ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು

ಇರಿಟ್ಟಿ: ಸ್ಕೂಟರ್‌ಗೆ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟನು. ವಳ್ಳಿತ್ತೋಡ್ ಪುಳಿಂಙೋಟ್ ಹೌಸ್ ಮುಹಮ್ಮದ್ ಕುಟ್ಟಿ- ಸೈನಬ ದಂಪತಿ ಪುತ್ರ ಮುಹಮ್ಮದ್ ಅಫ್ಸಲ್ (19) ಮೃತಪಟ್ಟ ಯುವಕ. ಉಳಿಯಿಲ್ ದಾರುಲ್ ಹಿದಾಯ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ. ಕಳೆದ ಶುಕ್ರವಾರ ಇರಿಟ್ಟಿ- ಮಟ್ಟನ್ನೂರು ರಸ್ತೆಯಲ್ಲಿ ವಳೋರ ಎಂಬಲ್ಲಿ ಅಪಘಾತ ಸಂಭವಿಸಿತ್ತು. ಮಟ್ಟನ್ನೂರು ಭಾಗಕ್ಕೆ ಸ್ಕೂಟರ್‌ನಲ್ಲಿ ಅಫ್ಸಲ್ ಸಂಚರಿಸುತ್ತಿದ್ದಾಗ ಮುಂಭಾಗದಿಂದ ಬಂದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಅಫ್ಸಲ್‌ನನ್ನು ಕಣ್ಣೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, …

ವೇಡನ್‌ರ ಹಾಡು ವಿ.ವಿ ಪಠ್ಯ ಪುಸ್ತಕದಲ್ಲಿ: ಹಿಂತೆಗೆಯಲು ಬಿಜೆಪಿ ಬೆಂಬಲಿತ ಸದಸ್ಯ ಆಗ್ರಹ

ಮಲಪ್ಪುರಂ: ರಾಪರ್ ವೇಡನ್‌ರ ಹಾಡು ಕಲ್ಲಿಕೋಟೆ ವಿವಿಯ ಪಠ್ಯ ಯೋಜನೆಯಲ್ಲಿ ಸೇರಿಸಿರುವುದನ್ನು ಹಿಂತೆಗೆಯಬೇಕೆಂದು ಆಗ್ರಹಿಸಿ ಬಿಜೆಪಿ ಬೆಂಬಲಿತ ಸಿಂಡಿಕೇಟ್ ಸದಸ್ಯ ವೈಸ್ ಚಾನ್ಸೆಲರ್‌ರಿಗೆ ಪತ್ರ ನೀಡಿದ್ದಾರೆ. ಸಿಂಡಿಕೇಟ್ ಸದಸ್ಯ ಎ.ಕೆ. ಅನುರಾಜ್ ವೈಸ್ ಚಾನ್ಸಲರ್ ಪಿ. ರವೀಂದ್ರನ್‌ರಿಗೆ ಈ ಬಗ್ಗೆ ಪತ್ರ ನೀಡಿದ್ದಾರೆ. ವೇಡನ್ ಮಾದಕ ಪದಾರ್ಥ, ಹುಲಿಯ ಉಗುರು ಕೈವಶವಿರಿಸಿಕೊಂಡ ಹಿನ್ನೆಲೆಯಲ್ಲಿ ಸೆರೆಯಾದ ವ್ಯಕ್ತಿಯಾಗಿದ್ದಾನೆಂದು ಪತ್ರದಲ್ಲಿ ಸೂಚಿಸಲಾಗಿದೆ. ವೇಡನ್‌ರ ಹಲವು ವೀಡಿಯೋಗಳಲ್ಲೂ ಮದ್ಯ ಉಪಯೋಗಿಸುವ ದೃಶಗಳು ಒಳಗೊಂಡಿದೆ. ವೇಡನ್‌ರ ರಚನೆ ಪಠ್ಯ ಪುಸ್ತಕದಲ್ಲಿ ಒಳಪಡಿಸುವುದು ಈ …

