ನವಕೇರಳ ಸದಸ್ಸ್: ಕಾಸರಗೋಡು ಮಂಡಲ ಸ್ವಾಗತ ಸಮಿತಿ ರಚನೆ

ಕಾಸರಗೋಡು: ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು, ಮುಂದಿನ ಅಭಿವೃದ್ಧಿ ದೃಷ್ಟಿಕೋನಗಳನ್ನು ಜನರಿಗೆ ತಲುಪಿಸಲು ಜನರೊಂದಿಗೆ ಚರ್ಚಿಸಲು ರಾಜ್ಯದ ೧೪೦ ಮಂಡಲಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರುಗಳ ನೇತೃತ್ವದಲ್ಲಿ ನಡೆಸುವ ನವಕೇರಳ ಸದಸ್ಸ್ ಈ ತಿಂಗಳ ೧೯ರಂದು ಬೆಳಿಗ್ಗೆ ಕಾಸರಗೋಡು ಮಂಡಲದಲ್ಲಿ ನಡೆಯಲಿದೆ. ಇದರ ಯಶಸ್ವಿಗೆ ಸ್ವಾಗತ ಸಮಿತಿ ರೂಪೀಕರಣ ಸಭೆ ನಗರಸಭಾ ಪುರಭವನದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಾನವಾಸ್ ಪಾದೂರು ಅಧ್ಯಕ್ಷತೆ ವಹಿಸಿದರು. ರಾಜ್ಯ ಬಂದರು ಖಾತೆ ಸಚಿವ ಅಹಮ್ಮದ್ …

ಸಂಸ್ಕೃತಿ ಭವನದಲ್ಲಿ ಮಾದಕವಿರೋಧಿ ದಿನಾಚರಣೆ

ಬದಿಯಡ್ಕ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಮತ್ತು ಜನ ಜಾಗೃತಿ ವೇದಿಕೆ ಬದಿಯಡ್ಕ ಇದರ ಸಹಯೋಗದೊಂದಿಗೆ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಮಾದಕ ವಿರೋಧಿ ದಿನಾಚರಣೆ ನಡೆಯಿತು. ಜಿಲ್ಲಾ ಜನಜಾಗೃತಿ ವೇದಿಕೆ ಬದಿಯಡ್ಕ ವಲಯದ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿ ಸಿದರು.ಬದಿಯಡ್ಕ ಆರಕ್ಷಕ ಠಾಣೆಯ ಠಾಣಾಧಿಕಾರಿ ಶಿನು ಮಾತನಾಡಿದರು. ಒಕ್ಕೂಟದ ವಲಯ ಅಧ್ಯಕ್ಷ ರೋಹಿತಾಕ್ಷ ಅಧ್ಯಕ್ಷತೆ ವಹಿಸಿದ್ದರು. ಬಾಲಕೃಷ್ಣ ಸುವರ್ಣ ಬದಿಯಡ್ಕ, ವಲಯದ ಮೇಲ್ವಿಚಾರಕರಾದ ದಿನೇಶ್ ಕೊಕ್ಕಡ ಶುಭ ಹಾರೈಸಿದರು. ಸೇವಾಪ್ರತಿನಿಧಿಗಳಾದ ಜಲಜಾಕ್ಷಿ ಸ್ವಾಗತಿಸಿ, ಕಮಲಾಕ್ಷಿ …

