ತಾಲೂಕು ಆಸ್ಪತ್ರೆ ಅಭಿವೃದ್ಧಿ ಬುಡಮೇಲುಗೊಳಿಸಲು ಸಂಚು: ೧೮ರಂದು ಮಂಗಲ್ಪಾಡಿ ಜನಕೀಯ ವೇದಿಕೆಯಿಂದ ಸೂಚನಾ ಧರಣಿ
ಕುಂಬಳೆ: ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆಯ ಅಭಿವೃದ್ಧಿಯನ್ನು ಬುಡಮೇ ಲುಗೊಳಿಸಲು ಕೆಲವು ಕೇಂದ್ರಗಳು ನಡೆಸುತ್ತಿರುವ ಯತ್ನವನ್ನು ವಿರೋಧಿಸಿ ಮಂಗಲ್ಪಾಡಿ ಜನಪರ ವೇದಿಕೆ ಪ್ರತಿಭ ಟನೆ ತೀವ್ರಗೊಳಿಸಲು ನಿರ್ಧರಿಸಿದೆ. ಇದರ ಅಂಗವಾಗಿ ಅಕ್ಟೋಬರ್ ೧೮ರಂದು ಬೆಳಿಗ್ಗೆ ೯ರಿಂದ ಮಧ್ಯಾಹ್ನ ೧ ಗಂಟೆಯವರೆಗೆ ಆಸ್ಪತ್ರೆ ಎದುರು ಧರಣಿ ನಡೆಸುವುದಾಗಿ ವೇದಿಕೆಯ ಪದಾಧಿ ಕಾರಿಗಳು ಕುಂಬಳೆ ಪ್ರೆಸ್ ಫಾರ್ಮ್‌ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆಸ್ಪತ್ರೆಯ ಸಮಗ್ರ ಅಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ವೇದಿಕೆ ಕಳೆದ ಮೂರೂವರೆ ವರ್ಷಗಳಿಂದ ಹೋರಾಟ ನಡೆಸುತ್ತಿದೆ. ೨೦೨೦ …