ಮಾದಕ ಪದಾರ್ಥ ವಿರುದ್ಧ ನಿವೃತ್ತ ಎಸ್‌ಐಯ ಸೈಕಲ್ ರ‍್ಯಾಲಿ: ಕಾಸರಗೋಡಿನಲ್ಲಿ ಸ್ವಾಗತ

ಕಾಸರಗೋಡು:  ನಿವೃತ್ತ ಎಸ್‌ಐ ಶಾಜಹಾನ್‌ರ ಮಾದಕ ಪದಾರ್ಥ ವಿರುದ್ಧ ಸಂದೇಶ ಯಾತ್ರೆಗೆ ಚೈಲ್ಡ್ ಪ್ರೊಟೆಕ್ಟ್ ಟೀಮ್ ರಾಷ್ಟ್ರೀಯ ಸಮಿತಿ ಹಾಗೂ ಶಾಲಾ ಪ್ರೊಟೆಕ್ಷನ್ ಗ್ರೂಪ್ ವತಿಯಿಂದ ಜಂಟಿಯಾಗಿ ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾಗತ ನೀಡಲಾಯಿತು. ಕೊಲ್ಲಂ ಜಿಲ್ಲೆಯಲ್ಲಿ ಎಸ್‌ಐ ಆಗಿ ನಿವೃತ್ತರಾದ ಎ. ಶಾಜಹಾನ್ 14 ಜಿಲ್ಲೆಗಳಲ್ಲಿ ಸಂಚರಿಸಿ 2025 ಕಿಲೋ ಮೀಟರ್ ಸೈಕಲ್ ಯಾತ್ರೆ ನಡೆಸಿ ಶಾಲಾ ಪರಿಸರವನ್ನು ಕೇಂದ್ರೀಕರಿಸಿ ತಿಳು ವಳಿಕಾ ಕಾರ್ಯಕ್ರಮ ನಡೆಸಿದ್ದಾರೆ. 11ನೇ ದಿನ ಕಾಸರಗೋಡಿಗೆ ತಲುಪಿದ ಇವರಿಗೆ …

ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ಸ್ಥಾಪಿಸುವ ಸಾಧ್ಯತಾ ಅಧ್ಯಯನ ಟೆಂಡರ್‌ಗೆ ಸಚಿವ ಸಂಪುಟದ ಅಂಗೀಕಾರ

ಕಾಸರಗೋಡು: ಕಾಸರಗೋಡು, ವಯನಾಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಕಿರು ವಿಮಾನ ನಿಲ್ದಾಣ (ಏರ್‌ಸ್ಟ್ರಿಪ್) ಸ್ಥಾಪಿಸುವ ಕುರಿತಾದ ಸಾಧ್ಯತಾ ಅಧ್ಯಯನ ನಡೆಸಲು ರೈಟ್ಸ್-ಕಿಫ್ ಕೋನ್ ಸಲ್ಲಿಸಿದ ಟೆಂಡರ್‌ಗೆ ಮುಖ್ಯಮಂತ್ರಿ ಪಿಣ ರಾಯಿ ವಿಜಯನ್‌ರ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲ್ಲಿ ಸೇರಿದ ರಾಜ್ಯ ಸಚಿವ ಸಂಪುಟ ಸಭೆ ಅಂಗೀಕರಿಸಿದೆ. ಇದರಂತೆ ಸಾರಿಗೆ ಮತ್ತು ಇಂಜಿ ನಿಯರಿಂಗ್ ಸಂಸ್ಥೆಯಾದ ರೈಟ್ಸ್ ಹಾಗೂ ಕಿಫ್‌ಬಿ ಆಶ್ರಯದಲ್ಲಿ ಕಾರ್ಯವೆಸಗುತ್ತಿರುವ ಕನ್ಸಲ್ಟೆನ್ಸಿ ಸಂಸ್ಥೆಯಾದ  ಕಿಫ್‌ಕೋ ಸಂಯುಕ್ತ ವಾಗಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಕುರಿತಾಗಿ ಸಾಧ್ಯತೆ ಅಧ್ಯಯನ ನಡೆಸಲಿದೆ. ಈ …

ಕುಂಬಳೆಯಲ್ಲಿ ಬಿಜೆಪಿಯಿಂದ ತ್ರಿಸ್ತರ ಪಂಚಾಯತ್ ಚುನಾವಣಾ ಪೂರ್ವಭಾವಿ ಸಭೆ

ಉಪ್ಪಳ: ತ್ರಿಸ್ತರ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯು ಕುಂಬಳೆ ಬಿಜೆಪಿ ಕಚೆÃರಿ ಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀ ಧರ ಯಾದವ್ ಉದ್ಘಾಟಿಸಿದರು. ,ಉತ್ತರ ವಲಯ ಬಿಜೆಪಿ ಪ್ರದಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ ಚುನಾವಣಾ ಮಾಹಿತಿ ನೀಡಿ ದರು. ಕುಂಬಳೆ ಪಂಚಾಯತ್ ದಕ್ಷಿಣ ವಲಯ ಬಿಜೆಪಿ ಅಧ್ಯಕ್ಷ ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತ ಪುರ, ಉಪಾಧ್ಯಕ್ಷೆ ಪ್ರೇಮಾವತಿ ಶೆಟ್ಟಿ, ಬಿಜೆಪಿ ಕುಂಬಳೆ ಪಂಚಾಯತ್ ಉತ್ತರ ವಲಯ …

ಎಸ್‌ಟಿಯು ಮೋಟಾರು ಫೆಡರೇಶನ್ ಜಿಲ್ಲಾ ಸಮ್ಮೇಳನ ಸಿದ್ಧತೆ ಆರಂಭ

ಕುಂಬಳೆ: ಎಸ್‌ಟಿಯು ಮೋ ಟರ್ ಆಂಡ್ ಇಂಜಿನಿಯರಿಂಗ್ ವರ್ಕರ್ಸ್ ಯೂನಿಯನ್ ಜಿಲ್ಲಾ ಪ್ರತಿನಿಧಿ ಸಮ್ಮೇಳನ ಕುಂಬಳೆ ಆರಿ ಕ್ಕಾಡಿಯ ಕೆಪಿಎಸ್ ರಿಸೋರ್ಟ್‌ನಲ್ಲಿ ನಡೆಯಲಿದ್ದು, ಇದರ ಸಿದ್ಧತೆ ಆರಂಭಗೊಂಡಿದೆ. ಈ ತಿಂಗಳ 14ರಂದು ನಡೆಯುವ ಸಮ್ಮೇಳನದ ಬಗ್ಗೆ  ಪೂರ್ವಭಾವಿ ಸಭೆ ಕುಂಬಳೆ ಬಾಫಾತಿ ತಂಙಳ್ ಸೌಧದಲ್ಲಿ ಜರಗಿದ್ದು, ಅಶ್ರಫ್ ಕಾರ್ಲೆ ಅಧ್ಯಕ್ಷತೆ ವಹಿಸಿದರು. ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಎ.ಕೆ. ಆರೀಫ್ ಉದ್ಘಾಟಿಸಿದರು. ಕುಂಬಳೆ ಪಂಚಾಯತ್ ಲೀಗ್ ಅಧ್ಯಕ್ಷ ಬಿ.ಎನ್. ಮುಹಮ್ಮದಲಿ, ಅಫ್ತಾಬ್ ತಂಙಳ್‌ರಿಂದ ಫಂಡ್ …

ವಾಹನ ಅಪಘಾತ: ತನಿಖೆಗೆ ಹೋದ ಎಸ್‌ಐಗಳ ಮೇಲೆ ಹಲ್ಲೆ; ಆರೋಪಿ ಸೆರೆ

ಕಾಸರಗೋಡು: ವಾಹನ ಅಪಘಾ ತದ ಬಗ್ಗೆ ತನಿಖೆ ನಡೆಸಲು ಹೋದ ಎಸ್‌ಐಗಳ ಮೇಲೆ ಹಲ್ಲೆ ನಡೆಸಿ ಅವರ ಕರ್ತವ್ಯಕ್ಕೆ ಅಡಚಣೆ ಉಂಟುಮಾಡಿದ ಪ್ರಕರಣದ ಆರೋಪಿಯನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ. ಪನತ್ತಡಿ ಚಾಮುಂಡಿಕುನ್ನುನ ಪ್ರಮೋದ್ ಎಸ್.ಸಿ (46) ಬಂಧಿತ ಆರೋಪಿ. ಚೆರ್ಕಳದಲ್ಲಿ ನಿನ್ನೆ ಸಂಜೆ ಆರೋಪಿ ಚಲಾಯಿಸುತ್ತಿದ್ದ ಕಾರು ಮತ್ತು ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಲ್ಲಿ ಸ್ಕೂಟರ್ ಸವಾರ ಕುಂಟಾರು ಪಡಿಯತ್ತಡ್ಕದ  ಇಬ್ರಾಹಿಂ ಬಿನ್‌ಶಾದ್ (19)ಗಾಯಗೊಂಡು ಆತನನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈ ಅಪಘಾತದ ಬಗ್ಗೆ ತನಿಖೆ ನಡೆಸಲು ವಿದ್ಯಾಗರ …

ಮೊಮ್ಮಗುವನ್ನು ಶಾಲೆಗೆ ಕರೆದುಕೊಂಡು ಹೋದ ಮಹಿಳೆ ಅಸ್ವಸ್ಥ ಸ್ಥಿತಿಯಲ್ಲಿ ಬಸ್ ತಂಗುದಾಣದಲ್ಲಿ ಪತ್ತೆ

ಕುಂಬ್ಡಾಜೆ: ಮೊಮ್ಮಗುವನ್ನು ಶಾಲೆಗೆ  ಕರೆದೊಯ್ದ ಬಳಿಕ ನಾಪತ್ತೆಯಾದ ಮಹಿಳೆಯನ್ನು ಬಸ್ ತಂಗುದಾಣದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಂಬ್ಡಾಜೆ, ಚಂದ್ರಂಪಾರೆ ನಿವಾಸಿಯಾದ ೫೪ರ ಹರೆಯದ ಮಹಿಳೆಯನ್ನು ಇಂದು ಮುಂಜಾನೆ ಮಲ್ಲಂಪಳ್ಳಿ ಸಮೀಪದ ಬಸ್ ತಂಗುದಾಣದಲ್ಲಿ ಪತ್ತೆಹಚ್ಚಲಾಗಿದೆ. ಇವರನ್ನು ಆಸ್ಪತ್ರೆಯಲ್ಲಿ ದಾಖ ಲಿಸಲಾಗಿದೆ. ಕಳೆದ  ಎರಡು ವಾರಗಳಿಂದ ಈ ಮಹಿಳೆ ಅಮ್ಮಂಗೋಡಿನ ಪುತ್ರಿಯ ಮನೆಯಲ್ಲಿ ವಾಸವಾಗಿದ್ದರು. ನಿನ್ನೆ ಬೆಳಿಗ್ಗೆ ಪುತ್ರಿಯ ಮಗುವನ್ನು ಪೊವ್ವಲ್ ಶಾಲೆಗೆ ಕರೆದುಕೊಂಡು ಹೋಗಿದ್ದರು. ಆ ಬಳಿಕ ಇವರು ಹಿಂತಿರುಗಿರಲಿಲ್ಲ. ಸಂಜೆವರೆಗೂ ಹುಡುಕಾಡಿ ಪತ್ತೆಹಚ್ಚಲು ಸಾಧ್ಯವಾಗದ ಹಿನ್ನೆಲೆಯಲ್ಲಿ …

ವರ್ಕ್ ಶಾಪ್‌ನಿಂದ ಗ್ಯಾಸ್ ಸಿಲಿಂಡರ್, ಬೋಲ್ಟ್ ಕಳವು

ಕಾಸರಗೋಡು: ವಿದ್ಯಾನಗರದಲ್ಲಿ ಕಾರ್ಯವೆಸಗುತ್ತಿರುವ  ವರ್ಕ್ ಶಾಪ್‌ಗೆ ಕಳ್ಳರು ನುಗ್ಗಿ ಸುಮಾರು  75,000 ರೂ. ಬೆಲೆಯ ಎಂ.ಎಸ್ ಬೋಲ್ಡ್ ಮತ್ತು  ಎಲ್‌ಪಿ ಕಂಪೆನಿಯ ಗ್ಯಾಸ್ ಸಿಲಿಂಡರ್‌ಗಳನ್ನು ಕಳವುಗೈದಿರುವುದಾಗಿ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ. ಪ್ರಸ್ತುತ ವರ್ಕ್ ಶಾಪ್ ಸಿಬ್ಬಂದಿ ನೀಲೇಶ್ವರ ಕರುವಾಂಚೇರಿ  ನಿವಾಸಿ ಪ್ರಯಾಗ್ ವಿ.ವಿ ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ 8 ಮತ್ತು 9ರ ನಡುವೆ ಈ ಕಳವು ನಡೆದಿದೆ.

ಇಂಧನ ಸೋರಿಕೆ: ಬಾಹ್ಯಾಕಾಶ ಯಾನ  ಮತ್ತೆ ಮುಂದೂಡಿಕೆ

ನವದೆಹಲಿ: ಭಾರತದ ಎರಡನೇ ಗಗನಯಾತ್ರಿ ಶುಭಾಂಶು ಶುಕ್ಲಾರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ಆಕ್ಸಿಯಮ್-೪ ಮಿಷನ್‌ನನ್ನು ಮತ್ತೆ ಮುಂದೂಡಲಾಗಿದೆ. ಈ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿರುವ ಸ್ಪೇಸ್ ಎಕ್ಸ್ ಕಂಪೆನಿಯು ಉಡಾವಣೆಗೆ ಮೊದಲು ನಡೆಸಿದ ಪೋಸ್ಟ್ ಸ್ವ್ಯಾಟಿಕ್ ಫೈರ್ ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲಜನಕ ಸೋರಿಕೆ ಕಂಡು ಬಂದಿದೆ ಎಂದೂ ಆ ಕಾರಣದಿಂದಾಗಿ ಆಕ್ಸಿಯಮ್-೪ ಮಿಷನ್ ಯಾನವನ್ನು ಮುಂದೂಡಬೇಕಾಗಿ ಬಂದಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಸುರಕ್ಷತೆ ವಿಷಯದಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಬೂಸ್ಟರ್ ತಪಾಸಣೆ ಸಮಯದಲ್ಲಿ ದ್ರವ ಆಮ್ಲ ಜನಕ …