ಪತ್ನಿಯನ್ನು ವಿದೇಶಕ್ಕೆ ಕಳುಹಿಸಿ ಹಿಂತಿರುಗುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ತೃಶೂರು: ದುಬಾಯಿಯಿಂದ ರಜೆಯಲ್ಲಿ ಊರಿಗೆ ತಲುಪಿದ ಯುವಕ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ವೆಳಿಯನ್ನೂರು ವಟ್ಟಪ್ಪುಳಕ್ಕಾವ್ ನಿವಾಸಿ ಅರುಣ್ ಗೋಪಿ ಮೃತಪಟ್ಟ ಯುವಕ. ಪತ್ನಿಯನ್ನು ವಿದೇಶಕ್ಕೆ ಕಳುಹಿಸಿದ ಬಳಿಕ ಹಿಂತಿರುಗುವಾಗ ಅಪಘಾತ ಸಂಭವಿಸಿದೆ. ಅರುಣ್ ಗೋಪಿಯ ಬೈಕ್ ನಿಲ್ಲಿಸಿದ್ದ ಮಿನಿ ಲಾರಿಯ ಹಿಂದುಗಡೆಗೆ ಢಿಕ್ಕಿಯಾಗಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ತಲುಪಿ ಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ ಕಾರ್ಯಾಗಾರ

ಕುಂಬ್ಡಾಜೆ: ಬಿಜೆಪಿ ಕುಂಬ್ಡಾಜೆ ಪಂ. ಸಮಿತಿ ನೇತೃತ್ವದಲ್ಲಿ ಪಕ್ಷದ ಮುಖಂಡರ ಕಾರ್ಯಾಗಾರ ಜರಗಿದ್ದು, ರಾಜ್ಯ ಕಾರ್ಯದರ್ಶಿ ಕೆ. ಶ್ರೀಕಾಂತ್ ಉದ್ಘಾ ಟಿಸಿದರು. ಕುಂಬ್ಡಾಜೆ ಪಂಚಾಯತ್‌ನಲ್ಲಿ ಅಧಿಕಾರವನ್ನು ಮರಳಿ ಪಡೆಯಲು ಕಾರ್ಯಕರ್ತರು ವಾರ್ಡ್ ಮಟ್ಟದಲ್ಲಿ ಸಕ್ರಿಯರಾಗಿ ಮನೆ ಸಂಪರ್ಕ ನಡೆಸಿ ಮುಂದಿನ ಚುನಾವಣೆಗೆ ಮುಂಚಿತ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊ ಳ್ಳಲು ಬಾಕಿ ಇರುವವರನ್ನು ಸೇರಿಸಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಶಶಿಧರ ತೆಕ್ಕೆಮೂಲೆ ಅಧ್ಯಕ್ಷತೆ ವಹಿಸಿದರು. ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ, ಮಂಡಲ ಪ್ರಧಾನ ಕಾರ್ಯದರ್ಶಿ …

ಮಜಿಬೈಲ್‌ನಲ್ಲಿ ತೋಡಿನ ಕಟ್ಟ ಒಡೆದು ಅಪಾರ ನಾಶನಷ್ಟ: ಸ್ಥಳೀಯರಿಂದ ಪುನರ್ ನಿರ್ಮಾಣ; ನಷ್ಟ ಪರಿಹಾರಕ್ಕೆ ಆಗ್ರಹ

