ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷಾರ್ಚನೆ ನ. ೧೯ರಂದು

ಮಂಜೇಶ್ವರ: ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವ ಸ್ಥಾನದಲ್ಲಿ ನವೆಂಬರ್19ರAದು ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿ ಗಳವರ ನೇತೃತ್ವದಲ್ಲಿ ಮತ್ತು ವೇದಮೂರ್ತಿ ದಡ್ಡಂಗಡಿ ಬಾಲಕೃಷ್ಣ ಭಟ್ ಇವರ ಮಾರ್ಗದರ್ಶನದಲ್ಲಿ ಸಾಮೂಹಿಕ ಲಕ್ಷಾರ್ಚನೆ ನಡೆಯಲಿದೆ. ನ.17ರಂದು ರಂದು ಸಂಜೆ 4ಕ್ಕೆ ಪವಿತ್ರ ತುಳಸೀದಳಯುಕ್ತ ಹಸಿರು ಹೊರೆ ಕಾಣಿಕೆ ನಡೆಯಲಿದೆ. 19ರಂದು ಬೆಳಿಗ್ಗೆ 7ಕ್ಕೆ ಗಣ ಹೋಮ, 7:30ಕ್ಕೆ ನವಕ ಕಲಶಾಭಿಷೇಕ, 8ಕ್ಕೆ ಲಕ್ಷಾರ್ಚನೆ ಪ್ರಾರಂಭ 11:30ಕ್ಕೆ ಸಾಮೂಹಿಕ ಭಗವದ್ಗೀತೆ ಪಾರಾಯಣ, 11:40ಕ್ಕೆ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ …

ಸಂಸದೀಯ ಸ್ಥಾಯೀ ಸಮಿತಿ ಸಭೆ ನಾಳೆ: ಕ್ರಿಮಿನಲ್ ಕಾನೂನು ಬದಲಿಸುವ ಮೂರು ಮಸೂದೆಗಳ ಪರಿಗಣನೆ

ನವದೆಹಲಿ: ಭಾರತೀಯ ನ್ಯಾಯ ಸಂಹಿತೆ ೨೦೨೩, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ೨೦೨೩ ಮತ್ತು ಭಾರತೀಯ ಸಾಕ್ಷರತಾ ಸಂಹಿತೆ ೨೦೨೩ ಕುರಿತು ಕರಡು ವರದಿಗಳನ್ನು ಪರಿಗಣಿಸಲು ಮತ್ತು ಅಂಗೀಕರಿಸಲು ಕೇಂದ್ರ ಗೃಹ  ವ್ಯವಹಾರಗಳ ಸಂಸದೀಯ ಸ್ಥಾಯೀ ಸಮಿತಿ ಸಭೆ ನಾಳೆ ದೆಹಲಿಯಲ್ಲಿ ಮಧ್ಯಾಹ್ನ ೨ ಗಂಟೆಗೆ  ಆರಂಭ ಗೊಳ್ಳಲಿದೆ. ಭಾರತೀಯ ನಾಗರಿಕಾ  ಸುರಕ್ಷಾ ಸಂಹಿತೆ-೨೦೨೩, ಭಾರತೀಯ ನ್ಯಾಯ ಸಂಹಿತೆ ೨೦೨೩ ಮತ್ತು ಭಾರತೀಯ ಸಾಕ್ಷರತಾ ಸಂಹಿತೆ ೨೦೨೩ಗಳನ್ನು ಕಳೆದ ಅಗೋಸ್ತ್ ೧೧ರಂದು ಸಂಸತ್‌ನಲ್ಲಿ ಮಂಡಿಸಲಾ ಗಿತ್ತು. ಈ …

ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ಕನಿಷ್ಠ ವೇತನ ಪರಿಷ್ಕರಿಸಲು ಕ್ರಮ

