ಅಪರಿಮಿತ ಮಾತ್ರೆ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಹೊಸದುರ್ಗ: ಅಪರಿಮಿತವಾಗಿ ಕಬ್ಬಿಣಾಂಶವಿರುವ ಮಾತ್ರೆ ಸೇವಿಸಿ ಗಂಭೀರಾವಸ್ಥೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟರು. ಪಯ್ಯನ್ನೂರು ಪಾಣಪ್ಪುಳ ಭೀಮನಡಿ ನಿವಾಸಿ ಕೆ.ಪಿ. ಪ್ರಿನ್ಶ (38) ಮೃತಪಟ್ಟ ಯುವತಿ. ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಅಂತ್ಯ ಸಂಭವಿಸಿದೆ. ಆದಿತ್ಯವಾರ ಬೆಳಿಗ್ಗೆ 11 ಗಂಟೆಗೆ ಪ್ರಿನ್ಶಳನ್ನು ಅಸ್ವಸ್ಥ ಸ್ಥಿತಿಯಲ್ಲಿ ಮನೆಯಲ್ಲಿ ಪತ್ತೆಹಚ್ಚಲಾಗಿತ್ತು. ಕೂಡಲೇ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಲಾಯಿತು. ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಮಂಗಳೂ ರಿಗೆ ಕೊಂಡುಹೋಗಲು ವೈದ್ಯರು ನಿರ್ದೇಶಿಸಿದ್ದರು. ಕೆಎಂಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ನಿನ್ನೆ ಬೆಳಿಗ್ಗೆ ಸಾವು ಸಂಭವಿಸಿದೆ. ಪರಿಯಾರಂ ಪೊಲೀಸರು …

ವೈದ್ಯನೆಂದು ತಿಳಿಸಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಯುವಕ ಸೆರೆ

ಕಲ್ಲಿಕೋಟೆ: ವಯನಾಡ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳ ತಪಾಸಣೆ ನಡೆಸಿದ ಯುವಕ ಸೆರೆಗೀಡಾಗಿದ್ದಾನೆ. ಪೇರಾಂಬ್ರ ಮುದುಕಾಡ್ ನಿವಾಸಿ ಜೋಬಿನ್ ಎಂಬಾತನನ್ನು ವಯ ನಾಡ್ ಅಂಬಲವಯಲ್ ಪೊಲೀಸರು ಬಂಧಿಸಿದ್ದಾರೆ. ಕಲ್ಲೋಡು ಎಂಬಲ್ಲಿನ ಬಾಡಿಗೆ ಮನೆಯಿಂದ  ಈತನನ್ನು ಸೆರೆಹಿಡಿಯಲಾಗಿದೆ. ಪೇರಾಂಬ್ರ ಹಾಗೂ ಇತರ  ಕೆಲವೆಡೆಗಳಲ್ಲಿರುವ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಜೋಬಿನ್ ಕೆಲಸ ನಿರ್ವಹಿಸಿದ್ದನು ಎಂದು  ತನಿಖೆಯಲ್ಲಿ ತಿಳಿದುಬಂದಿದೆ.  ಕಲ್ಲಿಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಜೋಬಿನ್ ಅಂಬಲವಯಲ್‌ನ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯನೆಂದು ತಿಳಿಸಿ ರೋಗಿಗಳನ್ನು ತಪಾಸಣೆ …

ಕಾರಿನಲ್ಲಿ ಹ್ಯಾಶಿಶ್ ಸಾಗಿಸಿದ ಪ್ರಕರಣ: ಓರ್ವ ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು: ಕಾರಿನಲ್ಲಿ ಮಾದಕ ವಸ್ತುವಾದ ಹ್ಯಾಶಿಶ್ ಸಾಗಿಸಿದ ಪ್ರಕರಣದ ಎರಡನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶರಾದ ಕೆ. ಪ್ರಿಯಾ ಅವರು ಎರಡು ವರ್ಷ ಕಠಿಣ ಸಜೆ ಹಾಗೂ 20,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕುಂಬಳೆ ಚೇಡಿಕಾವಿನ ಎಂ. ಮುಹಮ್ಮದ್ ಹನೀಫಾ (30) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆಯೆಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಇದೇ ಪ್ರಕರಣದ ಒಂದನೇ ಆರೋಪಿ ಸೀತಾಂಗೋಳಿ …

