ಒಂದೇ ಕುಟುಂಬದ ಮೂವರು ನೇಣುಬಿಗಿದು ಸಾವು

ಪಾಲಕ್ಕಾಡ್: ಒಂದೇ ಕುಟುಂಬದ ಮೂರು ಮಂದಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಾಲಕ್ಕಾಡ್ ಕುಳಲ್ ಮಂದ ಆಲಿಂಗಾಲ್ ಎಂಬಲ್ಲಿ ಈ ಘಟನೆ ನಡೆದಿದೆ.  ಆಲಿಂಗಾಲ್  ಮುತ್ತಾಟುಪರಂಬ್ ನಿವಾಸಿ ಸುಂದರನ್ ಎಂಬವರ ಪುತ್ರಿ ಸಿನಿಲ (೪೨), ಪುತ್ರ ರೋಹಿತ್ (೧೯), ಸುನಿಲರ ಅಕ್ಕನ ಮಗ ಸುಬಿನ್ (೨೩) ಎಂಬಿವರು ನೇಣುಬಿಗಿದು ಸಾವಿಗೀಡಾದವರಾಗಿ ದ್ದಾರೆ. ಇಂದು ಮುಂಜಾನೆ ಮನೆಯ ಅಡುಗೆ ಕೋಣೆ ಭಾಗದಲ್ಲಿ ಇವರ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ತಲುಪಿಸಲಾಗಿದೆ. ಆತ್ಮಹತ್ಯೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ …

೨೦ ಗ್ರಾಂ ಎಂ.ಡಿ.ಎಂ.ಎ ಸಹಿತ ಜಿಲ್ಲೆಯ ಇಬ್ಬರು ಮಡಿಕೇರಿಯಲ್ಲಿ ಸೆರೆ: ಕಾರು ವಶ

ಮುಳ್ಳೇರಿಯ: ಮಾರಕ ಮಾದಕವಸ್ತುವಾದ ಎಂಡಿಎಂಎ ಸಹಿತ ಜಿಲ್ಲೆಯ  ಇಬ್ಬರನ್ನು ಮಡಿಕೇರಿ ಬಳಿಯ ಕುಶಾಲನಗರದಲ್ಲಿ  ಪೊಲೀಸರು ಸೆರೆಹಿಡಿದಿದ್ದಾರೆ. ಅಂಬಲತ್ತರ ಪಾರಪ್ಪಳ್ಳಿ ನಿವಾಸಿಗಳಾದ ಅಮೀರ್ ಟಿ.ಎಂ (೨೮), ಮಹಮ್ಮದ್ ಶಬೀರ್ ಕೆ (೩೦) ಎಂಬಿವರು ಬಂಧಿತ ಆರೋಪಿಗ ಳಾಗಿದ್ದಾರೆ.  ಇವರ ಕೈಯಿಂದ ೨೦ ಗ್ರಾಂ ಎಂಡಿಎಂಎ ಹಾಗೂ ಇವರು ಸಂಚರಿಸುತ್ತಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಡಿಕೇರಿ-ಕುಶಾಲನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಮಾನು ಗೇಟ್ ಜಂಕ್ಷನ್ ಸಮೀಪದಿಂದ ಈ ಇಬ್ಬರನ್ನು ಸೆರೆಹಿಡಿಯಲಾಗಿದೆ.  ನಿಷೇಧಿತ ಮಾದಕವಸ್ತು ಸಾಗಾಟವಾಗುತ್ತಿದೆಯೆಂಬ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲ್ಲಿ ಮಡಿಕೇರಿ ಉಪವಿಭಾಗ …

ಸೌದೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದ ಪ್ರಕರಣ :ಆರೋಪಿ ಪತಿಗೆ ಜೀವಾವಧಿ ಸಜೆ, ಜುಲ್ಮಾನೆ

