ಬೈಕ್ ಅಪಘಾತ: ಹಾವಿನ ಕಡಿತಕ್ಕೊಳಗಾದ ಮಧ್ಯವಯಸ್ಕ ಮೃತ್ಯು; ಸಂಬಂಧಿಕನಿಗೆ ಗಂಭೀರ ಗಾಯ

ಮುಳ್ಳೇರಿಯ: ಹಾವಿನ ಕಡಿತದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಧ್ಯ ವಯಸ್ಕ  ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಇದೇ ವೇಳೆ ಅಪಘಾತಕ್ಕೀಡಾದ ಬೈಕ್‌ನ ಸವಾರ ಗಂಭೀರಗಾಯಗೊಂಡಿದ್ದು, ಆತನನ್ನು  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬೆಳ್ಳೂರು ಬಳಿಯ ಅಡ್ವಳ ನಿವಾಸಿ  ಕೃಷ್ಣನ್ (೫೫) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಪತ್ನಿಯ ಸಹೋದರಿಯ ಪುತ್ರ ರಮೇಶನ್  ಎಂಬವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ  ಮನೆ ಹಿತ್ತಿಲಿನಲ್ಲಿ ಮಡಲು ಕಡಿಯುತ್ತಿದ್ದಾಗ ಕೃಷ್ಣನ್‌ರಿಗೆ ಹಾವು ಕಚ್ಚಿದೆ. ಅಲ್ಪ ಹೊತ್ತಿನ ಬಳಿಕ …

ಕುಂಬಳೆಯಲ್ಲಿ ಬಸ್ ತಡೆದು ಚಳವಳಿ : ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಪ್ರತಿಭಟನೆ

ಕುಂಬಳೆ: ಕುಂಬಳೆ- ಮುಳ್ಳೇರಿಯ ರಸ್ತೆಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿ ಪಡಿಸಿರುವಾಗ ಆ ಮೂಲಕ ಬಸ್ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಘಟನೆಗಳು ಸೃಷ್ಟಿಯಾ ಗುತ್ತಿದೆ. ಸಮಸ್ಯೆಗೆ ಪರಿಹಾರ ಕೈಗೊಳ್ಳ ಬೇಕಾದ ಅಧಿಕಾರಿಗಳು ಅಸಹಾಯ ಕರ ರೀತಿಯಲ್ಲಿ  ನೋಡಿ ನಿಂತುಕೊಂಡಿ ದ್ದಾರೆಂಬ ಆರೋಪವುಂಟಾಗಿದೆ. ಇದೇ ವೇಳೆ ಸಮಸ್ಯೆಯನ್ನು ಬಿಗಡಾಯಿಸಲು ಪ್ರಯತ್ನ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ. ಕುಂಬಳೆ-ಸೀತಾಂಗೋಳಿ ರೂಟ್ ನಲ್ಲಿ ಮಹಿಳಾ ಕಾಲೇಜೊಂದರ ಮುಂ ಭಾಗದಲ್ಲಿ ಬಸ್ ನಿಲ್ದಾಣ ಮಂಜೂರು ಮಾಡಬೇಕೆಂದು ಒತ್ತಾಯಿಸಿ ಇತ್ತೀಚೆಗೆ ವಿದ್ಯಾರ್ಥಿನಿಯರ ತಂಡವೊಂದು  ಬಸ್‌ಗೆ …

