ಸಿಪಿಎಂ ಮುಖಂಡ ಎಂ.ಎಸ್. ಸುಕುಮಾರನ್ ನಿಧನ

ಬದಿಯಡ್ಕ: ಸಿಪಿಎಂ ಬ್ರಾಂಚ್ ಕಾರ್ಯದರ್ಶಿ, ಲೋಕಲ್ ಸೆಕ್ರೆಟರಿ ಯಾಗಿದ್ದ ಎಂ.ಎಸ್. ಸುಕುಮಾರನ್ (೭೦) ನಿಧನಹೊಂದಿದರು. ನಿರ್ಮಾ ಣ ಕಾರ್ಮಿಕರ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿ ಸದಸ್ಯ, ಸಿಐಟಿಯು ಏರಿಯಾ ಸಮಿತಿ ಸದಸ್ಯ ರಾಗಿಯೂ ದುಡಿದಿದ್ದರು. ಅಸೌಖ್ಯ ಹಿನ್ನೆಲೆಯಲ್ಲಿ ಕೆಲವು ಕಾಲದಿಂದ ಚಿಕಿತ್ಸೆಯಲ್ಲಿದ್ದರು. ಮಂಗಳವಾರ ಮೃತಪಟ್ಟರು. ಮೂಲತಃ ಕಣ್ಣೂರು ನಿವಾಸಿಯಾದ ಇವರು ೩೦ ವರ್ಷದ ಹಿಂದೆ ಬದಿಯಡ್ಕಕ್ಕೆ ತಲುಪಿ ನೀರ್ಚಾಲು ಏಳ್ಕಾನದಲ್ಲೂ, ಬಳಿಕ ಪಳ್ಳತ್ತಡ್ಕ ಚಾಲಕ್ಕೋಡ್‌ನಲ್ಲಿ  ವಾಸಿಸಿದ್ದರು.ಮೃತರು ಪತ್ನಿ ವತ್ಸಲ ಕೆ.ಪಿ (ಬದಿಯಡ್ಕ ವನಿತಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ), …

ಉಪ್ಪಳ ಕೆ.ಎನ್.ಎಚ್. ಆಸ್ಪತ್ರೆಯಲ್ಲಿ ಆಯುಧಪೂಜೆ, ಹಿರಿಯ ಸಿಬ್ಬಂದಿಗಳಿಗೆ ಸನ್ಮಾನ

ಉಪ್ಪಳ: ಕೆ.ಎನ್.ಎಚ್ ಆಸ್ಪತ್ರೆ ಎ ಯೂನಿಟ್ ಆಫ್ ಯೋಗನರಸಿಂಹ ಚಾರಿಟೇಬಲ್ ಟ್ರಸ್ಟ್ ಉಪ್ಪಳ ಇದರ ಆಶ್ರಯದಲ್ಲಿ ನಡೆದ ಆಯುಧ ಪೂಜೆ ಸಮಾರಂಭದಲ್ಲಿ ದೀರ್ಘಕಾಲ ಕರ್ತವ್ಯವನ್ನು ನಿರ್ವಹಿಸಿ ನಿವೃತ್ತರಾದವರಿಗೆ ಸನ್ಮಾನ ಜರಗಿತು. ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸುಮತಿ ಸಿಸ್ಟರ್, ೩೦ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾದ ಶಾಂತರಿಗೆ ಸನ್ಮಾನ ನಡೆಯಿತು. ಡಾಕ್ಟರ್ ಕೆ.ಪಿ ಹೊಳ್ಳ, ಡಾ| ವೀರೇಂದ್ರ ಕೆ.ಎಚ್. ಸುಮತಿ ಸಿಸ್ಟರ್ ಮತ್ತು ಶಾಂತÀರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ| ಸತ್ಯಶಂಕರ …

