ನಿಲ್ಲಿಸಿದ್ದ ಆಟೋ ರಿಕ್ಷಾ ಬೆಂಕಿಗಾಹುತಿ

ಕುಂಬಳೆ: ನಿಲ್ಲಿಸಿದ್ದ ಆಟೋ ರಿಕ್ಷಾವೊಂದು ಉರಿದು ನಾಶಗೊಂಡ ಘಟನೆ ನಡೆದಿದೆ. ಬಾಯಾರು ಬಳ್ಳೂರು ನಿವಾಸಿ ರವಿ ಕುಮಾರ್ ಎಂಬವರ ಆಟೋ ರಿಕ್ಷಾ ಬೆಂಕಿಗಾಹುತಿಯಾಗಿದೆ. ನಿನ್ನೆ ರೋಗಿಯೊಬ್ಬರನ್ನು ರಿಕ್ಷಾದಲ್ಲಿ ಕುಂಬಳೆಯ ಆಸ್ಪತ್ರೆಗೆ ತಲುಪಿಸಲಾಗಿದೆ. ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್  ಬಂಕ್ ಸಮೀಪ ಸ್ಟಿಕ್ಕರ್  ಅಂಟಿಸುವ ಅಂಗಡಿ ಮುಂದೆ ನಿಲ್ಲಿಸಲಾಗಿತ್ತು. ರವಿ ಕುಮಾರ್ ಅಲ್ಪ ದೂರದಲ್ಲಿ ನಿಂತು ವ್ಯಕ್ತಿಯೊಬ್ಬರನ್ನು ಮಾತನಾಡಿಸುತ್ತಿದ್ದರಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಅವರು ಹಾಗೂ ಸ್ಥಳೀಯರು ಸೇರಿ ಬೆಂಕಿ ನಂದಿಸಿದ್ದರೂ ಆದರೆ ಅಷ್ಟರೊಳಗೆ ಅದ …

ಆಟೋ ರಿಕ್ಷಾ ಬೆಂಕಿಗಾಹುತಿಯಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಆಟೋ ರಿಕ್ಷಾವೊಂದು ಬೆಂಕಿ ತಗಲಿ ಕರಕಲುಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸಂಭವಿಸಿದೆ. ಕಾಸರಗೋಡು ನೆಲ್ಲಿಕುಂಜೆ ಚೇರಂಗೈಯ ಸಾದಿಕ್ ಎಂಬವರ ಆಟೋ ರಿಕ್ಷಾ ಅವರ ಕ್ವಾರ್ಟರ್ಸ್‌ನ ಮುಂದೆ ಇಂದು ಬೆಳಿಗ್ಗೆ ಬೆಂಕಿಗಾಹುತಿಯಾಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇವರು ನಿನ್ನೆ ರಾತ್ರಿ ತಮ್ಮ ಕ್ವಾರ್ಟರ್ಸ್ ಮುಂದೆ ಆಟೋ ರಿಕ್ಷಾ ನಿಲ್ಲಿಸಿದ್ದರು. ಬೆಂಕಿ ಹೇಗೆ ತಗಲಿದೆಯೆಂಬುವುದು ಇನ್ನೂ ಸ್ಪಷ್ಟಗೊಂಡಿಲ್ಲ. ಕಿಚ್ಚಿರಿಸಲಾಗಿ ದೆಯೋ ಎಂಬ ಶಂಕೆಯೂ ಉಂಟಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಪ್ಯಾಲೆಸ್ತಿನ್ ಪರ ಪ್ರಚಾರದಿಂದ ತರೂರ್ ಔಟ್

