ಶಬರಿಮಲೆ ತೀರ್ಥಾಟನೆ ಕಾಸರಗೋಡು- ತಿರುವನಂತಪುರ ವಂದೇ ಭಾರತ್ ರೈಲಿಗೆ ಚೆಂಗನ್ನೂರಿನಲ್ಲೂ ನಿಲುಗಡೆ

ಕಾಸರಗೋಡು: ಶಬರಿಮಲೆ ತೀರ್ಥಾಟನಾ ಋತು ಇನ್ನೇನು ಮುಂದಿನ ತಿಂಗಳು ಆರಂಭಗೊಳ್ಳಲಿ ರುವಂತೆಯೇ ಅದನ್ನು ಗಮನದಲ್ಲಿರಿಸಿಕೊಂಡು ಶಬರಿಮಲೆ ತೀರ್ಥಾಟಕರಿಗೆ ಅನುಕೂಲಕರವಾಗು ವಂತೆ ಕಾಸರಗೋಡು- ತಿರುವನಂತಪುರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕೋಟಯಂ ಜಿಲ್ಲೆಯ ಚೆಂಗನ್ನೂರಿನಲ್ಲಿ ನಿಲುಗಡೆ ನೀಡುವ ಮಹತ್ತರ ತೀರ್ಮಾನ ಭಾರತೀಯ ರೈಲ್ವೇ ಇಲಾಖೆ ಕೈಗೊಂಡಿದೆ. ಈ ತೀರ್ಮಾನದಂತೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚೆಂಗನ್ನೂರಿನಲ್ಲಿ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ ಈ ಕುರಿತಾದ ಅಧಿಸೂಚನೆಯನ್ನು ದಕ್ಷಿಣ ರೈಲ್ವೇಗೆ ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ರೈಲ್ವೇ ಇಲಾಖೆ ತಿಳಿಸಿದೆ. …

ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳಿಗೆ ಸಿಡಿಲು ಬಡಿದು ಹಾನಿ

ಕಾಸರಗೋಡು: ಪರಿಯಾರ ಸಮೀಪದ ಸಾಲೇಕ್ರಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತೆ ರಿಯಾ ಮತ್ತು ಅವರ ಕುಟುಂಬ ವಾಸಿಸುವ ಮನೆಗೆ ನಿನ್ನೆ ಸಿಡಿಲು ಬಡಿದಿದೆ.  ಮನೆ ಪಕ್ಕದ ತೆಂಗಿನ ಮರಕ್ಕೂ ಸಿಡಿಲು ಬಡಿದಿದ್ದು, ಅದರಿಂದ ಬೆಂಕಿ ಎದ್ದು ಮನೆಗೂ ತಗಲಿಕೊಂಡಿದೆ. ಮನೆಯ ಗೋಡೆಗಳು ಬಿರುಕುಬಿಟ್ಟಿದೆ. ಇದರ ಹೊರತಾಗಿ ಸಾಲೇಕ್ರದ ರವಿ ಎಂಬವರ ಮತ್ತು ಕಲ್ಯೋ ಟ್‌ನ ಶೋಭಾ ಎಂಬವರ ಮನೆಗೂ ಸಿಡಿಲು ಬಡಿದಿದೆ.  ಸಿಡಿಲಿನ ಆಘಾತಕ್ಕೆ ಮನೆ ಗೋಡೆ ಗಳು ಬಿರುಕುಬಿಟ್ಟಿವೆ. ಮಾತ್ರವಲ್ಲ ಮನೆಯ ವಯರಿಂಗ್ ಉಪಕರ ಣಗಳು ಉರಿದುಹೋಗಿವೆ.

ಜಿಲ್ಲಾ ವಾರ್ತಾ ಕಚೇರಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ಕಾಸರಗೋಡು: ಗಾಂಧಿ ಜಯಂತಿ ಸಪ್ತಾಹದ ನಿಮಿತ್ತ ಜಿಲ್ಲಾ ಮಾಹಿತಿ ಕಚೇರಿ ವತಿಯಿಂದ ನಡೆದ ಮಲಯಾಳಂ ಮತ್ತು ಕನ್ನಡ ಪ್ರಬಂಧ ಸ್ಪರ್ಧೆ ಹಾಗೂ ಗಾಂಧಿ ಸೇವಾ ಕಿರುಚಿತ್ರ ಸ್ಪರ್ಧೆಗಳಲ್ಲಿ ವಿಜೇತರಾದವರನ್ನು ಪುರಸ್ಕರಿಸ ಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಬಹುಮಾನ ವಿತರಿಸಿದರು. ಜಿಲ್ಲಾ ವಾರ್ತಾಧಿಕಾರಿ ಎಂ. ಮಧು ಸೂದನನ್ ಮುಖ್ಯ ಅತಿಥಿಯಾಗಿ ದ್ದರು. ಶಾಲಾ ಪಿಟಿಎ ಅಧ್ಯಕ್ಷ ನೌಫಲ್ ತಾಯಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾ ಧ್ಯಾಯಿನಿ ಬಿಂದು, ಸಜಿತಾ ಮಾತ ನಾಡಿದರು. ಸ್ಕೂಲ್ ಪ್ರಿನ್ಸಿಪಾಲ್ ಎ.ವಿ.ಜಿಜಿ …

ಪತ್ನಿ, ಮಗನನ್ನು ಕೊಲೆಗೈದ ವ್ಯಕ್ತಿ ನೇಣಿಗೆ ಶರಣು

ಕಲ್ಪೆಟ್ಟ: ಪತ್ನಿ ಮತ್ತು ಮಗನನ್ನು ಇಂದು ಮುಂಜಾನೆ ಕಡಿದು ಕೊಲೆಗೈದು ಬಳಿಕ ಮನೆ ಯಜಮಾನ ನೇಣಿಗೆ ಶರಣಾದ ಘಟನೆ ವಯನಾಡ್ ಚೇತಲದಲ್ಲಿ ನಡೆದಿದೆ. ಚೇತಲ ಪುತ್ತನ್ ಪುರೈಕಲ್ ಬಿಂದು, ಮಗ ಬೇಸಿಲ್ ಎಂಬವರನ್ನು ಕಡಿದು ಕೊಲೆಗೈದ ಬಳಿಕ ಮನೆ ಯಜಮಾನ ಶಾಜು ನೇಣು ಬಿಗಿದು ಸಾವನ್ನಪ್ಪಿದ್ದಾನೆ.

ಮೇರಿ ಮಿಟ್ಟಿ ಮೇರಾ ದೇಶ್ ಕಾಸರಗೋಡು ಬ್ಲಾಕ್ ಮಟ್ಟದ ಅಮೃತಕಲಶ ಯಾತ್ರೆ

ಕಾಸರಗೋಡು: ಆಜಾದಿ ಕಾ ಅಮೃತ್ ಮಹೋತ್ಸವ ಸಮಾರೋಪ ಅಂಗವಾಗಿ ನಡೆಸುವ ‘ಮೇರಿ ಮಿಟ್ಟಿ ಮೇರಾ ದೇಶ್’ (ನನ್ನ ಮಣ್ಣು, ನನ್ನ ದೇಶ) ಕಾಸರಗೋಡು ಬ್ಲಾಕ್ ಮಟ್ಟದ ಅಮೃತ ಕಲಶ ಯಾತ್ರೆಯನ್ನು ನೆಹರು ಯುವ ಕೇಂದ್ರ ಹಾಗೂ ತಳಂಗರ ಸರಕಾರಿ ಮುಸ್ಲಿಂ ಹೈಯರ್ ಸೆಕೆಂಡರಿ ಶಾಲೆಯ ಜಂಟಿ ಆಶ್ರಯದಲ್ಲಿ ನಡೆಸಲಾಯಿತು. ತಳಂಗರೆ ಸರಕಾರಿ ಮುಸ್ಲಿಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ನಂತರ ವಿದ್ಯಾರ್ಥಿಗಳಿಗೆ ಪಂಚಪ್ರಾಣ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾಸರಗೋಡು …

‘ಮೇರಾ ಮಿಟ್ಟಿ ಮೇರಾ ದೇಶ್’ ಮಂಜೇಶ್ವರ ಕಾಲೇಜಿನಲ್ಲಿ ವಿವಿಧ ಕಾರ್ಯಕ್ರಮ

ಮಂಜೇಶ್ವರ: ಆಜಾದಿಕಾ ಅಮೃತ್ ಮಹೋತ್ಸವ್‌ನ ಸಮಾರೋಪದಂಗ ವಾಗಿ ನನ್ನ ಮಣ್ಣು, ನನ್ನ ದೇಶ (ಮೇರಾ ಮಿಟ್ಟಿ ಮೇರಾ ದೇಶ್) ಕಾರ್ಯಕ್ರಮ  ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ನಡೆಯಿತು.ಮಂಜೇಶ್ವರ ಬ್ಲೋಕ್‌ನ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಲಶದಲ್ಲಿರಿಸಿದ್ದು, ಅದನ್ನು ಈ ತಿಂಗಳ ೩೦, ೩೧ರಂದು ದೆಹಲಿಯಲ್ಲಿ ನಡೆಯುವ ಸಮಾರೋಪ ಕಾರ್ಯಕ್ರಮಕ್ಕೆ ತಲುಪಿಸಲಾಗುವುದು. ದೇಶದ ವಿವಿಧ ಭಾಗಗಳಿದ ಸಂಗ್ರಹಿಸಲಾದ ಮಣ್ಣನ್ನು ಬಳಸಿ ದೆಹಲಿಯಲ್ಲಿ ಉದ್ಯಾನ ನಿರ್ಮಿಸಲಾಗುವುದು. ಮಂಜೇಶ್ವರ ಕಾಲೇಜಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಶೋಭಾಯಾತ್ರೆ, ಪ್ರತಿಜ್ಞಾ ಸ್ವೀಕಾರ …

ಅಗ್ನಿವೀರ್’ಗೆ ಆಯ್ಕೆಯಾದ ಗಿರೀಶ್ ನಾಯ್ಕ್‌ರಿಗೆ ಅಭಿನಂದನೆ

ಬೆಳ್ಳೂರು: ಭಾರತೀಯ ಸೇನೆ ಅಗ್ನಿವೀರ್‌ಗೆ ಆಯ್ಕೆಯಾದ ನೆಟ್ಟಣಿಗೆ ಓಂಶಿವ ಯುವಕೇಂದ್ರದ ಸದಸ್ಯ ಗಿರೀಶ್ ನಾಯ್ಕ್‌ರನ್ನು ಇಂದು ಬೆಳಿಗ್ಗೆ ನೆಟ್ಟಣಿಗೆ ಕ್ಷೇತ್ರದಲ್ಲಿ ಅಭಿನಂದಿಸಲಾಯಿತು. ಓಂಶಿವ ಕೇಂದ್ರದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬೆಳ್ಳೂರು ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಚಂದ್ರಹಾಸ ರೈ ಮುಂಡಾಸು, ಪತ್ರಕರ್ತ ಅಖಿಲೇಶ್ ನಗುಮುಗಂ, ಅಂತಾರಾಜ್ಯ ವಾಲಿಬಾಲ್ ಪಟು ಗಣೇಶ್ ರೈ, ಹರ್ಷ ರೈ, ಮುರಳೀಧರ, ಸಂತೋಷ್, ಸಚೀಂದ್ರ ರೈ, ನಯನ , ಗಿರೀಶ್ ಭಾಗವಹಿಸಿದರು. ಇದೇ ವೇಳೆ ಇವರನ್ನು ತರಬೇತುಗೊಳಿಸಿದ ಯುವ ಕೇಂದ್ರದ ಸದಸ್ಯ ಮಾಜಿ …

ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿಯಿಂದ ಶಾರದೋತ್ಸವ ೨೩ರಿಂದ

ಬದಿಯಡ್ಕ: ಕೇರಳ ಮರಾಟಿ ಶಾರದೋತ್ಸವ ಸಮಿತಿ ಬದಿಯಡ್ಕ ಕಾಸರಗೋಡು ಇದರ 16ನೇ ವರ್ಷದ ಶಾರದೋತ್ಸವ ಬದಿಯಡ್ಕ ಶ್ರೀ ಗುರುಸದನದಲ್ಲಿ ಅ.23, 24ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. 23ರಂದು ಬೆಳಗ್ಗೆ 6.30ಕ್ಕೆ ಶ್ರೀಶಾರದಾ ವಿಗ್ರಹ ಪ್ರತಿಷ್ಠೆ, ವೇದಮೂರ್ತಿ ಪಟ್ಟಾಜೆ ವೆಂಕಟೇಶ್ವರ ಭಟ್ಟರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಬೆಳಗಿನ ಪೂಜೆ, ಶ್ರೀ ಮಹಾಗಣಪತಿ ಹೋಮ, 8 ಗಂಟೆಯಿAದ ಶ್ರೀ ಧರ್ಮಶಾಸ್ತಾ ಭಜನಾ ಸಂಘ ನೀರ್ಚಾಲು ಇವರಿಂದ ಭಜನೆ, 9 ಗಂಟೆಗೆ ವಸಂತ ನಾಯ್ಕ ಪೆರುಮುಂಡ ಅವರಿಂದ ಧ್ವಜಾರೋಹಣ, ಆಯುಧಪೂಜೆ, 10.30ಕ್ಕೆ ದಿ| …

ಚೇರಾಲು ಶ್ರೀ ಶಾರದಾಮಹೋತ್ಸವ ೨೩ರಿಂದ

ಬಾಯಾರು: ಚೇರಾಲು ಶಿವಾಜಿ ನಗರ ಶ್ರೀ ಶಾರದಾ ಭಜನಾ ಮಂದಿರ ದಲ್ಲಿ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಈ ತಿಂಗಳ 23,24 ರಂದು ವಿವಿಧ ಕಾರ್ಯಕ್ರಮ ಗಳೊಂ ದಿಗೆ ನಡೆಯಲಿದೆ. 23ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹೋಮ, 7ಕ್ಕೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠೆ, ಪೂಜೆ, 8ರಿಂದ ಸಂಜೆ 6ರ ತನಕ ಭಜನೆ, ಬೆಳಿಗ್ಗೆ 9.30ಕ್ಕೆ ಆಯುಧಪೂಜೆ, ಸಂಜೆ 6ಕ್ಕೆ ಆಶ್ಲೇಷ ಬಲಿ ಆರಂಭ, ಸಂಜೆ 6ಕ್ಕೆ ಮಕ್ಕಳಿಂ ದ ಸಾಂಸ್ಕöÈತಿಕ ಕಾರ್ಯಕ್ರಮ, ರಾತ್ರಿ 7ಕ್ಕೆ …

ಬಿಜೆಪಿ- ಜೆಡಿಎಸ್ ಮೈತ್ರಿಗೆ ಪಿಣರಾಯಿ ಬೆಂಬಲ ಸೂಚಿಸಿದ್ದಾರೆ- ದೇವೇಗೌಡ

ಬೆಂಗಳೂರು: ಕರ್ನಾಟಕದಲ್ಲಿ ನಮ್ಮ ಪಕ್ಷ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರ ಬೆಂಬಲ ಲಭಿಸಿ ರುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಜೆಡಿಎಸ್‌ನ ಕೇರಳ ಘಟಕವೂ ಈ ಮೈತ್ರಿಗೆ ಬೆಂಬಲ ನೀಡಿದೆ ಎಂದೂ ಗೌಡ ಹೇಳಿದ್ದಾರೆ. ಬಿಜೆಪಿ ಯೊಂದಿಗೆ ಮಾಡಿಕೊಂಡ ಮೈತ್ರಿ ಯನ್ನು ವಿರೋಧಿಸಿ ರಂಗಕ್ಕಿಳಿದ ಜೆಡಿಎಸ್‌ನ ಕರ್ನಾಟಕ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂರನ್ನು ಪಕ್ಷದಿಂದ ವಜಾಗೈಯ್ಯುವ ವಿಷಯದ ಬಗ್ಗೆ ಬೆಂಗಳೂರಿನಲ್ಲಿ ಕರೆದ ಸುದ್ಧಿಗೋಷ್ಠಿಯಲ್ಲಿ ಗೌಡರು ಈ …