ಮನೆಯ ಮಾಡಿನಿಂದ ಬಿದ್ದು ಮೃತ್ಯು

ಹೊಸದುರ್ಗ: ನಿರ್ಮಾಣ ಹಂತದ ಮನೆಯ ಮೇಲಿನಿಂದ ಬಿದ್ದು ಮಾಲಕ ಮೃತಪಟ್ಟ ಘಟನೆ ಸಂಭವಿಸಿದೆ. ಮಾಲೋಂ ವಳ್ಳಿಕಡವ್ ಪಿಣಕ್ಕಾಟ್ ಪರಂಬಿಲ್ ಹೌಸ್‌ನ ದೇವಸ್ಯ ಜೋನಿವಯ (೫೬) ಮೃತಪಟ್ಟ ವ್ಯಕ್ತಿ. ನಿನ್ನೆ ಮಧ್ಯಾಹ್ನ ೧೨ ಗಂಟೆಗೆ ಮನೆಯ ಮೇಲೆ ಶೀಟ್ ಹಾಕುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ  ಚಿಕಿತ್ಸೆ ಮಧ್ಯೆ ಇಂದು ಬೆಳಿಗ್ಗೆ ಮೃತಪಟ್ಟರು. ಮೃತರು ಪತ್ನಿ ಲಿಸಿ, ಮಕ್ಕಳಾದ ಲಿಜೋ, ಲಿಟಿ ಮೊದಲಾದವರನ್ನು ಅಗಲಿದ್ದಾರೆ.

ರಸ್ತೆಗೆ ಬಿದ್ದ ಮಣ್ಣು ತೆರವುಗೊಳಿಸಿದ ಸ್ಥಳೀಯ ಸಂಘ-ಸಂಸ್ಥೆಗಳಿಗೆ ಶ್ಲಾಘನೆ: ಅಮ್ಮೇರಿ ರಸ್ತೆ ಸಂಚಾರ ಸಮಸ್ಯೆ ಅಲ್ಪ ಪರಿಹಾರ

ಪೈವಳಿಕೆ: ಚಿಪ್ಪಾರುಪದವು-ಶ್ರೀ ವಿಷ್ಣುಮೂರ್ತಿ ದೇವಸ್ಥಾನ-ಅಮ್ಮೇರಿ ರಸ್ತೆ ಈ ಭಾಗದ ಅಲ್ಲದೆ ಹೊರ ಊರವರಿಗೆ  ಉಪಯುಕ್ತ ರಸ್ತೆಯಾಗಿದ್ದು, ನಾಲ್ಕು ತಿಂಗಳ ಹಿಂದೆ ಮಳೆಗಾಲ ಆರಂಭದಲ್ಲಿ ದೇವಸ್ಥಾನದ ಸಮೀಪದ ಸಂಕದ ಬಳಿ ಗುಡ್ಡ ಜರಿದು ಸಂಪೂರ್ಣ ಸಂಪರ್ಕರಹಿತವಾಗಿತ್ತು. ವಾರ, ತಿಂಗಳುಗಳ ಕಳೆದರೂ ಇದನ್ನು ತೆರವುಗೊಳಿಸದ ಸ್ಥಳೀಯಾಡಳಿತ, ಸ್ಥಳದ ಮಾಲೀಕರ ವಿರುದ್ಧ ಜನರು ಆಕ್ರೋಶ ತೋರಿದ್ದರು. ಈ ಕುರಿತು ಜನರು ಸಹಿ ಸಂಗ್ರಹಿಸಿ ಸ್ಥಳೀಯಾಡಳಿತ,  ಕಂದಾಯ ಇಲಾಖೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸ್ಥಳೀಯ ಪಂಚಾಯತ್ ಪ್ರತಿನಿಧಿ ತಾತ್ಕಾಲಿಕವಾಗಿ ಜರಿದುಬಿದ್ದ ಮಣ್ಣನ್ನು ತೆರವುಗೊಳಿಸಿದಾಗ …

ಪ್ರಧಾನಮಂತ್ರಿ ಆಯುಷ್ಮಾನ್ ಆರೋಗ್ಯ ಯೋಜನೆಗೆ ಹಣ ವಸೂಲು ಮಾಡುವ ಆಸ್ಪತ್ರೆಗಳ ವಿರುದ್ಧ ಬಿಜೆಪಿ ಹೋರಾಟಕ್ಕೆ

