ಹೊಗೆಸೊಪ್ಪು ಉತ್ಪನ್ನ ವಶ

ಮಂಜೇಶ್ವರ: ನಿಷೇಧಿತ ಹೊಗೆಸೊಪ್ಪು ಉತ್ಪನ್ನ ಸಹಿತ ಓರ್ವನನ್ನು ಸೆರೆ ಹಿಡಿಯಲಾಗಿದೆ. ಬಾಯಾರ್ ಪದವುನಿಂ ದ ಪೆರ್ವೋಡಿ ನಿವಾಸಿ ಸುಬೈರ್ (೩೬) ನನ್ನು ನಿನ್ನೆ ಸಂಜೆ ಸೆರೆ ಹಿಡಿಯಲಾಗಿದೆ. ಈತನ ಕೈಯಲ್ಲಿದ್ದ ಚೀಲದಲ್ಲಿ ೩೦ ಪ್ಯಾಕೆಟ್ ಹೊಗೆಸೊಪ್ಪು ಉತ್ಪನ್ನ ವಶಪ ಡಿಸಲಾಗಿದೆ. ಎಸ್‌ಐ ನಿಖಿಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಕರ್ನಾಟಕ ಮದ್ಯ ವಶ: ಸ್ಕೂಟರ್ ಸಹಿತ ಓರ್ವ ಸೆರೆ

ಕಾಸರಗೋಡು: ಚೆರ್ಕಳ ಪೇಟೆಯಲ್ಲಿ ಸ್ಕೂಟರ್‌ನಲ್ಲಿ ಬಂದು ಕರ್ನಾಟಕ ನಿರ್ಮಿತ ಮದ್ಯ ಮಾರಾಟ ಮಾಡಿದ ಆರೋಪದಂತೆ ಕಾಸರಗೋಡು ಅಬಕಾರಿ ಸರ್ಕಲ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮುಹಮ್ಮದ್ ಕಬೀರ್‌ರ ನೇತೃತ್ವದ ತಂಡ ಓರ್ವನನ್ನು ಬಂಧಿಸಿದೆ. ಮಾತ್ರವಲ್ಲ ೧೮೦ ಎಂ.ಎಲ್‌ನ ೧.೬೪ ಲೀಟರ್ ಮದ್ಯವನ್ನು ವಶಪಡಿಸಲಾಗಿದೆ. ಶಾಹಹಾನ್ ಎಂಬಾತ ಬಂಧಿತ ಆರೋಪಿ. ಆತನ ಸ್ಕೂಟರನ್ನು ವಶಪಡಿಸಲಾಗಿದೆ. ಈತ ಹಲವು ಅಬಕಾರಿ ಪ್ರಕರಣಗಳಲ್ಲಿ ಆರೋಪಿ ಯಾಗಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅಭಿಲಾಷ್, …

ಮೂವರು ಮಕ್ಕಳು ರೈಲು ಢಿಕ್ಕಿ ಹೊಡೆದು ಮೃತ್ಯು

ಚೆನ್ನೈ: ವಿಕಲಚೇತನರಾದ ಮೂವರು ಬಾಲಕರು ಹಳಿ ದಾಟುತ್ತಿದ್ದಾಗ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಚೆನ್ನೈಯಲ್ಲಿ  ನಡೆದಿದೆ.ಕಳೆದ  ಹಲವು ವರ್ಷಗಳಿಂದ ಚೆನ್ನೈಯಲ್ಲಿ ವಾಸಿಸುತ್ತಿರುವ ಕರ್ನಾಟಕ ನಿವಾಸಿಗಳಾದ ಕುಟುಂಬಗಳ ಮಕ್ಕಳಾದ ಸುರೇಶ್ (೧೫), ರವಿ (೧೫), ಮಂಜು ನಾಥ್ (೧೧) ಎಂಬಿವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಕರ್ನಾಟಕದಲ್ಲಿ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಿಕ್ಷಣ ಕಲಿಯುತ್ತಿರುವ ಈ ಮಕ್ಕಳು ದಸರಾ ರಜೆಯಲ್ಲಿ ಚೆನ್ನೈಯಲ್ಲಿರುವ ಹೆತ್ತವರ ಬಳಿಗೆ ತೆರಳಿದ್ದರು. ಊರಾಪಾಕ್ ಹಾಗೂ ವಂಡಲ್ಲೂರಾ ಮಧ್ಯೆ ಈ ಮಕ್ಕಳು ರೈಲು ಹಳಿ ದಾಟುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.

ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ ಅಧಿಕಾರ ಸ್ವೀಕಾರ

ಬದಿಯಡ್ಕ: ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ಶ್ಯಾಮಪ್ರಸಾದ್ ಮಾನ್ಯ ಅಧಿಕಾರ ಸ್ವೀಕರಿಸಿದರು. ಬದಿಯಡ್ಕ ಸಂಸ್ಕೃತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿÇ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅವರು ಅದಿsಕಾರ ಹಸ್ತಾಂತರಿಸಿ ಮಾತನಾಡಿದರು. ಹಾಲಿ ಮಂಡಲಾಧ್ಯಕ್ಷ ಎಂ. ನಾರಾಯಣ ನೀರ್ಚಾಲು ಅಧ್ಯಕ್ಷತೆ ವಹಿಸಿದ್ದರು.ಯೂತ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಪ್ರದೀಪ್ ಕುಮಾರ್, ಕಾರಡ್ಕ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಗೋಪಕುಮಾರ್, ಮುಖಂಡರುಗಳಾದ ಎಂ.ಕೆ. ಪ್ರಭಾಕರನ್, ಐತ್ತಪ್ಪ ಚೆನ್ನೆಗುಳಿ, ವಕೀಲ ಎಂ. ಮಹಾಬಲ ಭಟ್ ಮಿಂಚಿನಡ್ಕ, ಪಿ.ಜಿ.ಚಂದ್ರಹಾಸ ರೈ, ಆನಂದ ಮವ್ವಾರು, …

ಪೊಲೀಸ್ ಠಾಣೆಯಲ್ಲಿ ಕುಡಿದು ಗಲಾಟೆ: ನಟ ವಿನಾಯಕನ್ ಸೆರೆ

ಕೊಚ್ಚಿ: ಕುಡಿದ ಮತ್ತಿನಲ್ಲಿ ಎರ್ನಾಕುಳಂ ಟೌನ್ ನೋರ್ತ್ ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡಿದ ಆರೋಪದಂತೆ ಮಲಯಾಳಂ ಸಿನೆಮಾನಟ ವಿನಾಯಕನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಕೆಲವು ಸಮಸ್ಯೆಗಳನ್ನು ಸೃಷ್ಟಿಸಿದ ಬಗ್ಗೆ ವಿನಾಯಕ್‌ರ ಪತ್ನಿ ನೀಡಿದ ದೂರಿನಂತೆ ವಿನಾಯಕನ್ ಹಾಗೂ ಪೊಲೀಸರು ಠಾಣೆಗೆ ಕರೆಸಿದ್ದರು. ಅದರಂತೆ ವರು ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಮದ್ಯದ ಅಮಲಿನಲ್ಲಿದ್ದ ವಿನಾಯಕನ್  ಪೊಲೀಸರಲ್ಲಿ ವಾಗ್ವಾದಕ್ಕಿಳಿದು ಗಲಾಟೆಗೆ ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ನಂತರ ವೈದ್ಯಕೀಯ …

