ಮಂಗಲ್ಪಾಡಿ ಪಂಚಾಯತ್‌ನಲ್ಲಿ ರಾಶಿ ಬಿದ್ದಿರುವ ಕಡತಗಳಿಗೆ ಪರಿಹಾರ ಬೇಕು- ಆಡಳಿತ ಸಮಿತಿ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್ ಕಚೇರಿಯಲ್ಲಿ ರಾಶಿ ಬಿದ್ದಿರುವ ನೂರಾರು ಕಡತಗಳಲ್ಲಿ ತೀರ್ಪು ನೀಡಲು ತುರ್ತು ಕ್ರಮ ಕೈಗೊಳ್ಳಬೇ ಕೆಂದು ಪಂಚಾಯತ್ ಆಡಳಿತ ಸಮಿತಿ ಕುಂಬಳೆಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಆಗ್ರಹಿಸಿದೆ. ೩೫೦೦ರಷ್ಟು ಕಡತಗಳು ಕಚೇರಿಯಲ್ಲಿ ತೀರ್ಪಾಗದೆ ಉಳಿದಿದೆ. ನೌಕರರ ಕೊರತೆಯಿಂದ ೨೦೧೭ರಿಂದಿರುವ ಕಡತಗಳಿಗೆ ಪರಿಹಾರ ಕಾಣಲಾಗಿಲ್ಲ. ೧೦೦ರಷ್ಟು ಕಡತಗಳಲ್ಲಿ ಸಂಕೀರ್ಣತೆ ಇದ್ದರೂ ಉಳಿದ ಕಡತಗಳಿಗೆ  ಶಾಶ್ವತ ಪರಿಹಾರ ಉಂಟಾಗಬೇಕು. ಈ ಬೇಡಿಕೆ ಮುಂದಿಟ್ಟು ಆಡಳಿತ ಸಮಿತಿ ನಡೆಸುವ ಮುಷ್ಕರಕ್ಕೆ ಜನಬೆಂಬಲ ಹೆಚ್ಚಾಗುತ್ತಿದೆ. ವಿವಿಧ ರಾಜಕೀಯ ಪಕ್ಷದ …

ನವ ಕೇರಳ ಕ್ರಿಯಾಯೋಜನೆ ಅಂಗವಾಗಿ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ

ಮಂಜೇಶ್ವರ: ನವ ಕೇರಳ ಕ್ರಿಯಾ ಯೋಜನೆಯ ಜಲ ಬಜೆಟ್, ಸಂಯೋಜಿತ ಜಲ ಸಂರಕ್ಷಣೆ ತಾಂತ್ರಿಕ ಕಾರ್ಯಗಾರ ಮಂಜೇಶ್ವರ ಬ್ಲೋಕ್ ಪಂಚಾಯತ್ ಹಾಲ್ ನಲ್ಲಿ ನಡೆ ಯಿತು. ಜಲ ಸಂರಕ್ಷಣೆ ವಲಯದಲ್ಲಿ ವಿವಿಧ ಇಲಾಖೆಗಳ ಚಟುವಟಿಕೆಗಳು ಹಾಗೂ ಏಕೋಪನ ಸಾಧ್ಯತೆಗಳನ್ನು ಪರಿಶೀಲಿಸಿ ಬರಗಾಲವನ್ನು ಎದುರಿ ಸಲು ಸಿದ್ಧತೆಗಳು ತಯಾರಿಯಾಗಿದೆ. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಪಿ.ಕೆ ಉದ್ಘಾಟಿಸಿದರು. ಅರ್ಜುನನ್ ಇ.ಕೆ ಅಧ್ಯಕ್ಷತೆ ವಹಿಸಿದ್ದರು. ಸಂಜೀವ್ ಪಿ.ಟಿ, ಕಲಾಮುದ್ದೀನ್ ಜಲ ಸಂರಕ್ಷಣೆ ಚಟುವಟಿಕೆಗಳ ಸಾಧ್ಯತೆಗಳ ಕುರಿತು ತರಗತಿ ನೀಡಿದರು. …

