ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ತಾಲೂಕು ಸಮಿತಿ ನೂತನ ಕಚೇರಿ ಉದ್ಘಾಟನೆ

ಕಾಸರಗೋಡು: ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್ ಕಾಸರಗೋಡು ತಾಲೂಕು ಸಮಿತಿಯ ನೂತನ ಕಚೇರಿಯನ್ನು ಕಾಸರಗೋಡು ನಗರಸಭಾ ಕಾಂಪ್ಲೆಕ್ಸ್‌ನಲ್ಲಿ ನಗರಸಭಾ ಅಧ್ಯಕ್ಷ ವಿ.ಎಂ. ಮುನೀರ್ ಉದ್ಘಾಟಿಸಿದರು. ಅಧ್ಯಕ್ಷ ಎಂ.ಎ. ಅಬ್ದುಲ್ಲ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಅಧ್ಯಕ್ಷ ಕೆ. ಗಿರೀಶ್ ಮುಖ್ಯ ಅತಿಥಿಯಾಗಿದ್ದರು. ಮಾಜಿ ಜಿಲ್ಲಾಧ್ಯಕ್ಷ ಎಂ. ಬಾಲಕೃಷ್ಣನ್ ನಂಬ್ಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಜಿಲ್ಲಾ ಕೋಶಾಧಿಕಾರಿ ಪಿ.ಎ. ಮುಹಮ್ಮದ್ ಕುಂಞಿ, ಸಿ. ರವಿ, ಧನ್‌ರಾಜ್ ಮಂಜೇಶ್ವರ, ಗಿರಿಕೃಷ್ಣನ್, ಕೆ.ಸಿ. …

ಬಿಜೆಪಿಯಿಂದ ಎಲ್ಲಾ ಜಿಲ್ಲೆಗಳಲ್ಲೂ ಕರಾವಳಿ ಜಾಥಾ

ಕಾಸರಗೋಡು: ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನತೆ ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಾಣಬೇಕೆಂಬ ಬೇಡಿಕೆಯೊಂದಿಗೆ ಬಿಜೆಪಿ ಇಂದು ಎರ್ನಾಕುಳಂನಲ್ಲಿ ನಡೆಸುವ ಕರಾವಳಿ ಜಾಥಾವನ್ನು ಇತರ ಜಿಲ್ಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ನವಂಬರ್ ೧ರಂದು ತೃಶೂರಿನಲ್ಲಿ ಕರಾವಳಿ ಜಾಥಾ ನಡೆಯಲಿದೆ. ಕೇಂದ್ರ ಸರಕಾರ ಮೀನು ಕಾರ್ಮಿಕರಿಗಾಗಿ ಮಂಜೂರು ಮಾಡುವ ಯಾವುದೇ ಯೋಜನೆಗಳನ್ನು ರಾಜ್ಯ ಸರಕಾರ ಜ್ಯಾರಿಗೆ ತರುತ್ತಿಲ್ಲ. ಇದರ ವಿರುದ್ಧ ಬಿಜೆಪಿ ತೀವ್ರ ಚಳವಳಿ ನಡೆಸುವುದಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ.ಎಸ್. ರಾಧಾಕೃಷ್ಣನ್ ಆರೋಪಿಸಿದ್ದಾರೆ.

ರಾಜ್ಯ ಶಾಲಾ ಕಲೋತ್ಸವಕ್ಕೆ ಕೊಲ್ಲಂನಲ್ಲಿ ಸಿದ್ಧತೆ

ಕೊಲ್ಲಂ: ಈ ವರ್ಷ ನಡೆಯಲಿ ರುವ ೬೨ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಕೊಲ್ಲಂನಲ್ಲಿ ಸಿದ್ಧತೆ ಭರದಿಂದ ಸಾಗುತ್ತಿದೆ. ಜನವರಿ ೪ರಿಂದ ೮ರವರೆಗೆ ಕಲೋತ್ಸವ ನಡೆಯಲಿದೆ. ೨೪ ವೇದಿಕೆಗಳಲ್ಲಾಗಿ ೨೩೯ ವಿಧದ ಸ್ಪರ್ಧೆಗಳು ನಡೆಯಲಿದ್ದು ೧೪,೦೦೦ ಮಂದಿ ಸ್ಪರ್ಧಾಳುಗಳು ಭಾಗವಹಿ ಸುವರು.