ರೈಲು ಢಿಕ್ಕಿ ಹೊಡೆದು ಎಂ.ಎಸ್.ಎಫ್. ನೇತಾರ ಮೃತ್ಯು

ಕಾಸರಗೋಡು: ರೈಲು ಢಿಕ್ಕಿ ಹೊಡೆದು ಎಂಎಸ್‌ಎಫ್ ನೇತಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೆರ್ಕಳ ತಾಯಲ್ ಹೌಸಿನ ನಿವಾಸಿ ಹಾಗೂ ಸುನ್ನಿ ಬಾಲವೇದಿ ಜಿಲ್ಲಾ ಉಪಾಧ್ಯಕ್ಷರೂ, ಎಂಎಸ್‌ಎಫ್ ಮಂಡಲ ಉಪಾಧ್ಯಕ್ಷರೂ ಆಗಿರುವ ಅಬ್ದುಲ್ ಬಾದ್‌ಶಾ (೨೦) ಸಾವನ್ನಪ್ಪಿದ ದುರ್ದೈವಿ. ಇವರು ಮುಹಮ್ಮದ್- ಹಸೀನಾ ದಂಪತಿ ಪುತ್ರನಾಗಿದ್ದಾರೆ. ಮಲಬಾರ್ ಕಾಂಪ್ಲೆಕ್ಸ್‌ನ ಬಿಬಿಎ ವಿದ್ಯಾರ್ಥಿಯಾಗಿರುವ ಇವರು ನಮ್ಮ ಸ್ನೇಹಿತರೊಂದಿಗೆ ರೈಲಿನಲ್ಲಿ ಚಾಲಕುಡಿಗೆ ಹೋಗಿದ್ದರು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅವರ ಮೊಬೈಲ್ ಫೋನ್ ಕೈಯಿಂದ ಜಾರಿ ಹೊರಕ್ಕೆ ಬಿದ್ದಿದೆ. ಇದರಿಂದ ರೈಲಿನಿಂದ …

ರಾಜ್ಯದಾದ್ಯಂತ ನಾಳೆ ಬಸ್ ಸಂಚಾರ ಮೊಟಕು

ಕಾಸರಗೋಡು: ಜೂನ್ ೫ರ ಫೆಡರೇಶನ್ ಅಧ್ಯಕ್ಷ ಕೆ.ಕೆ. ತೋಮಸ್‌ರ ಉಪವಾಸ ಮುಷ್ಕರಕ್ಕೆ ಸಂಬಂಧಿಸಿ ನಡೆದ ಚರ್ಚೆಯಲ್ಲಿ ಸಾರಿಗೆ ಸಚಿವ ನೀಡಿದ ಭರವಸೆಯನ್ನು ಜ್ಯಾರಿಗೊಳಿಸದೆ ಏಕಪಕ್ಷೀಯವಾಗಿ ಬಡವರಿಗೆ ಉಚಿತ ಪ್ರಯಾಣ ಘೋಷಿಸಿದ ಸಾರಿಗೆ ಸಚಿವರ ಕ್ರಮದ ವಿರುದ್ಧ ರಾಜ್ಯ ವ್ಯಾಪಕವಾಗಿ ನಾಳೆ ಬಸ್ ಸಂಚಾರ ಮೊಟಕುಗೊಳಿಸಿ ಸೂಚನಾಮುಷ್ಕರ ನಡೆಸಲು ಬಸ್ ಮಾಲಕರ ಸಂಘ ತೀರ್ಮಾನಿಸಿದೆ. ಜಂಟಿ ಮುಷ್ಕರ ಸಮಿತಿ ಮುಂದಿಟ್ಟ ಬೇಡಿಕೆಗಳನ್ನು ಅಂಗೀಕರಿಸದಿದ್ದರೆ ನ. ೨೧ರಿಂದ ಅನಿರ್ದಿಷ್ಟಕಾಲಕ್ಕೆ ಬಸ್ ಸಂಚಾರ ನಿಲ್ಲಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸಬೇಕು, ಬಸ್‌ಗಳಲ್ಲಿ …

ಮತದಾರ ಯಾದಿ ಪ್ರಕರಣದ ತೀರ್ಪು ನಾಳೆ

ಕಾಸರಗೋಡು: ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದಕ್ಕೆ ಸಂಬಂಧಿಸಿ ಅಧಿಕಾರಿಗಳ ಕರ್ತವ್ಯ ನಿರ್ವಹಣೆ ಅಡಚಣೆ ಉಂಟು ಮಾಡಿದ ಪ್ರಕರಣದ ತೀರ್ಪನ್ನು ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯ (೨) ನಾಳೆ ನೀಡಲಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲ್ಪಟ್ಟಿದ್ದಾರೆ. ೨೦೧೦ರಲ್ಲಿ ಜನವರಿಯಲ್ಲಿ ಮಂಜೇಶ್ವರ ಬ್ಲೋಕ್ ಪಂಚಾಯತ್ ಕಚೇರಿಯಲ್ಲಿ ಮತದಾರ ಯಾದಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ  ಮೈಸೂರು ನಿವಾಸಿ ಹಾಗೂ ಬಳಿಕ ಬಂಗ್ರಮಂಜೇಶ್ವರದಲ್ಲಿ ವಾಸಿಸತೊಡಗಿದ ಮುನಾವರ್ ಇಸ್ಮಾಯಿಲ್ ಮತದಾರ ಯಾದಿಯಲ್ಲಿ …

ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಜನಪರ ಸಹಕಾರಿ ವೇದಿಕೆಗೆ ಗೆಲುವು

ಮೀಯಪದವು: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ನ 2023-28 ನೇ ವರ್ಷದ ನೂತನ ಆಡಳಿತ ಮಂಡಳಿಗೆ ನಡೆದ ಚುನಾವ ಣೆಯಲ್ಲಿ ಜನಪರ ಸಹಕಾರೀ ವೇದಿಕೆಗೆ ಗೆಲುವು ಸಾ ದಿಸಿದೆ. ಬಿಜೆಪಿ ಯ ಸಹಕಾರ ಭಾರತಿ ಯ ವಿರುಧ್ದ ಜನಪರ ಸಹಕಾರಿ ವೇದಿಕೆಯ ರಘುನಾಥ ಶೆಟ್ಟಿ, ನಬೀಸತುಲ್ ಮಿಸಿರಿಯ, ಅದ್ರಾಮ ಎಸ್,ಚಂದ್ರಹಾಸ ಸೇನವ, ಹಂಸ ಕುಂಡಿಲ್, ಮಾರ್ಸೆಲ್ ಮೊಂತೆರೋ, ಮೊಯ್ದೀನ್, ಜಿ. ರಾಮ್ ಭಟ್, ಪ್ರೇಮಲತಾ, ಸುಧಾ ಎಸ್, ಉಮೇಶ್ ಟಿ ಗೆಲುವು ಸಾಧಿಸಿದರು. ಜನಪರ ಸಹಕಾರೀ ವೇದಿಕೆಯ …

ಮಾದಕವಸ್ತು ವಶ: ಬೈಕ್ ಸಹಿತ ಯುವಕ ಸೆರೆ

ಕಾಸರಗೋಡು: ಕಾಸರಗೋಡು ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಅನು ಕುಮಾರ್ ಪಿ.ಕೆ ನೇತೃತ್ವದ ಅಬಕಾರಿ ತಂಡ ಚೌಕಿ ಬಳಿ ನಡೆಸಿದ ಕಾರ್ಯಾ ಚರಣೆಯಲ್ಲಿ ಮಾದಕವಸ್ತುವಾದ ೦.೯ ಗ್ರಾಂ ಮೆತಫಿಟಮಿನ್‌ನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಚೆರ್ಕಳ ಸಮೀಪದ ಸಿಟಿಜನ್‌ನಗರ ಪೊಡಿಪಳ್ಳದ ಮೊಹ ಮ್ಮದ್ ಸಜಾದ್ ಎಂ ಜಿ (೨೩) ಎಂಬಾ ತನನ್ನು ಸೆರೆಹಿಡಿದು ಪ್ರಕರಣ ದಾಖಲಿ ಸಲಾಗಿದೆ. ಈತ ಚಲಾಯಿಸುತ್ತಿದ್ದ ಬೈಕ್‌ನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂ ಟೀವ್ ಆಫೀಸರ್ …

ಮೀನುಲಾರಿ- ಆಟೋರಿಕ್ಷಾ ಢಿಕ್ಕಿ: ಇಬ್ಬರಿಗೆ ಗಾಯ

ಕುಂಬಳೆ: ಮೀನುಲಾರಿ- ಆಟೋರಿಕ್ಷಾ ಢಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂ ಡಿದ್ದಾರೆ. ಆಟೋರಿಕ್ಷಾ ಚಾಲಕ ಆರಿಕ್ಕಾಡಿ ಪಡವತ್‌ನ ಅಬ್ದುಲ್ ಸತ್ತಾರ್ (೪೦), ಪ್ರಯಾಣಿಕ ಬದ್ರಿಯ ನಗರ ನಿವಾಸಿ ಸತ್ತಾರ್ (೪೫) ಎಂಬಿವರು ಗಾಯಗೊಂಡಿ ದ್ದಾರೆ. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿದೆ. ಶನಿವಾರ ರಾತ್ರಿ ೭ ಗಂಟೆಗೆ ಕುಂಬಳೆ ರಾಷ್ಟ್ರೀಯ ಹೆದ್ದಾರಿ ದೇವಿನಗರದಲ್ಲಿ ಅಪಘಾತ ವುಂಟಾಗಿದೆ. ಕುಂಬಳೆ ಭಾಗಕ್ಕೆ ತೆರಳುತ್ತಿದ್ದ ಆಟೋರಿಕ್ಷಾಕ್ಕೆ ಕಾಸರಗೋಡು ಭಾಗಕ್ಕೆ ತೆರಳುತ್ತಿ ದ್ದ ಮೀನು ಲಾರಿ ಢಿಕ್ಕಿ ಹೊಡೆದು ಈ ಅಪಘಾತ …

ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಜ್ಞಾನೋತ್ಸವಕ್ಕೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವಕ್ಕೆ ಇಂದು ಬೆಳಿಗ್ಗೆ ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಧ್ವಜಾ ರೋಹಣಗೈಯ್ಯಲಾಯಿತು. ಇಂದು, ನಾಳೆ ವಿಜ್ಞಾನೋತ್ಸವ ನಡೆಯಲಿದೆ. ಬೆಳಿಗ್ಗೆ ಪಿಟಿಎ ಅಧ್ಯಕ್ಷ ಖಾದರ್ ಹನೀಫ್ ಧ್ವಜಾರೋಹಣಗೈದರು. ಎಇಒ ಜಿತೇಂದ್ರ, ಮುಖ್ಯೋಪಾ ಧ್ಯಾಯ ಬಾಲಕೃಷ್ಣ, ಪ್ರಿನ್ಸಿಪಾಲ್ ಶಿಶುಪಾಲ್, ಶ್ಯಾಮ್ ಭಟ್ ಭಾಗವಹಿಸಿದರು.೧೧೨ ಶಾಲೆಗಳ ಸುಮಾರು ೩೦೦೦ ವಿದ್ಯಾರ್ಥಿಗಳು  ಭಾಗವಹಿಸುವರು. ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಪಂ. ಅಧ್ಯಕ್ಷೆ ಜೀನ್ ಲವೀನಾ ಮೊಂ ತೇರೋ ಅಧ್ಯಕ್ಷತೆ ವಹಿಸಿದರು. ಇಂದು ವಿಜ್ಞಾನ, ಗಣಿತ, ಐಟಿ ವಿಭಾಗದ …

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಆಚರಣೆ ಕಟ್ಟಡ ಉದ್ಘಾಟನೆ ನ. 4ರಂದು

ಕುಂಬಳೆ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭ ಹಾಗೂ ನವೀಕೃತ ಕಟ್ಟಡದ ಉದ್ಘಾಟನೆ ನವೆಂಬರ್ 4 ರಂದು ಚೆರುಗೋಳಿಯಲ್ಲಿ ನಡೆಯಲಿದೆ ಎಂದು ಸಂಬAಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಅಂದು ಬೆಳಿಗ್ಗೆ 9.30ಕ್ಕೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಕಟ್ಟಡ ಉದ್ಘಾಟಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಸಹಕಾರ ಸದನವನ್ನು ಬಿಜೆಪಿ ರಾಜ್ಯಾ ಧ್ಯಕ್ಷ ಕೆ. ಸುರೇಂದ್ರನ್, ಬಡ್ಡಿ ರಹಿತ ಸಾಲ ಯೋಜನೆಯನ್ನು ಅಡಿಟ್ ವಿಭಾ ಗದ ಸಹ ನಿರ್ದೇಶಕ ರಾಮ ಉದ್ಘಾ …