ವರ್ಕಾಡಿಯಲ್ಲಿ ಕೇರಳೋತ್ಸವ ನಡೆಸದೆ ಯುವಕರಿಗೆ ವಂಚನೆ- ಎಂ.ಎಸ್.ಎಫ್

ಕಾಸರಗೋಡು: ವರ್ಕಾಡಿ ಪಂಚಾಯತ್‌ನಲ್ಲಿ ಕೇರಳೋತ್ಸವ ನಡೆಸದೆ ಆಡಳಿತ ಯುವಕರನ್ನು ವಂಚಿಸಿದೆಯೆಂದು ಎಂಎಸ್‌ಎಫ್ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಅನ್ಸಾರ್ ವರ್ಕಾಡಿ  ಆರೋಪಿಸಿದ್ದಾರೆ. ಕೇರಳದ ಎಲ್ಲಾ ಪಂಚಾಯತ್‌ಗಳಲ್ಲೂ ಕೇರಳೋತ್ಸವ ಪಂಚಾಯತ್ ಮಟ್ಟದಲ್ಲಿ ನಡೆಸಿ ಸ್ಪರ್ಧಾಳುಗಳನ್ನು ಬ್ಲೋಕ್ ಪಂಚಾಯತ್ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆ ಮಾಡಲಾಗುತ್ತಿದೆ. ಆದರೆ ವರ್ಕಾಡಿ ಪಂಚಾಯತ್‌ನಲ್ಲಿ ಸ್ಪರ್ಧೆ ನಡೆಸದೆ ಕಳೆದ ವರ್ಷದ ಸ್ಪರ್ಧಾ ವಿಜೇತರನ್ನು ಬ್ಲೋಕ್ ಮಟ್ಟದ ಸ್ಪರ್ಧೆಗೆ ಭಾಗವಹಿಸಲು ನಿರ್ಧರಿಸಲಾಗಿದೆ. ಈ ಮೂಲಕ ಪಂಚಾಯತ್‌ನ ಯುವಕರ ಕಲಾ- ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲಿರುವ ಅವಕಾಶವನ್ನು ಆಡಳಿತ ಸಮಿತಿ …

ಗಾಜಾದಲ್ಲಿ ಭೂ ದಾಳಿ ಆರಂಭಿಸಿದ ಇಸ್ರೇಲ್: ೬೦೦೦ ಮೀರಿದ ಸಾವಿನ ಸಂಖ್ಯೆ

ಗಾಜಾ: ಗಾಜಾದಲ್ಲಿ ವೈಮಾನಿಕ ದಾಳಿ ಆರಂಭಿಸಿದ ಇಸ್ರೇಲ್ ಇದೀಗ ಭೂ ಸೇನಾ ಪಡೆ ಬಳಸಿ ಭೂ ದಾಳಿ ಕಾರ್ಯಾಚರಣೆ ಆರಂಭಿಸಿದೆ. ಫಿರಂಗಿ ಟ್ಯಾಂಕರ್ ಇತ್ಯಾದಿಗಳೊಂ ದಿಗೆ ಗಾಜಾದೊಳಗೆ ಪ್ರವೇಶಿಸಿರುವ  ಇಸ್ರೇಲ್ ಸೇನಾ ಪಡೆ ಗಾಜಾದ ಒಂದರ ಹಿಂದೆ ಒಂದರಂತೆ ಎಲ್ಲಾ ನಗರಗಳನ್ನೂ ತನ್ನ ಸ್ವಾಧೀನಪಡಿಸಿ ಅವುಗಳನ್ನು ಹಿಡಿತಕ್ಕೊಳಗಾಗಿಸಿ ಮುನ್ನುಗ್ಗುತ್ತಿಎಂದು  ಅಲ್‌ಜೀರಾ ವರದಿ ಮಾಡಿದೆ.  ಇಸ್ರೇಲ್ ಟ್ಯಾಂಕರ್‌ಗಳು ಮತ್ತು ಫಿರಂಗಿಗಳು ಉತ್ತರ ಗಾಜಾ ಪಟ್ಟಿ ಪ್ರವೇಶಿಸಿ ಹಮಾಸ್ ಕೇಂದ್ರಗಳ ಮೇಲೆ ನಿರಂತರ ದಾಳಿ ಆರಂಭಿಸಿದೆ. ಇಸ್ರೇಲ್-ಹಮಾಸ್ ಯುದ್ಧದಲ್ಲಿ ೬ …

ನಾಡಿನಾದ್ಯಂತ ಕ್ಷೇತ್ರಗಳಲ್ಲಿ ಇಂದು ವಿದ್ಯಾರಂಭ

ಕಾಸರಗೋಡು: ನವರಾತ್ರಿ ಮಹೋತ್ಸವದ ಸಮಾರೋಪ ದಿನವಾದ ಇಂದು ವಿಜಯದಶಮಿಯನ್ನು ಭಕ್ತಿ, ಸಡಗರದೊಂದಿಗೆ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪುಟ್ಟ ಮಕ್ಕಳಿಗೆ ವಿದ್ಯಾರಂಭದ ಭಾಗವಾದ ಅಕ್ಷರಾಭ್ಯಾಸ ವಿವಿಧ ಕ್ಷೇತ್ರಗಳಲ್ಲಿ ಇಂದು ನಡೆಯುತ್ತಿದೆ. ಈ ಮೂಲಕ ಮಕ್ಕಳಿಗೆ ಜ್ಞಾನದ ಮೊದಲ ಅಕ್ಷರವನ್ನು ಕಲಿಸಿಕೊಡಲಾಯಿತು. ಮಧೂರು ಶ್ರೀ ಮದನಂತೇ ಶ್ವರ ಸಿದ್ಧಿ ವಿನಾಯಕ ದೇವಸ್ಥಾನ, ಅಣಂಗೂರು ಶ್ರೀ ಶಾರದಾಂಬಾ ಭಜನಾ ಮಂದಿರ, ಕೊಕಕೋಡು ಶ್ರೀ ಆರ್ಯಕಾತ್ಯಾಯಿನಿ ಮಹಾದೇವಿ ಕ್ಷೇತ್ರ, ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ, ಕೊರಕ್ಕೋಡು ಶ್ರೀ ದುರ್ಗಾಪರಮೇಶ್ವರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, …