ತ್ಯಾಜ್ಯ ಸಂಗ್ರಹ ಕೇಂದ್ರಗಳಲ್ಲಿ ಅಗ್ನಿಶಾಮನ ಸೌಕರ್ಯ ಖಾತರಿಪಡಿಸಲು ತೀರ್ಮಾನ

ಕಾಸರಗೋಡು: ತ್ಯಾಜ್ಯಗಳನ್ನು ತಂದು ಸಂಗ್ರಹಿಸಲಾಗುವ ಮೆಟೀರಿಯಲ್ ಕಲೆಕ್ಷನ್ ಫೆಸಿಲಿಟೀಸ್ (ಎಂಸಿಎಫ್)ನಲ್ಲಿ ಅಗ್ನಿಶಾಮನ ಸೌಕರ್ಯ ಖಾತರಿ ಪಡಿಸಲು ರಾಜ್ಯ ಸ್ಥಳೀಯಾಡಳಿತ ಇಲಾಖೆ ತೀರ್ಮಾನಿಸಿದೆ. ಇದರಂತೆ ಎಂ.ಸಿ.ಎಫ್‌ನಲ್ಲಿ ಇನ್ನು ಅಗ್ನಿ ಬಾಧೆ ಉಂಟಾದಲ್ಲಿ ಅದನ್ನು ತಕ್ಷಣ ನಂದಿಸುವ ರೀತಿಯಲ್ಲಿ ಅಗತ್ಯದ ಸೌಕರ್ಯಗಳನ್ನೂ ಅಲ್ಲೇ ಏರ್ಪಡಿಸಲಾಗುವುದು.  ರಾಜ್ಯದ ಕಾರ್ಯವೆಸಗುತ್ತಿರುವ ಎಂ.ಸಿ.ಎಫ್‌ಗಳ ಪೈಕಿ ಹಲವು ಕೇಂದ್ರಗಳಲ್ಲಿ ಇತ್ತೀಚೆಗೆ ಭಾರೀ ಅಗ್ನಿ ಅನಾಹುತಗಳು ಉಂಟಾದ ಘಟನೆಗಳು ನಡೆದಿದ್ದು, ಅದನ್ನು ಪರಿUಣಿಸಿ ಇಂತಹ ನೂತನ ಕ್ರಮ ಕೈಗೊಳ್ಳಲಾಗಿದೆ. ರಾಜ್ಯ ಸ್ಥಳೀಯಾಡಳಿತ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ …

ಆರ್‌ಎಸ್‌ಎಸ್ ಮುಖಂಡ ನಿಧನ

ಬದಿಯಡ್ಕ: ಆರ್‌ಎಸ್‌ಎಸ್ ನ ಹಿರಿಯ ಮುಖಂಡ, ನಿವೃತ್ತ ಅಧ್ಯಾಪಕ ಕೋರಿಕ್ಕಾರು ನಿವಾಸಿ ಮಹೇಶ್ವರ ಪ್ರಸಾದ್ (೬೭) ನಿಧನ ಹೊಂದಿದರು. ಇವರು ಪಳ್ಳತ್ತಡ್ಕದಲ್ಲಿ ಆರ್‌ಎಸ್‌ಎಸ್ ಶಾಖೆ ಆರಂಭಿಸಿ ಸ್ವಯಂ ಸೇವಕರ ತಂಡವನ್ನು ಕಟ್ಟಿದ್ದರು. ಮೃತರು ಪತ್ನಿ ಸರ್ವಮಂಗಳ,  ಮಕ್ಕಳಾದ ಸುಪ್ರಭ, ಮೇಘ ಶ್ಯಾಮ್, ಅಳಿಯ ಆದರ್ಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವಿದ್ಯಾರ್ಥಿನಿಯರ ಮುಂದೆ ನಗ್ನತೆ ಪ್ರದರ್ಶನ: ವೃದ್ದ ಸೆರೆ

