ಬಸ್‌ನಿಂದ ಹೊರಕ್ಕೆಸೆಯಲ್ಪಟ್ಟು ವಿದ್ಯಾರ್ಥಿಗೆ ಗಾಯ

ಕುಂಬಳೆ:  ಬಸ್‌ನ ಬಾಗಿಲು ತೆರೆದು ಹೊರಕ್ಕೆ ಎಸೆಯಲ್ಪಟ್ಟು  ವಿದ್ಯಾರ್ಥಿ ಗಾಯಗೊಂಡ ಘಟನೆ ನಡೆದಿದೆ. ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ೯ನೇ ತರಗತಿ ವಿದ್ಯಾರ್ಥಿ ಆರಿಕ್ಕಾಡಿಯ ಮುಹಮ್ಮದ್ ಮುಫೀದ್ (೧೪) ಎಂಬಾತ ಗಾಯಗೊಂಡಿದ್ದಾನೆ. ಆರಿಕ್ಕಾಡಿಯಲ್ಲಿ ನಿನ್ನೆ ಈ ಅಪಘಾತ ಸಂಭವಿಸಿದೆ. ಈತನನ್ನು ಕುಂಬಳೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಪಿಟಿಎ ಅಧ್ಯಕ್ಷ ಎ.ಕೆ. ಆರಿಫ್, ಎಂಪಿಟಿಎ ಅಧ್ಯಕ್ಷೆ ವಿನೀಶ, ಸ್ಟಾಫ್ ಸೆಕ್ರೆಟರಿ ದಿನೇಶ್ ಕುಂಬಳೆ ಎಂಬಿವರು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಸಂದರ್ಶಿಸಿದರು.

ನಕಲಿ ವೆಬ್‌ಸೈಟ್ ಮೂಲಕ ೧.೨೫ ಕೋಟಿ ರೂಪಾಯಿ ಲಪಟಾವಣೆ: ಯುವಕ ಸೆರೆ

ಕಾಸರಗೋಡು: ನಕಲಿ ಶೇರ್ ಟೈಡಿಂಗ್ ವೆಬ್‌ಸೈಟ್ ನಿರ್ಮಿಸಿ ಆ ಮೂಲಕ ಯುವಕನೋರ್ವನಿಂದ ೧.೨೫ ಕೋಟಿ ರೂ. ಲಪಟಾಯಿಸಿದ  ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚೆಮ್ನಾಡ್ ಪೆರುಂಬಳ ಅಂಗನವಾಡಿಗೆ ಸಮೀಪದ ಇಡಯ್ಕಲ್ ಟಿ. ರಾಶೀದ್ (೨೯) ಬಂಧಿತನಾದ ಆರೋಪಿ. ಕೋಟ್ಟಯಂ ಈಸ್ಟ್ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಕೋಟ್ಟಯಂ ಕುಂಞಕುಳಿ ನಿವಾಸಿಯೋರ್ವ ನೀಡಿದ ದೂರಿನ ವಿರುದ್ಧ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು. ನಕಲಿ ಟ್ರೈಡಿಂಗ್ ವೆಬ್‌ಸೈಟ್ ಮೂಲಕ ಅದನ್ನು ಟ್ರೈಡಿಂಗ್ ಬಿಸಿನೆಸ್‌ನಲ್ಲಿ ಆಸಕ್ತಿ ಹೊಂದಿರುವವರು ಸಂಪರ್ಕಿಸಿ ಎಂಬ ಸಂದೇಶ ನೀಡಿ …

ಬದಿಯಡ್ಕ ಪೇಟೆಯಲ್ಲಿ ವ್ಯಕ್ತಿ ಕುಸಿದುಬಿದ್ದು ಮೃತ್ಯು

ಬದಿಯಡ್ಕ: ಇಲ್ಲಿನ ಪೇಟೆಯಲ್ಲಿ ವ್ಯಕ್ತಿಯೊಬ್ಬರು ಬ್ಯಾಂಕ್‌ಗೆ ತೆರಳಿ ಮರಳುತ್ತಿದ್ದಾಗ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರಡಾಲ ತೋಟದಮೂಲೆ ಪೆರ್ಮುಖ ನಿವಾಸಿ ಪೆರಿಯ ಗಂಗಾಧರನ್ ನಾಯರ್ (೬೫) ಎಂಬವರು ಮೃತಪಟ್ಟ ವ್ಯಕ್ತಿ. ಇವರು ನಿನ್ನೆ ಮಧ್ಯಾಹ್ನ  ಬದಿಯಡ್ಕ ಪೇಟೆಯ  ಕೆನರಾ ಬ್ಯಾಂಕ್‌ಗೆ   ತೆರಳಿದ್ದರು. ಅಲ್ಲಿಂದ ಮರಳುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ  ತಲುಪಿಸಿದರೂ ಅಷ್ಟರೊಳಗೆ ನಿಧನ ಸಂಭವಿಸಿದೆಯೆನ್ನಲಾಗುತ್ತಿದೆ.    ಮೃತರು ಪತ್ನಿ ಪದ್ಮಿನಿ, ಮಕ್ಕಳಾದ ಸಿನಿ, ಶ್ರೀನಾಥ್, ಅಳಿಯ ರತೀಶ್ ಮುನ್ನಾಡ್, ಸಹೋದರ-ಸಹೋದರಿಯರಾದ ಬಾಲಕೃಷ್ಣನ್ ನಾಯರ್, …

ಪೋಕ್ಸೋ ಪ್ರಕರಣ ಆರೋಪಿಗೆ ಸಜೆ, ಜುಲ್ಮಾನೆ

ಕಾಸರಗೋಡು:  ಪ್ರಾಯ ಪೂರ್ತಿಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಮದ ಆರೋಪಿಗೆ ಕಾಸರಗೋಡು ಫಾಸ್ಟ್ ಟ್ರಾಕ್ ಸ್ಪೆಷಲ್ ನ್ಯಾಯಾಲಯದ ನ್ಯಾಯಾಧೀಶರಾದ ಸಿ. ದೀಪು ಒಂದು ವರ್ಷ ಕಠಿಣ ಸಜೆ, ಮೂರು ವರ್ಷಗಳ ಸಾದಾ ಸಜೆ ಹಾಗೂ ೩೦,೦೦೦ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಮಧೂರು ಉಳಿಯತ್ತಡ್ಕ ವಾಸುದೇವ ಗmಟ್ಟಿ (೫೨) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ೨೦೨೧ ಜೂನ್‌ನಲ್ಲಿ ಬಾಲಕಿಗೆ ಆರೋಪಿಯ ಅಂಗಡಿಗೆ …

ಗದ್ದೆಯಲ್ಲಿ ಕೆಲಸ ನಿರತರಾಗಿದ್ದ ಕೃಷಿಕ ಕುಸಿದು ಬಿದ್ದು ಮೃತ್ಯು

ಮಂಜೇಶ್ವರ: ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗಲೇ ಕೃಷಿಕರೊಬ್ಬರು ಕುಸಿದುಬಿದ್ದು ಮೃತಪಟ್ಟ ದಾರುಣ ಘಟನೆ ನಡೆದಿದೆ. ಕಡಂಬಾರ್ ನಿವಾಸಿ ಕೃಷ್ಣಪ್ಪ ಪೂಜಾರಿ (೭೨) ಎಂಬವರು ಮೃತಪಟ್ಟ ವ್ಯಕ್ತಿ. ಹಿರಿಯ ಕೃಷಿಕರಾಗಿರುವ ಇವರು ನಿನ್ನೆ ಸಂಜೆ ಗದ್ದೆಯಲ್ಲಿ  ಪೈರು ಕೊಯ್ಯುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ನಿಧನ ಸಂಭವಿಸಿದೆ. ಮೃತರು ಪತ್ನಿ ಜಯಂತಿ, ಮಕ್ಕಳಾದ ಮಮತ, ರಮಿತ, ಸಂಗೀತ, ಸಮಿತ್‌ರಾಜ್, ಅಳಿಯಂದಿರಾದ ಮಹೇಶ್, ಗಿರೀಶ್, ಅವಿನಾಶ್ ಹಾಗೂ ಸಹೋದರ-ಸಹೋದರಿಯರ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆನ್‌ಲೈನ್ ಮೂಲಕ ಹಣ ವಂಚನೆ ತಡೆಗೆ ಕ್ರಮಎರಡು ಸಾವಿರ ಬ್ಯಾಂಕ್ ಖಾತೆಗಳು ಶೀಘ್ರ ರದ್ದು

ಕಾಸರಗೋಡು: ಲೋನ್ ಆಫ್, ಆನ್‌ಲೈನ್, ಒಟಿಪಿ  ಇತ್ಯಾದಿಗಳ ಮೂಲಕ ರಾಜ್ಯದ ಹಲವರಿಂದಾಗಿ ಕೋಟಿಗಟ್ಟಲೆ ರೂ. ಲಪಟಾಯಿಸಿದ ಪ್ರಕರಣಗಳಿಗೆ ಸಂಬಂಧಿಸಿ ೨೦೦೦ದಷ್ಟು ಬ್ಯಾಂಕ್ ಖಾತೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ಕೇರಳ ಪೊಲೀಸರು ದೇಶದ ಪ್ರಧಾನ ಬ್ಯಾಂಕ್‌ಗಳಿಗೆ ವರದಿ ಸಲ್ಲಿಸಿದ್ದಾರೆ. ೨೦೨೧ ದಿಂದ ಕೇರಳದಿಂದ ಹೀಗೆ ಲಪಟಾಯಿಸಲಾದ ಹಣ ಹೋಗಿ ಸೇರದ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸುವಂತೆ ಬ್ಯಾಂಕ್‌ಗಳೊಂದಿಗೆ ಪೊಲೀಸರು ಕೇಳಿಕೊಂಡಿದ್ದಾರೆ. ವಂಚನೆ ಬಗ್ಗೆ ಪೊಲೀಸರು ಅಗತದ್ಯದ ಪುರಾವೆಗಳ ಸಹಿತ ಈ ವರದಿ ಸಲ್ಲಿಸಿದ್ದು, ಆದ್ದರಿಂದ ಅಂತಹ ಖಾತೆಗಳನ್ನು ಅಮಾನತುಗೊಳಿಸುವ ಅಥವಾ ರದ್ದುಪಡಿಸಬೇಕಾದ …

ಬಸ್-ಕಾರು ಢಿಕ್ಕಿ: ಕಾಸರಗೋಡಿನ ನಾಲ್ವರಿಗೆ ಗಾಯ

ಕಾಸರಗೋಡು: ಕಣ್ಣೂರು  ಸಮೀಪದ ಮಟ್ಟನ್ನೂರು ವಾಯಂ ತೋಡು ಮುದಲಕದಲ್ಲಿ ನಿನ್ನೆ ಬಸ್ ಮತ್ತು ಕಾರು ಪರಸ್ಪರ ಢಿಕ್ಕಿಯಾಗಿ ವಿದ್ಯಾನಗರದ ಒಂದೇ ಕುಟುಂಬದ ನಾಲ್ವರು ಗಾಯಗೊಂ ಡಿದ್ದಾರೆ. ವಿದ್ಯಾನಗರ ನಿವಾಸಿಗಳಾದ ಮುಂತಾಸೀರ್ ಅಹಮ್ಮದ್ (೨೯), ಅವರ  ಪತ್ನಿ ಮಾಜಿದಾ (೨೬), ಪುತ್ರಿ ಮಿಜ್ಲಾ (೧) ಮತ್ತು ಮುಂತಾಸೀರ್‌ರ ಸಹೋದರ ಫರ್ಸಾನಾ (೩೬) ಎಂಬ ವರು ಈ ಅಪಘಾತದಲ್ಲಿ ಗಾಯ ಗೊಂಡಿದ್ದು, ಅವರನ್ನು ಕಣ್ಣೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.                 ಗಾಯಗೊಂಡ ಮುಂತಾಸೀರ್‌ನ ಸಹೋದರನನ್ನು ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ …

ಅನಧಿಕೃತ ಮರಳು ಸಾಗಾಟ ಕೇಂದ್ರಕ್ಕೆ ಪೊಲೀಸ್ ದಾಳಿ: ಜೆಸಿಬಿ ಬಳಸಿ ಏಳು ದೋಣಿ ನಾಶ

ಕಾಸರಗೋಡು: ಚೆಂಗಳ ಅಕ್ಕರಂಗರದಲ್ಲಿ ಹೊಳೆಯಿಂದ ಅಕ್ರಮವಾಗಿ ಮರಳು ಸಾಗಿಸುವ ಕೇಂದ್ರಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ. ವಿಷ್ಣು ಪ್ರಸಾದ್‌ರ ನೇತೃತ್ವದ ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮರಳುಗಾರಿಕೆಗಾಗಿ ಅಲ್ಲಿ ನಿಲ್ಲಿಸಲಾಗಿದ್ದ ಏಳು ದೋಣಿಗಳನ್ನು  ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಅಲ್ಲದೆ ಆ ಕೇಂದ್ರವನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ನಿನ್ನೆ ಮಧ್ಯಾಹ್ನ ಆರಂಭಗೊಂಡ ಕಾರ್ಯಾಚರಣೆ ಸಂಜೆ ತನಕ ಮುಂದುವರಿದಿದೆ. ಅಕ್ರಮ ಮರಳುಗಾರಿಕೆ ಕೇಂದ್ರಕ್ಕೆ ವಾಹನಗಳು ಸಾಗಲು ಅಗತ್ದ ದಾರಿ ಸೌಕರ್ಯವನ್ನು ಅಕ್ರಮ ಮರಳುಗೂಂಡಾ ಸಹಾಯದಾರರು ನಿರ್ಮಿಸಿದ್ದರೆಂದು, ಅದನ್ನು ನೆಲಸಮಗೊಳಿಸಲಾಗಿದೆ …

ಕರ್ನಾಟಕ ಮದ್ಯ ಸಹಿತ ಯುವಕ ಸೆರೆ

ಕುಂಬಳೆ: ೫ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಸಹಿತ ಯುವಕನನ್ನು ಸೆರೆ ಹಿಡಿಯಲಾಗಿದೆ. ಕಂಚಿಕಟ್ಟೆಯ ಪ್ರವೀಣ ಗಟ್ಟಿ (೩೫) ಎಂಬಾತನನ್ನು ಕುಂಬಳೆ ರೇಂಜ್ ಅಬಕಾರಿ ಇನ್ಸ್ ಪೆಕ್ಟರ್ ವಿ.ವಿ. ಪ್ರಸನ್ನ ಕುಮಾರ್ ಹಾಗೂ ತಂಡ ಸೆರೆ ಹಿಡಿದಿದೆ. ಅಬಕಾರಿ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಗಳಾದ ಎಂ. ರಾಜೀವನ್, ಎಂ.ವಿ. ಸುಧೀಂದ್ರನ್, ಎ. ಕೃಷ್ಣ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಜಿತಿನ್ ಪಿ.ವಿ., ಕೆ. ಸಿಜು ಮೊದಲಾದವರಿದ್ದರು.

ಕುಂಬಳೆ ರೈಲು ನಿಲ್ದಾಣ ಅವಗಣನೆ: ದೇಶೀಯ ವೇದಿಯಿಂದ  ನಾಳೆ ಪ್ರತಿಭಟನೆ

ಕುಂಬಳೆ: ೪೦ ಎಕ್ರೆಯಷ್ಟು ಸ್ಥಳದಲ್ಲಿ ವ್ಯಾಪಿಸಿರುವ ಸ್ವಂತವಾಗಿ ಸ್ಥಳ ಹೊಂದಿರದ, ಪ್ರಯಾಣಿಕರು ಕಿಕ್ಕಿರಿದು ತುಂಬಿರುವ, ಆದಾಯತರುವ ಕುಂಬಳೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸದೆ ಅವಗಣಿಸುವ ರೈಲ್ವೇ ಅಧಿಕಾರಿಗಳ  ನಿಲುವನ್ನು  ಪ್ರತಿಭಟಿಸಿ ಮೊಗ್ರಾಲ್ ದೇಶೀಯ ವೇದಿಯ ಆಶ್ರಯದಲ್ಲಿ ಕೇರಳ ರಾಜ್ಯೋತ್ಸವ ದಿನವಾದ ನಾಳೆ ಸಂಜೆ ೪ ಗಂಟೆಗೆ ರೈಲ್ವೇ ಸ್ಟೇಶನ್ ಪರಿಸರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆಯೆಂದು ಕುಂಬಳೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ದೇಶೀಯ  ವೇದಿ ಪದಾಧಿಕಾರಿಗಳು ತಿಳಿಸಿದ್ದಾರೆ. ನಿಲ್ದಾಣದ ಆದಾಯಕ್ಕನುಸಾರವಾಗಿ ಹಾಗೂ ಪ್ರಯಾಣಿಕರಿಗನುಸಾರವಾಗಿ ಮೂಲಭೂತ ಅಭಿವೃದ್ದಿ ನಡೆಸಬೇಕೆಂದು ಆಗ್ರಹಿಸಲಾಗಿದೆ. ಹೆಚ್ಚು ರೈಲುಗಳಿಗೆ …