ಕಾಸರಗೋಡು: ಕಾಸರಗೋಡು ಜಿಲ್ಲೆಗೆ ಎರಡು ಬೃಹತ್ ಯೋಜನೆಯನ್ನು ಘೋಷಿಸುವ ಅಂಗವಾಗಿ ಈ ತಿಂಗಳ ೧೨ರಂದು ಕಾಸರಗೋಡಿಗೆ ಆಗಮಿಸುವ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜಿಲ್ಲೆಯಲ್ಲಿ ಅದ್ದೂರಿಯ ಸ್ವಾಗತ ನೀಡಿ ಅಭಿನಂದನೆ ಸಲ್ಲಿಸಲು ಮಂಡಲದ ಬಿಜೆಪಿ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರಧಾನಮಂತ್ರಿ ಆಯಷ್ಮಾನ್ ಭಾರತ್ ಆರೋಗ್ಯ ಇನ್‌ಶೂರೆನ್ಸ್ ಯೋಜನೆಯಲ್ಲಿ ಪೂರ್ಣವಾಗಿ ಯೂ ಉಚಿತ ಚಿಕಿತ್ಸೆಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಗಳು ಅನಧಿಕೃತವಾಗಿ ಚಿಕಿತ್ಸಾ ದರಗಳನ್ನು ವಸೂಲು ಮಾಡುವುದನ್ನು ಸಭೆ ಖಂಡಿಸಿದೆ. ಕಾನೂನು ವಿರುದ್ಧವಾದ ಇಂತಹ ಕ್ರಮಗಳಿಂದ ಸಂಬಂಪಟ್ಟವರು ಹಿಂಜರಿಯದಿದ್ದಲ್ಲಿ ತೀವ್ರವಾಗಿ …

ಆಯುಷ್ಮಾನ್‌ಭವ ಹೆಲ್ತ್ ಐಡಿ ನೋಂದಾವಣೆ

ಬದಿಯಡ್ಕ: ಭಾರತೀಯ ಜನತಾ ಪಕ್ಷದ ಬದಿಯಡ್ಕ ಪೂರ್ವ ಸಮಿತಿಯ ನೇತೃತ್ವದಲ್ಲಿ ಆಯುಷ್ಮಾನ್ ಭವ ಹೆಲ್ತ್ ಐಡಿ ರಿಜಿಸ್ಟ್ರೇಷನ್ ಕ್ಯಾಂಪ್ ನಡೆಯಿತು. ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ದೀಪ ಬೆಳಗಿಸಿ ಉದ್ಘಾಟಿಸಿದರು ಪೂರ್ವ ಸಮಿತಿಯ ಅಧ್ಯಕ್ಷ ಭಾಸ್ಕರ ಬಿ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಸುನಿಲ್ ಪಿ ಆರ್ ನಾರಾಯಣ ಮಾಸ್ಟರ್ ಭಾಗವಹಿಸಿದ್ದರು. ಅವಿನಾಶ್ ಸ್ವಾಗತಿಸಿ ಬಾಲಕೃಷ್ಣ ಶೆಟ್ಟಿ ವಂದಿಸಿದರು.

ಅನಂತಪುರದಲ್ಲಿ ಕೋಳಿ ತ್ಯಾಜ್ಯ: ಜನಪರ ಚಳವಳಿಗೆ ಶಾಸಕ ಬೆಂಬಲ

ಕುಂಬಳೆ: ಕಸಾಯಿಖಾನೆಗಳ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ಉಂಟಾಗಿರುವ ದುರ್ನಾತದ ವಿರುದ್ಧ ಕ್ರಿಯಾ ಸಮಿತಿ ಒಂದು ವಾರದಿಂದ ನಡೆಸುತ್ತಿರುವ ಸೇವ್ ಅನಂತಪುರ ಚಳವಳಿಗೆ ಶಾಸಕ ಎ.ಕೆ.ಎಂ. ಅಶ್ರಫ್ ಬೆಂಬಲ ಸೂಚಿಸಿದ್ದಾರೆ. ಉದ್ದಿಮೆ ಪಾರ್ಕ್‌ನ  ತ್ಯಾಜ್ಯ ಸಂಸ್ಕರಣೆ ಘಟಕದಿಂದ ಹೊರಸೂಸುವ ದುರ್ನಾತ ಹಾಗೂ ಅಲ್ಲಿಂದ ಹರಿಯುತ್ತಿರುವ ಮಲಿನಜಲದಿಂದ ನಾಡಿನಲ್ಲಿ ಉಂಟಾಗಿರುವ ಸಮಸ್ಯೆಗೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ನಾಗರಿಕರು ಎಂಟು ದಿನಗಳಿಂದ ಚಳವಳಿ ನಡೆಸುತ್ತಿದ್ದಾರೆ. ದುರ್ನಾತ, ತ್ಯಾಜ್ಯ ನೀರು ಹರಿದು ಬರುವಿಕೆ ತಡೆಯಬೇಕು, ಅನಂತಪುರದಲ್ಲಿ ಅನಿಯಂತ್ರಿತವಾಗಿ ನಡೆಯುವ ಕಗ್ಗಲ್ಲು ಗಣಿಗಾರಿಕೆ ತಡೆಯಬೇಕು …

ಉತ್ತಮ ನಾಗರಿಕನಾಗಿ ಬೆಳೆಯಲು ವಿದ್ಯಾಭ್ಯಾಸ ವೇತನ ಪೂರಕವಾಗಿರಲಿ-ಅಜಿತ್ ಕುಮಾರ್ ರೈ

ಉಪ್ಪಳ: ಮಕ್ಕಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸವನ್ನು ಪೂರೈಸಿ ಉತ್ತಮ  ನಾಗರಿಕರಾಗಿ ಜೀವನವನ್ನು ರೂಪಿಸಲು ಬಂಟರ ಸಂಘ ನೀಡುತ್ತಿರುವ ವಿದ್ಯಾರ್ಥಿ ವೇತನ ಪೂರಕವಾಗಿರಲೆಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಭಿಪ್ರಾಯಪಟ್ಟರು.  ಅವರು ಕಾಸರಗೋಡು  ಜಿಲ್ಲಾ ಬಂಟರ ಸಂಘ ಮತ್ತು ಬೆಂಗಳೂರು ಬಂಟರ ಸಂಘದ ಸಹಯೋಗದಲ್ಲಿ ಉಪ್ಪಳ ಶ್ರೀರಾಮಕೃಷ್ಣ ವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿವೇತನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರು ಬಂಟರ ಸಂಘದ ವಿದ್ಯಾರ್ಥಿವೇತನ ವಿತರಣಾ ಸಮಿತಿ ಅಧ್ಯಕ್ಷ ಸದಾನಂದ …

ಕಾಂಗ್ರೆಸ್ ಮಂಡಲ ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆಬದಿಯಡ್ಕಕ್ಕೆ ಶ್ಯಾಮ್ ಪ್ರಸಾದ್ ಮಾನ್ಯ

ಕಾಸರಗೋಡು: ಜಿಲ್ಲೆಯಲ್ಲಿ ಕಾಂಗ್ರೆಸ್ ಮಂಡಲ ಸಮಿತಿಗಳಿಗೆ ನೂತನ ಅಧ್ಯಕ್ಷರುಗಳನ್ನು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ನೇಮಿಸಿದ್ದಾರೆ. ಇದರಂತೆ ಬದಿಯಡ್ಕ ಮಂಡಲಾಧ್ಯಕ್ಷರಾಗಿ ಶ್ಯಾಮ್ ಪ್ರಸಾದ್ ಮಾನ್ಯ ಅವರನ್ನು ನೇಮಿಸಲಾಗಿದೆ. ಕುಂಬ್ಡಾಜೆ ಮಂಡಲಕ್ಕೆ ಜೋನಿ ಕ್ರಾಸ್ತ, ಬೆಳ್ಳೂರು ಮಂಡಲಕ್ಕೆ ರಾಘವನ್ ಬೆಳೇರಿ, ಕಾರಡ್ಕಕ್ಕೆ ಕೆ. ಪುರುಷೋತ್ತಮ ಅವರನ್ನು ನೇಮಿಸಲಾಗಿದೆ.  ಬದಿಯಡ್ಕ ಮಂಡಲ ಅಧ್ಯಕ್ಷರಾಗಿ ನೇಮಕಗೊಂಡ ಶ್ಯಾಮ್ ಪ್ರಸಾದ್ ಮಾನ್ಯ ಅವರು ಕಳೆದ ಹಲವಾರು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ. ವಾರ್ಡ್ ಮಟ್ಟದ ಸಮಿತಿ, ಯೂತ್ ಕಾಂಗ್ರೆಸ್ ಬದಿಯಡ್ಕ ಮಂಡಲ …

