ಐಲ ಕ್ಷೇತ್ರದಲ್ಲಿ ನೂತನ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆ ಉದ್ಘಾಟನೆ ೧೫ರಂದು

ಉಪ್ಪಳ: ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಅಡುಗೆ ಶಾಲೆ ಮತ್ತು ಅನ್ನಪೂರ್ಣ ಭೋಜನ ಶಾಲೆಯ ಉದ್ಘಾಟನಾ ಸಮಾರಂಭ ಈ ತಿಂಗಳ ೧೫ರಂದು ಬೆಳಿಗ್ಗೆ ೧೧ ಗಂಟೆಗೆ ಶ್ರೀ ದುರ್ಗಾಪರಮೇಶ್ವರೀ ಕಲಾ ಭವನದಲ್ಲಿ ನಡೆಯಲಿದೆ. ಶ್ರೀ ಕ್ಷೇತ್ರದ ತಂತ್ರಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿ ಆಶೀರ್ವಚನ ನೀಡುವರು. ಬೆಂಗಳೂರು ಉದ್ಯಮಿ ಗಿರೀಶ್ ರಾವ್ ನಿಧಿಮುಂಡ ಅಧ್ಯಕ್ಷತೆ ವಹಿಸುವರು. ಮುಂಬಯಿ ಉದ್ಯಮಿ ರಘುರಾಮ ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉಮೇಶ್ …

ಪೆರಡಾಲ ನವಜೀವನ ಶಾಲೆಯಲ್ಲಿ ಪಕ್ಷಿವೀಕ್ಷಣಾ ಶಿಬಿರ

ಬದಿಯಡ್ಕ: ಪ್ರಕೃತಿಯಲ್ಲಿ ವಾಸಿಸುವ ಸಕಲ ಜೀವಜಾಲಗಳೂ ಒಂದಕ್ಕೊAದು ಪೂರಕವಾಗಿ ಜೀವನವನ್ನು ನಡೆಸುತ್ತವೆ. ಕಾಡನ್ನು ನಾಶಮಾಡದೆ ನಮ್ಮ ಪರಿಸರದಲ್ಲಿರುವ ಪ್ರಾಣಿ ಪಕ್ಷಿಗಳ ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪ್ರಸಿದ್ಧ ಪಕ್ಷಿ ತಜ್ಞ, ಉರಗತಜ್ಞ ಹಾಗೂ ಪರಿಸರ ಹೋರಾಟಗಾರ ರಾಜು ಕಿದೂರು ಅಭಿಪ್ರಾಯಪಟ್ಟರು.ಪೆರಡಾಲ ನವಜೀವನ ಶಾಲೆಯಲ್ಲಿ ಭಾನುವಾರ ಬೆಳಗ್ಗೆ ನಡೆದ ಪಕ್ಷಿ ವೀಕ್ಷಣಾ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪಕ್ಷಿ ವೀಕ್ಷಣೆಯ ಸಂದರ್ಭ ಪಾಲಿಸಬೇಕಾದ ನಿಯಮಗಳನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಸ್ವರಗಳ ಮೂಲಕ ಅವುಗಳನ್ನು ಅರಿಯುವ …

ಮುಂದುವರಿಯುತ್ತಿರುವ ಯುದ್ಧ: ಬೆಂಬಲ ನೀಡಿ ಅಮೆರಿಕಾದ ಯುದ್ಧ ಹಡಗುಗಳು ಇಸ್ರೇಲಿಗೆ

ವಾಷಿಂಗ್ಟನ್: ಪ್ಯಾಲಿಸ್ಟಿನ್‌ನ ಹಮಾಸ್ ಉಗ್ರರು ಇಸ್ರೇಲ್  ಪಟ್ಟಣಗಳ ಮೇಲೆ ಶನಿವಾರ ನಡೆಸಿದ ದಾಳಿಗೆ ಇಸ್ರೇಲ್ ಅದೇ ನಾಣ್ಯದಲ್ಲಿ ಪ್ರತ್ಯುತ್ತರ ನೀಡತೊಡಗಿದ್ದು ಇದೇ ವೇಳೆ ಇಸ್ರೇಲ್‌ಗೆ ಅಗತ್ಯದ ಮಿಲಿಟರಿ ನೆರವು ನೀಡಲು ಅಮೆರಿಕ ಮುಂದಾಗಿದೆ. ಯುನೈಟೆಡ್ ಸ್ಟೇಟ್ಸ್‌ನ ಅನೇಕ ಮಿಲಿಟರಿ ಹಡಗುಗಳು ಮತ್ತು ವಿಮಾನಗಳನ್ನು ಇಸ್ರೇಲ್‌ಗೆ ಕಳುಹಿಸಿಕೊಡಲಾಗಿದೆ ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಅಸ್ಟಿನ್ ತಿಳಿಸಿದ್ದಾರೆ. ಇದರಲ್ಲಿ ಪಡೆವಾಹಕ, ಮಾರ್ಗದರ್ಶಿ  ಕ್ಷಿಪಣಿ ಕ್ರೂಸರ್ ಮತ್ತು ಮಾರ್ಗದರ್ಶಿ ಕ್ಷಿಪಣಿ ನಾಶಕ ನೌಕೆಗಳು ಒಳಗೊಂಡಿವೆ. ಯುಎಸ್‌ಎಯ ವಾಯುಪಡೆಯ ಎಫ್-೩೫, ಎಫ್-೧೫, …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಕಾಂಗ್ರೆಸ್ ಭಿನ್ನಮತೀಯ- ಬಿಜೆಪಿ ಮೈತ್ರಿಗೆ

