ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನ ರಾಜಗೋಪುರ ಮೇಲಂತಸ್ತು ನಿರ್ಮಾಣಕ್ಕೆ ಚಾಲನೆ

ಪೆರಡಾಲ ಉದನೇಶ್ವರ ದೇವಸ್ಥಾನ ಜೀರ್ಣೋ ದ್ಧಾರದಂಗವಾಗಿ ರಾಜಗೋಪುರದ ಮೇಲ್ ಅಂತಸ್ತಿನ ಪುನರ್ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ಉದ್ಯಮಿ ಜೀರ್ಣೋದ್ಧಾರ ಸಮಿತಿಯ ರಕ್ಷಾಧಿಕಾರಿ ಗೋಪಾಲಕೃಷ್ಣ ಪೈ ಪುನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ರಾಜ ಗೋಪುರ ನಿರ್ಮಾಣ ಕೆಲಸ ಆದಷ್ಟು ಬೇಗ ಶೀಘ್ರ ವಾಗಿ ಮುಗಿಸಿ ಬ್ರಹ್ಮ ಕಲಶಭಿಷೇಕ ಕಾರ್ಯಕ್ರಮ ನೋಡಲು ಎಲ್ಲರಿಗೂ ಸೌಭಾಗ್ಯ ಸಿಗಲಿ ಎಂದರು. ಆಡಳಿತ ಮಂಡಳಿ ಅಧ್ಯಕ್ಷ ವೆಂಕಟರಮಣï ಭಟ್ ಸ್ವಾಗತಿಸಿದರು, ಸೇವಾ ಸಮಿತಿ ಅಧ್ಯಕ್ಷ ಜಯದೇವ …

ಕಸಿಕಟ್ಟುವಿಕೆ: ಕೌಶಿಕ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬದಿಯಡ್ಕ: ಪೆರಡಾಲ ನವಜೀವನ ಶಾಲೆ ಯಲ್ಲಿ ಜರಗಿದ ಕುಂಬಳೆ  ಉಪ ಜಿಲ್ಲಾ ಶಾಸ್ತ್ರೋತ್ಸವದಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿ ಕೌಶಿಕ್ ಕೆ.ಬಿ. ಗಿಡಗಳ ಕಸಿಕಟ್ಟುವಿಕೆ ವಿಭಾಗ ಬಡ್ಡಿಂಗ್, ಲೇಯರಿಂಗ್, ಕ್ರಾಫ್ಟಿಂಗ್‌ನಲ್ಲಿ ಎ ಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ವಜೀವನ ಶಾಲೆಗೆ ಸಮಗ್ರ ಪ್ರಶಸ್ತಿ

ಬದಿಯಡ್ಕ: ಪೆರಡಾಲ ನವಜೀವನ ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಅತಿಥೇಯ ನವಜೀವನ ಶಾಲೆಯು ೬೩೧ ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಸಮಗ್ರ ಪ್ರಶಸ್ತಿಗೆ ಪಾತ್ರವಾಗಿದೆ. ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ೫೩೩ ಅಂಕಗಳೊಂದಿಗೆ  ದ್ವಿತೀಯ, ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವನರೀ ಪ್ರೌಢಶಾಲೆ ೪೨೭ ಅಂಕಗಳೊಂದಿಗೆ ತೃತೀಯ, ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠ ೪೨೭, ಕಾರಡ್ಕ ೪೨೭ಅಂಕಗಳೊಂದಿಗೆ ನಂತರದ ಸ್ಥಾನ ಗಳಿಸಿದೆ.

ಕುಟುಂಬಶ್ರೀ ಸದಸ್ಯೆಯರಿಗೆ ಮರಳಿ ಶಾಲೆಗೆ ಕಾರ್ಯಕ್ರಮ

ಉಪ್ಪಳ: ಸಿ.ಡಿ.ಎಸ್ ಕುಟುಂ ಬಶ್ರೀಯ ಮರಳಿ ಶಾಲೆಗೆ ಎಂಬ ಕಾರ್ಯಕ್ರಮದಲ್ಲಿ ನೆರೆ ಕೆರೆ ಕೂಟದ ಸದಸ್ಯರಿಗೆ ನಿನ್ನೆ ಪೈವಳಿಕೆ ನಗರ ಶಾಲೆ ಯಲ್ಲಿ ತರಗತಿ ನಡೆಸಲಾಯಿತು. ಚಿಪ್ಪಾರ್, ಬೆರಿಪದವು, ಸುದೆಂಬಳ, ಸಜಂಕಿಲ ವಾರ್ಡ್ಗಳ ಕುಟುಂಬ ಶ್ರೀಯ ಸುಮಾರು ೮೫೦ ಮಂದಿ ತರಗತಿಯಲ್ಲಿ ಪಾಲ್ಗೊಂಡರು. ಪಂ ಚಾಯತ್ ವ್ಯಾಪ್ತಿಯ ನಾಲ್ಕನೇ ಬ್ಯಾಚ್ ನಿನ್ನೆ ನಡೆಸಲಾಗಿದೆ. ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮÃ ಭಟ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಿತ್ರ, ಕದೀಜ, ಸುಜಾತ.ಬಿ ರೈ, ರೇಖ, ಜಯ ಲಕ್ಷಿ÷್ಮÃ ಭಟ್, ಸುಪ್ರಿತ, …