ಕುಂಬಳೆ: ಶಾಲಾ ವಿದ್ಯಾರ್ಥಿನಿ ಯರ ಮುಂದೆ ವೃದ್ಧನೋರ್ವ ನಗ್ನತೆ ಪ್ರದರ್ಶಿಸಿ ಪೊಲೀಸರ ಸೆರೆಗೀಡಾದ ಘಟನೆ ನಡೆದಿದೆ. ಕಳತ್ತೂರು ಇಚ್ಲಂಪಾಡಿ ನೆಲ್ಯಡ್ಕದ ಅಬೂಬಕರ್ ಎ.ಬಿ. (೬೬) ಎಂಬಾತ ಸೆರೆಗೀಡಾದ ಆರೋಪಿ. ಈತ ನಿನ್ನೆ ಮಧ್ಯಾಹ್ನ ಕುಂಬಳೆ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಕೊಯಿಪ್ಪಾಡಿ ಗ್ರಾಮ ಕಚೇರಿ ಸಮೀಪ ನಿಂತುಕೊಂಡು, ಶಾಲಾ ವಿದ್ಯಾರ್ಥಿನಿಯರು ಬರುತ್ತಿದ್ದಾಗ ಅವರ ಮುಂದೆ ನಗ್ನತೆ ಪ್ರದರ್ಶಿಸಿದ್ದಾನೆನ್ನಲಾಗಿದೆ. ವರ್ತನೆಯನ್ನು ಕಂಡು ಭಯಗೊಂಡ ಮಕ್ಕಳು ಅಲ್ಲಿಂದ ಓಡಿದ್ದಾರೆ. ಇದನ್ನರಿತ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆರೋಪಿ ತನ್ನ ಕೆಟ್ಟ ವರ್ತನೆಯನ್ನು ಪುನರಾವರ್ತಿಸಿದ್ದಾನೆನ್ನಲಾಗಿದೆ. …

ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ ಭಾರತ್ ಪದ ಬಳಕೆ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಕೇರಳ

ತಿರುವನಂತಪುರ: ಶಾಲಾ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ ಭಾರತ್ ಪದ ಉಲ್ಲೇಖಿಸುವ  ಪ್ರಸ್ತಾವಕ್ಕೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಅನುಮೋದನೆ ನೀಡಿರುವಂತೆಯೇ ಕೇರಳ ಅದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ರಂಗಕ್ಕಿಳಿದಿದೆ. ಇದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ರಾಜಕೀಯ ತಂತ್ರವಾ ಗಿದೆ. ರಾಜಕೀಯ ಉದ್ದೇಶದಿಂದಲೇ ಕೇಂದ್ರ ಸರಕಾರ ಇಂತಹ ಪ್ರಸ್ತಾಪ ನಡೆಸಿದೆ. ಅದನ್ನು ಕೇರಳದಲ್ಲಿ ಜ್ಯಾರಿಗೊಳಿಸದೆ ಇಂಡಿಯಾ ಪದವನ್ನು ಉಳಿಸಿಕೊಂಡೇ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ತನ್ನ ಸ್ವಂತ ನೆಲೆಗೆ  ಮುದ್ರಿಸಿ ಬಳಸುವ ಚಿಂತನೆಯಲ್ಲಿ ಕೇರಳ ಸರಕಾರ …

ರೈಲುಗಾಡಿಯಲ್ಲಿ ಪ್ರಯಾಣಿಕರ ಸೊತ್ತು ಕಳವು ನಡೆಸುತ್ತಿದ್ದ ಇಬ್ಬರ ಬಂಧನ

ಕಾಸರಗೋಡು: ರೈಲು ಗಾಡಿಗಳಲ್ಲಿ ಪ್ರಯಾಣಿಕರ ಸೊತ್ತುಗಳನ್ನು ಕಳವು ನಡೆಸುತ್ತಿದ್ದ ಇಬ್ಬರನ್ನು ರೈಲ್ವೇ ಪೊಲೀಸರು ಕಯ್ಯಾರೆ ಸೆರೆ ಹಿಡಿದಿದ್ದಾರೆ. ಪೋರ್ಟ್ ಕೊಚ್ಚಿ ಪುಳಂಗರ ಇಲ್ಲತ್ತ್‌ನ ತನ್ಸೀರ್ (೧೯) ಹಾಗೂ ಕೊಚ್ಚಿ ಮಟ್ಟಂಚೇರಿ ನಿವಾಸಿಯಾದ ೧೭ರ ಹರೆಯದ ಬಾಲಕನನ್ನು ಸೆರೆ ಹಿಡಿಯಲಾಗಿದೆ. ತಿರುವನಂತಪುರದಿಂದ ಮಂಗಳೂರಿಗೆ ತೆರಳುವ ಮಲಬಾರ್ ಎಕ್ಸ್‌ಪ್ರೆಸ್‌ನಲ್ಲಿ ಇಂದು ಮುಂಜಾನೆ ೩.೩೦ರ ವೇಳೆ ಘಟನೆ ನಡೆದಿದೆ. ರೈಲು ಕಲ್ಲಿಕೋಟೆಗೆ ತಲುಪುತ್ತಿದ್ದಂತೆ ಬಿಡಿಎಸ್ ವಿದ್ಯಾರ್ಥಿಯ ಮೊಬೈಲ್ ಫೋನ್ ಕಳವಿಗೀಡಾಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ದೂರು ಲಭಿಸಿದ ಹಿನ್ನೆಲೆಯಲ್ಲಿ ರೈಲ್ವೇಯ …

ಅಕ್ಟೋಬರ್ ೩೧ರಂದು ಖಾಸಗಿ ಬಸ್ ಮುಷ್ಕರ

ತಿರುವನಂತಪುರ: ಖಾಸಗಿ ಲಿಮಿ ಟೆಡ್ ಸ್ಟಾಪ್ ಬಸ್‌ಗಳನ್ನು ಆರ್ಡಿನರಿ ಬಸ್‌ಗಳನ್ನಾಗಿ ಪರಿವರ್ತಿಸುವ ಮತ್ತು ಖಾಸಗಿ ಬಸ್‌ಗಳ ಸೇವಾ ಮಿತಿಯನ್ನು ೧೪೦ ಕಿಲೋ ಮೀಟರ್ ಆಗಿ ಸೀಮಿತಗೊಳಿಸುವ ತೀರ್ಮಾ ನವನ್ನು ಪ್ರತಿಭಟಿಸಿ  ಹಾಗೂ ವಿದ್ಯಾರ್ಥಿಗಳ ಪ್ರಯಾಣದರ ಹೆಚ್ಚಿಸಬೇಕೆಂಬ ಬೇಡಿಕೆಗಳನ್ನು ಮುಂದಿರಿಸಿಕೊಂಡು ಈತಿಂಗಳ ೩೧ ರಂದು  ಖಾಸಗಿ ಬಸ್ ಸೇವೆಯನ್ನು ಮೊಟುಗೊಳಿಸಿ ಮುಷ್ಕರ ಹೂಡಲು ಖಾಸಗಿ ಬಸ್ ಮಾಲಕರ ಸಂಯುಕ್ತ ಸಮಿತಿ ತೀರ್ಮಾನಿಸಿದೆ. ನಮ್ಮ ಬೇಡಿಕೆಗಳನ್ನು ಸರಕಾರ ಅಂಗೀಕರಿಸದಿದ್ದಲ್ಲಿ ನವಂಬರ್ ೨೧ರಿಂದ ಅನಿರ್ಧಿಷ್ಠಾವಧಿ ಮುಷ್ಕರ ಹೂಡಲಾಗುವುದೆಂದು ಸಮಿತಿಯ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ …

ಅಬಕಾರಿ ಅಧಿಕಾರಿಗಳಿಗೆ ಹಲ್ಲೆ: ಆರೋಪಿಗೆ ಶೋಧ

ಕುಂಬಳೆ: ಮದ್ಯ ಬೇಟೆಗಿಳಿದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆ ನಡೆಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಂತೆ ಕಯ್ಯಾರಿನ ಕಿರಣ್ (೩೦) ಎಂಬಾತನ ವಿರುದ್ಧ ಕುಂಬಳ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಕುಂಬಳ ರೇಂಜ್ ಎಕ್ಸೈಸ್ ಪ್ರಿವೆಂಟೀವ್ ಆಫೀಸರ್ ರಾಜೀವನ್ ನೀಡಿದ ದೂರಿನಂತೆ ಕೇಸು ದಾಖಲಿಸ ಲಾಗಿದೆ. ಮೊನ್ನೆ ಸಂಜೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಐದೂವರೆ ಲೀಟರ್ ಕರ್ನಾಟಕ ಮದ್ಯ ಸಹಿತ ಕಯ್ಯಾರು ಪೆರಿಯಡ್ಕದ ಸಂದೇಶ್ ಪಿ (೨೧) ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಅಲ್ಲಿಗೆ ತಲುಪಿದ ಕಿರಣ್ …