ಆಟೋ ರಿಕ್ಷಾ-ಬೈಕ್ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕ ಮೃತ್ಯು: ಮೂವರಿಗೆ ಗಾಯ

ಪೈವಳಿಕೆ: ಆಟೋ ರಿಕ್ಷಾ ಹಾಗೂ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ರಿಕ್ಷಾ ಪ್ರಯಾಣಿಕ ಮೃತಪಟ್ಟ ಘಟನೆ ಸಂಭವಿಸಿದೆ. ನಿನ್ನೆ ಸಂಜೆ ಬೆರಿಪದವು-ಪೆರುವಾಯಿ ಮಧ್ಯೆ ಅಪಘಾತ ಸಂಭವಿಸಿದೆ. ರಿಕ್ಷಾ ಪ್ರಯಾಣಿಕರಾಗಿದ್ದ ಬಾಯಾರು ಪೆರ್ವೋಡಿ ನಿವಾಸಿ ನಾಗೇಶ್ ಭಟ್ (೪೭) ಮೃತಪಟ್ಟವರು. ಇವರ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಆಲ್‌ಫೋನ್ ಡಿ’ಸೋಜಾ, ಅಣ್ಣು ಎಂಬವರಿಗೂ ಸಣ್ಣಪುಟ್ಟ ಗಾಯವುಂಟಾಗಿದೆ. ಬೆರಿಪದವು ಭಾಗದಿಂದ ಪೆರುವಾಯಿಯತ್ತ ತೆರಳುತ್ತಿದ್ದ ಆಟೋ ರಿಕ್ಷಾ ಹಾಗೂ ಬೆರಿಪದವು ಭಾಗಕ್ಕೆ ಬರುತ್ತಿದ್ದ ಜೋಡುಕಲ್ಲು ನಿವಾಸಿಯಾದ ವಿನೋದ್ ಕುಮಾರ್  ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳ ಮಧ್ಯೆ …

ಹಲವಾರು ಪ್ರಕರಣಗಳ ವಾರಂಟ್ ಆರೋಪಿ ಪೈವಳಿಕೆ ನಿವಾಸಿ ಶಾರ್ಪ್‌ಶೂಟರ್ ಆಲಿಮುನ್ನಾ ಸೆರೆ

ತಲಪಾಡಿ: ವಿದ್ಯಾನಗರ, ಕುಂಬಳೆ ಠಾಣೆಗಳಲ್ಲಿ ಕೇಸು ದಾಖಲಾಗಿದ್ದ ದ.ಕ. ಜಿಲ್ಲೆಯಲ್ಲೂ ಹಲವಾರು ಪ್ರಕರಣಗಳಲ್ಲಿ ವಾರಂಟ್ ಆರೋಪಿಯಾಗಿದ್ದ ನಟೋರಿಯಸ್ ಶಾರ್ಪ್ ಶೂಟರ್ ಪೈವಳಿಕೆ ನಿವಾಸಿ ಮೊಹಮ್ಮದ್ ಹನೀಫ್ ಯಾನೆ ಆಲಿ ಮುನ್ನಾನನ್ನು ಬಂಧಿಸಲಾಗಿದೆ. ಎಸಿಪಿ ಧನ್ಯಾ ನಾಯಕ್ ನೇತೃತ್ವದ ಕೋಣಾಜೆ ಪೊಲೀಸರ ತಂಡ ಈತನನ್ನು ಸೆಹೆ ಹಿಡಿದಿದೆ. ಭೂಗತ ಪಾತಕಿಗಳಾದ ರವಿ ಪೂಜಾರಿ, ಕಲಿ ಯೋಗೇಶನ ಸಹಚರ ಹಾಗೂ ವಿವಿಧ ಠಾಣೆಗಳಲ್ಲಿ ಬಂಧನ ವಾರಂಟ್ ಈತ ಎದುರಿಸುತ್ತಿದ್ದ. ೨೦೧೦ ಮತ್ತು ೨೦೧೩ರಲ್ಲಿ ಜಿಲ್ಲೆಯ ಬೇವಿಂಜೆ ಪಿಡಬ್ಲ್ಯೂಡಿ ಗುತ್ತಿಗೆದಾರನ ಶೂಟೌಟ್ …