ಕೇಂದ್ರ ಸಚಿವ ನಿತಿನ್ ಗಡ್ಕರಿ ೧೨ರಂದು ಕಾಸರಗೋಡಿಗೆ

ಕಾಸರಗೋಡು: ಕೇಂದ್ರ ಭೂ ಸಾರಿಗೆ-ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಖಾತೆ ಸಚಿವ ನಿತಿನ್ ಗಡ್ಕರಿ ಈತಿಂಗಳ ೧೨ರಂದು ಕಾಸರಗೋಡಿಗೆ ಆಗಮಿಸು ವರು. ಅಂದು ಬೆಳಿಗ್ಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಕೇಂದ್ರ  ಕೇರಳದಲ್ಲಿ  ಜ್ಯಾರಿಗೊಳಿಸಲು ತೀರ್ಮಾ ನಿಸಿರುವ ಅಭಿವೃದ್ಧಿ ಯೋಜನೆಗಳನ್ನು ಸಚಿವರು ಘೋಷಿಸುವರು. ಇದರಂತೆ ಕಾಸರಗೋಡು  ಜಿಲ್ಲೆಯಲ್ಲಿ ಎರಡು ಬೃಹತ್ ಅಭಿವೃದ್ಧಿ ಯೋಜನೆ ಜ್ಯಾರಿಗೊ ಳಿಸಲು ಕೇಂದ್ರ ಸರಕಾರ ತೀರ್ಮಾ ನಿಸಿದ್ದು, ಅದರ ಘೋಷಣೆಯನ್ನು ಸಚಿವ ಗಡ್ಕರಿ ಇದೇ ಕಾರ್ಯಕ್ರಮದಲ್ಲಿ ನಡೆಸು ವರು. ಆದರೆ ಆ …

ವರ್ಕಾಡಿ ಬ್ಯಾಂಕ್ ಚುನಾವಣೆ: ಕಾಂಗ್ರೆಸ್ ಮುಖಂಡ ಹರ್ಷಾದ್ ವರ್ಕಾಡಿ ಸಹಿತ ಮೂವರನ್ನು ಪಕ್ಷದಿಂದ ವಜಾ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಐಕ್ಯರಂಗದ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುವ ಕಾಂಗ್ರೆಸ್ ಸದಸ್ಯರಿಗೆ ಬೆಂಬಲ ನೀಡುವ ಹರ್ಷಾದ್ ವರ್ಕಾಡಿ, ಎಸ್. ಅಬ್ದುಲ್ ಖಾದರ್ ಹಾಜಿ, ಹಾರೀಸ್ ಮಚ್ಚಂಪಾಡಿ ಪಳ್ಳಂ ಎಂಬಿವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆ ಎಂದು ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ, ವರ್ಕಾಡಿ ಸಹಕಾರಿ ಬ್ಯಾಂಕ್ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರಾದ ವಿ. ಸೋಮಪ್ಪ ತಿಳಿಸಿದ್ದಾರೆ. ನಾಳೆ ಬ್ಯಾಂಕ್‌ನ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್- ಲೀಗ್- ಸಿಪಿಎಂ ಒಂದು ಒಕ್ಕೂಟ ವಾಗಿ ಸ್ಪರ್ಧಿಸುತ್ತಿದ್ದು, …

ಸಹೋದರಿಯ ಕಣ್ಮುಂದೆ ರೈಲು ಢಿಕ್ಕಿ ಹೊಡೆದು ಯುವತಿ ಮೃತ್ಯು

ಕುಂಬಳೆ: ಸಹೋದರಿಯ ಕಣ್ಮುಂದೆ ರೈಲು ಢಿಕ್ಕಿ ಹೊಡೆದು ಯುವತಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಪೆರುವಾಡ್ ನಿವಾಸಿ ದಿ| ಅಬ್ದುಲ್ ರಹ್ಮಾನ್‌ರ ಪತ್ನಿ  ಶಂಸೀನ (೩೬) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ಸಂಜೆ ೫.೩೦ರ ವೇಳೆ ಪೆರುವಾಡ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೆರುವಾಡ್‌ನಲ್ಲಿರುವ ಪತಿಯ ಸಹೋದರಿಯ ಮಗುವನ್ನು ಕಂಡು ಮರಳುತ್ತಿದ್ದಾಗ ಅಪಘಾತವುಂಟಾಗಿದೆ. ಶಂಸೀನ ಹಾಗೂ ಸಹೋದರಿ ರೈಲು ಹಳಿಯಲ್ಲಿ ನಡೆದು ಹೋಗುತ್ತಿದ್ದಾಗ ರೈಲು ಆಗಮಿಸಿದೆ. ರೈಲನ್ನು ಕಂಡ ಸಹೋದರಿ ಬೊಬ್ಬಿಟ್ಟು ತಿಳಿಸಿದ್ದರು.  ಆದರೆ ಹಳಿಯ ಸಮೀಪದಲ್ಲೇ ಕಾಡುಪೊದೆಗಳು ತುಂಬಿಕೊಂಡಿರುವುದ …