ಕಾಸರಗೋಡು: ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ಕನಿಷ್ಠ ವೇತನವನ್ನು ಪರಿಷ್ಕರಿಸಲು ರಾಜ್ಯ ಸರಕಾರ ವಿಶೇಷ ಸಮಿತಿಗೆ ರೂಪು ನೀಡಿದೆ. ರಾಜ್ಯ ಕಾರ್ಮಿಕ ಆಯುಕ್ತ (ಲೇಬರ್ ಕಮಿಶನರ್)ರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಉಳಿದಂತೆ ಹೆಚ್ಚುವರಿ ಕಾರ್ಮಿಕ ಆಯುಕ್ತರು (ಉದ್ದಿಮೆ ಸಂಬಂಧಿತ)ರನ್ನು  ಸಮಿತಿಯ ಸಂಚಾಲಕರನ್ನಾಗಿಯೂ, ಆಸ್ಪತ್ರೆ ಸಿಬ್ಬಂದಿಗಳ  ಮತ್ತು ಆಸ್ಪತ್ರೆ ಆಡಳಿತ ಸಮಿತಿಗಳು ಸೇರಿದಂತೆ ೧೪ ಮಂದಿಯನ್ನು ಇದರ ಸದಸ್ಯರನ್ನಾಗಿ  ನೇಮಿಸಲಾಗಿದೆ. ಕೊನೆಗೆ ಎಂಬಂತೆ ೨೦೧೮ ಎಪ್ರಿಲ್‌ನಲ್ಲಿ  ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗಳ ಕನಿಷ್ಠ ವೇತನ ಪರಿಷ್ಕರಿಸಲಾಗಿತ್ತು.

ವೀಣಾವಾದಿನಿಯಲ್ಲಿ ವಿದ್ಯಾದಶಮಿ ಸಂಗೀತೋತ್ಸವ

ಬದಿಯಡ್ಕ : ಇಡೀ ವರ್ಷದ ಶೈಕ್ಷಣಿಕ ಆರಾಧನೆಗೆ ವಿದ್ಯಾದಶಮಿಯು ಶಕ್ತಿಯಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪುಸ್ತಕ, ಸಂಗೀತ, ವಾದ್ಯಪರಿಕರಗಳನ್ನು ದೇವರ ಎದುರು ಇರಿಸಿ, ಪೂಜಿಸಿ, ಶಿಕ್ಷಣಕ್ಕಾಗಿ ಬಳಸುವ ಸಂಪ್ರದಾಯವಿದೆ. ಇದನ್ನು ವಿದ್ಯಾರ್ಥಿಗಳು ಆರಾಧನಾ ರೂಪದಲ್ಲಿ ಸ್ವೀಕರಿಸಬೇಕು ಎಂದು ಬದಿಯಡ್ಕ ಸಮೀಪದ ಪುಳಿತ್ತಡಿಯ ನಾರಾಯ ಣೀಯಂ ಸಂಗೀತ ವಿದ್ಯಾಪೀಠಂನ ನಿರ್ದೇಶಕ ವಿದ್ವಾನ್ ಬಳ್ಳಪದವು ಯೋಗೀಶ ಶರ್ಮ ಹೇಳಿದರು. ಅವರು ಮಂಗಳವಾರ ಸಂಸ್ಥೆಯಲ್ಲಿ ನಡೆದ ಸಂಗೀತ ವಿದ್ಯಾರಂಭA ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತಗಾರರಿಗೆ ನವರಾತ್ರಿಯೇ ವರ್ಷಾರಂಭ. ಗುರುಗಳ ಮನಸ್ಸಿಗೆ ನೋವು ಮಾಡದಿರುವುದೇ ಬಹು …

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನೋತ್ಸವ ಅ.೩೦, ೩೧ರಂದು: ಆಹ್ವಾನ ಪತ್ರಿಕೆ ಬಿಡುಗಡೆ

ಮಂಜೇಶ್ವರ : ಅಕ್ಟೋಬರ್ 30 ಹಾಗೂ 31 ರಂದು ನಡೆಯಲಿರುವ ಮಂಜೇಶ್ವರ ಉಪ ಜಿಲ್ಲಾ ಮಟ್ಟದ ವಿಜ್ಞಾನೆÆÃತ್ಸವದ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಸಂಬA ಧಪಟ್ಟವರು ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮಂಜೇಶ್ವರ ಉಪ ಜಿಲ್ಲಾ ಮಟ್ಟದ 112 ಶಾಲೆಗಳ ಸುಮಾರು 3000 ದಷ್ಟು ವಿದ್ಯಾರ್ಥಿಗಳು ಪಾಲ್ಗೊಳ್ಳಲಿ ರುವುದಾಗಿ ಮುಖ್ಯೋಪಧ್ಯಾಯ ಬಾಲಕೃಷ್ಣ ಜಿ. ಪ್ರಾಂಶುಪಾಲ ಶಿಶುಪಾಲನ್ ತಿಳಿಸಿದರು. ವಿಜ್ಞಾನ ಮೇಳವನ್ನು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು. ವಿಜ್ಞಾನ ಮೇಳದ ದ್ವಿತೀಯ ದಿನ …