ಪಾಂಡಿ ಶಾಲೆಯಲ್ಲಿ ಉತ್ಸವ ಮಿಠಾಯಿ ೧೯, ೨೦ರಂದು

ಅಡೂರು: ಪಾಂಡಿ ಜಿಎಚ್‌ಎಸ್‌ಎಸ್‌ನ ಶಾಲಾ ಕಲೋತ್ಸವದಂಗವಾಗಿ ಉತ್ಸವ ಮಿಠಾಯಿ ಕಾರ್ಯಕ್ರಮ ಅ. ೧೯, ೨೦ರಂದು ನಡೆಯಲಿದೆ. ೧೯ರಂದು ಬೆಳಿಗ್ಗೆ ೧೧ಕ್ಕೆ ಎಸ್‌ಎಸ್‌ಕೆ ಕಾಸರಗೋಡು ಇದರ ಡಿಪಿಸಿ ನಾರಾಯಣ ಡಿ. ಉದ್ಘಾಟಿಸುವರು. ಶಾಲಾ ಪಿಟಿಎ ಅಧ್ಯಕ್ಷ ದಿವಾಕರ ಬಿ. ಅಧ್ಯಕ್ಷತೆ ವಹಿಸುವರು. ಪಂಚಾಯತ್ ಸದಸ್ಯ ಟಿ.ಕೆ. ದಾಮೋದರನ್ ಮುಖ್ಯ ಅತಿಥಿಯಾಗಿರುವರು. ಉಸ್ತುವಾರಿ ಪ್ರಾಂಶುಪಾಲ ರಾಜೇಶ್ ನೋಯೆಲ್, ಮುಖ್ಯೋಪಾಧ್ಯಾಯ ರಾಧಾಕೃಷ್ಣ ಎಂ, ಎಸ್‌ಎಂಸಿ ಚೆಯರ್‌ಮೆನ್ ರಾಜೇಂದ್ರನ್ ಇ, ಎಂಪಿಟಿಎ ಅಧ್ಯಕ್ಷೆ ನವೀನ, ಎಚ್‌ಎಸ್‌ಎಸ್ ಸೀನಿಯರ್ ಅಸಿಸ್ಟೆಂಟ್ ಅನಿಲ್ ಕೆ.ಇ, ಎಚ್.ಎಸ್. …

ನವಕೇರಳ ಸದಸ್ಸ್ ಯಶಸ್ವಿಗೆ ಮೀಯಪದವಿನಲ್ಲಿ ಸ್ವಾಗತ ಸಮಿತಿ ರೂಪೀಕರಣ

ಮೀಂಜ: ನವೆಂಬರ್ 18ರಂ ದು ಪೈವಳಿಕೆ ನಗರ ಶಾಲೆಯಲ್ಲಿ ನಡೆಸುವ “ನವ ಕೇರಳ ಸದಸ್ಸ್” ನ ಯಶಸ್ವಿಗಾಗಿ ಮೀಂಜ ಪಂಚಾಯತ್ ಮಟ್ಟದ ಸ್ವಾಗತ ಸಮಿತಿ ರೂಪೀಕರಿಸ ಲಾಯಿತು. ಮೀಂಜ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಪಂಚಾ ಯತ್ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಬ್ಲಾಕ್ ಪಂಚಾಯತ್ ಸದಸ್ಯರಾದ ಕೆ ವಿ ರಾಧಾಕೃಷ್ಣ ಭಟ್, ಸ್ಟಾಡಿಂಗ್ ಕಮಿಟಿ ಚೆಯರ್ ಮೆನ್ ಬಾಬು …

೯೦ ಕಿಲೋ ಗಾಂಜಾ ಸಾಗಾಟ : ಪರಾರಿಯಾದ ಆರೋಪಿ ಬಂಧನ

ಮಂಜೇಶ್ವರ: ಕಾರಿನಲ್ಲಿ ೯೦ ಕಿಲೋ ಗಾಂಜಾ ಸಾಗಾಟ ನಡೆಸಿದ ಪ್ರಕರಣದಲ್ಲಿ ಇನ್ನೋರ್ವ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಪಳಯಂಗಾಡಿ ನಿವಾಸಿ ರಿಯಾಸ್ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಮೊನ್ನೆ ರಾತ್ರಿ ಗಾಂಜಾ ಸಾಗಾಟ ನಡೆದಿದ್ದು, ಅದರ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ರಿಯಾಸ್ ಓಡಿ ಪರಾರಿ ಯಾಗಿದ್ದನು. ಕಾಞಂಗಾಡ್ ಡಿವೈಎಸ್ಪಿಗೆ ಲಭಿಸಿದ ಗುಪ್ತ ಮಾಹಿತಿಯ ಆಧಾರದಲ್ಲಿ ಮಂಜೇಶ್ವರ ಪೊಲೀಸ್ ಹಾಗೂ ಡಿವೈಎಸ್ಪಿ ನೇತೃತ್ವದ ಪ್ರತ್ಯೇಕ ಸ್ಕ್ವಾಡ್ ಪೈವಳಿಕೆ ಬಳಿಯ ಬಾಯಿಕಟ್ಟೆಯಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಕಾರಿನಿಂದ ೯೦ ಕಿಲೋ ಗಾಂಜಾ …