ಮಂಜೇಶ್ವರ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ್ನು ಕಾಂಗ್ರೆಸ್ ಭಿನ್ನಮತೀಯ- ಬಿಜೆಪಿ ಮೈತ್ರಿ ಕೂಟ ವಶಪಡಿಸಿದೆ. ಸಿಪಿಎಂ- ಕಾಂಗ್ರೆಸ್ – ಲೀಗ್ ಮೈತ್ರಿಕೂಟ ವನ್ನು ಕಾಂಗ್ರೆಸ್ ಭಿನ್ನಮತೀಯರು, ಬಿಜೆಪಿ ಸೇರಿ ಮಣ್ಣುಪಾಲಾಗಿಸಿದೆ. ೧೧ ಮಂದಿಯ ಆಡಳಿತ ಸಮಿತಿಯಲ್ಲಿ ಕಾಂಗ್ರೆಸ್ ಭಿನ್ನಮತೀಯರಿಗೆ ಏಳು, ಬಿಜೆಪಿ ನಾಲ್ಕು ಸೀಟಿನಲ್ಲಿ ಜಯ ಗಳಿಸಿದೆ. ಸಿಪಿಎಂ- ಕಾಂಗ್ರೆಸ್- ಲೀಗ್- ಸಿಪಿಐ- ಕೇರಳ ಕಾಂಗ್ರೆಸ್ ಮೈತ್ರಿಯ ಎಲ್ಲಾ ಉಮೇದ್ವಾರರನ್ನು ಸರಾಸರಿ ೫೦೦ರಷ್ಟು ಮತಗಳ ಅಂತರದಲ್ಲಿ ವಿರುದ್ಧ ವಿಭಾಗ ಸೋಲಿಸಿದೆ. ಕಾಂಗ್ರೆಸ್ ಭಿನ್ನಮತೀಯ ವಿಭಾಗದ ಮುಹಮ್ಮದ್ ಹನೀಫ್, …

ಕಾರು ಢಿಕ್ಕಿ ಹೊಡೆದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ: ರಸ್ತೆ ದಾಟುತ್ತಿದ್ದಾಗ ಅಪರಿಮಿತ ವೇಗದಲ್ಲಿ ಬಂದ ಕಾರು ಡಿಕ್ಕಿಹೊಡೆದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ಮಾಡ ಬಳಿಯ ಕೊಳಕೆ ಗುತ್ತು ನಿವಾಸಿ ರಘುನಾಥ ಆಳ್ವರ ಪುತ್ರ ಮಂಗಳೂರು ನಿಟ್ಟೆ ಕಾಲೇಜು ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ (೧೭) ಮೃತಪಟ್ಟ ದುರ್ದೆವಿ. ಶುಕ್ರವಾರ ಸಂಜೆ ಕಾಲೇಜು ಬಿಟ್ಟು ಮನೆಗೆ ತೆರಳಲು ಉದ್ಯಾವರ ಮಾಡ ಬಸ್ ನಿಲ್ದಾಣದಲ್ಲಿ ಬಸ್ ಇಳಿದು ರಸ್ತೆ ದಾಟುತ್ತಿದ್ದಾಗ ಮಂಗಳೂರಿನಿದ ಕಾಸರಗೋಡು ಭಾಗಕ್ಕೆ ವೇಗದಲ್ಲಿ ತೆರಳುತ್ತಿದ್ದ ಇನೋವ ಕಾರು …