ಮಂಜೇಶ್ವರ: ಮೀಂಜ ಪಂಚಾ ಯತ್‌ನ ಮಜಿಬೈಲು ಪ್ರದೇಶದಲ್ಲಿ ವ್ಯಾಪಕ ಮಳೆಗೆ ತೋಡಿನ ಕಟ್ಟ ಒಡೆದು ಪ್ರವಾಹೋಪಾದಿಯಲ್ಲಿ ನೀರು ಹರಿದ ಹಿನ್ನೆಲೆಯಲ್ಲಿ ಅಪಾರ ನಾಶನಷ್ಟದ ಜೊತೆಗೆ ಹಲವಾರು ವಾಹನಗಳು ಕೂಡಾ ನೀರಿಗೆ ಕೊಚ್ಚಿ ಹೋಗಿದೆ.  ಸುಮಾರು ೭೫ ಹೆಕ್ಟೆರ್ ಭತ್ತ ಕೃಷಿಗೆ ನೀರು ಹರಿದು ನಾಶವಾಗಿದ್ದು, ಈ ಪ್ರದೇಶದ ೧೫೦ರಷ್ಟು ಕುಟುಂಬಗಳು ಸಂಚರಿಸುತ್ತಿದ್ದ ದಾರಿ ಕೂಡಾ ನೀರುಪಾಲಾಗಿ ಸಮಸ್ಯೆ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ತೋಡಿಗೆ ಕಟ್ಟ ಕಟ್ಟಿ ನೀರ ಹರಿವನ್ನು ತಡೆಯಲು ಸ್ಥಳೀಯರು ಮುಂದಾಗಿದ್ದು, ಈಗಾಗಲೇ ಎರಡೂವರೆ ಲಕ್ಷ …

ಡಿಸಿಸಿ ಮಾಜಿ ಅಧ್ಯಕ್ಷ ವೆಳ್ತಂಬು ಸಂಸ್ಮರಣೆ

ಪೈವಳಿಕೆ: ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ, ಹಿರಿಯ ಸಹಕಾರಿ ವೆಳ್ತಂಬು ಅವರ ಸಂಸ್ಮರಣೆ ದಿನವನ್ನು ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಆಚರಿಸಲಾಯಿತು. ಪುಷ್ಪಾರ್ಚನೆಯ ಬಳಿಕ ಸಂಸ್ಮರಣಾ ಸಭೆ ನಡೆಸಲಾಯಿತು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ಏದಾರ್ ಉದ್ಘಾಟಿಸಿದರು. ರಾಘವೇಂದ್ರ ಭಟ್, ಗಂಗಾಧರ ನಾಯ್ಕ್, ಎಡ್ವರ್ಡ್ ಡಿ ಸೋಜ, ಮಹಮ್ಮದ್, ನೌಶಾದ್ ಪಟ್ಲ ಉಪಸ್ಥಿತರಿದ್ದರು. ಶಾಜಿ ಎನ್.ಸಿ. ಸ್ವಾಗತಿಸಿ, ಶಿವರಾಮ ಶೆಟ್ಟಿ ವಂದಿಸಿದರು.

ಬಿಕೆಎಂಯು ರಾಷ್ಟ್ರೀಯ ಆಂದೋಲನ: ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ

ಕಾಸರಗೋಡು: ಕೇಂದ್ರ ಸರಕಾರದ ಜನದ್ರೋಹ ನೀತಿ ವಿರುದ್ಧ, ಕೃಷಿ ಕಾರ್ಮಿ ಕರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊಂಡು ಬಿಕೆಎಂಯು ದೇಶವ್ಯಾಪಕವಾಗಿ ಪ್ರತಿಭಟನಾ ದಿನಾಚರಣೆ ನಡೆಸಿದೆ. ಇದರಂಗವಾಗಿ ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ಕೇಂದ್ರ ಸರಕಾರಿ ಕಚೇರಿಗಳಿಗೆ ಮಾರ್ಚ್, ಧರಣಿ ನಡೆಸಲಾಯಿತು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ರಾಷ್ಟ್ರೀಯ ಕಾನೂನು ರೂಪಿಸಬೇಕು, ದೇಶದಲ್ಲಿ ಲಭ್ಯವಾದ ಹೆಚ್ಚುವರಿ ಭೂಮಿಯನ್ನು, ಸರಕಾರಿ ಭೂಮಿಯನ್ನು ಭೂರಹಿತರಿಗೆ ವಿತರಿಸಬೇಕು, ಖಾಸಗಿ ವಲಯದಲ್ಲಿ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ, ಒಬಿಸಿ ವಿಭಾಗಗಳಿಗೆ ಮೀಸಲಾತಿ ಏರ್ಪಡಿಸಬೇಕು, ಸಾರ್ವಜನಿಕ ಸಮೀಕ್ಷೆಯ ಜೊತೆಗೆ …