ಸಂಚರಿಸುತ್ತಿದ್ದ ಸ್ಕೂಟರ್ ಬೆಂಕಿಗಾಹುತಿ

ಹೊಸದುರ್ಗ: ಸಂಚರಿಸುತ್ತಿದ್ದ ಸ್ಕೂಟರ್ ಉರಿದು ನಾಶಗೊಂಡಿದೆ. ಕಾಞಂಗಾಡ್ ಇಕ್ಬಾಲ್ ನಗರ ನಿವಾಸಿ  ನಿಯಾದ್‌ರ ಪೆಟ್ರೋಲ್ ಸ್ಕೂಟರ್ ಕೆಎಸ್‌ಟಿಪಿ ರೋಡ್‌ನ ಅದಿಞಾಲ್ ಕೋಯಿಪ್ಪಳ್ಳಿ ಹಾಗೂ ಮಾಣಿಕ್ಕೋತ್ ಮಧ್ಯೆ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ. ನಿಯಾದ್ ಚಿತ್ತಾರಿಯಿಂದ ಮನೆಗೆ ಮರಳುತ್ತಿದ್ದರು. ಈ ಮಧ್ಯೆ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಉರಿಯುತ್ತಿರುವುದು ಗಮನಕ್ಕೆ ಬಂದು ತಕ್ಷಣ ನಿಲ್ಲಿಸಿದುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಲುಪಿ ನೀರೆರೆದು ಬೆಂಕಿ ನಂದಿಸಿದ್ದಾರೆ.

ಶ್ರೀಗಂಧ ಸಹಿತ ಮೂವರು ಸೆರೆ

ಕಣ್ಣೂರು: ಗೂಡ್ಸ್ ಆಟೋ ದಲ್ಲಿ ಸಾಗಿಸುತ್ತಿದ್ದ ಶ್ರೀಗಂಧದ ಕೊರಡುಗಳ ಸಹಿತ ಮೂರು ಮಂದಿಯನ್ನು ಬಂಧಿಸ ಲಾಗಿದೆ. ಕಣ್ಣೂರು ಮಾವಿಲಾಯಿ ನಿವಾಸಿ ಗಳಾದ ಪಿ.ವಿ. ವೈಷ್ಣವ್ (೨೫), ಶಿವನ್ (೨೫), ಎಂ.ಟಿ. ರಾಹಿನ್ (೩೨) ಎಂಬಿವರನ್ನು ನನ್ನೆ ರಾತ್ರಿ ಎಡಕ್ಕಾಡ್ ಪೊಲೀಸರು ಬಂಧಿಸಿ ದ್ದಾರೆ. ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ಗೂಡ್ಸ್ ಆಟೋವನ್ನು ತಪಾಸಣೆಗೈದಾಗ ಅದರಲ್ಲಿ ಶ್ರೀಗಂಧದ ಕೊರಡುಗಳು ಹಾಗೂ ಕೊಡಲಿ ಮೊದಲಾ ದವುಗಳನ್ನು ಪತ್ತೆಹಚ್ಚಲಾಗಿದೆ. ಸೆರೆಗೀಡಾದ ಮೂವರು ಹಲವು ಪ್ರಕರಣಗಳಲ್ಲಿ ಆರೋಪಿಗಳೆಂದು ತಿಳಿಸಿದ್ದಾರೆ.