ಕುಡಾಲುಮೇರ್ಕಳ ಶಾಲಾ  ಕಲೋತ್ಸವ

ಸುಬ್ಬಯಕಟ್ಟೆ : ಇಲ್ಲಿನ ಕುಡಾಲುಮೆರ್ಕಳ ಪಿಬಿಎಂ ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಕಲೋತ್ಸವ ಇತ್ತೀಚೆಗೆ ಜರಗಿತು. ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ಉದ್ಘಾಟಿಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮನಾಫ್ ಅಧ್ಯಕ್ಷತೆ ವ್ಞಸಿದರು.ನಿವೃತ್ತ ಮುಖ್ಯ್ಯೊಪಾಧ್ಯಾಯ ಅಬ್ದುಲ್ ಖಾದರ್, ಮೊಯ್ದು ಕುಟ್ಟಿ ಮಾಸ್ಟರ್, ಟಾಸ್ಕ್ ಅಧ್ಯಕ್ಷರಾದ ಪ್ರಕಾಶ್ ರೈ, ಕಲೋತ್ಸವದ ಅಧ್ಯಕ್ಷ ಸಂತೋಷ್ ಕೆ.ವಿ. ಮೊಯ್ದೀನ್ ಶುಭ ಹಾರೈಸಿದರು. ಶಾಲಾ ಮುಖ್ಯ್ಯೊಪಾzssÀÁ್ಯಯ ಪ್ರಕಾಶ್ ನಂಬೂದಿರಿ ಸ್ವಾಗತಿಸಿ, ಪಾರ್ವತಿ ಟೀಚರ್ ಪ್ರಾರ್ಥನೆ ಹಾಡಿದರು. ವಸಂತ …

ಪಂಜಿಕಲ್ಲು ಕಿದೂರಿನಲ್ಲಿ ರಕ್ತದಾನ ಶಿಬಿರ

ಕುಂಬಳೆ:  ಫ್ರೆಂಡ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಪಂಜಿಕಲ್ಲು ಕಿದೂರು ಇವರ ನೇತೃತ್ವದಲ್ಲಿ ರಕ್ತದಾನ ಶಿಬಿರ ರಾಜೀವ್ ಭವನ ಕುಂಟಂಗೇರಡ್ಕ ದಲ್ಲಿ ನಡೆಯಿತು. ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇದರ ಸಿಬ್ಬಂದಿ ವರ್ಗದವರು ಸಂಯೋಜಿಸಿದರು. ಜಾ| ತೃಪ್ತಿ ಆಳ್ವ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಅನೂಪ್ ಕುಮಾರ್ ಇ. ಭಾಗವಹಿಸಿದರು. ಪಂಚಾಯತ್ ಸದಸ್ಯ ರವಿರಾಜ್ ಕೆ.ಜಿ, ಡಿಸ್ಟ್ರಿಕ್ಟ್ ಕೊಆರ್ಡಿ ನೇಟರ್ ರೆಡ್ ಕ್ರಾಸ್ ಸೊಸೈಟಿಯ ಪ್ರವೀಣ್ ಕುಮಾರ್, ಕೆ.. ಚಂದ್ರ ಕಾಜೂರು ಶ್ರೀ ಕುಪ್ಪೆ ಪಂಜುರ್ಲಿ …

ಯುವಮೋರ್ಛಾ ನೇತಾರನ ಕೊಲೆ ಪ್ರಕರಣ: ತಲೆಮರೆಸಿಕೊಂಡ ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ

ಸುಳ್ಯ:  ಯುವಮೋರ್ಛಾ ನೇತಾರ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಯುಧಗಳಿಂದ ಆಕ್ರಮಿಸಿ ಬರ್ಭರವಾಗಿ ಕೊಲೆಗೈದ ಪ್ರಕರಣದಲ್ಲಿ  ತಲೆಮರೆಸಿಕೊಂಡ ಆರೋಪಿಗಳಿಗಾಗಿ ಎನ್‌ಐಎ ತನಿಖೆ ತೀವ್ರಗೊಳಿಸಿದೆ. ಇದರ ಅಂಗವಾಗಿ ಮೂವರು ಆರೋಪಿಗಳ ಸುಳಿವು ನೀಡಿದವರಿಗೆ  ನಗದು ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿದೆ. ಬೆಳ್ತಂಗಡಿ ತಾಲೂಕು ಪಡಂಗಡಿ ಗ್ರಾಮದ ಪೊಯ್ಯೆಗುಡ್ಡೆ ನಿವಾಸಿ ನೌಶಾದ್ (೩೨), ಸೋಮವಾರಪೇಟೆಯ ಕಲಕಂದೂರು ನಿವಾಸಿ ಅಬ್ದುಲ್ ರಹಿಮಾನ್ (೩೬), ಅಬ್ದುಲ್ ನಾಸಿರ್ (೪೧) ಎಂಬಿವರ ಕುರಿತು ಸುಳಿವು ನೀಡಿದವರಿಗೆ ತಲಾ ೨ ಲಕ್ಷ ರೂಪಾಯಿ ಬಹುಮಾನ ನೀಡು …

ಇಸ್ರೇಲ್-ಹಮಾಸ್ ಯುದ್ಧ: ವಿಶ್ವಸಂಸ್ಥೆಯ ಮತದಾನದಿಂದ ದೂರ ಸರಿದ ಭಾರತ

ನವದೆಹಲಿ: ಇಸ್ರೇಲ್ ಮತ್ತು ಪ್ಯಾಲೆಸ್ತೀನ್‌ನ ಉಗ್ರಗಾಮಿ ಸಂಘಟನೆಯಾದ ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧಕ್ಕೆ ಮಾನವೀಯ ನೆಲೆಯಲ್ಲಿ ತಕ್ಷಣ ವಿರಾಮ ಹಾಕುವಂತೆ ವಿಶ್ವಸಂಸ್ಥೆ ಕರೆ ನೀಡಿರುವ ನಿರ್ಣಯದ ಮೇಲಿನ ಮತದಾನದಿಂದ ಭಾರತ ಮತ  ದೂರ ಉಳಿದಿದೆ. ಕದನ ವಿರಾಮ ಕರೆ ಮಸೂದೆ ಪರವಾಗಿ ೧೨೦ ದೇಶಗಳು ಮತ್ತು ಅದರ ವಿರುದ್ಧ ೧೪ ದೇಶಗಳು ಮತ ಚಲಾಯಿಸಿತು. ಭಾರತ, ಆಸ್ಟ್ರೇಲಿಯಾ, ಕೆನಡಾ, ಜರ್ಮನಿ, ಜಪಾನ್, ಉಕ್ರೈನ್, ಯುಕೆ ಮತದಾನದಿಂದ ದೂರ ಉಳಿದವು. ಹಮಾಸ್‌ನ ಭಯೋತ್ಪಾದಕ ದಾಳಿಗಳನ್ನು ಖಂಡಿಸುವ   ಪ್ಯಾರಾಗ್ರಾಫನ್ನು ಸೇರಿಸುವ …

ಕುಂಬಳೆ ಶಾಲೆ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ

ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ ನಡೆದಿದೆ. ನಿನ್ನೆ ಸಂಜೆ ಶಾಲೆಬಿಟ್ಟ ಬಳಿಕ ಹತ್ತನೇ ತರಗತಿ ಹಾಗೂ ಪ್ಲಸ್‌ವನ್ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿದೆ. ಶಾಲಾ ಮೈದಾನದಲ್ಲಿ ವಿದ್ಯಾರ್ಥಿಗಳು ಪರಿಸರ ಹೊಡೆದಾಟ ನಡೆದಿದ್ದು,  ದೀರ್ಘ ಹೊತ್ತಾದರೂ ಶಮನಗೊಳ್ಳದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ಮಧ್ಯೆ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಶಾಂತಗೊಳಿಸಿದ್ದಾರೆ. ಪ್ರಸ್ತುತ ಶಾಲೆಯಲ್ಲಿ  ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ಪುನರಾವರ್ತಿಸುತ್ತಿರುವುದು ರಕ್ಷಕರು ಹಾಗೂ  ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.  ಕ್ಷುಲ್ಲಕ ವಿಷಯಗಳ ಹೆಸರಲ್ಲೂ ಪರಸ್ಪರ ಹೊಡೆದಾಟ …

ಸಾರ್ವಜನಿಕರಿಗೆ ತೊಂದರೆ: ಇಬ್ಬರ ಸೆರೆ

ಉಪ್ಪಳ: ಅಮಲುಪದಾರ್ಥ ಸೇವಿಸಿ ಸಾರ್ವಜನಿಕರಿಗೆ ಕಿರುಕುಳ ಉಂ ಟುಮಾಡುತ್ತಿದ್ದ ಇಬ್ಬರನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ಬೇಕೂರು ಬೊಳ್ಳಾರು ನಿವಾಸಿ ಸುರೇಶ (೫೨)ನನ್ನು ಎಸ್‌ಐ ನಿಖಿಲ್ ನಿನ್ನೆ ಸಂಜೆ ಸುಭಾಸ್‌ನಗರದಿಂದಲೂ, ಬಾಯಿಕಟ್ಟೆ ಮಂಜತ್ತೋಡಿ ನಿವಾಸಿ ಅರುಣ್ ಕುಮಾರ್ (೨೫)ನನ್ನು ಉಪ್ಪಳ ಬಸ್ ನಿಲ್ದಾಣದಿಂದ ಗ್ರೇಡ್ ಎಸ್‌ಐ ಇಸ್ಮಾಯಿಲ್ ಸೆರೆಹಿಡಿದಿದ್ದಾರೆ.