ಕುಂಬಳೆ ಪಂ. ಗ್ರಾಮ ಬಂಡಿಗೆ ಸಚಿವ ಆಂಟನಿ ರಾಜು ಚಾಲನೆ

ಕುಂಬಳೆ: ಕುಂಬಳೆ ಪಂಚಾಯತ್‌ನ ಗ್ರಾಮ ಪ್ರದೇಶಗಳ ಪ್ರಯಾಣ ಸಮಸ್ಯೆಗೆ ಪರಿಹಾರ ಕಾಣುವ ಅಂಗವಾಗಿ ಕೆಎಸ್‌ಆರ್‌ಟಿಸಿಯೊಂದಿಗೆ ಸಹಕರಿಸಿ ಗ್ರಾಮ ಪಂಚಾಯತ್ ಆರಂಭಿಸಿದ ‘ಗ್ರಾಮ ಬಂಡಿ ಸರ್ವೀಸ್’ ನ ಉದ್ಘಾಟನೆಯನ್ನು ರಾಜ್ಯ ಸಾರಿಗೆ ಖಾತೆ ಸಚಿವ ಆಂಟನಿ ರಾಜು ಇಂದು ಬೆಳಿಗ್ಗೆ ನಿರ್ವಹಿಸಿದರು. ಬಂಬ್ರಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ  ಸಚಿವ ಆಂಟನಿ ರಾಜು ಧ್ವಜ ಹಾರಿಸುವ ಮೂಲಕ ಗ್ರಾಮ ಬಂಡಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎಕೆಎಂ ಅಶ್ರಫ್ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರ ಯೂಸಫ್, ಪಂ. ಸದಸ್ಯರು, ಸ್ಥಾಯೀ …

ಮಗುವನ್ನು ಬಾವಿಸೆಗೆದು ಕೊಲೆಗೈದ ಪ್ರಕರಣ :ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದ ಆರೋಪಿ ತಾಯಿ ಸೆರೆ

ಕಾಸರಗೋಡು: ಪುಟ್ಟ ಮಗುವನ್ನು ಬಾವಿಗೆ ಎಸೆದು ಕೊಲೆಗೈದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದ ಆರೋಪಿ ತಾಯಿಯನ್ನು ನ್ಯಾಯಾಲಯ ಹೊರಡಿಸಿದ ಆರೆಸ್ಟ್ ವಾರೆಂಟ್‌ನಂತೆ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಕಾಟುಕುಕ್ಕೆ ಪೆರ್ಲತ್ತಡ್ಕದ ಬಾಬು ಎಂಬವರ ಪತ್ನಿ ಶಾರದ (೨೮) ಬಂಧಿತಳಾದ ಆರೋಪಿ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಹೊರಡಿಸಿದ ವಾರಂಟಿನನ್ವಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಇನ್ನು ಮುಂದೆ ಸಕಾಲದಲ್ಲಿ ಹಾಜರಾಗಬೇಕೆಂಬ ಶರತ್ತಿನಡಿ ನ್ಯಾಯಾಲಯ ಆಕೆಗೆ ಬಳಿಕ ಜಾಮೀನು ಮಂಜೂರು ಮಾಡಿದೆ. …

ಯುವತಿಗೆ ದೌರ್ಜನ್ಯಗೈದು ಗರ್ಭಿಣಿಯಾಗಿಸಿದ ಪ್ರಕರಣ :ಬಂಧಿತ ನಟ ಶಿಯಾಸ್ ಕರೀಂನನ್ನು ಇಂದು ಚಂದೇರಕ್ಕೆ ತಲುಪಿಸಿ ತನಿಖೆ

ಕಾಸರಗೋಡು: ಮದುವೆ ಯಾಗುವುದಾಗಿ ಭರವಸೆಯೊಡ್ಡಿ ಯುವತಿಗೆ ಕಿರುಕುಳ ನೀಡಿರುವುದಲ್ಲದೆ ಆಕೆಯಿಂದ ೧೧ ಲಕ್ಷರೂಪಾಯಿ ಪಡೆದು  ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಸೆರೆಗೀಡಾದ ನಟ ಶಿಯಾಸ್ ಕರೀಂ (೩೪)ನನ್ನು ಇಂದು ರಾತ್ರಿಯೊಳಗೆ ಚಂದೇರ ಪೊಲೀಸ್ ಠಾಣೆಗೆ ತಲುಪಿಸಲಾಗುವುದು. ಬಳಿಕ ನಾಳೆ ಹೊಸದುರ್ಗ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗುವುದೆಂದು ಪೊಲೀಸ್ ಮೂಲಗಳು ತಿಳಿಸಿವೆ. ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ೩೨ರ ಹರೆಯದ ಯುವತಿ ನೀಡಿದ ದೂರಿನಂತೆ ಶಿಯಾಸ್ ಕರೀಂ ವಿರುದ್ಧ ಪೊಲೀಸ್ ಕೇಸು ದಾಖಲಿಸಿಕೊಂಡಿದ್ದರು. ಶಿಯಾಸ್  ಕರೀಂನ  ಜಿಮ್ನೇಶಿಯಂ ಸಂಸ್ಥೆಯಲ್ಲಿ ತರಬೇತುದಾರೆಯಾಗಿದ್ದ ಯುವತಿಯನ್ನು …

ಆರು ಅನಧಿಕೃತ ಹೊಯ್ಗೆ ಕಡವು ನಾಶಗೊಳಿಸಿದ ಪೊಲೀಸ್

ಕುಂಬಳೆ: ಒಳಯಂನಲ್ಲಿ ಅನಧಿಕೃತವಾಗಿ ಕಾರ್ಯಾಚರಿ ಸುತ್ತಿದ್ದ ಆರು ಹೊಯ್ಗೆ ಕಡವುಗಳನ್ನು ಪೊಲೀಸರು ನಾಶಗೊಳಿಸಿದ್ದಾರೆ. ಜೆಸಿಬಿ ಬಳಸಿ ಕಡವು ನಾಶಗೊ ಳಿಸಲಾಗಿದೆ. ಸರಕಾರಿ ಸ್ಥಳದಲ್ಲಿ ಕಡವುಗಳು ಕಾರ್ಯಾಚರಿಸುತ್ತಿದ್ದವು. ಅದರಿಂದ ಯಾರ ವಿರುದ್ಧವೂ ಕೇಸು ದಾಖಲಿಸಲು ಸಾಧ್ಯವಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್ಪಿ ಪಿ.ಕೆ. ಸುಧಾಕರನ್, ಇನ್‌ಸ್ಪೆಕ್ಟರ್‌ಗಳಾದ ಇ ಅನೂಪ್ ಕುಮಾರ್, ಎಸ್‌ಐ ವಿ.ಕೆ. ಅನೀಶ್ ನೇತೃತ್ವ ನೀಡಿದರು.

ಕುಂಬಳೆಯಲ್ಲಿ ವಾಸಿಸಿ ಗಾಂಜಾ ಮಾರಾಟಗೈಯ್ಯುತ್ತಿದ್ದಾತ ಸೆರೆ

ಕುಂಬಳೆ: ಕುಂಬಳೆಯಲ್ಲಿ ವಾಸವಾಗಿದ್ದುಕೊಂಡು ಗಾಂಜಾ ಮಾರಾಟ ನಡೆಸುತ್ತಿದ್ದ ಕೋಟ್ಟಯಂ ನಿವಾಸಿಯನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕೋಟ್ಟಯಂ ಕೈತ್ತಾಟ್ ಕುಳಂಗರದ ಆಂಟೋ ಜೋಸೆಫ್ (೨೭) ಎಂಬಾತ ಬಂಧಿತ ವ್ಯಕ್ತಿ. ಈತ ಕಳೆದ ಒಂದು ತಿಂಗಳಿಂದ ಕುಂಬಳೆ  ಸಿ.ಎಚ್.ಸಿ ರೋಡ್‌ನಲ್ಲಿ ರುವ  ಕ್ವಾರ್ಟರ್ಸ್‌ನಲ್ಲಿ  ವಾಸಿ ಸುತ್ತಿದ್ದನು. ರೈಲು ನಿಲ್ದಾಣ, ಅಂಗಡಿಗಳ ಮುಂಭಾಗದಲ್ಲಿ ನಿಂತುಕೊಂಡು ಗಾಂಜಾ ಮಾರಾಟ ನಡೆಸುವುದು ಈತನ ಕೃತ್ಯವೆನ್ನಲಾಗಿದೆ.

