ಸ್ಫೋಟ ನಡೆದ ಸ್ಥಳ, ಆತನ ಮನೆ, ಅತ್ತಾಣಿಯಲ್ಲಿರುವ ಆತನ ಇನ್ನೊಂದು ಮನೆ, ಬಾಂಬ್ ನಿರ್ಮಿಸಿದ  ಕೇಂದ್ರ, ಬಾಂಬ್ ನಿರ್ಮಾಣಕ್ಕಾಗಿ ಸ್ಫೋಟಕ ಸಾಮಗ್ರಿಗಳನ್ನು ಖರೀದಿಸಿದ ಸಂಸ್ಥೆ  ಗಳಿಗೂ ಪೊಲೀಸರು ಒಯ್ದು ಅಲ್ಲಿಂದ …

ಗೃಹಿಣಿಗೆ ಕಿರುಕುಳಕ್ಕೆ ಯತ್ನ: ಪತಿಯ ಸಹೋದರನ ವಿರುದ್ಧ ಕೇಸು

ಮುಳ್ಳೇರಿಯ:  ಯುವತಿಗೆ ಕಿರುಕುಳ ನೀಡಲು ಯತ್ನಿಸಲಾಯಿ ತೆಂಬ ದೂರಿನಂತೆ ಪೊಲೀಸರು ಯುವತಿಯ ಪತಿಯ ಸಹೋದರನ ವಿರುದ್ಧ ಕೇಸು ದಾಖಲಿಸಿಕೊಂ ಡಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೪೦ರ ಹರೆಯದ ಯುವತಿ ನೀಡಿದ ದೂರಿನಂತೆ ಕೇಸು ದಾಖಲಿಸಲಾಗಿದೆ. ಇದೇ ಯುವತಿಯ ದೂರಿನ ಪ್ರಕಾರ ಯುವಕನ ವಿರುದ್ಧ ಈ ಹಿಂದೆಯೂ ಆದೂರು ಪೊಲೀಸರು ಸಮಾನ ಕೇಸು ದಾಖಲಿಸಿಕೊಂಡಿದ್ದರು. ಈ ಕೇಸು ಜ್ಯಾರಿಯಲ್ಲಿರುವಂತೆಯೇ ಮತ್ತೆ ಕಿರುಕುಳಕ್ಕೆ ಯತ್ನ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.