ಪಾತೂರು ಸಾರ್ವಜನಿಕ ಶೌಚಾಲಯ ಉದ್ಘಾಟನೆ

ವರ್ಕಾಡಿ: ಪಂಚಾಯತ್‌ನ 2024-2025 ನೇ ವಾರ್ಷಿಕ ಯೋ ಜನೆಯಲ್ಲಿ ಒಳಪಡಿಸಿ 3 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಪಾತೂರು ಜಂಕ್ಷನ್ ಸಾರ್ವಜನಿಕ ಶೌಚಾಲಯ ವನ್ನು ಪಾತೂರು ವಾರ್ಡ್ ಪ್ರತಿನಿಧಿ ಅಬ್ದುಲ್ ಮಜೀದ್ ಬಿ.ಎ ಉದ್ಘಾಟಿ ಸಿದರು. ಅಂಗನವಾಡಿ ಕಾರ್ಯಕರ್ತೆ ರಾಜೇಶ್ವರಿ, ಆಶಾ ಕಾರ್ಯಕರ್ತೆ ಶಶಿಕಲಾ, ಹಸಿರು ಕ್ರಿಯಾ ಸಮಿತಿ ಸದಸ್ಯೆ ಮಾಲತಿ, ಎ.ಡಿ.ಎಸ್ ಅಧ್ಯಕ್ಷೆ ಮೀನಾಕ್ಷಿ, ವಾರ್ಡ್ ಶುಚಿತ್ವ ಸಮಿತಿ ಸದಸ್ಯರಾದ ಅಬ್ದುಲ್ ಕರೀಂ, ಅಬ್ದುಲ್ಲ ಬಹ್ರೃನ್, ಸವಾದ್ ಬದಿಮಲೆ, ಹನೀಫ್ ಬದಿಮಲೆ, ಮಮತಾ, ಕುಟುಂಬಶ್ರೀ ಸದಸ್ಯೆಯರು, …

ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತ್ಯು

ಉಪ್ಪಳ: ರಸ್ತೆ ದಾಟುತ್ತಿದ್ದ ವ್ಯಕ್ತಿ ಕಾರು ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ವಾಮಂಜೂರು ಕಜೆ ನಿವಾಸಿ ದಿ| ಮೂಸಕುಂಞಿ ಎಂಬವರ ಪುತ್ರ ಮೊಹಮ್ಮದ್ ಸಾದಿಕ್ (40) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 10.30ಕ್ಕೆ ಪೊಸೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತವುಂಟಾಗಿದೆ. ಮೊಹಮ್ಮದ್ ಸಾದಿಕ್ ರಸ್ತೆ ದಾಟುತ್ತಿದ್ದಾಗ ಮಂಜೇಶ್ವರ ಭಾಗದಿಂದ ಹೊಸಂಗಡಿಯತ್ತ ಸಂಚರಿಸುತ್ತಿದ್ದ ಇನೋವ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಮೊಹಮ್ಮದ್ ಸಾದಿಕ್‌ರನ್ನು ಮಂಗಳೂರಿನ ಆಸ್ರತ್ರೆಗೆ ಸಾಗಿಸುತ್ತಿದ್ದಂತೆ ದಾರಿ ಮಧ್ಯೆ ಸಾವು ಸಂಭವಿಸಿದೆ. ಮೃತದೇಹವನ್ನು …

ಬೃಹತ್ ಪ್ರಮಾಣದ ಗೋವಾ ನಿರ್ಮಿತ ಮದ್ಯ ವಶ: ಇಬ್ಬರ ವಿರುದ್ಧ ಕೇಸು; ಯುವತಿ ಸೆರೆ

ಕಾಸರಗೋಡು: ತೆಕ್ಕಿಲ್ ಗ್ರಾಮದ ಚರುಗರದಲ್ಲಿ ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಗ್ರೇಡ್) ಸಿ.ಕೆ. ವಿ. ಸುರೇಶ್‌ರ ನೇತೃತ್ವದ ತಂಡ ಮೊನ್ನೆ ರಾತ್ರಿ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ 175.68 ಲೀಟರ್ ಗೋವಾ ಮದ್ಯ ಪತ್ತೆ ಹಚ್ಚಿ ವಶಪಡಿಸಿದೆ. ಇದನ್ನು ೨೦ ಕಾರ್ಡ್‌ಬೋರ್ಡ್ ಪೆಟ್ಟಿಗೆಗಳಲ್ಲಿ  ಬಚ್ಚಿಡಲಾಗಿತ್ತು. ಇದಕ್ಕೆ ಸಂಬಂಧಿಸಿ ತೆಕ್ಕಿಲ್ ಪರಂಬ ಚರುಗರದ ವಳ್ಳಿಪ್ಲಾಕಲ್ ವೀಟಿಲ್‌ನ ವಿನಿತ (36) ಮತ್ತು ಪೆರಿಯಾ ನಾಲೇಕರ ನಿವಾಸಿ ವಿನೋದ್ ಕುಮಾರ್ ಎನ್. ಎಂಬಿಬ್ಬರ ವಿರುದ್ಧ  …