ಸ್ಕೂಟರಿಗೆ ಕಾರು ಢಿಕ್ಕಿ ಹೊಡೆಸಿ ಇಬ್ಬರು ಗಾಯಗೊಂಡ ಘಟನೆ: ಕೊಲೆಯತ್ನ ಪ್ರಕರಣ ದಾಖಲು

ಕಾಸರಗೋಡು: ಅಕ್ಟೋಬರ್ ೪ರಂದು ರಾತ್ರಿ ಕೂಡ್ಲಿನಲ್ಲಿ ಸ್ಕೂಟರ್‌ಗೆ ಇನ್ನೋವಾ ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರರಾದ ಇಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿ ಕಾರು ಚಲಾಯಿಸಿದ ವ್ಯಕ್ತಿ ವಿರುದ್ಧ ಕಾಸರಗೋಡು ಪೊಲೀಸರು ಸೆಕ್ಷನ್ ೩೦೭ರ ಪ್ರಕಾರ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೂಡ್ಲು ಮೀಪುಗುರಿ ನಿವಾಸಿ  ಅಹಮ್ಮದ್ ಜಾಬೀರ್ ಎನ್.ಆರ್ ಎಂಬಾತ ನೀಡಿದ ದೂರಿನಂತೆ ಕಾಸರಗೋಡು ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾನು ಸ್ನೇಹಿತ ಜಾಬೀರ್ ನೊಂದಿಗೆ  ಸ್ಕೂಟರ್‌ನಲ್ಲಿ ಮೀಪುಗಿರಿಯಿಂದ ಸೂರ್ಲಿಗೆ ಬರುವ ದಾರಿ ಮಧ್ಯೆ  ಉಳಿಯತ್ತಡ್ಕ ಕಡೆಯಿಂದ ಬರುತ್ತಿದ್ದ …

ಕೇಂದ್ರ ಸರಕಾರ ಈಡೇರಿಸದ ಭರವಸೆ: ರೈತ ಸಂಘದಿಂದ ಕಪ್ಪು ದಿನಾಚರಣೆ

ಪೈವಳಿಕೆ:  ಕೇಂದ್ರ ಸರಕಾರದ ರೈತ ವಿರೋಧಿ ನೀತಿಗೆದುರಾಗಿ ಒಂದು ವರ್ಷದವರೆಗೆ ನಡೆದ ಹೋರಾಟದಿಂದ ಕೇಂದ್ರ ಸರಕಾರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದಾಗ ರೈತರು ಹೋರಾಟವನ್ನು ನಿಲ್ಲಿಸಿದ್ದರು. ಆದರೆ ಕೇಂದ್ರ ಸರಕಾರ ಭರವಸೆಯನ್ನು ಒಂದು ವರ್ಷವಾದರೂ ಈಡೇರಿಸದ ಹಿನ್ನೆಲೆಯಲ್ಲಿ ಸಿಐಟಿಯು ರೈತ ಸಂಘ ಕರ್ಷಕ ಕಾರ್ಮಿಕ ಯೂನಿಯನ್  ಒಟ್ಟು ಸೇರಿ ದೇಶದ ಎಲ್ಲಾ ಮಂಡಲ ಗಳಲ್ಲಿ ಅ.೩ರಂದು ಕಪ್ಪು ದಿನಾಚರಣೆ ನಡೆಸಲಾಯಿತು. ಇದರಂತೆ ಮಂಜೇಶ್ವರ ನಿಯೋಜಕ ಮಂಡಲದ ಕರಿ ದಿನಾ ಚರಣೆ, ಸಂಜೆ ಧರಣಿಯನ್ನು ರೈತ ಸಂಘದ ರಾಜ್ಯ …

ಎಐಟಿಯುಸಿ ಜಿಲ್ಲಾಧಿಕಾರಿ ಕಚೇರಿ ಮಾರ್ಚ್

ಕಾಸರಗೋಡು: ರಾಜ್ಯದ ಸಾರ್ವಜನಿಕ ಸಂಸ್ಥೆಗಳಲ್ಲಿನ ನೀತಿಯಲ್ಲಿ ಬದಲಾವಣೆ ಉಂಟಾಗಬಾರದೆಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಸಾರ್ವಜನಿಕ ಸಂಸ್ಥೆಗಳ ಸಂರಕ್ಷಣೆ ಮುಷ್ಕರದಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮಾರ್ಚ್ ನಡೆಸಲಾಯಿತು. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್ ಉದ್ಘಾಟಿಸಿದರು. ರಾಜ್ಯದ ಸಾರ್ವಜನಿಕ ಸಂಸ್ಥೆಗಳ ಸಂರಕ್ಷಣೆ ಸರಕಾರದ ಪ್ರಧಾನ ಪರಿಗಣನೆ ವಿಷಯವಾಗಿ ತೆಗೆದುಕೊಳ್ಳಬೇಕೆಂದು ಕೆ.ವಿ. ಕೃಷ್ಣನ್ ಆಗ್ರಹಿಸಿದರು. ಆದರೆ ಎಡರಂಗ ಸರಕಾರ ಈಗ ಈ ನಿಲುವಲ್ಲ ಸ್ವೀಕರಿಸಿರುವುದೆಂದು ಅವರು ನುಡಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ವಿ. ರಾಜನ್, ಪಿ. …

ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ: ನಾಲ್ವರ ದುರ್ಮರಣ; ಹಲವರಿಗೆ ಗಂಭೀರ

ನಾಗಪಟ್ಟಣಂ: ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ದೇಶೀಯ ನಿರ್ಮಿತ ಸಿಡಿಮದ್ದು (ಪಟಾಕಿ) ತಯಾರಿ ವೇಳೆ ದಿಢೀರ್ ಸ್ಫೋಟ ಸಂಭವಿಸಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವರು ಗಂಭೀರ ಗಾಯಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೀಪಾವಳಿ ಹಬ್ಬಕ್ಕೆ ಇನ್ನೇನು ಕೇವಲ ಒಂದೇ ತಿಂಗಳು ಬಾಕಿ ಇರುವಾಗ ಅದಕ್ಕೆ ಅಗತ್ಯದ ಪಟಾಕಿಗಳ  ತಯಾರಿಯಲ್ಲಿ ಕಾರ್ಮಿಕರು ತೊಡಗಿದ್ದರು. ಆ ವೇಳೆ ಈ ದುರ್ಘಟನೆ ಸಂಭವಿಸಿದೆ. ಪಟಾಕಿ ತಯಾರಿ ವೇಳೆ ಏಕಾಏಕಿ ಸಂಭವಿಸಿದ ಬೆಂಕಿ ಅನಾ ಹುvದಿಂದಾಗಿ ಅಲ್ಲಿ ತಯಾರಿಸಿಡ ಲಾಗಿದ್ದ ಪಟಾಕಿಗಳು ಸ್ಫೋಟ ಗೊಂಡು ನಾಲ್ವರು …

ಚಿನ್ನ ವ್ಯವಹಾರ: ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಯುವಕರಿಬ್ಬರಿಗೆ ಗಾಯ; ಓರ್ವ ಗಂಭೀರ

ಕಾಸರಗೋಡು: ಗಲ್ಫ್‌ನಿಂದ ಕಳುಹಿಸಿಕೊಡಲಾಗಿದ್ದ ಚಿನ್ನವನ್ನು ಅದರ ಮಾಲಕನಿಗೆ ಹಸ್ತಾಂತರಿಸದೆ ವಂಚನೆಗೈದಿರುವುದಾಗಿ ಆರೋಪಿಸಲಾಗುತ್ತಿರುವ ಯುವಕರಿಬ್ಬರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆಸಿ ಅವರನ್ನು ಗಾಯಗೊಳಿಸಿದ ಘಟನೆ ಸೂರ್ಲಿನಲ್ಲಿ ನಿನ್ನೆ ರಾತ್ರಿ ಸುಮಾರು ೧೧ ಗಂಟೆ ವೇಳೆ ನಡೆದಿದೆ. ಸೂರ್ಲು ನಿವಾಸಿಗಳಾದ ಯುವಕರಿಬ್ಬರು ಈ ಅಪಘಾತದಲ್ಲಿ  ಗಂಭೀರ ಗಾಯಗೊಂಡಿದ್ದು, ಅದರಲ್ಲಿ ಓರ್ವನನ್ನು ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.   ಈತನ ಸ್ಥಿತಿ ಗಂಭೀರವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸ್ಕೂಟರ್‌ನಲ್ಲಿ ಇಬ್ಬರು ಯುವಕರು ಸಂಚರಿಸುತ್ತಿದ್ದ ವೇಳೆ ಇನ್ನೋವಾ ಕಾರಿನಲ್ಲಿ ಬಂದ ತಂಡ ಆ ಸ್ಕೂಟರ್‌ಗೆ …