ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಜೆ.ಎಸ್. ಸೋಮಶೇಖರ ಆಯ್ಕೆ
ಕಾಸರಗೋಡು: ದುಬಾಯಿ ಕೆ.ಎಂ. ಸಿ.ಸಿ. ಎಣ್ಮಕಜೆ ಪಂಚಾಯತ್ ಸಮಿತಿಯ ತುಳುನಾಡು ಮತಸೌಹಾರ್ದ ಪುರಸ್ಕಾರ ಘೋಷಿಸಲಾಗಿದೆ. ಮಾಜಿ ಸಚಿವ, ದೀರ್ಘಕಾಲ ಮಂಜೇಶ್ವರ ಶಾಸಕರಾಗಿದ್ದ ಚೆರ್ಕಳಂ ಅಬ್ದುಲ್ಲರ ಹೆಸರಿನಲ್ಲಿ ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಎಣ್ಮಕಜೆ ಪಂಚಾಯತ್ ಅಧ್ಯಕ್ಷ ಸೋಮಶೇಖರ ಜೆ.ಎಸ್. ಆಯ್ಕೆಯಾಗಿದ್ದಾರೆ. ನಾಡಿನಲ್ಲಿ ಮತಸೌಹಾರ್ದತೆ ಆಶಯಗಳನ್ನು ಎತ್ತಿ ಹಿಡಿಯಲು, ಸಮಾಜದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸಲು ಅವರು ನೀಡಿದ ನಾಯಕತ್ವ ಕೊಡುಗೆಯನ್ನು ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಪಂಚಾಯತ್ ಆಡಳಿತದಲ್ಲಿ ಕ್ರಿಯಾತ್ಮಕವಾದ ನಿಲುವು, ಸಹಕಾರ, ಶಿಕ್ಷಣ, ಸಾಮಾಜಿಕ ಸೇವಾರಂಗದಲ್ಲಿ ಗಮನಾರ್ಹವಾದ ಚಟುವಟಿಕೆಗಳನ್ನು ಅವರು ನಡೆಸುತ್ತಿರುವುದಾಗಿ …
Read more “ತುಳುನಾಡಿನ ಮತಸೌಹಾರ್ದ ಪುರಸ್ಕಾರಕ್ಕೆ ಜೆ.ಎಸ್. ಸೋಮಶೇಖರ ಆಯ್ಕೆ”