ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ಚೆಂಗಳದಲ್ಲಿ ಕರ್ನಾಟಕ ನಿರ್ಮಿತ ೭.೨ ಲೀಟರ್ ಮದ್ಯ ಕೈವಶವಿರಿಸಿಕೊಂಡ ಆರೋಪಿಯನ್ನು ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ  ನೇತೃತ್ವದ ಅಬ ಕಾರಿ ತಂಡ ಬಂಧಿಸಿದೆ. ಚೆರ್ಕಳದ ರಫೀಕ್ ಎಂಬಾತ ಬಂಧಿತ ಆರೋಪಿ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಶ್ರೀಕಾಂತ್ ಎ, ರಂಜಿತ್ ಕೆ ವಿ, ಸಿ.ಇ.ಒಗಳಾದ ಶರತ್ ಕೆ.ಪಿ, ಬಾಬು ವಿ ಮತ್ತು ಮುರಳೀಧರನ್ ಎನ್ ಎಂಬಿವರು ಒಳಗೊಂಡಿದ್ದರು.

ಟೈಲ್ಸ್ ಕಾರ್ಮಿಕ ನೇಣುಬಿಗಿದು ಆತ್ಮಹತ್ಯೆ

ಪೆರ್ಲ: ಎಣ್ಮಕಜೆ ನಡುಬೈಲ್ ನಿವಾಸಿ, ಟೈಲ್ಸ್ ಕಾರ್ಮಿಕ ಚಂದ್ರ ಶೇಖರ (೩೮) ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ ಯಾಗಿದೆ. ದಿ| ನಾರಾಯಣ ನಾಯ್ಕ-ದಿ| ಸರಸ್ವತಿ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸೌಮ್ಯ, ಮಕ್ಕಳಾದ ಸಮನ್ವಿ, ಪ್ರಥಂ, ಸಹೋದರಿಯರಾದ ನಳಿನಿ, ರವಿಕಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಟ್ರಾವಲರ್ ಕಂದಕಕ್ಕೆ ಉರುಳಿ ಮಹಿಳೆ ಮೃತ್ಯು

ಕಲ್ಲಿಕೋಟೆ: ಕಾಸರಗೋಡು ಭಾಗಕ್ಕೆ ಆಗಮಿಸುತ್ತಿದ್ದ ಟ್ರಾವಲರ್ ವಾಹನ ವಡಗರ ಮಡಪ್ಪಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಪಘಾಕ್ಕೀಡಾಗಿ ಓರ್ವ ಮಹಿಳೆ ಮೃತಪಟ್ಟರು. ಸಾಲಿಯ (೬೦) ಎಂಬ ಮಹಿಳೆ ಮೃತಪಟ್ಟಿದ್ದು, ಅವರ ಜೊತೆಗೆ ವಾಹನದಲ್ಲಿದ್ದ ೧೨ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪಾಲಾದಿಂದ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಟ್ರಾವಲರ್ ವಾಹನ ಇಂದು ಮುಂಜಾನೆ ಹೆದ್ದಾರಿ ಬದಿಯ ಕಂದಕಕ್ಕೆ ಉರುಳಿದೆ. ಕಾಸರಗೋಡಿನಲ್ಲಿ ವ್ಯಕ್ತಿಯೊಬ್ಬರ ಮರಣಾನಂತರ ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ಬರುತ್ತಿದ್ದವರು ಸಂಚರಿಸಿದ ವಾಹನ ಅಪಘಾತಕ್ಕೀಡಾಗಿದೆ. 

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷೆಯಾಗಿ ಶೋಭಾ ಕರಂದ್ಲಾಜೆ ಆಯ್ಕೆ ಸಾಧ್ಯತೆ

ಬೆಂಗಳೂರು: ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೆಸರು ಹೆಚ್ಚಿನಂಶ ಖಚಿತವಾಗಿದೆ ಎಂದು ರಾಜಕೀಯ ವಲಯದಲ್ಲಿ ಮಾತು ಹರಿದಾಡುತ್ತಿದೆ. ಇಂದು ವಿಜಯದಶಮಿ, ಆ ಬಳಿಕ ಹೈ ಕಮಾಂಡ್ ಹೆಸರು ಖಚಿತಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕರಂದ್ಲಾಜೆ ಆಯ್ಕೆಯಾದರೆ ಅವರು ಈ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯತೆ ಇಲ್ಲ. ಹಾಗಿದ್ದರೆ ಉಡುಪಿ, ಚಿಕ್ಕಮಗಳೂರಿನಿಂದ ಸ್ಪರ್ಧಿಸುವ ಹೊಸಬರನ್ನು ಆಯ್ಕೆ ಮಾಡಬೇಕಾಗಿ ಬರಲಿದೆ. ಬಿಎಸ್‌ವೈ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಶೋಭಾ ಕರಂದ್ಲಾಜೆ …

ಬಸ್‌ನಲ್ಲಿ ಕುಸಿದುಬಿದ್ದ ಅಡೂರು ನಿವಾಸಿ ಆಸ್ಪತ್ರೆಯಲ್ಲಿ ಮೃತ್ಯು

ಅಡೂರು: ವಿವಾಹ ಸಮಾರಂ ಭದಲ್ಲಿ ಭಾಗವಹಿಸಲು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಡೂರು ನಿವಾಸಿ ಬಸ್ಸಿನೊಳಗೆ ದಿಢೀರ್ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ ಘಟನೆ ಕಾಸರಗೋಡು ನಗರದಲ್ಲಿ ನಡೆದಿದೆ.   ಬಳವಂತಡ್ಕ ನಿವಾಸಿ ಕೃಷ್ಣ ನಾಯ್ಕ (೫೬) ಎಂಬವರು ಸಾವನ್ನಪ್ಪಿದ ವ್ಯಕ್ತಿ. ಇವರು ಅಡೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಖಾಸಗಿ ಬಸ್ಸೊಂದರಲ್ಲಿ ಕೊಟ್ಟೋಡಿಯಿಂದ ಬಸ್ಸಿಗೇರಿದ್ದರು.  ಬಸ್ ಕಾಸರಗೋಡು ಹಳೆ ಬಸ್ ನಿಲ್ದಾಣಕ್ಕೆ ತಲುಪಿದಾಗ ಎಲ್ಲರೂ ಬಸ್ಸಿನಿಂದ ಇಳಿದರೂ ಕೃಷ್ಣ ನಾಯ್ಕ್ ಮಾತ್ರ ಇಳಿಯಲಿಲ್ಲ. ಇದರಿಂದ ಶಂಕೆಗೊಂಡ ಬಸ್ ಕಾರ್ಮಿ ಕರು ಅವರನ್ನು …

ಬ್ಲೋಕ್ ಕೇರಳೋತ್ಸವ: ಹಗ್ಗಜಗ್ಗಾಟದಲ್ಲಿ ಮೀಂಜ ಪಂ. ಪ್ರಥಮ

ಮೀಯಪದವು: ಬ್ಲೋಕ್ ಪಂಚಾಯತ್ ಮಟ್ಟದ ಕೇರಳೋತ್ಸವ ದಲ್ಲಿ ಹಗ್ಗಜಗ್ಗಾಟ ಪುರುಷ ವಿಭಾಗ ಹಾಗೂ ಮಹಿಳಾ ವಿಭಾಗದಲ್ಲಿ ಮೀಂಜ ಪಂಚಾಯತ್ ತಂಡ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ತೇರ್ಗಡೆಗೊಂ ಡಿರುತ್ತದೆ. ಈ ತಂಡಗಳನ್ನು ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಸದಸ್ಯರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಮಕ್ಕಳ ಯಕ್ಷಗಾನ ತಾಳಮದ್ದಳೆ

ಮೀಯಪದವು. ಕಯ್ಯಾರು ಜೋಡುಕಲ್ಲು ಸೊಂದಿ ಶ್ರೀ ದುರ್ಗಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಮೀಯಪದವಿನ ವಿದ್ಯಾವರ್ಧಕ ಮಕ್ಕಳ ಯಕ್ಷಗಾನ ಬಳಗದಿಂದ ‘ವೈದೇಹಿ ದರ್ಶನ ‘ ಎಂಬ ಕಥಾಭಾಗದ ತಾಳಮದ್ದಳೆ ಜರಗಿತು.ಪಾತ್ರವರ್ಗದಲ್ಲಿ ಶಾರ್ವರಿ ಎನ್. ನಾವಡ, ಅಭಿರಾಮ ಭಟ್, ವೀಕ್ಷ, ಮನೀಶ ಮತ್ತು ಅಭಿಜ್ಞಾಗಂಗ ಭಾಗವಹಿಸಿದರು. ಭಾಗವತರಾಗಿ ರವಿಶಂಕರ್ ಮಧೂರು, ವಿಘ್ನೇಶ್ ಮೀಯಪದವು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು, ಮೃದಂಗದಲ್ಲಿ ಮುರಳೀ ಮಾಧವ ಮಧೂರು ಸಹಕರಿಸಿದರು. ಅಧ್ಯಾಪಕರಾದ ನಾರಾಯಣ ನಾವಡ ಮಕ್ಕಳಿಗೆ ತರಬೇತಿ ನೀಡಿದ್ದರು.

ಬಸ್-ಟಾಟಾ ಸುಮೋ ಢಿಕ್ಕಿ ಹೊಡೆದು ೭ ಸಾವು: ಹಲವರಿಗೆ ಗಾಯ

ಚೆನ್ನೈ: ತಮಿಳು ನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ತಮಿಳು ನಾಡು ಸರಕಾರಿ ಬಸ್ ಹಾಗೂ ಟಾಟಾ ಸುಮೋ ವಾಹನ ಮುಖಾಮುಖಿ ಢಿಕ್ಕಿಯಾದ ಪರಿಣಾಮ ೭ ಮಂದಿ ಸಾವನ್ನಪ್ಪಿ, ೧೪ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂನಲ್ಲಿ ಈ ಘಟನೆ ನಡೆದಿದೆ. ಬಸ್ ಬೆಂಗಳೂರಿನಿಂದ ತಿರುವಣ್ಣಾಮಲೈಗೆ ತೆರಳುತ್ತಿತ್ತು. ಅದು ಕರುಮಂಕುಲಂಗೆ ತಲುಪಿದಾಗ ಎರಡು ಕಡೆಯಿಂದ ಟಾಟಾ ಸುಮೋದೊಂದಿಗೆ  ಮುಖಾಮುಖಿಯಾಗಿ ಢಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಪೊಲೀಸರು ತಕ್ಷಣ ತಿರುವಣ್ಣಾಮಲೈ ಸರ್ಕಾರಿ …

ನವಕೇರಳ ವೇದಿಕೆ: ಸ್ವಾಗತ ಸಮಿತಿ ರೂಪೀಕರಣ

ಬದಿಯಡ್ಕ: ನವಂಬರ್ ೧೯ರಂದು ನಡೆಯಲಿರುವ ಕಾಸರಗೋಡು ವಿಧಾನಸಭಾ ಕ್ಷೇತ್ರದ ನವಕೇರಳ ವೇದಿಕೆಯ ಪಂಚಾಯತ್ ಮಟ್ಟದ ಸ್ವಾಗತ ಸಮಿತಿ ಸಭೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಜರಗಿತು. ಕಾರಡ್ಕ ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಜಿ ಮ್ಯಾಥ್ಯೂ ಉದ್ಘಾಟಿಸಿದರು. ಬದಿಯಡ್ಕ ಪಂಚಾ ಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರವಿ ರೈ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಅಜಿತ್ ಕುಮಾರ್, ಎಇಒ ಶಶಿಧರ, ಚಯರ್‌ಪರ್ಸನ್ ರಶೀದಾ ಹಮೀದ್, ಸದಸ್ಯೆ ಜ್ಯೋತಿ, ಪ್ರಕಾಶ್ ಅಮ್ಮಣ  ರೈ ಮಾತನಾಡಿದರು. ರವಿ ರೈ …

ಕನ್ನೆಪ್ಪಾಡಿ ಆಶ್ರಮದಲ್ಲಿ ಮದ್ಯವರ್ಜನ ಶಿಬಿರದ ಪ್ರಥಮ ವಾರ್ಷಿಕೋತ್ಸವ ಆಚರಣೆ

ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳ ನೇತೃತ್ವದ ೧೬೦೦ನೇ ಮದ್ಯವರ್ಜನ ಶಿಬಿರದ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ನವಜೀವನ ಸಮಿತಿ ಕುತ್ಯಾಳ ಇದರ ಸದಸ್ಯರು ಆಶ್ರಯ ಆಶ್ರಮ ಕನ್ನೆಪ್ಪಾಡಿಯಲ್ಲಿ ಒಂದು ದಿನದ ಅನ್ನದಾನ ನೀಡಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಮುಖೇಶ್, ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ್, ಜನಜಾಗೃತಿ ವೇದಿಕೆ ಕಾಸರಗೋಡು ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಅಶ್ವಥ್ ಪೂಜಾರಿ, ಹಿರಿಯ ಸದಸ್ಯ ನಾರಾಯಣ ಕಳತ್ತೂರು, ಸದಸ್ಯ ವಲ್ಸರಾಜ್ ಉಪ್ಪಳ, ಕುತ್ಯಾಳ ನವಜೀವನ ಸಮಿತಿ ಅಧ್ಯಕ್ಷ ಉದಯ ಕುಮಾರ್, …