ಕಾಡಾನೆ ತುಳಿತಕ್ಕೆ ಓರ್ವ ಬಲಿ: ಜನರು ಭೀತಿಯಲ್ಲಿ
ಕಣ್ಣೂರು: ಕಣ್ಣೂರಿಗೆ ಸಮೀಪದ ಉಳಿಕ್ಕಲ್‌ನಲ್ಲಿ ಕಾಡಿನಿಂದ ಊರಿಗೆ ಇಳಿದು ಭೀತಿ ಸೃಷ್ಟಿಸಿರುವ ಕಾಡಾನೆ ಯೊಂದು ಜನರ ಮೇಲೆರಗತೊಡಗಿದ್ದು, ಅದರ ತುಳಿತಕ್ಕೆ ಒಳಗಾಗಿ ಓರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಉಳಿಕ್ಕಲ್ ನೆಲ್ಲಿಕಾಂ ಪೊಯಿಲ್ ನಿವಾಸಿ ಆ ದೃಶ್ಶೇರಿ ಜೋಸ್ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಅಲ್ಲೇ ಪಕ್ಕದ ಇಗರ್ಜಿಯೊಂದರ ಹಿತ್ತಿಲಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಶರೀರವಿಡೀ ನುಚ್ಚುನೂರಾಗಿ ಕೈ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಡಾನೆ ಹಾವಳಿ ಪ್ರದೇಶದಲ್ಲಿ ಜೋಸ್‌ರನ್ನು ಆ ಪರಿಸರದ ಓರ್ವರು ನಿನ್ನೆ ಕಂಡಿದ್ದರು. ಅಲ್ಲಿ …