ಶಾಲಾ ಸಮಯ ಬದಲಾವಣೆ: ಸರಕಾರ ಹಠಮಾರಿತನ ನಿಲುವುಹೊಂದಿಲ್ಲ, ಮುಖ್ಯಮಂತ್ರಿಯ ಅಭಿಪ್ರಾಯ ಕೇಳಿದ ಬಳಿಕ ಸೂಕ್ತ ತೀರ್ಮಾನ-ಸಚಿವ

ತಿರುವನಂತಪುರ: ಶಾಲಾ ತರಗತಿ ಸಮಯ ಬದಲಾವಣೆಗೆ ವಿರುದ್ಧ ಸರಕಾರಕ್ಕೆ ಹಲವು ಮನವಿಗಳು ಸಲ್ಲಿಸಲ್ಪಟ್ಟಿದ್ದು, ಅದನ್ನು ಪರಿಶೀಲಿಸಿ ಆ ಬಗ್ಗೆ  ಮುಖ್ಯಮಂತ್ರಿ ಯೊಂದಿಗೆ ಸಮಾಲೋಚನೆ ನಡೆಸಿ ಈ ವಿಷಯದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲಾಗು ವುದೆಂದು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಇಂದು ಬೆಳಿಗ್ಗೆ ತಿಳಿಸಿದ್ದಾರೆ. ಶಾಲಾ ತರಗತಿ ಸಮಯ ಬದಲಾವಣೆ ವಿಷಯದಲ್ಲಿ ಸರಕಾರ ಯಾವುದೇ ರೀತಿಯ ಹಠಮಾರಿತನ ನಿಲುವು ಹೊಂದಿಲ್ಲ. ಈ ವಿಷಯ ಈಗ ಹೈಕೋರ್ಟ್‌ನ ಪರಿಗಣನಯಲ್ಲಿದೆ. ಆದ್ದರಿಂದ ಹೈಕೋರ್ಟ್ ಅಂಗೀಕಾರ ನೀಡಿದಲ್ಲಿ ಶಾಲಾ ಸಮಯ ಬದಲಾವಣೆಯನ್ನು …

ಜೂನ್ 15ರ ತನಕ ಧಾರಾಕಾರ ಮಳೆ

ತಿರುವನಂತಪುರ: ರಾಜ್ಯದಲ್ಲಿ ಈತಿಂಗಳ 15ರ ತನಕ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಯೆಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ.  ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಆದ್ದರಿಂದ ಈ ಎರಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸ ಲಾಗಿದೆ. ಕೋಟ್ಟಯಂ, ಎರ್ನಾ ಕುಳಂ, ಇಡುಕ್ಕಿ, ತೃಶೂರು, ಪಾಲಕ್ಕಾಡ್, ಮಲಪ್ಪುರಂ, ಕಲ್ಲಿಕೋಟೆ ಮತ್ತು ವಯನಾಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ ಉಂಟಾಗಿದ್ದು ಅದರ ಪರಿಣಾಮ ಕೇರಳದಲ್ಲಿ ಮುಂದಿನ …

ದುರಸ್ತಿ ಕೆಲಸಕ್ಕೆ ಬಂದ ವಿದ್ಯುನ್ಮಂಡಳಿ ಅಧಿಕಾರಿ, ಪೊಲೀಸರ ಮೇಲೆ ಹಲ್ಲೆ: ಮೂವರ ಸೆರೆ

ಕಾಸರಗೋಡು: ದುರಸ್ತಿ ಕೆಲಸ ನಡೆಸಲು ಬಂದ ವಿದ್ಯುನ್ಮಂಡಳಿ ಅಧಿಕಾರಿಗಳು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಮೂವರನ್ನು ನೀಲೇಶ್ವರ ಪೊಲೀಸರು ಬಂಧಿಸಿದ್ದಾರೆ. ನೀಲೇಶ್ವರ ತೈಕೇಕಡಪ್ಪುರಂ ಪರಿಸರ ನಿವಾಸಿಗಳಾದ ಶಾಜಿ, ದಿನೂಪ್, ಸುಮಂತ್ ಬಂಧಿತ ರಾದ ಆರೋಪಿಗಳು. ತೈಕೇ ಕಡಪ್ಪುರ ಕಾಲನಿ ಜಂಕ್ಷನ್‌ನಲ್ಲಿ ವಿದ್ಯುತ್ ಲೈನ್‌ನ ಜಂಪರ್‌ಗೆ ಬೆಂಕಿ ತಗಲಿದುದರಿಂದ ವಿದ್ಯುತ್ ಸರಬರಾಜು ಮೊಟಕುಗೊಂಡಿತ್ತು. ಅದರ ದುರಸ್ತಿ ಕೆಲಸಕ್ಕಾಗಿ ತಲುಪಿದ ವಿದ್ಯುತ್ ಕಚೇರಿಯ ಸಬ್ ಇಂಜಿನಿಯರ್ ಪಿ.ವಿ. ಶಶಿ, ಓವರ್‌ಸೀಯರ್ ಕೆ.ಸಿ. ಶ್ರೀಜನ್, ಲೈನ್‌ಮ್ಯಾನ್‌ಗಳಾದ ಪಿ.ವಿ. ಪವಿತ್ರನ್ …