ಮುಂಜುಂಗಾವು ಕ್ಷೇತ್ರದ ಕೆರೆಯಲ್ಲಿ ಸಾವಿರಾರು ಮಂದಿಯಿಂದ ತೀರ್ಥಸ್ನಾನ

ಸೀತಾಂಗೋಳಿ: ತುಲಾ ಸಂಕ್ರಮಣ ಪ್ರಯುಕ್ತ ಮುಜುಂಗಾವು ಶ್ರೀ ಪಾರ್ಥಸಾರಥಿ ದೇವಸ್ಥಾನದ ಕೆರೆಯಲ್ಲಿ ಇಂದು ಸಾವಿರಾರು ಮಂದಿ ತೀರ್ಥಸ್ನಾನಗೈದರು. ಮುಂಜಾನೆ ದೇವರಿಗೆ ಪವಿತ್ರ ಕೆರೆಯ ನೀರಿನಿಂದ ಅಭಿಷೇಕ ನಡೆಸಿದ ಬಳಿಕ ಭಕ್ತರಿಗೆ ಪುಣ್ಯಸ್ನಾನ ನಡೆಸಲು ಅವಕಾಶವೊದಗಿಸ ಲಾಯಿತು. ಇಂದು ಮುಂಜಾನೆಯಿಂದಲೇ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕ್ಷೇತ್ರಕ್ಕೆ ತಲುಪಿದ್ದಾರೆ. ಬಳಿಕ ತೀರ್ಥಸ್ನಾನ ಮಾಡಿ ಅಕ್ಕಿ, ಹುರುಳಿಯನ್ನು ಸಮರ್ಪಿಸಿ ಶ್ರೀ ದೇವರ ದರ್ಶನ ನಡೆಸಿ ಕೃತಾರ್ಥ ರಾದರು. ಕಾಸರಗೋಡು ಮಾತ್ರವಲ್ಲದೆ ಕರ್ನಾಟಕದ ವಿವಿಧ ಭಾಗಗಳಿಂದಲೂ ಭಕ್ತರು ತಲುಪಿ ತೀರ್ಥಸ್ನಾನದಲ್ಲಿ …

ಉಪ್ಪಳದಲ್ಲಿ ಪೆಟ್ರೋಲ್ ಪಂಪ್ ನೌಕರನಿಗೆ ಹಲ್ಲೆ

ಉಪ್ಪಳ: ವಾಹನಕ್ಕೆ ಪೆಟ್ರೋಲ್ ತುಂಬಿಸುವ ವೇಳೆ ಉಂಟಾದ ವಾಗ್ವಾದ ಮಧ್ಯೆ ಪಿಕಪ್ ಚಾಲಕ ಪೆಟ್ರೋಲ್ ಪಂಪ್‌ನ ನೌಕರನಿಗೆ ಹಲ್ಲೆಗೈದುದಾಗಿ ದೂರಲಾಗಿದೆ. ಉಪ್ಪಳದ ಮೆಹಬೂಬ್ ಪೆಟ್ರೋಲ್ ಪಂಪ್ ನೌಕರನಾದ ಪೆರಿಯಡ್ಕದ ಸಜೇಶ್ (೩೫)ರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ೬.೩೦ರ ವೇಳೆ ಘಟನೆ ನಡೆದಿದೆ. ಬೇರೊಂದು ವಾಹನಕ್ಕೆ ಪೆಟ್ರೋಲ್ ತುಂಬಿಸುತ್ತಿದ್ದಂತೆ ಅಲ್ಲಿಗೆ ಪಿಕಪ್ ಬಂದಿರುವುದಾಗಿ ಹೇಳಲಾಗುತ್ತಿದೆ. ಮೊದಲು ತನ್ನ ವಾಹನಕ್ಕೆ ಡೀಸೆಲ್ ತುಂಬಿಸಬೇಕೆಂದು ಅದರ ಚಾಲಕ ತಿಳಿಸಿದ್ದು, ಇದರಿಂದ ಉಂಟಾದ ವಾಗ್ವಾದ ವೇಳೆ ಹಲ್ಲೆಗೈದುದಾಗಿ …

೯೩ ಗ್ರಾಂ ಎಂಡಿಎಂಎ ವಶ: ಓರ್ವ ಸೆರೆ

ವಯನಾಡ್: ಮುತ್ತಙದಲ್ಲಿ ಅಬಕಾರಿ ಅಧಿಕಾರಿಗಳು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಲಾಗಿದೆ. ಇಲ್ಲಿನ ಅಬಕಾರಿ ಚೆಕ್‌ಪೋಸ್ಟ್‌ನ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಬಸ್ ಪ್ರಯಾಣಿಕನಿಂದ ೯೩ ಗ್ರಾಂ ಎಂಡಿಎಂಎ ವಶಪಡಿಸಿ ಕೊಂಡಿದ್ದಾರೆ. ಮುಕ್ಕಂ ನಿವಾಸಿ ಶರ್‌ಹಾನ್ ಕೆ.ಕೆ. ಎಂಬಾತ ಇದನ್ನು ಸಾಗಾಟ ನಡೆಸುತ್ತಿದ್ದನು. ಈತನ ಒಳ ಉಡುಪಿನಲ್ಲಿ ಎಂಡಿಎಂಎ ಬಚ್ಚಿಡಲಾಗಿತ್ತು. ಬೆಂಗಳೂರಿನಿಂದ ಈ ಮಾದಕ ವಸ್ತುವನ್ನು ತಂದಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ. ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶರ್‌ಹಾನ್‌ನನ್ನು ಸಂಶಯ ಮೇರೆಗೆ ತಪಾಸಣೆ ನಡೆಸಿದಾಗ …