ಧರ್ಮತ್ತಡ್ಕದಲ್ಲಿ ಉಪಜಿಲ್ಲಾ ಶಾಲಾ ಕಲೋತ್ಸವ ವಿವಿಧ ಸಮಿತಿಗಳ ಸಮಾಲೋಚನಾ ಸಭೆ

ಧರ್ಮತ್ತಡ್ಕ; ನವಂಬರ್ ೭ರಿಂದ ೧೦ರ ವರೆಗೆ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಗಳಲ್ಲಿ ನಡೆಯಲಿರುವ ೬೨ ನೇ ಕೇರಳ ರಾಜ್ಯ ಉಪಜಿಲ್ಲಾ ಶಾಲಾ ಕಲೋತ್ಸವದ ಅಂಗವಾಗಿ ರೂಪುಗೊಂಡ ವಿವಿಧ ಸಮಿತಿಗಳ ಸಮಾಲೋಚನಾ ಸಭೆ ಇಲ್ಲಿನ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಮಂಜೇಶ್ವರ ವಿದ್ಯಾಭ್ಯಾಸ ಉಪಜಿಲ್ಲೆಯ ಪ್ರಭಾರ ಸಹಾಯಕ ವಿದ್ಯಾಧಿಕಾರಿ ಜಿತೇಂದ್ರ ಅಧ್ಯಕ್ಷತೆ ವಹಿಸಿ ಸಲಹೆ ಸೂಚನೆಗಳನ್ನು ನೀಡಿದರು. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಡಿ ಸುಬ್ಬಣ್ಣ ಆಳ್ವ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶ ವಿದೇಶಗಳಲ್ಲಿ ಉತ್ತಮ ನೆಲೆಯಲ್ಲಿರುವ ಸಂಸ್ಥೆಯ ಹಳೆ ವಿದ್ಯಾರ್ಥಿಗಳು …

ಗಲ್ಫ್‌ನಿಂದ ಕಳುಹಿಸಿಕೊಟ್ಟ ಚಿನ್ನ ಸಹಿತ ನಾಪತ್ತೆಯಾದ ಯುವಕ ಪೊಲೀಸ್ ಠಾಣೆಯಲ್ಲಿ ಶರಣು

ಬದಿಯಡ್ಕ: ಗಲ್ಫ್‌ನಿಂದ ಕಳುಹಿಸಿ ಕೊಟ್ಟ ಚಿನ್ನ ಸಹಿತ ನಾಟಕೀಯ ರೀತಿಯಲ್ಲಿ ನಾಪತ್ತೆಯಾಗಿದ್ದ ಯುವಕ ಮರಳಿ ಬಂದಿದ್ದಾನೆ. ಮುನಿಯೂರು ನಿವಾಸಿಯಾದ ೨೮ರ ಹರೆಯದ ಯುವಕ ನಿನ್ನೆ ಬೆಳಿಗ್ಗೆ ಬದಿಯಡ್ಕ ಪೊಲೀಸ್ ಠಾಣೆಗೆ  ತಲುಪಿ ಶರಣಾಗಿದ್ದಾನೆ. ಡಿವೈಎಸ್ಪಿ ಪಿ.ಕೆ. ಸುಧಾಕರನ್ ಸಹಿತ ಹಿರಿಯ ಪೊಲೀಸ್ ಅಧಿ ಕಾರಿಗಳು ತನಿಖೆಗೊಳಪಡಿಸಿದ ಬಳಿಕ ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕಳೆದ ತಿಂಗಳ ೨೫ರಂದು ಯುವಕ ನಾಪತ್ತೆಯಾಗಿದ್ದನು. ಶಾರ್ಜಾದಿಂದ ಬಂದು ಕಲ್ಲಿಕೋಟೆ  ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಯುವಕ ಮನೆಗೆ ಫೋನ್ ಕರೆ ಮಾಡಿ …