ಕುಬಣೂರಿನಲ್ಲಿ ಯುವಕನನ್ನು ತಡೆದು ನಿಲ್ಲಿಸಿ ಹಲ್ಲೆ

ಕುಂಬಳೆ:  ಜುಗಾರಿ ಕೇಂದ್ರದ ಕುರಿತು ಮಾಹಿತಿ ನೀಡಿರುವುದಾಗಿ ಆರೋಪಿಸಿ ಯುವಕನನ್ನು ತಡೆದು ನಿಲ್ಲಿಸಿ ಕಬ್ಬಿಣದ ಸರಳಿನಿಂದ ಹೊಡೆದು ಗಾಯಗೊಳಿಸಿದ ಘಟನೆ ನಡೆದಿದೆ. ಹಲ್ಲೆಯಿಂದ ಗಾಯಗೊಂಡ ಕುಬಣೂರು ಪಂಜದ ಸುನಿಲ್ ಕುಮಾರ್ (೩೨)ರನ್ನು ಕುಂಬಳೆಯ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ೬ ಗಂಟೆಗೆ ಪಂಜದಲ್ಲಿ ಘಟನೆ ನಡೆದಿದೆ. ಪತ್ನಿಯ ಮನೆಗೆ ನಡೆದು ಹೋಗುತ್ತಿದ್ದ ತನ್ನನ್ನು ಬೈಕ್‌ನಲ್ಲಿ ತಲುಪಿದ ಏಳು ಮಂದಿ ತಂಡ ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ಸುನಿಲ್ ಕುಮಾರ್ ದೂರಿದ್ದಾರೆ. ಕಬ್ಬಿಣದ ಸರಳಿನಿಂದ ತಲೆಗೆ ಹೊಡೆಯಲೆತ್ನಿಸಿದಾಗ ಕೈಯಿಂದ …

ಘರ್ಷಣೆ: ಇಬ್ಬರಿಗೆ ಇರಿತ; ಕೊಲೆಯತ್ನ ಸೇರಿದಂತೆ ಎರಡು ಪ್ರಕರಣ ದಾಖಲು

ಮುಳ್ಳೇರಿಯ: ಮದ್ಯದ ಹೆಸರಲ್ಲಿ ಇಬ್ಬರ ಮಧ್ಯೆ ಪರಸ್ಪರ ಜಗಳವುಂಟಾಗಿ ಅವರಿಬ್ಬರೂ ಚೂರಿ ಇರಿತಕ್ಕೊಳಗಾದ ಘಟನೆ ನಡೆದಿದೆ. ಅಡೂರು ಉರ್ಡೂರು ಎಣೆಪರಂಬ ನಿವಾಸಿ ಗಿರೀಶ್ (೩೬) ಮತ್ತು ಅಡೂರು ವೆಳ್ಳಚ್ಚೇರಿ ನಿವಾಸಿ  ಚಾಣ (೪೦) ಎಂಬವರು ಘರ್ಷಣೆಯಲ್ಲಿ ಇರಿತಕ್ಕೊಳಗಾಗಿದ್ದು ಅವರನ್ನು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಗಿರೀಶ್ ನೀಡಿದ ದೂರಿನಂತೆ ಚಾಣನ ವಿರುದ್ಧ ಆದೂರು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅ. ೭ರಂದು ಸಂಜೆ  ಅಡೂರು ವೆಳ್ಳಚ್ಚೇರಿಯ ಅಂಗಡಿಯೊಂದರ ಎದುರುಗಡೆಯ ಹಿತ್ತಿಲಲ್ಲಿ ನಾನು ಹುಲ್ಲು  ಹೆರೆಯುತ್ತಿದ್ದ ವೇಳೆ …

ಶಾಂತಿಪಳ್ಳ ರಸ್ತೆಯಲ್ಲಿ ಮಗುಚಿ ಬಿದ್ದ ಬೈಕ್‌ಗಳು ಅಪಾಯ ತಪ್ಪಿಸಿದ ಅಗ್ನಿಶಾಮಕ ದಳ

ಕುಂಬಳೆ: ಶಾಂತಿಪಳ್ಳ ರಸ್ತೆಯಲ್ಲಿ ನಿನ್ನೆ ಬೆಳಿಗ್ಗೆ ಬೈಕ್‌ಗಳು ಮಗುಚಿ ಬಿದ್ದುದರಿಂದ ಉಪ್ಪಳದಿಂದ ತಲುಪಿದ ಅಗ್ನಿಶಾಮಕದಳ ರಸ್ತೆಯನ್ನು ತೊಳೆದು ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಹೆಚ್ಚಿನ ಅಪಾಯ ತಪ್ಪಿಸಿದೆ. ಶಾಂತಿಪಳ್ಳ ಪೆಟ್ರೋಲ್ ಪಂಪ್‌ಬಳಿ ನಿನ್ನೆ ಬೆಳಿಗ್ಗೆ ದ್ವಿಚಕ್ರ ವಾಹನಗಳು ಮಗುಚಿ ಬಿದ್ದಿವೆ. ರಸ್ತೆಯಲ್ಲಿ ಪೆಟ್ರೋಲ್ ಅಥವಾ ಆಯಿಲ್ ಚೆಲ್ಲಿದುದರಿಂದ ಈ ಅಪಘಾತ ಉಂಟಾಗಿದೆ ಎಂದು ತಿಳಿದು ಅಗ್ನಿಶಾಮಕದಳ ರಸ್ತೆಯಲ್ಲಿ ಅಪಾಯ ಭೀತಿಯನ್ನು ಹೊರತುಪಡಿಸಿದೆ.

ಬೆದ್ರಂಪಳ್ಳ ಮನೆಗೆ ಎರಡನೇ ಬಾರಿಯೂ ಕಳವಿಗೆ ತಲುಪಿರುವುದು ಮೊದಲ ತಂಡ; ಗುರಿ ೪೦ ಗೋಣಿ ಅಡಿಕೆ

ಬದಿಯಡ್ಕ: ಪೆರ್ಲ ಬಳಿಯ ಬೆದ್ರಂಪಳ್ಳದಲ್ಲಿ ಅಧ್ಯಾಪಕನ ಮನೆಗೆ ಎರಡನೇ ಬಾರಿಯೂ ಕಳವಿಗೆ ತಲುಪಿರುವುದು ಮೊದಲು ಕಳವು ನಡೆಸಿದ ತಂಡವೇ ಆಗಿದೆಯೆಂಬ ಸೂಚನೆಯಿದೆ. ಕಳ್ಳರು ತಮ್ಮ ಗುರುತು ಲಭಿಸದಿರಲು ದೇಹಪೂರ್ತಿ ಮುಚ್ಚಿಕೊಂಡು  ಮನೆಯೊಳಗೆ ಜಾಲಾಡಿದ್ದಾರೆ. ಕಳ್ಳರ ತಂಡದಲ್ಲಿ ಮೂರು ಮಂದಿಯಿದ್ದು, ಅವರ  ಗುರಿ ಮನೆಯೊಳಗೆ ಭದ್ರವಾಗಿರಿಸಿದ ೪೦ ಗೋಣಿ ಚೀಲ ಒಣಗಿದ ಅಡಿಕೆ ಕಳವು ನಡೆಸುವುದೇ ಆಗಿದೆಯೆಂಬ ಸೂಚನೆಯಿದೆ. ತಂಡ ತಲುಪಿರುವುದು ಇನ್ನೋವಾ  ಕಾರಿನಲ್ಲಾಗಿದೆಯೆಂಬ ಸೂಚನೆಯೂ ಲಭಿಸಿದೆ. ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಧ್ಯಾಪಕನಾಗಿರುವ ಅಬ್ದುಲ್ ರಹಮ್ಮಾನ್‌ರ …

ಮಾರಾಟಕ್ಕಾಗಿ ತರಲಾದ ಎಂ.ಡಿ.ಎಂ.ಎ ಸಹಿತ ಇಬ್ಬರ ಸೆರೆ, ಕಾರು ವಶ

ಕಾಸರಗೋಡು: ಮಾರಾ ಟಕ್ಕಾಗಿ ಪಯ್ಯನ್ನೂರಿನಿಂದ ಕಾಸರಗೋಡಿಗೆ ತರಲಾಗಿದ್ದ ಎಂಡಿಎಂಎ ಮಾದಕ ದ್ರವ್ಯದೊಂದಿಗೆ ಇಬ್ಬರನ್ನು ಕಾಸರಗೋಡು ಅಬಕಾರಿ  ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಜೋಸೆಫ್ ಜೆ.ರ ನೇತೃತ್ವದ ತಂಡ ನಗರದ ನುಳ್ಳಿಪ್ಪಾಡಿಯಿಂದ ಬಂಧಿಸಿದೆ. ಬಂಧಿತರ ಕೈವಶವಿದ್ದ ೦.೮ ಗ್ರಾಂ ಎಂಡಿಎಂಎ ಮತ್ತು ಅವರು ಬಂದ ಕಾರನ್ನೂ ಅಬಕಾರಿ ತಂಡ ವಶಪಡಿಸಿದೆ. ತಳಿಪರಂಬ ಎಳಿಲೋಟ್‌ನ ಅಬ್ದುಲ್ಲ ಸಿ.ಟಿ. (೪೬) ಮತ್ತು ಹೊಸದುರ್ಗ ಎಡಚಾಕೈ ನಿವಾಸಿ ಫೈಝಲ್ (೩೭) ಬಂಧಿತರಾದ ಆರೋಪಿಗಳು. ಇವರ ವಿರುದ್ಧ ಎನ್‌ಡಿಪಿಎಸ್ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. …