ಕಾಸರಗೋಡು: ಕೌಟುಂಬಿಕ ಕಲಹದ   ವೇಳೆ ಸೌದೆಯಿಂದ ಪತ್ನಿಯ ತಲೆಗೆ ಹೊಡೆದು ಕೊಲೆಗೈದು, ಅದನ್ನು ತಡೆಯಲು ಬಂದ ಮಗಳ ಮೇಲೂ ಗಂಭೀರ ಹಲ್ಲೆ ನಡೆಸಿದ ಪ್ರಕರಣ ಆರೋಪಿ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಗೊಳಪಟ್ಟ ಕಾಞರಡ್ಕ ಮೇಲೋತ್ತ್ ವೀಟಿಲ್‌ನ ಗೋಪಾಲಕೃಷ್ಣನ್ (೭೬)ನಿಗೆ  ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಜೀವಾವಧಿ ಸಜೆ  ಹಾಗೂ ಒಂದು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎರಡು ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕು. ಇದರ ಹೊರತಾಗಿ ಪುತ್ರಿ …

ಶಿರಿಯದಲ್ಲಿ ಮತ್ತೆ ಅನಧಿಕೃತ ಹೊಯ್ಗೆ ಸಂಗ್ರಹ: ಕಡವು, ನೀರಿನೊಳಗೆ ಬಚ್ಚಿಟ್ಟಿದ್ದ ನಾಲ್ಕು ದೋಣಿಗಳ ನಾಶಗೊಳಿಸಿದ ಪೊಲೀಸರು

ಶಿರಿಯ ವಳಯಂನಲ್ಲಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಹೊಯ್ಗೆ ಸಂಗ್ರಹ ಕೇಂದ್ರವನ್ನು ಪೊಲೀಸರು ಜೆಸಿಬಿ ಬಳಸಿ ನಾಶಗೊಳಿಸಿದ್ದಾರೆ. ಅದೇ ರೀತಿ ಶಿರಿಯದ ಹೊಳೆಯಲ್ಲಿ ನೀರಿನೊಳಗೆ ಮುಳುಗಿಸಿಟ್ಟಿದ್ದ ನಾಲ್ಕು ದೋಣಿಗಳನ್ನು ಮೇಲಕ್ಕೆ ತಂದು ಜೆಸಿಬಿ ಬಳಸಿ ನಾಶಪಡಿಸಲಾಗಿದೆ. ಕೆಲವು ದಿನಗಳ ಹಿಂದೆ ಇದೇ ಸ್ಥಳದಲ್ಲಿದ್ದ ಅನಧಿಕೃತವಾಗಿ ಕಾರ್ಯಾಚರಿಸುತ್ತಿದ್ದ ಅನಧಿಕೃತ ಕಡವನ್ನು ಡಿವೈಎಸ್ಪಿ ಪಿ.ಕೆ. ಸುಧಾಕರನ್ ನೇತೃತ್ವದಲ್ಲಿ ಪೊಲೀಸರು ನಾಶಗೊಳಿಸಿದ್ದರು. ಅದೇ ಸ್ಥಳದಲ್ಲಿ ಇದೀಗ ಮತ್ತೆ ಕಡವು ನಿರ್ಮಿಸಿ ಹೊಯ್ಗೆ ಸಂಗ್ರಹ ನಡೆಸುತ್ತಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಇನ್ಸ್‌ಪೆಕ್ಟರ್ …

ಖ್ಯಾತ ಸೀರಿಯಲ್ ನಿರ್ದೇಶಕ ನಿಧನ

 ತಿರುವನಂತಪುರ:  ಖ್ಯಾತ ಸೀರಿಯಲ್ ನಿರ್ದೇಶಕ ಆದಿತ್ಯನ್ (೪೭) ನಿಧನಹೊಂದಿದರು.   ಮನೆಯಲ್ಲಿ ಹೃದಯಾಘಾತವುಂ ಟಾದ ಇವರನ್ನು  ಆಸ್ಪತ್ರೆಗೆ ತಲು ಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಾಂತ್ವನಂ, ವಾನಂಬಾಡಿ, ಆಕಾಶ ದೂತ್ ಸಹಿತ ಪ್ರಸಿದ್ಧ ಸೀರಿಯಲ್ ಗಳನ್ನು ಇವರು ನಿರ್ದೇಶಿಸಿದ್ದಾರೆ.  ಕೊಲ್ಲಂ ಅಂಜಲ್ ನಿವಾಸಿಯಾಗಿ ರುವ ಆದಿತ್ಯನ್ ಕೆಲವು ವರ್ಷಗಳಿಂದ ತಿರುವನಂತಪುರ ಪೇಯಾಡ್ ಎಂಬಲ್ಲಿ ವಾಸಿಸುತ್ತಿದ್ದರು.  ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಭಾರತ್ ಭವನ್‌ನಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾ ಗುವುದು.  ಮೃತದೇಹದ ಅಂತಿಮ ದರ್ಶನ ಪಡೆಯಲು  ಸೀರಿಯಲ್, ಸಿನಿಮಾ ರಂಗದ ಹಲವರು ಪ್ರಮುಖ …