ಮೀನು ಸಾಕಣೆ ಫಾರ್ಮ್‌ನ ಮಾಲಕನ ಮರಣದಲ್ಲಿ ನಿಗೂಢತೆ: ಮೃತದೇಹ ಇಟ್ಟಿಗೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆ

ವೈಕಂ: ಕೋಟಯಂನಿಂದ ನಾಪತ್ತೆಯಾದ ಫಿಶ್ ಫಾರ್ಮ್ ಮಾಲಕನ ಮೃತದೇಹ ವೈಕಂ ತಲಯಾಳಂ ಕರಿಯಾಟ್‌ನಿಂದ ಪತ್ತೆಹಚ್ಚಲಾಗಿದೆ. ವೈಕಂ ತೊಟ್ಟದಲ್ಲಿ ಫಾರ್ಮ್ ನಡೆಸುವ ಟಿ.ವಿ.ಪುರಂ ಚೆಮ್ಮನತ್ತುಂಗರ ವಿಪಿನ್ ನಾಯರ್ (52) ಮೃತಪಟ್ಟವರು. ಸೋಮವಾರದಿಂದ ಇವರು ನಾಪತ್ತೆ ಯಾಗಿದ್ದರು. ಬಳಿಕ ಪೊಲೀಸರು ನಡೆಸಿದ ಹುಡುಕಾಟದಲ್ಲಿ ನಿನ್ನೆ ಸಂಜೆ 3 ಗಂಟೆಗೆ ಫಾರ್ಮ್‌ನ ಸಮೀಪದಿಂದ ಮೃತದೇಹ ಲಭಿಸಿದೆ. ಕೊಲೆಪಾತಕವಾಗಿರಬೇಕೆಂದು ಪೊಲೀಸರು ಪ್ರಾಥಮಿಕ ಶಂಕೆ ವ್ಯಕ್ತಪಡಿಸಿದ್ದಾರೆ. ಫಾರ್ಮ್‌ನಲ್ಲಿನ ತಾತ್ಕಾಲಿಕ ಶೆಡ್‌ನಲ್ಲಿ ವಿಪಿನ್‌ರ ಹಾಸಿಗೆ ಹರಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕಾಲು ಹಾಗೂ ಕುತ್ತಿಗೆಗೆ ಇಟ್ಟಿಗೆ ಕಟ್ಟಿದ …

ಕಾರಿನಲ್ಲಿ ಸಾಗಿಸುತ್ತಿದ್ದ ಪಾನ್ ಮಸಾಲೆ ವಶ: ಓರ್ವ ಸೆರೆ

ಉಪ್ಪಳ: ಕರ್ನಾಟಕ ಭಾಗದಿಂದ ಕಾಸರಗೋಡಿನತ್ತ ಕಾರಿನಲ್ಲಿ ಸಾಗಿಸುತ್ತಿದ್ದ 2250 ಪ್ಯಾಕೆಟ್ ಪಾನ್ ಮಸಾಲೆಯನ್ನು ಮಂಜೇಶ್ವರ ಪೊಲೀಸರು  ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಾಣಿಕೋತ್ತ್ ದಾರುಲ್ ಅಮಾನ್ ಅದಿಂಞಾಲ್‌ನ ಅಬ್ದುಲ್ಲ ಕುಂಞಿ (55) ಎಂಬಾತನನ್ನು ಬಂಧಿಸಲಾಗಿದೆ.ನಿನ್ನೆ ಸಂಜೆ ಮಂಜೇಶ್ವರ ಎಸ್‌ಐ ಉಮೇಶ್ ನೇತೃತ್ವದಲ್ಲಿ ಪೊಲೀಸರು ಕುಂಜತ್ತೂರು ಸರ್ವೀಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ತಲಪಾಡಿ ಭಾಗದಿಂದ ಕಾಸರಗೋ ಡಿನತ್ತ ತೆರಳುತ್ತಿದ್ದ ಕಾರಿನಲ್ಲಿ ಮೂರು ಗೋಣಿ ಚೀಲಗಳಲ್ಲಿ ತುಂಬಿಸಿಟ್ಟ ಪಾನ್ ಮಸಾಲೆ ಪತ್ತೆಯಾಗಿದೆ.