ಮಂಜೇಶ್ವರ ಚುನಾವಣಾ ಲಂಚ ಪ್ರಕರಣ: ನ್ಯಾಯಾಲಯದಲ್ಲಿ ಹಾಜರಾದ ಕೆ. ಸುರೇಂದ್ರನ್

ಕಾಸರಗೋಡು: ವಿಧಾನಸಭಾ ಚುನಾ ವಣೆ ವೇಳೆ ಲಂಚ  ನೀಡಿ ಅಭ್ಯರ್ಥಿಯ ನಾಮಪತ್ರ ಹಿಂಪಡೆಯುವಂತೆ ಮಾಡ ಲಾಯಿತು ಎಂಬ ದೂರಿನಂತೆ ಪೊಲೀ ಸರು ದಾಖಲಿಸಿಕೊಂಡ ಪ್ರಕರಣದ ವಿಚಾರಣೆ ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾ ಲಯದಲ್ಲಿ ಇಂದು ಮತ್ತೆ ಆರಂಭಗೊಂಡಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿ ಹೆಸರಿಸಲಾಗಿರುವ ಬಿಜೆಪಿ ರಾಜ್ಯಧ್ಯಕ್ಷ  ಕೆ. ಸುರೇಂದ್ರನ್, ಬಿಜೆಪಿ  ಮಾಜಿ ಜಿಲ್ಲಾ  ಅಧ್ಯಕ್ಷ  ವಿ. ಬಾಲಕೃಷ್ಣ ಶೆಟ್ಟಿ, ಯುವ ಮೋರ್ಛಾ ರಾಜ್ಯ ಕೋಶಾಧಿಕಾರಿ   ಸುನಿಲ್ ನಾಯ್ಕ್, ಮಣಿಕಂಠ ರೈ, ಲೋಕೇಶ್, ಕೆ. ಸುಂದರ ಎಂಬವರು  …

ಮದ್ಯ ಸಹಿತ ಸೆರೆ: ಆರೋಪಿ, ಸ್ನೇಹಿತನಿಂದ ಅಬಕಾರಿ ಅಧಿಕಾರಿಗಳಿಗೆ ಹಲ್ಲೆ; ಓರ್ವ ಸೆರೆ, ಇನ್ನೋರ್ವ ಪರಾರಿ

ಕುಂಬಳೆ: ಅನಧಿಕೃತವಾಗಿ ಮದ್ಯ ಮಾರಾಟಗೈಯ್ಯುತ್ತಿದ್ದಾತನನ್ನು ಅಬಕಾರಿ ಅಧಿಕಾರಿಗಳು ಸೆರೆಹಿಡಿದಿದ್ದು, ಈ ವೇಳೆ ಆರೋಪಿ ಹಾಗೂ ಆತನ ಸ್ನೇಹಿತ ಸೇರಿ ಅಧಿಕಾರಿಗಳ ಮೇಲೆ ಆಕ್ರಮಿಸಿದ ಘಟನೆ ನಡೆದಿದೆ. ನಿನ್ನೆ ಸಂಜೆ ಕಯ್ಯಾರು ಬಳಿಯ ಪೆರ್ಮುದೆಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಕಯ್ಯಾರು ಪೆರಿಯಡ್ಕದ ಸಂದೇಶ್ ಪಿ (೨೧) ಎಂಬಾತನನ್ನು ಸೆರೆಹಿಡಿಯಲಾ ಗಿದೆ. ಈತನ ಸ್ನೇಹಿತ ಕಯ್ಯಾರಿನ ಕಿರಣ್ ಕುಮಾರ್ (೩೦) ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಯುತ್ತಿದೆಯೆಂದು  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪೆರ್ಮುದೆಯಲ್ಲಿ ಅನಧಿಕೃತವಾಗಿ ಕರ್ನಾಟಕ ಮದ್ಯ …

ಕೋಳಿ ಅಂಕಕ್ಕೆ ದಾಳಿ: ಆರು ಮಂದಿ ಸೆರೆ, ೮ ಕೋಳಿ ವಶ

ಮಂಜೇಶ್ವರ: ಕೋಳಿಅಂಕ ನಡೆಯುತ್ತಿದ್ದ ಸ್ಥಳಕ್ಕೆ ಮಂಜೇಶ್ವರ ಪೊಲೀಸರು ದಾಳಿ ನಡೆಸಿ ೮ ಕೋಳಿಯನ್ನು ವಶಪಡಿಸಿ, ಆರು ಮಂದಿಯನ್ನು ಸೆರೆ ಹಿಡಿದಿದ್ದಾರೆ. ಇವರಿಂದ ೪೭೦೦ ರೂ. ವಶಪಡಿಸಲಾಗಿದೆ. ನಿನ್ನೆ ಸಂಜೆ ಕಡಂಬಾರ್ ಹೊಸಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿದ್ದಾಗ ಎಸ್‌ಐ ನಿಖಿಲ್ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಬಾಳಿಯೂರು ನಿವಾಸಿ ರಾಜೀವ, ಚಿಗುರುಪಾದೆಯ ಹರೀಶ, ಸಂತೋಷ್ ಮಜಿಬೈಲ್, ರಾಜೇಶ್ ಮಜಿಬೈಲ್, ಪುಷ್ಪರಾಜ ಶೆಟ್ಟಿ ಹೊಸಕಟ್ಟೆ, ಸಂದೀಪ್ ಕುಂಜತ್ತೂರುನನ್ನು ಸೆರೆ ಹಿಡಿಯಲಾಗಿದೆ. ಹಲವರು ಸ್ಥಳದಿಂದ ಪರಾರಿಯಾಗಿದ್ದಾರೆ. …

ಅನಧಿಕೃತ ಹೊಯ್ಗೆ ಸಾಗಾಟ: ಲಾರಿ ಸಹಿತ ಓರ್ವ ಸೆರೆ

ಕುಂಬಳೆ: ಅನಧಿಕೃತವಾಗಿ ಸಂಗ್ರಹಿಸಿದ ಹೊಯ್ಗೆ ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ಕುಂಬಳೆ  ಎಸ್.ಐ. ಗಣೇಶ್ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಲಾರಿ ಚಾಲಕ ಚೇವಾರಿನ ಮುಹಮ್ಮದಲಿ (೪೨) ಎಂಬಾತನನ್ನು ಸೆರೆಹಿಡಿಯಲಾಗಿದೆ. ಕುಬಣೂರು  ಹೊಳೆಯಿಂದ ಸಂಗ್ರಹಿಸಿದ ಹೊಯ್ಗೆ ಸಾಗಾಟ ನಡೆಸುತ್ತಿದ್ದಾಗ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಬಿಲ್ಡರ್‌ನ ಮನೆಯಿಂದ ೩೨.೪೬ ಲಕ್ಷ ರೂ. ನಗ-ನಗದು ಕಳವು: ಮಂಜೇಶ್ವರ ನಿವಾಸಿಗಾಗಿ ಹುಡುಕಾಟ

ತಲಪಾಡಿ: ಬಂಟ್ವಾಳ ಫರಂಗಿಪೇಟೆಯ ಬಿಲ್ಡರ್ ಓರ್ವರ ಮನೆಯಿಂದ ೩೨.೪೬ ಲಕ್ಷ ರೂ. ನಗ-ನಗದು ಕಳವು ನಡೆದಿದ್ದು, ಈ ಪ್ರಕರಣದಲ್ಲಿ  ಮಂಜೇಶ್ವರ ನಿವಾಸಿ ಕೆಲಸದಾಳು  ನಾಪತ್ತೆಯಾದ ಘಟನೆ ನಡೆದಿದೆ. ಕೋಡಿಮಜಲು ನಿವಾಸಿ ಇಮಾರ್ ಬಿಲ್ಡರ್ಸ್ ಮಾಲಕ ಮೊಹಮ್ಮದ್ ಝಫಾರುಲ್ಲಾರ ಮನೆಯಿಂದ ಕಳವು ನಡೆಸಲಾಗಿದೆ. ಕಳೆದ ಕೆಲವು ತಿಂಗಳಿಂದ ಝಫಾರುಲ್ಲಾರಿಗೆ ಸಹಾಯಕನಾಗಿ ಮಂಜೇಶ್ವರ ನಿವಾಸಿ ಅಲಿ ಎಂಬಾತ ಕೆಲಸಕ್ಕೆ ಸೇರಿದ್ದ. ಈತನಲ್ಲಿ ಮಾಲಕನಿಗೆ ನಂಬುಗೆ ಮೂಡಿದ್ದು, ಕಳೆದ ೧೮ರಂದು ಮನೆಗೆ ಬೀಗ ಜಡಿದು ಕೀಲಿಯನ್ನು  ಅಲಿಯಲ್ಲಿ ನೀಡಿ ಢಫಾರುಲ್ಲಾ ಬೆಂಗಳೂರಿಗೆ …