ಎಂಡೋಸಲ್ಫಾನ್ ಸಂತ್ರಸ್ತ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಎಂಡೋಸ ಲ್ಫಾನ್ ಸಂತ್ರಸ್ತ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದಾರೆ. ರಾಜಪುರಂಗೆ ಸಮೀಪದ ಮಾಲಕಲ್ಲು ಪೂಕಯದ ಸಜಿ ಉಣ್ಣಂತ್ತರಪೇಲ್ (೫೨) ಸಾವನ್ನಪ್ಪಿದ ವ್ಯಕ್ತಿ. ಇವರು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ರೆಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಕ್ಕಳ ತಂದೆಯಾಗಿರುವ ಇವರು ಮನೆ ಹಿತ್ತಿಲ ಮರದಲ್ಲಿ ಇಂದು ಬೆಳಿಗ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಂ ಡೋಸಲ್ಫಾನ್ ಸಂತ್ರಸ್ತರಿಗಾಗಿರುವ ಐದು ಲಕ್ಷ ರೂ. ಧನ ಸಹಾಯ ಇವರಿಗೆ ಲಭಿಸಿರಲಿಲ್ಲವೆಂದು …

ಮುಳಿಗದ್ದೆ ಪೆರ್ವೋಡಿ ಸಮೀಪ ರಸ್ತೆ ಕುಸಿದು ಬಿದ್ದು ಅಪಾಯದಂಚಿನಲ್ಲಿ: ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಪೈವಳಿಕೆ: ಮುಳಿಗದ್ದೆ- ಬೆರಿ ಪದವು ಬಳ್ಳೂರು ರಸ್ತೆಯ ಪೆರ್ವೋಡಿ ಬಳಿ ರಸ್ತೆ ಕುಸಿದು ಬಿದ್ದು ಅಪಾಯದ ಸ್ಥಿತಿಯಲ್ಲಿರುವ ಸ್ಥಳಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಸಹಿತ ಇತರ ಉದ್ಯೋ ಗಸ್ಥರು ಭೇಟಿ ನೀಡಿ ಪರಿಶೀಲಿ ಸಿದ್ದಾರೆ. ಮಳೆಯ ಆರಂಭದಲ್ಲೇ ರಸ್ತೆ ಕುಸಿದು ಬಿದ್ದಿದೆ ಮಾತ್ರವಲ್ಲ ಪರಿಸರದಲ್ಲಿ ನೀರು ತುಂಬಿದ ಕೆರೆ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪೈವಳಿಕೆ ಪಂಚಾಯತ್ ಸದಸ್ಯೆ ಜಯಲಕ್ಷಿ÷್ಮ ಭಟ್ ಸಹಿತ ಸ್ಥಳೀಯರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ದುರಸ್ತಿತಿಗೆ ಕ್ರಮ ಉಂಟಾಗಿರಲಿಲ್ಲ. ಮಂಗಳವಾರ ಜಿಲ್ಲಾಧಿಕಾರಿ …

