ಜುಗಾರಿ ತಂಡದಿಂದ ಯುವಕನಿಗೆ ಹಲ್ಲೆ: ಆರೋಪಿಗಳ ವಿರುದ್ಧ ಪೊಲೀಸ್ ಕ್ರಮವಿಲ್ಲವೆಂದು ಕುಟುಂಬ ಆರೋಪ

ಕುಂಬಳೆ: ಕುಬಣೂರಿನಲ್ಲಿ ಜೂಜಾಟ ತಂಡದ ಆಕ್ರಮಣಕ್ಕೆ ತುತ್ತಾಗಿ ಬೆನ್ನೆಲುಬಿಗೆ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ  ಯುವಕನಿಗೆ ನೀತಿ ಲಭ್ಯಗೊಳಿಸಬೇಕೆಂದು ಕುಟುಂಬ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋ ಷ್ಠಿಯಲ್ಲಿ ಆಗ್ರಹಿಸಿದೆ. ಬೇಟೆಗಾರರ ತಂಡದ ವ್ಯಕ್ತಿಯೆಂದು ಆರೋಪಿಸಿ ಆರಿಕ್ಕಾಡಿಯ ಫಾರ್ಮಸಿ ನೌಕರ ಸುನಿಲ್‌ಗೆ ಏಳು ಮಂದಿಯ ತಂಡ ಹಲ್ಲೆ ನಡೆಸಿತ್ತು. ಗಾಯಾಳು ಸುನಿಲ್‌ನಿಂದ ಕುಂಬಳ ಪೊಲೀಸರು ಹೇಳಿಕೆ ದಾಖಲಿಸಿದ್ದರು. ಆದರೆ ಬಳಿಕ ಯಾವುದೇ ಕ್ರಮ ಆರೋಪಿಗಳ ವಿರುದ್ಧ ಕೈಗೊಳ್ಳಲಿಲ್ಲವೆಂದು ಕುಟುಂಬ ಆರೋಪಿಸಿದೆ. ಜುಗಾರಿ ತಂಡದ ದಬ್ಬಾಳಿಕೆ ಕುಬಣೂರು ಹಾಗೂ ಪರಿಸರದಲ್ಲಿ ನಡೆಯುತ್ತಿದ್ದು, …

ಎಸ್.ಟಿ.ಯು. ಹೋರಾಟ ಸಂದೇಶ ಯಾತ್ರೆಗೆ ನಾಳೆ ಚಾಲನೆ

ಕಾಸರಗೋಡು: ಕೇಂದ್ರ ಸರಕಾರ ಜನದ್ರೋಹ ನಿಲುವು ಅನುಸರಿಸುತ್ತಿದೆ ಎಂದು ರಾಜ್ಯ ಮತ್ತು ರಾಜ್ಯ ಸರಕಾರ ದುರಾಡಳಿತ ನಡೆಸುತ್ತಿದ್ದು, ಅಂತಹ ನೀತಿಗಳನ್ನು ಪ್ರತಿಭಟಿಸಿ ಮುಸ್ಲಿಂ ಲೀಗ್‌ನ ಕಾರ್ಮಿಕ ಸಂಘಟನೆಯಾದ ಸ್ವತಂತ್ರ ತೊಯಿಲಾಳಿ ಯೂನಿಯನ್ (ಎಸ್‌ಟಿಯು) ನೇತೃತ್ವದ ಕಾಸರಗೋಡಿನಿಂದ ತಿರುವನಂತಪುರ ತನಕ ಹೋರಾಟ ಸಂದೇಶ ಯಾತ್ರೆ ನಡೆಸಲಾಗುವುದು. ಈ ಮಧ್ಯೆ ನಾಳೆ ಅಪರಾಹ್ನ ೩ ಗಂಟೆಗೆ ನಗರದ ತಾಯಲಂಗಡಿ ಯಿಂದ ಪ್ರಯಾಣ ಆರಂಭಿಸಲಿದೆ. ಮುಸ್ಲಿಂಲೀಗ್ ರಾಜ್ಯ ಅಧ್ಯಕ್ಷ ಪಾಣಕ್ಕಾಡ್ ಸಾಧಿಕ್ ಅಲಿ ಶಿಹಾಬ್ ತಂಙಳ್ ಉದ್ಘಾಟಿಸು ವರು. ಎಸ್‌ಟಿಯು ಕೇಂದ್ರ …

ರಾಷ್ಟ್ರೀಯ ಕ್ರೀಡಾಕೂಟ: ಕಬಡ್ಡಿ ತೀರ್ಪುಗಾರನಾಗಿ ದೀಕ್ಷಿತ್ ಮುಳ್ಳೇರಿಯ ಆಯ್ಕೆ

ಮುಳ್ಳೇರಿಯ: ಗೋವಾದಲ್ಲಿ ಅಕ್ಟೋಬರ್ ೨೬ರಿಂದ ನವಂಬರ್ ೯ರ ವರೆಗೆ ನಡೆಯಲಿರುವ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಕಬಡ್ಡಿ ಪಂದ್ಯಾಟ ತೀರ್ಪುಗಾರರಾಗಿ ನೇಶನಲ್ ರೆಫರಿಯಾಗಿರುವ ದೀಕ್ಷಿತ್ ಮುಳ್ಳೇರಿಯ ಆಯ್ಕೆಗೊಂಡಿದ್ದಾರೆ. ಕೇರಳ ರಾಜ್ಯ ಮಾಜಿ ಕಬಡ್ಡಿ ಆಟಗಾರನೂ ಆಗಿರುವ ದೀಕ್ಷಿತ್  ಕಳೆದ ತಿಂಗಳು ದುಬಾಯಲ್ಲಿ ದುಬಾ ಪೊಲೀಸ್, ದುಬಾ ಸ್ಪೋರ್ಟ್ಸ್ ಕೌನ್ಸಿಲ್, ಯುಎಇ ಕಬಡ್ಡಿ ಆರ್ಗನೈಸೇಶನ್ ಎಂಬಿವುಗಳ ಸಂಯುಕ್ತಾಶ್ರಯದಲ್ಲಿ ನಡೆದ ಐದನೇ ಲೇಬರ್ ಸ್ಪೋರ್ಟ್ಸ್ ಕಬಡ್ಡಿ ಟೂರ್ನಮೆಂಟ್‌ನ ರೆಫರಿಯಾಗಿದ್ದರು.  ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಬೆಂಗಳೂರಿನಲ್ಲಿ ನಡೆಸಿದ ಕಬಡ್ಡಿ ಎನ್‌ಐಎಸ್ ಸರ್ಟಿಫಿಕೇಶನ್ …

ವಿದ್ಯಾರ್ಥಿ ಮೃತ್ಯು: ವಿದ್ಯುತ್ ಇಲಾಖೆ ವಿರುದ್ಧ ಕ್ರಮಕ್ಕೆ ಆಗ್ರಹ

ಕಾಸರಗೋಡು: ಬಸ್ ಪ್ರಯಾಣ ಮಧ್ಯೆ ಬಟ್ಟಂಪಾರೆಯಲ್ಲಿ ವಿದ್ಯುತ್ ಕಂಬ ತಲೆಗೆ ಬಡಿದು ವಿದ್ಯಾರ್ಥಿ ಮನ್ವಿತ್ ಮೃತಪಟ್ಟ ಘಟನೆಯಲ್ಲಿ ವಿದ್ಯುತ್ ಇಲಾಖೆ ವಿರುದ್ಧ ವ್ಯಾಪಕ ಆರೋಪ ಮೂಡಿ ಬಂದಿದೆ. ರಸ್ತೆ ಅಗಲಗೊಂಡಾಗ ಮಧ್ಯ ಭಾಗದಲ್ಲಾದ ವಿದ್ಯುತ್ ಕಂಬಗಳನ್ನು ಬದಲಿಸದಿರು ವುದೇ ಈ ರೀತಿಯ ದುರಂತಕ್ಕೆ ಕಾರಣ ವಾಗಿದ್ದು, ವಿದ್ಯುತ್ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಸರಗೋಡು ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಎಂ. ರಾಜೀವನ್ ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಿಸಿ ಒಂದು ವರ್ಷ ಕಳೆದರೂ ಪೈವಳಿಕೆಯಲ್ಲಿ ಕುಟಂಬಶ್ರೀ ಕ್ಯಾಂಟೀನ್ ಉದ್ಘಾಟನೆಗೆ ಮೀನಮೇಷ

ಪೈವಳಿಕೆ: ಪೈವಳಿಕೆ ಪಂಚಾಯತ್‌ನಿAದ ಕುಟುಂಬಶ್ರೀ ಜನಕೀಯ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ತಿಗೊಳಿಸಿ ಲೋಕಾರ್ಪಣೆಗೊಳಿಸಲು ಪಂಚಾಯತ್ ಅಧಿಕೃತರು ಮುತುವರ್ಜಿವಹಿಸುತ್ತಿಲ್ಲವೆಂದು ಸಾರ್ವಜನಿಕರಿಂದ ವ್ಯಾಪಕ ಅರೋಪಗಳು ಕೇಳಿಬರುತ್ತಿದೆ. ಪಂಚಾಯತ್‌ನ ವನಿತಾ ಫಂಡ್‌ನಿAದ ಸುಮಾರು ೧೨ಲಕ್ಷ ರೂ ವೆಚ್ಚದಲ್ಲಿ ಹೆಂಚು ಹಾಸಿದ ಕ್ಯಾಂಟೀನ್ ನಿರ್ಮಿಸಿ ಒಂದು ವರ್ಷ ಕಳೆದರೂ ಇನ್ನೂ ವಯರಿಂಗ್ ಕೆಲಸ ಬಾಕಿಯಿದೆ. ಅಲ್ಲದೆ ಮಳೆಗೆ ಸೋರುತ್ತಿರುವ ಬಗ್ಗೆಯೂ ಆರೋಪ ಉಂಟಾಗಿದೆ. ಹಲವು ಬಾರಿ ಪಂಚಾಯತ್ üಅಧಿಕಾರಿಗಳÀಲ್ಲಿ ಕ್ಯಾಂಟೀನ್‌ನ ಕಾಮಗಾರಿ ಪೂರ್ತಿ ಗೊಳಿಸಿ ಕಾರ್ಯಾಚರಣೆಗೊಳಿ ಸಬೇಕೆಂದು …

ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಮಾಲಕನಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ದಂಪತಿ

ಕಾಸರಗೋಡು: ರಸ್ತೆಯಲ್ಲಿ ಬಿದ್ದು ಸಿಕ್ಕಿದ ಚಿನ್ನದ ಸರವನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಬಳಿಕ ಅದನ್ನು   ವಾರಿಸುದಾರರಿಗೆ ಹಸ್ತಾಂತರಿಸಿದ  ದಂಪತಿ ತೋರಿದ ಪ್ರಾಮಾಣಿಕತೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಾಸರಗೋಡು ನೆಲ್ಲಿಕುಂಜೆ ಕಡಪ್ಪುರದ ರಾಘವೇಂದ್ರ ಮತ್ತು ಅವರ ಪತ್ನಿ ಲೀಲಾವತಿ ಈ ರೀತಿ ಪ್ರಾಮಾಣಿಕತೆ ಮೆರೆದ  ದಂಪತಿ. ಇವರು ಸೆಪ್ಟಂಬರ್ ೩೦ರಂದು ನಗರದ ಐಸಿ ಭಂಡಾರಿ ರಸ್ತೆ ಮೂಲಕ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರಿಗೆ ರಸ್ತೆಯಲ್ಲಿ ಚಿನ್ನದ ಸರವೊಂದು ಬಿದ್ದು ಸಿಕ್ಕಿದೆ. ಅದನ್ನು ಅವರು ತಕ್ಷಣ ಕಾಸರಗೋಡು ಪೊಲೀಸ್ ಠಾಣೆಗೆ …

ಟಿಪ್ಪರ್ ಲಾರಿಗಳ ವಿರುದ್ಧ ಕ್ರಮ

ಕಾಸರಗೋಡು: ಶಾಲಾ ದಿನಗಳಂದು ಬೆಳಿಗ್ಗೆ ೮ರಿಂದ ೧೦ರ ತನಕ ಹಾಗೂ ಅಪರಾಹ್ನ ೩ರಿಂದ ೫ರ ವರೆಗೆ ಟಿಪ್ಪರ್ ಲಾರಿಗಳ ಸಂಚಾರ ನಿಯಂತ್ರಿಸ ಲಾಗಿದೆ. ಈ ಕಾನೂನು ಉಲ್ಲಂಘಿಸಿ ಸಂಚರಿಸುವ ಟಿಪ್ಪರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ತಿಳಿಸಿದ್ದಾರೆ. ಕಾಸರಗೋಡು ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಲಭಿಸಿದ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳಲಾಗಿದೆ.

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವಿದ್ಯುತ್ ಕಂಬಕ್ಕೆ ತಲೆ ಬಡಿದು ವಿದ್ಯಾರ್ಥಿ ದಾರುಣ ಮೃತ್ಯು

ಕಾಸರಗೋಡು: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಲೆ ವಿದ್ಯುತ್ ಕಂಬಕ್ಕೆ ಬಡಿದು ವಿದ್ಯಾರ್ಥಿ ದಾರುಣವಾಗಿ ಸಾವನ್ನಪ್ಪಿದ ಘಟನೆ ನಗರದಲ್ಲಿ ನಿನ್ನೆ ಸಂಜೆ ನಡೆದಿದೆ. ಕೂಡ್ಲು ಮನ್ನಿಪ್ಪಾಡಿ ಗಣೇಶ್‌ನಗರ ಹೌಸಿಂಗ್ ಕಾಲನಿಯ ಜಿ. ಸುನಿಲ್ ಕುಮಾರ್- ಪ್ರಜಿತ ದಂಪತಿ ಪುತ್ರ, ಚೆಮ್ನಾಡ್ ಜಮಾಯತ್ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಎಸ್. ಮನ್ವಿತ್ (೧೬) ಸಾವನ್ನಪ್ಪಿದ ದುರ್ದೈವಿ. ನಿನ್ನೆ ಸಂಜೆ ಶಾಲೆ ಬಿಟ್ಟು ಕಾಸರಗೋಡು- ಮಧೂರು ರೂಟ್‌ನಲ್ಲಿ ಸಂಚಾರ ನಡೆಸುತ್ತಿರುವ ಖಾಸಗಿ ಬಸ್‌ನಲ್ಲಿ ಮನ್ವಿತ್ ಮನೆಗೆ ಹಿಂತಿರುಗುತ್ತಿದ್ದಾಗ ದಾರಿ …

ಕಾಲೇಜು ವಿದ್ಯಾರ್ಥಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ

ಮಂಜೇಶ್ವರ: ಕಾಲೇಜು ವಿದ್ಯಾ ರ್ಥಿ ಮನೆಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಗ್ಗವನ್ನು ತುಂಡರಿಸಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಕಣ್ವತೀರ್ಥ ಸಮೀಪದ ಕಾಡಬಳಿ ನಿವಾಸಿ ಗಲ್ಪ್ ಉದ್ಯೋಗಿ ನಿರಂಜನ್ ರವರ ಪುತ್ರ ನಿಹಾಲ್ [18] ಮೃತಪಟ್ಟ ದುರ್ದೆÊವಿ. ಈತ ಮಂಗಳೂರಿನ ಕೆನರಾ ಕಾಲೇಜಿನ ಪ್ರಥಮ ವರ್ಷ ಡಿಗ್ರಿ ವಿದ್ಯಾರ್ಥಿಯಾಗಿದ್ದಾನೆ. ಮಂಗಳವಾರ ಸಂಜೆ 4ಗಂಟೆಗೆ ಮನೆಯಲ್ಲಿ ಕೊಠಡಿಯೊಳಗೆ ತೆರಳಿ ಬಾಗಿಲು ಹಾಕಿದ್ದಾನೆ. ಸಂಜೆ 6.30ರ ತನಕ ಹೊರಕ್ಕೆ ಬಂದಿರಲಿಲ್ಲ ಇದರಿಂದ ಗಾಬರಿಗೊಂಡು ತಾಯಿ ಸ್ಥಳೀಯರನ್ನು ಕರೆದು ಬಾಗಿಲನ್ನು …

೪ ಕಿಲೋ ಗಾಂಜಾ ಸಾಗಾಟ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹಿಳೆ ಮತ್ತೆ ಗಾಂಜಾದೊಂದಿಗೆ ಸೆರೆ

ಕಾಸರಗೋಡು: ಕಳೆದ ವರ್ಷ ಕಾಸ ರಗೋಡು ಅಬಕಾರಿ ತಂಡ  ಅಡ್ಕ ಬಳಿ ಯಿಂದ ೪ ಕಿಲೋ ಗಾಂಜಾ ವಶಪ ಡಿಸಿಕೊಂಡ ಪ್ರಕರಣದ ಆರೋಪಿ ಯಾದ ಮಹಿಳೆಯನ್ನು ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್  ಆಂಡ್ ಆಂಟಿ ನಾರ್ಕೋಟಿಕ್ ಸ್ಪೆಷಲ್ ಸ್ಕ್ವಾಡ್‌ನ ಸರ್ಕಲ್ ಇನ್‌ಸ್ಪೆಕ್ಟರ್ ಶಂಕರ್ ಜಿ.ಎ ನೇತೃತ್ವದ ತಂಡ ನಿನ್ನೆ ಬಂದ್ಯೋಡು ಅಡ್ಕದಿಂದ ಬಂಧಿಸಿದೆ. ಬಂದ್ಯೋಡು ಅಡ್ಕದ  ಅಬ್ದುಲ್ ಸಮೀರ್ ಎಂಬಾತನ ಪತ್ನಿ ಸುಹರಾಬಿ (೩೭) ಬಂಧಿತಳಾದ ಆರೋಪಿ. ನಿನ್ನೆ  ಬಂಧಿಸುವ ವೇಳೆ ಆಕೆಯ ಕೈಯಲ್ಲಿ ೩೦ ಗ್ರಾಂ ಗಾಂಜಾ …