“ಅ. ೭ರಂದು ಇಸ್ರೇಲ್ ಮೇಲೆ ನಡೆದದ್ದು ಭಯೋತ್ಪಾದಕ ದಾಳಿ” :ಶಶಿ ತರೂರ್ ಹೇಳಿಕೆ ವಿರುದ್ದ ಮುಗಿಬಿದ್ದ ಮುಸ್ಲಿಂಲೀಗ್
ಕಲ್ಲಿಕೋಟೆ: ಅಕ್ಟೋಬರ್ ೭ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ್ದು ಭಯೋತ್ಪಾದಕ ದಾಳಿಯಾಗಿದೆ ಯೆಂದು ಕಾಂಗ್ರೆಸ್ ನೇತಾರ, ತಿರುವನಂತಪುರ ಸಂಸದ ಶಶಿ ತರೂರ್ ನೀಡಿದ ಹೇಳಿಕೆ ಮುಸ್ಲಿಂ ಲೀಗ್‌ನ್ನು ಗರಂಗೊಳಿಸಿದ್ದು, ಅದರ ಹೆಸರಲ್ಲಿ ಮುಸ್ಲಿಂ ಲೀಗ್ ನೇತಾರರು ಮಾತ್ರವಲ್ಲ ಹಲವು ಮುಸ್ಲಿಂ ಸಂಘಟನೆಗಳ ನೇತಾರರು ಶಶಿ ತರೂರ್‌ರ ವಿರುದ್ಧ ಮುಗಿಬಿದ್ದಿದ್ದಾರೆ. ತನ್ನ ಹೇಳಿಕೆ ವಿರುದ್ಧ ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅದರ ಸ್ಪಷ್ಟೀಕರಣ ನೀಡಿ ಶಶಿ ತರೂರ್ ರಂಗಕ್ಕಿಳಿದಿದ್ದು, ಆ ಮೂಲಕ ಲೀಗ್‌ನ್ನು ಮತ್ತು ಮುಸ್ಲಿಂ ಸಂಘಟನೆಗಳ ಆಕ್ರೋಶವನ್ನು …