ಕುಡಿಯುವ ನೀರು ಮೊಟಕು: ದೂರು ಹೇಳಲು ತೆರಳಿದ ವ್ಯಕ್ತಿಗೆ ಪಂ. ಸದಸ್ಯ ಹಲ್ಲೆ ಆರೋಪ

ಬದಿಯಡ್ಕ: ಕಳೆದ ಎರಡು ದಿನ ಗಳಿಂದ ಕುಡಿಯುವ ನೀರು ವಿತರಣೆ ಗೊಂಡಿಲ್ಲ ಎಂದು ದೂರು ನೀಡಲು ತೆರಳಿದ ವ್ಯಕ್ತಿಗೆ ಪಂ. ಸದಸ್ಯ ಬೆದರಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾ ಗಿದೆ. ಪಳ್ಳತ್ತಡ್ಕದಲ್ಲಿ ವಾಸಿಸುವ ಕೂಲಿ ಕಾರ್ಮಿಕ ಕೃಷ್ಣ (೫೬) ನಿನ್ನೆ ಪಂ. ಸದಸ್ಯ ಹಮೀದ್ ಪಳ್ಳತ್ತಡ್ಕರಲ್ಲಿ ನೀರು ವಿತರಣೆ ಮೊಟಕು ಬಗ್ಗೆ ತಿಳಿಸಲು ಬುಧವಾರ ಸಂಜೆ ೭ ಗಂಟೆ ವೇಳೆ ತೆರಳಿದ್ದರು. ಪಂ. ಸದಸ್ಯ ಪಳ್ಳತ್ತಡ್ಕದ ಅಂಗಡಿಯಲ್ಲಿರು ವುದನ್ನು ಕಂಡು ಕೃಷ್ಣ ಅಲ್ಲಿಗೆ ತೆರಳಿದ್ದರು. ಈ ವೇಳೆ ಸದಸ್ಯ …

ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಕಾರಡ್ಕ ಶಾಲೆಯಲ್ಲಿ: ಸ್ವಾಗತ ಸಮಿತಿ ರೂಪೀಕರಣ

ಮುಳ್ಳೇರಿಯ: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ದ. ೫ರಿಂದ ೯ರ ತನಕ ಕಾರಡ್ಕ ಜಿ.ವಿ.ಎಚ್.ಎಸ್.ಎಸ್.ನಲ್ಲಿ ನಡೆಯಲಿದೆ. ೨೧ ವರ್ಷದ ಬಳಿಕ ಶಾಲೆಯಲ್ಲಿ ನಡೆಯುವ ಜಿಲ್ಲಾ ಶಾಲಾ ಕಲೋತ್ಸವದ ಯಶಸ್ವಿಗಾಗಿ ಸ್ವಾಗತ ಸಮಿತಿ ರೂಪೀಕರಿಸಲಾಯಿತು. ಸಭೆಯನ್ನು ಜಿಲ್ಲಾ ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಕಾರಡ್ಕ ಬ್ಲೋಕ್ ಪಂ. ಅಧ್ಯಕ್ಷ ಸಿಜಿ ಮ್ಯಾಥ್ಯು ಅಧ್ಯಕ್ಷತೆ ವಹಿಸಿದರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್, ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಸಿ.ಎಚ್. ಕುಂಞಂಬು, ಇ. ಚಂದ್ರಶೇಖರನ್, ಎಂ. ರಾಜ ಗೋಪಾಲನ್, ಜಿ. …

ಸುಬ್ರಹ್ಮಣ್ಯ ನಾಯಕ್ ನಿಧನಕ್ಕೆ ಬಿಜೆಪಿ ಶ್ರದ್ಧಾಂಜಲಿ

ಕುಂಬಳೆ: ಬಿಜೆಪಿ ಕುಂಬಳೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಇತ್ತೀಚೆಗೆ ನಿಧನರಾದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತ, ಬಿಜೆಪಿ ಕುಂಬಳ ಮಂಡಲ ಸಮಿತಿ ಸದಸ್ಯರು, ಆರ್.ಟಿ.ಐ ಕಾರ್ಯಕರ್ತರಾಗಿದ್ದ ಬಿ. ಸುಬ್ರಹ್ಮಣ್ಯ ನಾಯಕ್‌ರಿಗೆ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಕುಂಬಳ ಬಿಜೆಪಿ ದಕ್ಷಿಣ ವಲಯ ಅಧ್ಯಕ್ಷ  ಸುಜಿತ್ ರೈ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮುರಳೀಧರ ಯಾದವ್ ಉದ್ಘಾಟಿಸಿ ನುಡಿ ನಮನ ಸಲ್ಲಿಸಿದರು. ಮಂಡಲ ಉಪಾಧ್ಯಕ್ಷ ಕೆ. …