ತಿರುವನಂತಪುರ: ಮುಸ್ಲಿಂ ಲೀಗ್ ಆಶ್ರಯದಲ್ಲಿ ಕಲ್ಲಿಕೋಟೆ ಯಲ್ಲಿ ಮೊನ್ನೆ ನಡೆದ ಪ್ಯಾಲೆಸ್ತಿನ್ ಪರ ರ‍್ಯಾಲಿಯಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿ ಮಾತನಾಡು ತ್ತಿದ್ದ ವೇಳೆ ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ನಡೆದಿದ್ದು ಭಯೋತ್ಪಾದಕ ದಾಳಿಯಾಗಿದೆ ಎಂದು  ಕಾಂಗ್ರೆಸ್ ನೇತಾರ ಶಶಿ ತರೂರ್ ನೀಡಿದ ಹೇಳಿಕೆ ಭಾರೀ ವಿವಾದ ಹಾಗೂ ಅದರ ವಿರುದ್ಧ  ಭಾರೀ ಆಕ್ರೋಶಕ್ಕೂ ಉಂಟಾದ  ಹಿನ್ನೆಲೆಯಲ್ಲಿ  ಪ್ಯಾಲೆಸ್ತಿನ್ ಪರ ಕಾರ್ಯಕ್ರಮದಿಂದ ತರೂರ್‌ರನ್ನು ಔಟ್ ಮಾಡಲಾಗಿದೆ. ಮುಸ್ಲಿಂ ಸಂಘಟನ ಮಹಲ್ ಎಂಪವರ್‌ಮೆಂಟ್ ಮಿಷನ್ (ಎಂಇಎಂ)ನ ನೇತೃತ್ವದಲ್ಲಿ ಅಕ್ಟೋಬರ್ …

೯೦ ಕಿಲೋ ಗಾಂಜಾ ಸಾಗಾಟದಲ್ಲಿ ಸೆರೆಗೀಡಾದ ಇಬ್ಬರು ಮತ್ತೆ ಪೊಲೀಸ್ ಕಸ್ಟಡಿಗೆ

ಮಂಜೇಶ್ವರ: 90ಕಿಲೋ ಗಾಂಜಾ ಸಾಗಿಸುತ್ತಿದ್ದ ವೇಳೆ ಸೆರೆಗೀಡಾದ ಇಬ್ಬ ರನ್ನು ಹೆಚ್ಚಿನ ವಿಚಾರಣೆಗಾಗಿ ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಕೂತುಪರಂಬ ಕಣ್ಣವಂ ನಿವಾಸಿಯೂ ತೃಕ್ಕರಿಪುರದಲ್ಲಿ ವಾಸವಾಗಿರುವ ರೈಫ್ ಬಶೀರ್ [31] ಹಾಗೂ ಪುದಿಯಂಗಾಡಿ ಮುಳ್ಳನ್‌ತಕ್ಕತ್ ನಿವಾಸಿ ಮೊಹಮ್ಮದ್ ರಿಯಾಸ್ [29] ನನ್ನು ಮೂರು ದಿನ ಕಸ್ಟಡಿಗೆ ಪಡೆಯ ಲಾಗಿದೆ. ಸೆರೆಗೀಡಾಗಿ ರಿಮಾಂಡ್ ನಲ್ಲಿದ್ದ ಇವರನ್ನು ಸಿ.ಐ ರಜೀಶ್ ನೇತೃತ್ವದಲ್ಲಿ ಮೊನ್ನೆ ಕÀಸ್ಟಡಿಗೆ ತೆಗೆದು ಕೊಂಡಿದ್ದಾರೆ. ಈ ತಿಂಗಳ 15ರಂದು ರಾತ್ರಿ 10.30ರ ಕಾರಿನಲ್ಲಿ ಗಾಂಜಾ ಸಾಗಿಸುತಿದ್ದ ವೇಳೆ …

ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಬದಿಯಡ್ಕ: ಅರ್ತಿಪ್ಪಳ್ಳ ಬಾರಡ್ಕ ಹೌಸ್‌ನ ಐತಪ್ಪ ನಾಯ್ಕ-ಪಾರ್ವತಿ ದಂಪತಿ ಪುತ್ರಿ ಹಾಗೂ ಸುಬ್ರಾಯ ನಾಯ್ಕರ ಪತ್ನಿ ಲಕ್ಷ್ಮಿ (೬೧) ನಿನ್ನೆ ಸಂಜೆ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬದಿಯಡ್ಕ ಪೊಲೀಸರು ಈ ಬಗ್ಗೆ  ತನಿಖೆ ನಡೆಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿದೆ. ಮೃತರು ಮಕ್ಕಳಾದ ಗಾಯತ್ರಿ, ನಯನ್‌ಕುಮಾರ್, ಬೆನಕಶ್ರೀ, ಅಳಿಯಂದಿರಾದ ಸಿಜಿತ್, ವಿನಯ ಮತ್ತು ಸಹೋದರ ಮಹಾಲಿಂಗ ನಾಯ್ಕ ಎಂಬವರನ್ನು ಅಗಲಿದ್ದಾರೆ.

ಚಿನ್ನದ ಬೆಲೆ ಮತ್ತೆ ದಾಖಲೆಯತ್ತ

ಕಾಸರಗೋಡು: ಚಿನ್ನದ ಬೆಲೆಯಲ್ಲಿ ಮತ್ತೆ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ. ಇಂದು ೧ ಗ್ರಾಂ ಚಿನ್ನಕ್ಕೆ ೬೦ ರೂ.ಗಳ ಹೆಚ್ಚಳವಾಗಿ ೫,೭೪೦ರೂ.ಗೇರಿದೆ. ಅದೇ ರೀತಿ ಪವನ್‌ಗೆ ೪೮೦ ರೂ.ಗಳ ಏರಿಕೆಯಾಗಿ  ೪೫,೯೨೦ ರೂ.ಗೇರಿದೆ. ಈ ಹಿಂದೆ ೨೦೨೩ ಮೇ ೫ರಂದು ಚಿನ್ನದ ಬೆಲೆ ಅತೀ ಹೆಚ್ಚಾಗಿ ದಾಖಲೆ ಸೃಷ್ಟಿಸಿತ್ತು. ಅಂದು  ೧ ಪವನ್ ಚಿನ್ನದ ಬೆಲೆ   ೪೫,೭೪೦ ರೂ.  ಆಗಿತ್ತು. ಇಸ್ರೇಲ್-ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧವೇ ಚಿನ್ನದ ಬೆಲೆಯಲ್ಲಿ ಏರಿಕೆ ಯುಂಟಾಗಲು ಪ್ರಧಾನ ಕಾರಣ ಗಿದೆಯೆಂದು ಹೇಳಲಾಗುತ್ತಿದೆ. ಯುದ್ಧದ …

ದೆಹಲಿಯಲ್ಲಿ ವಾತಾವರಣ ಮಲಿನೀಕರಣ ತೀವ್ರ

ದೆಹಲಿ: ದೆಹಲಿಯಲ್ಲಿ ವಾತಾವರಣ ಮಲಿನೀಕರಣ ಅತೀ ತೀವ್ರವಾಗಿ ಮುಂದುವರಿಯುತ್ತಿದೆ. ಪ್ರಸ್ತುತ ಅತೀ ಕೆಟ್ಟ ವಿಭಾಗಕ್ಕೊಳಪಟ್ಟ ವಾಯು ವಾತಾವರಣದಲ್ಲಿ ಹರಡಿಕೊಂಡಿರುವುದಾಗಿ ಹೇಳಲಾಗುತ್ತಿದೆ. ಈ ತಿಂಗಳ ಕೊನೆಯೊಳಗೆ ಸ್ಥಿತಿ ಇನ್ನಷ್ಟು ತೀವ್ರಗೊಳ್ಳಲಿದೆಯೆಂದು ದೆಹಲಿ ಪರಿಸರ ಸಚಿವಾಲಯ ತಿಳಿಸಿದೆ.

ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾಸರಗೋಡು: ಬೇಡಡ್ಕ ಕಲ್ಲಾಡಕುಟ್ಟಿಯ ಮನೆಯೊಂದಕ್ಕೆ ಬಂದಡ್ಕ ಅಬಕಾರಿ ರೇಂಜ್ ಕಚೇರಿ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ. ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕರ್ನಾಟಕ ನಿರ್ಮಿತ ೨೮.೮ ಲೀಟರ್ (೧೮೦ ಎಂ.ಎಲ್.ನ ೧೬೦ ಟೆಟ್ರಾ ಪ್ಯಾಕೇಟ್) ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಈ ಸಂಬಂಧ ಬೇಡಡ್ಕ ಕಲ್ಲಾಡಕುಟ್ಟಿಯ ಇಬ್ರಾಹಿಂ ಕೆ. (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸ ಲಾಗಿದೆ. ಅಬಕಾರಿ ಕಾರ್ಯಾ ಚರಣೆಯಲ್ಲಿ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್‌ಗಳಾದ ಮಹೇಶ್ ಕೆ, ಅಫ್ಸಲ್ ಕೆ., ಟಾಲ್ಸ್ ಜೋಸ್, ಮಹಿಳಾ ಸಿವಿಲ್ …

ಅಪಾಯಭೀತಿ ಸೃಷ್ಟಿಸಿ ರಸ್ತೆ ಮಧ್ಯೆ ವಿದ್ಯುತ್ ಕಂಬ

ಉಪ್ಪಳ: ವಿದ್ಯುತ್ ಕಂಬವೊAದು ನಡು ರಸ್ತೆಯಲ್ಲಿದ್ದು ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸÀÄವ ಬಿsÃತಿ ಇದೆ. ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ವಿದ್ಯುತ್ ಇಲಾಖೆ ವ್ಯಾಪ್ತಿಗೊಳಪಡುವ ಹೆದ್ದಾರಿಯಿಂದ ಕೆಲವೇ ಮೀಟರ್ ದೂರದ ನಯಬಜಾರ್‌ನ ಅಂಬಾರು ರಸ್ತೆಯಲ್ಲಿ ಈ ವಿದ್ಯುತ್ ಕಂಬವಿದ್ದು, ಆತಂಕಕ್ಕೆ ಕಾರಣ ವಾಗುತ್ತಿದೆ. ಈ ಹಿಂದೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬ ಹಲವು ವರ್ಷಗಳ ಹಿಂದೆ ರಸ್ತೆ ಅಗಲಗೊಳಿಸಿದಾಗ ಕಂಬವನ್ನು ತೆರವುಗೊಳಿ ಸದ ಕಾರಣ ಇದೀಗ ರಸ್ತೆಯ ಮಧ್ಯ ಭಾಗದಲ್ಲಿ ದೆ. ಹಲವು ಭಾರಿ ತೆರವುಗೊಳಿಸಲು ತಿಳಿಸಿದರೂ ಕ್ರಮಕ್ಕೆ …

ರಸ್ತೆ ಸಂಚಾರ ನಿಷೇಧ

ಕಾಸರಗೋಡು: ಕಾಞಂಗಾಡ್ ಎಸ್‌ಎಚ್ ರಸ್ತೆಯಲ್ಲಿ ಅಲಾಮಿಪಳ್ಳಿ ಹೊಸ ಬಸ್ ನಿಲ್ದಾಣ ಸಮೀಪ ಮೋರಿ ನಿರ್ಮಾ ಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಮೂಲಕ ವಾಹನ ಸಂಚಾರ ನ.೨ ರಿಂದ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಭಾಗಕ್ಕೆ ತೆರಳುವವರು ಹೆದ್ದಾರಿ ಮೂಲಕ ಅಥವಾ ಅಲಾಮಿಪಳ್ಳಿ-ಕುಳಿಯಂಗಾಲ್ ರಸ್ತೆ ಮೂಲಕ ಪ್ರಯಾಣಿಸಬೇಕೆಂದು ಪಿಡಬ್ಲ್ಯುಡಿ ಸೆಕ್ಷನ್ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.