ನೇಪಾಳ, ತೈವಾನ್‌ನಲ್ಲಿ ಪ್ರಬಲ ಭೂಕಂಪ

ಕಾಠ್ಮಂಡು: ನೇಪಾಳ ಮತ್ತು ತೈವಾನ್‌ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ನೇಪಾಳದ ಕಾಠ್ಮಂಡು ನಲ್ಲಿ ಇಂದು ಮುಂಜಾನೆ ೪.೧೭ಕ್ಕೆ ರಿಕ್ಟರ್ ಮಾಪಕದಲ್ಲಿ ೪.೧ ತೀವ್ರ ತೆಯ ಭೂಕಂಪ ಸಂಭವಿಸಿz ಯೆಂದು ರಾಷ್ಟ್ರೀಯ ಭೂಕಂಪ ಶಾಸ್ತ್ರಕೇಂದ್ರ (ಎನ್‌ಸಿಎಸ್) ತಿಳಿಸಿದೆ. ನೇಪಾಳದಲ್ಲಿ ೨೪ ಗಂಟೆಯಲ್ಲಿ ನಡೆದ ಎರಡನೇ ಭೂಕಂಪವಾಗಿದೆ ಇದು. ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೇ ಆಸ್ತಿ ಹಾನಿ ಅಥವಾ ಸಾವುನೋವು ಇಲ್ಲಿ ತನಕ ವರದಿಯಾಗಿಲ್ಲ.  ಇದೇ ರೀತಿ ತೈವಾನ್‌ನಲ್ಲೂ ಇಂದು ಬೆಳಿಗ್ಗೆ ೪.೩೫ಕ್ಕೆ  ೫.೬ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.   …

ಬಾಲಕಿಗೆ ಲೈಂಗಿಕ ಕಿರುಕುಳ ಮದ್ರಸಾ ಅಧ್ಯಾಪಕ ಸೆರೆ

ಕಾಸರಗೋಡು: ೧೪ರ ಹರೆಯದ ಬಾಲಕಿಗೆ ಕಳೆದ ಎರಡು ವರ್ಷಗಳಿಂದ ಹಲವು ಬಾರಿಯಾಗಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮುನ್ನಾಡ್ ಕೊಟ್ಟೋಡಿ ನಿವಾಸಿ ಸಿ. ಅಬ್ದುಲ್ ರಾಶಿದ್ (೩೧) ಎಂಬಾತನನ್ನು ಚಂದೇರ ಎಸ್‌ಐ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪಡನ್ನ ಪಂಚಾಯತ್‌ನ ಎಡಚಾಕೈನ ಮದ್ರಸಾ ಅಧ್ಯಾಪಕನಾಗಿದ್ದ ಆರೋಪಿ  ಆತ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ. ಅನಂತರ ಬಾಲಕಿಗೆ ಬೆದರಿಕೆಯೊಡ್ಡಿ  ಆಕೆಯ ಮನೆಗೂ ಬಂದು ಆಕೆಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಬಾಲಕಿಯ ತಾಯಿ …

ರಾಜ್ಯದಲ್ಲಿ ಇಂದು ಮಳೆಗೆ ಸಾಧ್ಯತೆ ಎಲ್ಲೆಡೆ ಜಾಗ್ರತಾ ನಿರ್ದೇಶ

ತಿರುವನಂತಪುರ: ರಾಜ್ಯದಲ್ಲಿ ಇಂದು ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಮಾತ್ರವಲ್ಲ ತಿರುವನಂತಪುರದ ವಿಳಿಂಞದಿಂದ ಕಾಸರಗೋಡು ತನಕ ಸಮುದ್ರದಲ್ಲಿ ಇಂದು ರಾತ್ರಿ ೧೧.೩೦ರ ತನಕ ೧.೦ ಮೀಟರ್‌ನಿಂದ ೩.೦ ಮೀಟರ್ ಎತ್ತರದಲ್ಲಿ ಆಳೆತ್ತರದ ಅಲೆಗಳು ಎದ್ದೇಳುವ ಸಾಧ್ಯತೆ ಇದೆ. ಭಾರೀ ಕಡಲ್ಕೊರೆತ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ವಿಶೇಷವಾಗಿ ಸಮುದ್ರ ಕರಾವಳಿ ಪ್ರದೇಶಗಳಲ್ಲಿ ವಾಸಿಸುವವರು ಗರಿಷ್ಠ ಜಾಗ್ರತೆ ಪಾಲಿಸಬೇಕು. ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆ ಗಾಗಿ ಸಮುದ್ರ ಕ್ಕಿಳಿಯಬಾರದು. ಬೀಚ್ …