ಭ್ರಷ್ಟಾಚಾರದಲ್ಲಿ ಮುಳುಗಿದ ಕುಂಬಳೆ ಪಂಚಾಯತ್: ಹೊಯ್ಗೆ ಕಡವಿನ ಹಣದ ವಿಚಾರದಲ್ಲಿ ಮುಸ್ಲಿಂ ಲೀಗ್ ನಾಯಕರೊಳಗೆ ಭಿನ್ನಮತ ಸ್ಫೋಟ; ಲೀಗ್ ನಾಯಕರು ರಾಜೀನಾಮೆ ನೀಡಲಿ-ಬಿಜೆಪಿ

ಕುಂಬಳೆ: ಕುಂಬಳ ಗ್ರಾಮ ಪಂಚಾಯತ್‌ನಲ್ಲಿ ಕಳೆದ 60 ವರ್ಷಗಳಿಂದ ಅಧಿಕಾರದಲ್ಲಿರುವ ಮುಸ್ಲಿಂ ಲೀಗ್, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆಡಳಿತವು ವ್ಯಾಪಕ ವಾದ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಇದರಿಂದ ಜನ ಸಾಮಾನ್ಯರಿಗೆ ಯಾವುದೇ ರೀತಿಯ ಅಭಿವೃದ್ಧಿ ಯನ್ನು ಕಾಣದೆ ಪಂಚಾಯತ್‌ನ ಅಭಿವೃದ್ಧಿ ಕುಂಠಿತವಾಗಿದೆ ಎಂದು ಬಿಜೆಪಿ ಪಂಚಾಯತ್ ಸಮಿತಿ ಆರೋಪಿಸಿದೆ. ಕುಂಬಳೆ ಪಂಚಾಯತ್‌ನ ಅಧೀನದಲ್ಲ್ಲಿರುವ ಆರಿಕ್ಕಾಡಿ-ಶಿರಿಯಾ ಕಡವಿನ ವಿಚಾರದಲ್ಲಿ ಹಲವಾರು ರೀತಿಯಲ್ಲಿ ಮುಸ್ಲಿಂಲೀಗ್ ನಾಯಕರ ಒಳಗೆ ಜಗಳ ತಾರಕಕ್ಕೇರಿದ್ದು, ಕೆಲವು ನಾಯಕರು ಅಲ್ಲಿನ ಕಾರ್ಮಿಕರಿಂದ ನಿರಂತರವಾಗಿ ಹಣ ವಸೂಲಿ ಮಾಡಿ …

ಬಾಯಾರು ಕುಟುಂಬ ಆರೋಗ್ಯ ಕೇಂದ್ರ ಕಟ್ಟಡ ಉದ್ಘಾಟನೆ ವಿಳಂಬ: ಯುಡಿಎಫ್‌ನಿಂದ ಧರಣಿ

ಪೈವಳಿಕೆ: ಬಾಯಾರು ಕುಟುಂಬ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಉದ್ಘಾಟಿಸಲು ಕ್ರಮ ಕೈಗೊಳ್ಳದ ಸರಕಾರದ ಧೋರಣೆಯನ್ನು ಖಂಡಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ಕುಟುಂಬ ಆರೋಗ್ಯ ಕೇಂದ್ರಕ್ಕೆ ಪ್ರತಿಭಟನಾ ಮಾರ್ಚ್, ಧರಣಿ ನಡೆಸಲಾಯಿತು. ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರ, ಸಿಬ್ಬಂದಿಗಳ ನೇಮಕಾತಿ, ಸಂಜೆ ಕೂಡಾ ಚಿಕಿತ್ಸಾ ಸೌಲಭ್ಯ ಏರ್ಪಡಿಸು ವುದು, ಔಷಧಿಗಳ ಲಭ್ಯತೆ ಖಾತರಿಪಡಿ ಸುವುದು ಮೊದಲಾದ ಬೇಡಿಕೆ ಮುಂದಿರಿಸಿ ಧರಣಿ ನಡೆಸಲಾಗಿದೆ. ಯುಡಿಎಫ್ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ …