ಐತಿಹಾಸಿಕ ದಾಖಲೆ: ಏಷ್ಯನ್‌ಗೇಮ್ಸ್‌ನಲ್ಲಿ ಪದಕ ಗಳಿಕೆಯಲ್ಲಿ ಶತಕ ಭಾರಿಸಿದ ಭಾರತ

ಹ್ಯಾಂಗ್ಝಾ: ಚೀನಾದ ಹ್ಯಾಂಗ್ಝಾನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ -೨೦೨೩ರಲ್ಲಿ ಭಾರತ ೧೦೦ ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸಿದೆ. ಅಧಿಕೃತವಾಗಿ ಭಾರತ ಇಲ್ಲಿಯವರೆಗೆ ಶತಕ ಪದಕ ಗೆದ್ದಿದೆ. ಇದು ೨೦೨೩ ಆವೃತ್ತಿಯ ಏಷ್ಯನ್ ಕ್ರೀಡಾಕೂಟದಲ್ಲಿ  ಭಾರತದ ಅತ್ಯುತ್ತಮ ಆವೃತ್ತಿ ಮಾತ್ರವಲ್ಲ, ಪದಕ ಪಟ್ಟಿಯಲ್ಲಿ ಮೂರು ಅಂಕಿ ಗಡಿಯನ್ನು ದಾಟುತ್ತಿರುವುದೂ ಇದೇ ಮೊದಲು. ಈ ಹಿಂದೆ ೨೦೧೮ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ೭೦ ಪದಕಗಳನ್ನು ಜಯಿಸಿತ್ತು. ಅದನ್ನು ಮೀರಿ ಈ ಬಾರಿ ೧೦೦ ಪದಕಗಳನ್ನು ಗೆಲ್ಲುವ ಮೂಲಕ ಭಾರತ ಐತಿಹಾಸಿಕ …

ಕಾರಿನಲ್ಲಿ ಸಾಗುತ್ತಿದ್ದ ತಂಡ ಸೆರೆ : ಚಾಕು ವಶಕ್ಕೆ; ಇಬ್ಬರು ಪರಾರಿ

ಕಾಸರಗೋಡು: ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದ ಪೊಲೀಸರ ತಂಡ ನಗರದ ಅಶೋಕನಗರದಲ್ಲಿ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ  ಕಾರಿನಲ್ಲಿ ತಿರುಗಾಡುತ್ತಿದ್ದ ಮೂವರನ್ನು  ಸೆರೆಹಿಡಿದಿದ್ದಾರೆ. ಆ ವೇಳೆ ಅದೇ ಕಾರಿನ ಜತೆ ಬೈಕ್‌ನಲ್ಲಿ ಬರುತ್ತಿದ್ದ  ಇಬ್ಬರು ಪೊಲೀಸರ ಕೈಗೆ ಸಿಲುಕದೆ ಪರಾರಿಯಾಗಿದ್ದಾರೆ. ಬಂಧಿತರ ಕೈಯಿಂದ ಚಾಕು ಇತ್ಯಾದಿ ಮಾರಕಾಯುಧಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ತಳಂಗರೆ ಬಾಂಗೋಡು ನಿವಾಸಿ ಮನಾಫ್ (೪೨), ತಳಂಗರೆ ತೆರುವತ್ ನಿವಾಸಿಗಳಾದ ಶಕೀಲ್ ಖಾನ್ (೩೭) ಮತ್ತು   ತಳಂಗರೆ  …

ಯುವತಿಗೆ ದೌರ್ಜನ್ಯ: ನಟ ಶಿಯಾಸ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಚಂದೇರ ಪೊಲೀಸರು

ಹೊಸದುರ್ಗ: ಪಡನ್ನ ನಿವಾಸಿಯಾದ ೩೨ರ ಹರೆಯದ ಯುವತಿಯ ಮಾನಭಂಗ ಪ್ರಕರಣದಲ್ಲಿ ಚೆನ್ನೈಯಲ್ಲಿ ಸೆರೆಯಾದ ಆರೋಪಿ ನಟ ಶಿಯಾಸ್ ಕರೀಂನನ್ನು ಚಂದೇರ ಪೊಲೀಸರು ಕರೆದುಕೊಂಡು ಬಂದಿದ್ದಾರೆ. ಇಂದು ಬೆಳಿಗ್ಗೆ ೬.೩೦ಕ್ಕೆ ಚಂದೇರ ಠಾಣೆಗೆ ಈತನನ್ನು  ಕರೆತರಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖಾ ತಂಡದಲ್ಲಿನ ಇನ್‌ಸ್ಪೆಕ್ಟರ್ ಸಿ.ಪಿ. ಮನುರಾಜ್ ತಂಡ ಈತನನ್ನು ಚೆನ್ನೈಯಿಂದ ಕರೆದುಕೊಂಡು ಬಂದಿದೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ಲುಕೌಟ್ ನೋಟೀಸ್ ಇದ್ದಕಾರಣ ಕೊಲ್ಲಿ ಯಿಂದ ತಲುಪಿದ ನಟ ಶಿಯಾಸ್ ನನ್ನು ಎಮಿಗ್ರೇಶನ್ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು. ಬಳಿಕ …

ಜ್ಯುವೆಲ್ಲರಿ ಮಾಲಕ ನಿಧನ

ಬದಿಯಡ್ಕ: ಇಲ್ಲಿನ ಮೇಲಿನ ಪೇಟೆಯಲ್ಲಿರುವ ಧನಲಕ್ಷ್ಮಿ ಜ್ಯುವೆ ಲ್ಲರಿಯ ಮಾಲಕ ಮನೋಹರ ಆಚಾರ್ಯ (೬೩) ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಬೀಜಂತಡ್ಕ ಬಳಿಯ ಕನಕಪ್ಪಾಡಿ ನಿವಾಸಿಯಾಗಿ ದ್ದಾರೆ. ಮೃತರು ಪತ್ನಿ ಸುಮ, ಮಕ್ಕಳಾದ ಸಜ್ಜನ್, ಕುಮಾರ್, ಸ್ವಾತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಸೌಖ್ಯ: ಒಮಾನ್‌ನಿಂದ ಊರಿಗೆ ಬಂದ ವ್ಯಕ್ತಿ ಮೃತ್ಯು

ಕುಂಬಳೆ: ಅಸೌಖ್ಯದ ಹಿನ್ನೆಲೆಯಲ್ಲಿ ಒಮಾನ್‌ನಿಂದ  ಊರಿಗೆ ಬಂದ ವ್ಯಕ್ತಿ ಮೃತಪಟ್ಟರು. ಕುಂಬಳೆ ಕಳತ್ತೂರು ನಿವಾಸಿ ಇಸ್ಮಾಯಿಲ್ ಮುಹಮ್ಮದ್ (೪೩) ಮೃತಪಟ್ಟ ವ್ಯಕ್ತಿ. ಒಮಾನ್‌ನಲ್ಲಿ ಕಫ್ತೀರಿಯ ನೌಕರನಾಗಿದ್ದ  ಇವರಿಗೆ ಅಸೌಖ್ಯ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ  ಊರಿಗೆ ಬಂದಿದ್ದರು. ಮಸ್ಕತ್ ಕೆಎಂಸಿಸಿ ಮಂಜೇಶ್ವರ ಮಂಡಲ ಸಮಿತಿ ಸದಸ್ಯನಾಗಿದ್ದರು. ದಿ| ಮುಹಮ್ಮದ್-ಆಮಿನ ದಂಪತಿಯ ಪುತ್ರನಾದ ಮೃತರು ಪತ್ನಿ ಮಿಸ್ರಿಯ, ಮಕ್ಕಳಾದ ರಿಸಾನ್, ರಸೀನ್, ಸಹೋದರ-ಸಹೋದರಿ ಯರಾದ ರಫೀಕ್, ಅಶ್ರಫ್, ಇರ್ಷಾದ್, ಹಾರಿಸ್, ಖಾದರ್, ರಫಿಯ, ಹಸೀನಾ, ತಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು …

ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ಪರಾರಿಯಾದ ಕಾರು ಪತ್ತೆ: ಮಾಲಕ ಸೆರೆ

ಹೊಸದುರ್ಗ: ಶಾಲಾ ವಿದ್ಯಾರ್ಥಿನಿಗೆ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾದ ವಾಹನವನ್ನು ನೀಲೇಶ್ವರ ಪೊಲೀಸರು ಪತ್ತೆಹಚ್ಚಿ ದ್ದಾರೆ. ಕಳೆದ ತಿಂಗಳ ೨೬ರಂದು ಸಂಜೆ ನೆಲ್ಲಿಯಾಡಂ ಎಯುಪಿ ಶಾಲೆಯಿಂದ ಮನೆಗೆ ತೆರಳುತ್ತಿದ್ದಾಗ ಕಿನಾನೂರ್ ಪಳ್ಳಂ ಅನಾಪ್‌ನ ಶಶಿಕುಮಾರ್‌ರ ಪುತ್ರಿ ಶ್ರೀನಂದ (೧೩)ಳಿಗೆ ಢಿಕ್ಕಿ ಹೊಡೆದು ವ್ಯಾಗನರ್ ಕಾರು ಪರಾರಿಯಾಗಿತ್ತು. ಈ ಕಾರು ಪರಪ್ಪ ಕ್ಲಾಯಿಕೋಟೆ ಅಬ್ದುಲ್ ಜಲೀಲ್ (೪೨)ನದ್ದಾಗಿದ್ದು, ಈತನನ್ನು ಸೆರೆಹಿಡಿಯಲಾಗಿದೆ.

ನೇಮಕಾತಿ ವಂಚನೆ: ಬಂಧಿತ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿ ಲಭ್ಯ

ತಿರುವನಂತಪುರ: ಆರೋಗ್ಯ ಇಲಾಖೆಗೆ ಸಂಬಂಧಿಸಿ ನಡೆದ ನೇಮಕಾತಿ ವಂಚನೆ ಪ್ರಕರಣದಲ್ಲಿ ಸೆರೆಗೀಡಾದ ಅಖಿಲ್ ಸಜೀವ್‌ನಿಂದ ನಿರ್ಣಾಯಕ ಮಾಹಿತಿಗಳು ಲಭಿಸಿದೆಯೆಂದು ಪ್ರತ್ಯೇಕ ತನಿಖಾ ತಂಡ ತಿಳಿಸಿದೆ. ವಂಚನೆಯಲ್ಲಿ ಪ್ರಧಾನ ಪಾತ್ರ ವಹಿಸಿದವರು ಕಲ್ಲಿಕೋಟೆಯ ನಿವಾಸಿಗಳಾದ ಬಾಸಿತ್, ರಹೀಸ್, ಲೆನಿನ್‌ರಾಜ್, ಶ್ರೀರೂಪ್ ಎಂಬಿವರೆಂದು ಈತ ಹೇಳಿಕೆಯಲ್ಲಿ ತಿಳಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ತಿರುವನಂ ತಪುರದಲ್ಲಿ ನಡೆದ ವ್ಯಕ್ತಿಪಲ್ಲಟ  ಹಿಂದೆಯೂ ಇದೇ ತಂಡ ಕಾರ್ಯಾ ಚರಿಸಿದೆಯೆಂದು ಸಂಶಯಿಸಲಾಗಿದೆ. ಈ ತಂಡ ರಾಜ್ಯದಾದ್ಯಂತ ವಂಚನೆ ನಡೆಸಿದೆಯೆಂದು ತಿಳಿಸಲಾಗಿದೆ. ಅಖಿಲ್ ಸಜೀವ್‌ನನ್ನು ಇಂದು ಪತ್ತನಂತಿಟ್ಟ ನ್ಯಾಯಾಲಯದಲ್ಲಿ …

೨೦೦೦ ರೂ. ನೋಟುಗಳ ಬದಲಾವಣೆಗೆ ಇಂದು ಕೊನೆ ದಿನ

ಕಾಸರಗೋಡು: ೨೦೦೦ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್‌ಗಳ ಮೂಲಕ ಬದಲಾಯಿಸಲು ನೀಡಲಾದ ಸಮಯ ಅವಧಿ ಇಂದು ಸಂಜೆ ಕೊನೆಗೊಳ್ಳಲಿದೆ. ಬಳಿಕ ನಾಳೆಯಿಂದ ೨೦೦೦ ರೂ. ಮುಖಬೆಲೆಯ ನೋಟುಗಳು ಇತಿಹಾಸ ಪುಟಕ್ಕೆ ಸೇರಿಕೊಳ್ಳಲಿದೆ.  ಆದ್ದರಿಂದ ೨೦೦೦ ರೂ. ನೋಟು ಹೊಂದಿರುವವರು ಅದನ್ನು ಇಂದು ಸಂಜೆಯೊಳಗಾಗಿ ಬ್ಯಾಂಕ್‌ನ ಮೂಲಕ ಬದಲಾಯಿಸಬಹುದು. ಇಂತಹ ನೋಟುಗಳು ನಾಳೆಯಿಂದ ಅಮಾನ್ಯಗೊಳ್ಳಲಿದೆ. ೩.೪೩ ಕೋಟಿ ರೂ.ಗಳ ೨೦೦೦ ರೂ.ಗಳು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಈಗಾಗಲೇ ಹಿಂತಿರುಗಿ ಬಂದು ಸೇರಿದೆ. ಹೆಚ್ಚು ಕಡಿಮೆ ೧೨,೦೦೦ ಕೋಟಿ ರೂ. …

ಪಾಯಸ್ ಮಿಕ್ಸ್ ಹೆಸರಲ್ಲಿ ಚಿನ್ನ ಸಾಗಾಟ: ದುಬಾಯಿಂದ ಬಂದಾತ ಕಸ್ಟಡಿಗೆ

ಮಂಗಳೂರು: ಪಾಯಸ್ ಮಿಕ್ಸ್ ಎಂಬ ಹೆಸರಲ್ಲಿ ಪ್ಯಾಕೆಟ್‌ನೊಳಗೆ ಚಿನ್ನ ಸಾಗಾಟ ನಡೆಸಿದಾತನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆರೆ ಹಿಡಿಯಲಾಗಿದೆ. ದುಬಾಯಿಂದ ಆಗಮಿಸಿದ ಭಟ್ಕಳ ನಿವಾಸಿ ಅಲ್ತಾಫ್ ಹುಸೈನ್ ಮುಲ್ಲ (೫೪)ನ ಬ್ಯಾಗನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲಿಸಿದಾಗ ಕಿಚನ್ ಟ್ರಶಲ್ಸ್ ಬ್ರಾಂಡ್‌ನ ಪ್ಯಾಕೆಟ್ ಕಂಡು ಬಂದಿದೆ. ಅದರ ಮೇಲೆ ಸಂಶಯಗೊಂಡು ಪರಿಶೀಲಿಸಿದಾಗ ಅದರೊಳಗಿರುವುದು ಚಿನ್ನವೆಂದು ತಿಳಿದು ಬಂದಿದೆ. ಚಿನ್ನವನ್ನು ಹುಡಿಯಾಗಿಸಿ ಐದು ಪ್ಯಾಕೆಟ್‌ಗಳಾಗಿ ತುಂಬಿಸಿಡಲಾಗಿತ್ತು. ಒಟ್ಟು ೩೪೭ ಗ್ರಾಂ ಚಿನ್ನವನ್ನು ಪ್ಯಾಕೆಟ್‌ನಲ್ಲಿ ತುಂಬಿಸಿ ತರಲಾಗಿದೆ. ಇದಕ್ಕೆ ೨೦ ಲಕ್ಷ …

ಎಂಡಿಎಂಎ ಉಪಯೋಗ: ಸೆರೆ

ಉಪ್ಪಳ: ಎಂಡಿಎಂಎ ಉಪ ಯೋಗಿಸುತ್ತಿದ್ದ ಓರ್ವನನ್ನು ಮಂ ಜೇಶ್ವರ ಎಸ್.ಐ. ನಿಖಿಲ್ ಸೆರೆ ಹಿಡಿ ದಿದ್ದಾರೆ. ಪಾವೂರು ನಿವಾಸಿ ನವಾಜ್ (೪೦)ನನ್ನು ಗೇರುಕಟ್ಟೆಯಿಂದ ನಿನ್ನೆ ರಾತ್ರಿ ಸೆರೆ ಹಿಡಿಯಲಾಗಿದೆ. ರಾತ್ರಿ ಗಸ್ತು ತಿರುಗುತ್ತಿದ್ದಾಗ ಶಂಕೆ ತೋರಿ ಕಸ್ಟಡಿಗೆ ತೆಗೆದಾಗ ಎಂಡಿಎಂಎ ಉಪಯೋಗಿ ಸುತ್ತಿದ್ದುದಾಗಿ ತಿಳಿದು ಬಂ ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.