೩೪ ಬಾರಿ ಮುಂದೂಡಲ್ಪಟ್ಟ ಲಾವ್ಲಿನ್ ಹಗರಣ ವಾದ ಇಂದು ಸುಪ್ರೀಂಕೋರ್ಟ್‌ನಲ್ಲಿ ಪರಿಗಣನೆಗೆ

ಹೊಸದಿಲ್ಲಿ: ಒಂದಲ್ಲ ಒಂದು ಕಾರಣಗಳಿಂದಾಗಿ ಸತತವಾಗಿ ೩೪ ಬಾರಿ ಮುಂದೂಡಲ್ಪಟ್ಟಿದ್ದ ಕೇರಳದಲ್ಲಿ ವರ್ಷಗಳ ಹಿಂದೆ ಭಾರೀ ರಾಜಕೀಯ ಕೋಲಾಹಲವೆಬ್ಬಿಸಿದ್ದ  ಮಹಾ ಭ್ರಷ್ಟಾಚಾರ ಗಳಲ್ಲೊಂದಾದ ಎಸ್‌ಎನ್‌ಸಿ ಲಾವ್ಲಿನ್ ಹಗರಣದ ಅರ್ಜಿ ಮೇಲಿನ ವಾದ ಆಲಿಸುವಿಕೆಯನ್ನು ಸುಪ್ರೀಂಕೋರ್ಟ್ ಇಂದು ಮತ್ತೆ ಪರಿಗಣಿಸಿದೆ. ನ್ಯಾಯಮೂರ್ತಿ  ಸೂರ್ಯಕಾಂತ್, ನ್ಯಾಯಮೂರ್ತಿ ದೀಪಾಂಕರ್  ದತ್ತಾ ಮತ್ತು ನ್ಯಾಯಮೂರ್ತಿ ಉಜ್ಜಾಲ್ ದುಯಾಲ್  ಎಂಬ ವರನ್ನೊಳಗೊಂಡ ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠ ಈ ಅರ್ಜಿಯನ್ನು ಇಂದು ಪರಿಶೀಲಿಸುತ್ತಿದೆ.  ಅಂದು ರಾಜ್ಯ ವಿದ್ಯುತ್ ಖಾತೆ ಸಚಿವರಾಗಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯ …

ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೪ ಲಕ್ಷ ರೂ., ಚಿನ್ನದ ಗಟ್ಟಿ ವಶ

ಕಾಸರಗೋಡು: ಸರಿಯಾದ ದಾಖ ಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ ೧೪.೧೨ ಲಕ್ಷ ರೂ. ನಗದು ಮತ್ತು ಕರಗಿಸಿದ ರೂಪದಲ್ಲಿದ್ದ ಆರು ಚಿನ್ನದ ಗಟ್ಟಿಗಳನ್ನು ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ.ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಗರದಿಂದ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಈ ಮಾಲು ಕೈವಶವಿರಿಸಿಕೊಂಡಿದ್ದ ಕಾಸರಗೋಡು ತೆರುವತ್ ಹೊನ್ನೆಮೂಲೆ ಬಾವಿಕ್ಕೆರೆ  ಹೌಸ್‌ನ ಅಹಮ್ಮದ್ ಇರ್ಫಾನ್ (೩೦) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  ನಂತರ ಆತನ ಹೇಳಿಕೆಯನ್ನು ದಾಖಲಿಸಿಕೊಂ ಡು ಆತನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.  ಕಾಸರಗೋಡು ನಗರದ …

ರಸ್ತೆಯ ಮೋರಿ ಸಂಕ ಕುಸಿತ: ಮಧೂರಿನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ

ಮಧೂರು: ರಸ್ತೆಯ ಮೋರಿಸಂಕ ಕಸಿದುದರಿಂದ ಮಧೂರಿನಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಮಧೂರು-ನೀರ್ಚಾಲು ರಸ್ತೆಯಲ್ಲಿ ಮಧೂರು ಪೇಟೆಯಲ್ಲೇ ಇರುವ ಮೋರಿಸಂಕ ಕುಸಿದಿದೆ. ಇದರಿಂದ ಆ ಮೂಲಕ ಸಂಚಾರಕ್ಕೆ ತಡೆಯೊಡ್ಡಿದ್ದು, ಬದಲಿ ವ್ಯವಸ್ಥೆ ಏರ್ಪಡಿಸಲಾಗಿದೆ. ಆದರೆ ಬದಲಿ ವ್ಯವಸ್ಥೆ ಏರ್ಪಡಿಸಿದ ಸ್ಥಳ ಇಕ್ಕಟ್ಟಾಗಿದ್ದು, ಇದರಿಂದ ವಾಹನಗಳು ಸಂಚಾರಕ್ಕೆ ಸಂಕಷ್ಟ ಎದುರಾಗಿದೆ. ಬಸ್ ಸಹಿತ ಘನ ವಾಹನಗಳಿಗೆ ಇಲ್ಲಿ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಮಳೆ ಸುರಿಯುವ ವೇಳೆ ಇಲ್ಲಿ ಕೆಸರಿನ ಹಳ್ಳ ನಿರ್ಮಾಣ ವಾಗುತ್ತಿದ್ದು,  ದ್ವಿ ಚಕ್ರ ವಾಹನಗಳ ಸಂಚಾರಕ್ಕೆ …