ಮನೆಯಿಂದ 5೦,೦೦೦ ರೂ., ಸಿಸಿ ಟಿವಿ ಉಪಕರಣ ಕಳವು

ಪೈವಳಿಕೆ:  ಮನೆಯಿಂದ 50 ಸಾವಿರ ರೂಪಾಯಿ ನಗದು ಹಾಗೂ ೨೫ ಸಾವಿರ ರೂಪಾಯಿ ಮೌಲ್ಯದ ಸಿಸಿ ಟಿವಿ  ಡಿವಿಆರ್ ಕಳವಿಗೀಡಾದ ಬಗ್ಗೆ ದೂರಲಾಗಿದೆ. ಪೈವಳಿಕೆ ಕಳಾಯಿ ರಸ್ತೆಯ ಅಜೆಕಳದಲ್ಲಿ ಅಶೋಕ್ ಕುಮಾರ್ ಶೆಟ್ಟಿ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ.  ಅಶೋಕ್ ಕುಮಾರ್ ಶೆಟ್ಟಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಮನೆಯಲ್ಲಿ ಇವರ ತಂದೆ ಮಾತ್ರ ವಾಸಿಸುತ್ತಿದ್ದಾರೆ. ಈ ತಿಂಗಳ 7ರಂದು ರಾತ್ರಿ ಕಳವು ನಡೆದ ಬಗ್ಗೆ ತಿಳಿದುಬಂದಿದೆ. ೮ರಂದು ಬೆಳಿಗ್ಗೆ ಸಮೀಪದಲ್ಲಿ ವಾಸಿಸುವ ಸಂಬಂಧಿಕರು ಅಶೋಕ್ ಕುಮಾರ್ ಶೆಟ್ಟಿಯವರ …

ಪೊಲೀಸ್ ಕಸ್ಟಡಿಯಿಂದ ವಾರಂಟ್ ಆರೋಪಿ ಪರಾರಿ

ಮಂಜೇಶ್ವರ: ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿಯೋರ್ವ ಪರಾರಿಯಾಗಿದ್ದಾನೆ. ಹೊಸಬೆಟ್ಟು ಸಲ್ಮಾ ಮಂಜಿಲ್‌ನ ಸಿದ್ಧಿಕ್ ಸಾರಿಕ್ ಫರ್ಹಾನ್ (29) ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸುತ್ತಿರುವುದಾಗಿ  ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ. 2019ಕ್ಕೆ ಮಂಜೇಶ್ವರ ಪೊಲೀಸರು ದಾಖಲಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸಿದ್ಧಿಕ್ ಸಾರಿಕ್ ಫರ್ಹಾನ್ ವಾರಂಟ್ ಆರೋಪಿಯಾಗಿದ್ದಾನೆ. ಈತನನ್ನು ಮೊನ್ನೆ ಸಂಜೆ ಪೊಲೀಸರು ಸೆರೆ ಹಿಡಿದಿದ್ದರು. ಬಳಿಕ ಮಂಜೇಶ್ವರ ಠಾಣೆಯಲ್ಲಿ ಈತನನ್ನು ಪೊಲೀಸ್ ಕಾವಲಿನಲ್ಲಿರಿಸಲಾಗಿತ್ತು. ನಿನ್ನೆ ಮುಂಜಾನೆ 5.30ರ ವೇಳೆ ಈತ ಕುಡಿಯಲು ನೀರು ಕೇಳಿದ್ದನೆನ್ನ ಲಾಗಿದೆ. ಇದರಂತೆ ನೀರು ತರಲು …