ಸಪ್ಲೈ ಕೋ ಮೂಲಕ ವಿತರಿಸಲಾಗುವ ಸಾಮಗ್ರಿಗಳ ಬೆಲೆ ಏರಿಕೆ ಸಾಧ್ಯತೆ

ಕಾಸರಗೋಡು: ರಾಜ್ಯ ನಾಗರಿಕಾ ಪೂರೈಕೆ ಇಲಾಖೆಯ ಸಪ್ಲೈ ಕೋ ಕೇಂದ್ರಗಳ ಮೂಲಕ ಸಬ್ಸಿಡಿ ಆಧಾರ ದಲ್ಲಿ ಮಾರಾಟ ಮಾಡಲಾಗುತ್ತಿರುವ ೧೩ ಸಾಮಗ್ರಿಗಳ ಬೆಲೆ ಏರಿಸುವಂತೆ ಸಪ್ಲೈ ಕೋ ರಾಜ್ಯ  ಸರಕಾರದೊಂದಿಗೆ ಆಗ್ರಹಪಟ್ಟಿದೆ. ಮಾತ್ರವಲ್ಲ ಶೇ. ೨೦ರಿಂದ ೩೦ರ ತನಕ ಕಡಿತದರದಲ್ಲಿ ಮಾರಾಟ ಮಾಡಲಾಗುತ್ತಿರುವ ಇತರ ೨೮ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಬೇ ಕೆಂದು ಸಪ್ಲೈಕೋ ಕೇಳಿಕೊಂಡಿದೆ. ಸಪ್ಲೈ ಕೋ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಪಾರಾಗಲು ತುರ್ತಾಗಿ ೫೦೦ ಕೋಟಿ ರೂ. ಮಂಜೂರು ಮಾಡಬೇಕು. ಸಾರ್ವಜನಿಕ ಮಾರುಕಟ್ಟೆಗಳಲ್ಲಿ …

ಒಂದು ರಾಷ್ಟ್ರ ಒಂದು ಚುನಾವಣೆ: ಚರ್ಚೆ ಆರಂಭ

ಹೊಸದಿಲ್ಲಿ: ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವ ಕುರಿತಾದ ಸಾಧಕ ಬಾದಕಗಳ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಸರಕಾರ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರ ನೇತೃತ್ವದಲ್ಲಿ ರಚಿಸಿದ ಸಮಿತಿಯ ಸಭೆ ದಿಲ್ಲಿಯಲ್ಲಿ ಇಂದು  ಆರಂಭಗೊಂಡಿದೆ. ಲೋಕಸಭೆಯ ೫೪೩ ಸ್ಥಾನಗಳಲ್ಲಿ ಕನಿಷ್ಠ ಶೇ. ೬೭ರಷ್ಟು ಸದಸ್ಯರು ಈ ತಿದ್ದುಪಡಿಗಳ ಪರವಾಗಿ ಮತ ಚಲಾಯಿಸಬೇಕು. ಜತೆಗೆ ರಾಜ್ಯ ಸಭೆಯ ೨೪೫ ಸ್ಥಾನಗಳಲ್ಲಿ ಶೇ. ೬೭ರಷ್ಟು ಸದಸ್ಯರು ಬೆಂಬಲ ನೀಡಬೇಕು. ಮಾತ್ರವಲ್ಲ ದೇಶದ ಕನಿಷ್ಠ ಅರ್ಧದಷ್ಟು ರಾಜ್ಯ …

ಆವಳ ಮಠದಲ್ಲಿ ರಂಗ ಚೇತನ ತಂಡದಿಂದ ನೃತ್ಯ ಚಿತ್ತಾರ

ಬಾಯಾರು: ನವರಾತ್ರಿ ಉತ್ಸವದ ಅಂಗವಾಗಿ ಆವಳ ಮಠ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ದೇವಿ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಇವರ ಪ್ರಾಯೋಜಕತ್ವದಲ್ಲಿ ರಂಗ ಚೇತನ ಕಲಾ ತಂಡ ಕಾಸರಗೋಡು ಇವರಿಂದ ನೃತ್ಯ ಚಿತ್ತಾರ ಕಾರ್ಯಕ್ರಮ ಜರಗಿತು.ಕಾರ್ಯಕ್ರಮದಲ್ಲಿ ನೃತ್ಯ ಸಂಯೋಜಕ ಸದಾಶಿವ ಬಾಲಮಿತ್ರ, ರಂಗ ಚೇತನ ತಂಡದ ಕಾರ್ಯದರ್ಶಿ ಅಶೋಕ್ ಕೊಡ್ಲಮೊಗರು, ಸದಸ್ಯರಾದ ವಸಂತ ಮಾಸ್ಟರ್ ಮೂಡಂಬೈಲ್, ಶಿವ ಮಾಸ್ಟರ್ ಚೆರುಗೊಳಿ, ಬಾಲಕೃಷ್ಣ ಗಾಳಿಯಡ್ಕ, ನಿತಿನ್ ಕನಿಲ, ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು, ಶ್ರೀ ದೇವಿ …

‘ದೀಪ್ತಂ ೨೦೨೩’ ಉಚಿತ ಉದ್ಯೋಗ ಮೇಳ ೨೮ರಂದು

ಕಾಸರಗೋಡು ಜಿಲ್ಲಾ ಎಂಪ್ನೋಯ್‌ಮೆAಟ್ ಎಔ್ವ್ಜ^್ರ‍್ಧಂಜ್ ಮತ್ತು ಎಂಪ್ಲೋಯಬಿಲಿಟಿ ಸೆಂಟರ್‌ನ ಆಶ್ರಯದಲ್ಲಿ ‘ದೀಪ್ತಂ ೨೦೨೩’ ಉಚಿತ ಉದ್ಯೋಗ ಮೇಳ ಅಕ್ಟೋಬರ್ ೨೮ ರಂದು ಬೆಳಿಗ್ಗೆ ೯.೩೦ ಕ್ಕೆ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸು ವರು. ಕಾಸರಗೋಡು ನಗರಸಭೆ ಅಧ್ಯಕ್ಷ ವಿ.ಎಂ.ಮುನೀರ್ ಅಧ್ಯಕ್ಷತೆ ವಹಿಸುವರು. ಎಲ್.ಐ.ಸಿ, ಎಚ್.ಡಿ. ಎಫ್.ಸಿ ಲೈಫ್, ಆದಿತ್ಯ ಬಿರ್ಲಾ, ಕಲ್ಯಾಣ್ ಸಿಲ್ಕ್ಸ್, ರಿಲಯನ್ಸ್ ಮತ್ತು ನಿಪ್ಪೋನ್ನಂತಹ ಪ್ರಮುಖ ಬ್ರಾಂಡ್ ಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ. ಆಸಕ್ತ ಅಭ್ಯರ್ಥಿಗಳು ಅಂದು ಬೆಳಿಗ್ಗೆ ೯ …

ಅಯರ್‌ಕ್ಕಾಡ್ ಶ್ರೀ ಧರ್ಮಶಾಸ್ತಾ ಮಂದಿರ ದೀಪೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಮುಳ್ಳೇರಿಯ: ಕಾರಡ್ಕ ಬಳಿಯ ಅಯರ್‌ಕ್ಕಾಡ್ ಶ್ರೀ ಧರ್ಮಶಾಸ್ತಾ ಮಂದಿರದ ೩೬ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ಸನ್ನಿಧಿಯಲ್ಲಿ ಬಿಡುಗಡೆಗೊಳಿಸಲಾಯಿತು. ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ, ಸಮಿತಿ ಗೌರವಾಧ್ಯಕ್ಷ ರಘುರಾಮ್ ಬಲ್ಲಾಳ್‌ರಿಗೆ ನೀಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ವೇಳೆ ಮಂದಿರದ ಗುರುಸ್ವಾಮಿ ರವೀಂದ್ರನ್, ತಂಬಾನ್, ನಿತ್ಯಾನಂದ ಶೆಣೈ, ಎಸ್.ಎನ್. ಮಯ್ಯ, ಡಾ| ವಿ.ವಿ. ರಮಣ್, ನಾರಾಯಣ ಪೂಜಾರಿ, ಗಣೇಶ್ ವತ್ಸ, ರಂಗನಾಥ್ ರಾವ್, ಶಶಿಧರನ್, ವಿನೋದ್ ಕುಮಾರ್, ಮಾಧವನ್ ನಾಯರ್, ಪ್ರಸಾದ್, ಐತ್ತಪ್ಪ ಮವ್ವಾರು, …