ಹೊಸಪೇಟೆಯಲ್ಲಿ ಭೀಕರ ಅಪಘಾತ ೭ ಮಂದಿ ಮೃತ್ಯು

ಬೆಂಗಳೂರು: ಕರ್ನಾಟಕದ ಹೊಸಪೇಟೆ ಬಳಿ ನಿನ್ನೆ ಸಂಭವಿಸಿದ ವಾಹನ ಅಪಘಾತದಲ್ಲಿ ೭ ಮಂದಿ ಸಾವನ್ನಪ್ಪಿದ್ದಾರೆ. ಹೊಸಪೇಟೆ ಹೊರವಲಯದ ವ್ಯಾಸನಕೇರಿ ಬಳಿ ಎರಡು ಲಾರಿ ಹಾಗೂ ಕ್ರೂಸರ್ ವಾಹನ ಮಧ್ಯೆ ಅಪಘಾತವುಂ ಟಾಗಿದೆ. ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುತ್ತಿದ್ದವರ ವಾಹನ ಅಪಘಾತದಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿದ್ದ ಒಂದೇ ಕುಟುಂಬದ ೭ ಮಂದಿ ಮೃತಪಟ್ಟಿದ್ದಾರೆ. ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟವರು ಹೊಸಪೇಟೆ ಉಕ್ಕಡಕೇರಿ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

೬೧.೬೦ ಲಕ್ಷ ರೂ. ಮೌಲ್ಯದ ಚಿನ್ನ ವಶ: ಚೆಂಗಳ ನಿವಾಸಿ ಸೆರೆ

ಕಾಸರಗೋಡು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೬೧,೬೦,೦೫೦ ರೂ. ಮೌಲ್ಯದ ೧೦೫೩ ಗ್ರಾಂ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಚೆಂಗಳ ನಿವಾಸಿ ಮೊಹಮ್ಮದ್ ಮುಸ್ತಫಾ ಅಬ್ದುಲ್ಲ ಎಂಬಾತನನ್ನು ಬಂಧಿಸಲಾಗಿದೆ. ಈತ ಅಬುದಾಬಿಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಮಂಗಳೂರು ನಿಲ್ದಾಣದಲ್ಲಿ ಬಂದಿಳಿದಿದ್ದನು. ಕಸ್ಟಮ್ಸ್ ತಂಡ  ದೇಹ ತಪಾಸಣೆ ನಡೆಸಿದಾಗ ನಾಲ್ಕು ಚಿನ್ನದ ರೂಪದ ಮಾತ್ರೆಗಳನ್ನು ಆತನ ಗುದದ್ವಾರ ಬಳಿ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಅದರಂತೆ ಆತನನ್ನು ಸೆರೆಹಿಡಿದು ಮಾಲು ವಶಪಡಿಸಲಾಗಿ ದೆಯೆಂದು …

ಸಿಗಬೇಕಾದ ಹಣ ಕೇಳಲು ಹೋದ ಗೃಹಿಣಿಗೆ ಗಂಭೀರ ಹಲ್ಲೆ

ಮುಳ್ಳೇರಿಯ: ಸಿಗಬೇಕಾದ ಹಣ ಕೇಳಲು ಹೋದ ಗೃಹಿಣಿಗೆ ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ. ಕೈಕಾಲುಗಳಲ್ಲಿ ಬಿರುಕು ಬಿಟ್ಟು ಗಂಭೀರ ಸ್ಥಿತಿಯಲ್ಲಿರುವ ಗೃಹಿಣಿಯನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅಡೂರು ದೇವರಡ್ಕ ಒಡ್ಯನಡ್ಕದ ಸುಬ್ಬಮ್ಮ (೬೩) ಹಲ್ಲೆಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಘಟನೆಗೆ ಸಂಬಂಧಿಸಿ ಒಡ್ಯನಡ್ಕದ ಸುಂದರನ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇತ್ತೀಚೆಗೆ ಸುಬ್ಬಮ್ಮರ ನೆಯಿಂದ ಕಾಳುಮೆಣಸು ಕಳವಿಗೀಡಾಗಿರುವುದಾಗಿ ದೂರಲಾಗಿದೆ. ಸುಂದರನ ಸಹೋದರ ಜಯರಾಮ ಕಳವು ನಡೆಸಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಎರಡು …