ತಾಮರಶ್ಶೇರಿಯಲ್ಲಿ ಭಾರೀ ಪ್ರಮಾಣದ ಎಂಡಿಎಂಎ ವಶ

ಕಲ್ಲಿಕೋಟೆ: ತಾಮರಶ್ಶೇರಿಯಲ್ಲಿ ಭಾರೀ ಪ್ರಮಾಣದ  ಮಾದಕಪದಾ ರ್ಥವನ್ನು ವಶಪಡಿಸಲಾಗಿದೆ. ಚುಡಲಮುಖ್ ಅರೆಟ್ಟಕುನ್ನುಮ್ಮಿಲ್ ಅರೆಕುಂಚಾಲ್‌ನ ಬಾಡಿಗೆ ಮನೆಯಿಂದ  ೧೪೫ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ  ಮಧ್ಯರಾತ್ರಿ ಘಟನೆ ನಡೆದಿದೆ. ಪುಲ್‌ಪರಂಬಿಲ್ ಕುಂಞಿಮೊ ಹಮ್ಮದ್ ಎಂಬವರ ಮಾಲಕತ್ವದ ಲ್ಲಿರುವ ಮನೆಯಲ್ಲಿ ಫತಾಹುಲ್ಲ ಎಂಬಾತ ಬಾಡಿಗೆಗೆ ವಾಸಿಸುತ್ತಿದ್ದನ. ಸ್ಥಳೀಯರು ನೀಡಿದ ಮಾಹಿತಿ ಆಧಾರದಲ್ಲಿ ತಾಮರಶ್ಶೇರಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇಲ್ಲಿಂದ ಮಾದಕಪದಾರ್ಥ ಪತ್ತೆಹಚ್ಚಲಾಗಿದೆ.  ಪೊಲೀಸರು ತಲುಪಿದ ಕೂಡಲೇ ಆರೋಪಿ ಪೊಲೀಸರಿಗೆ ಆಕ್ರಮಣ ನಡೆಸಿ ಪರಾರಿಯಾಗಿದ್ದಾನೆ.

ಉಪ್ಪಳ ಬಸ್ ನಿಲ್ದಾಣ ಶೌಚಾಲಯದ ಮಲಿನ ನೀರು ಸೋರಿಕೆ: ಪರಿಸರ ದುರ್ವಾಸನೆಯಿಂದ ಸಾರ್ವಜನಿಕರಿಗೆ ಸಮಸ್ಯೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ಮಲಿನ ನೀರು ಸೋರಿಕೆಯಾಗಿ ನಿಲ್ದಾಣದಲ್ಲಿ ಹರಿಯುತ್ತಿರುವುದು ಸಾರ್ವಜನಿಕರನ್ನು ಸಮಸ್ಯೆಗೀ ಡಾಗಿಸಿದೆ. ದುರ್ವಾಸನೆಯಿಂದ ನಿಲ್ದಾಣಕ್ಕೆ ತಲುಪುವ ನೂರಾರು ಪ್ರಯಾಣಿಕರ ಸಹಿತ ಸ್ಥಳೀಯ ವ್ಯಾಪಾರಿಗಳು ಮೂಗಿಗೆ ಕೈಹಿಡಿದು ನಿಲ್ಲುವಂತ ಪರಿಸ್ಥಿತಿ ಉಂಟಾಗಿರುವುದಾಗಿ ದೂರಲಾಗಿದೆ. ಅವ್ಯವಸ್ಥೆಯಿಂದ ಕೂಡಿದ ಈ ಶೌಚಾಲಯದಲ್ಲಿ ಪದೇ ಪದೇ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ತಿಳಿದಿದ್ದರೂ ದುರಸ್ತಿಗೊಳಿಸಲು ಮುಂದಾಗುತ್ತಿಲ್ಲವೆAದು ಸಾರ್ವಜನಿಕರು ಆರೋಪಿಸಿದ್ದಾರೆ. ಮಲಿನ ನೀರು ಮತ್ತು ಶೌಚಾಲಯಕ್ಕೆ ಉಪಯೋಗಿಸುವ ನೀರಿನ ಪೈಪ್‌ನಲ್ಲಿ …

ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಉಪ್ಫಳದಲ್ಲಿ ಫ್ಲೈಓವರ್ ನಿರ್ಮಾಣ ಆರಂಭ

ಉಪ್ಪಳ: ತಲಪಾಡಿಯಿಂದ ಕಾಸರಗೋಡು ಮಧ್ಯೆ ಹೆದ್ದಾರಿ ಕಾಮ ಗಾರಿ ಅತೀ ವೇಗದಿಂದ ನಡೆಯುತ್ತಿ ರುವಂತೆ ಉಪ್ಪಳ ಪೇಟೆಯಲ್ಲಿ ಪ್ಲೆöÊ ಓವರ್ ನಿರ್ಮಾಣದ ಕೆಲಸ ಆರಂಭಿ ಸಲಾಗಿದೆ. ಇಲ್ಲಿನ ಬಸ್ ನಿಲ್ದಾಣ ಬಳಿಯಿಂದ ಸುಮಾರು 200 ಮೀಟರ್ ಪ್ಲೆöÊ ಓವರ್ ನಿರ್ಮಾಣ ಗೊಳ್ಳಲಿದೆ ಎಂದು ತಿಳಿದು ಬಂದಿದೆ. ಈಗಾಗಲೇ ಕಾಮಗಾರಿಗೆ ಪೇಟೆಯ ಒಂದು ಭಾಗದ ರಸ್ತೆಯನ್ನು ಮುಚ್ಚುಗಡೆಗೊಳಿಸಲಾಗಿದ್ದು, ಪಿಲ್ಲರ್ ನ ಕೆಲಸಗಳು ಭರದಿಂದ ನಡೆಯುತ್ತಿದೆ. ಇದರಿಂದ ರಸ್ತೆ ಯಲ್ಲಿ ಸ್ಥಳವಕಾಶದ ಸಮಸ್ಯೆಯಿಂದ ವಾಹನ ಸಂಚಾರದ ವೇಳೆ ಸಮಸ್ಯೆಗೆ ಕಾರಣವಾಗುತ್ತಿದೆ. …

ಐಲ ಕ್ಷೇತ್ರದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ  ಅ. ೧೫ರಿಂದ

ಉಪ್ಪಳ: ಐಲ ಶ್ರೀದುರ್ಗಾಪರ ಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಮಹೋತ್ಸವ ಈ ತಿಂಗಳ 15ರಿಂದ 23ರ ತನಕ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ಪೌರೋಹಿv್ಯÀದಲ್ಲಿ ವಿವಿಧ ಧಾರ್ಮಿಕ ಹಾಗೂ ಸಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ ಗಣಹೋಮ, ಮಧ್ಯಾಹ್ನ 12.30ಕ್ಕೆ ಹೂವಿನ ಪೂಜೆ, ಮಹಾ ಪೂಜೆ, ಸಂತರ್ಪಣೆ, ರಾತ್ರಿ 7.30ಕ್ಕೆ ಹೂವಿನ ಪೂಜೆ, ಮಹಾಪೂಜೆ, ಬೆಳಿಗ್ಗೆ 10ರಿಂದ, ಸಂಜೆ 6ರಿಂದ, ರಾತ್ರಿ 7.30 ಭಜನೆ ನಡೆಯಲಿದೆ. ರಾತ್ರಿ 9ರಿಂದ ರಂಗಪೂಜೆ, 20ರಂದು ಚಂಡಿಕಾ …

ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ

ಕಾಸರಗೋಡು: ನಗರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಈ ತಿಂಗಳ ೧೫ರಿಂದ ೨೪ರವರೆಗೆ ಜರಗಲಿದೆ. ೧೫ರಂದು ಬೆಳಿಗ್ಗೆ ೮ಕ್ಕೆ ಮಹಾಗಣಪತಿ ಹವನ, ನವಕಾಭಿಷೇಕ, ವಿಶೇಷ ಸೇವೆಗಳು, ಮಹಾಪೂಜೆ, ೯ರಿಂದ ಭಜನೆ, ಅಪರಾಹ್ನ ೨.೩೦ಕ್ಕೆ ಶ್ರೀ ವೆಂಕಟ್ರಮಣ ಸ್ವಾಮಿ ಕೃಪಾಶ್ರಿತ ಯಕ್ಷಗಾನ ತರಬೇತಿ ಕೇಂದ್ರದ ಆರನೇ ವಾರ್ಷಿಕೋತ್ಸವ. ಸಭಾ ಕಾರ್ಯಕ್ರಮ, ಉದ್ಘಾಟನೆ, ಗೌರವಾರ್ಪಣೆ, ನಾಟ್ಯಗುರು ರಾಕೇಶ್ ರೈ ಅಡ್ಕ ಅವರ ನಿರ್ದೇಶನದಲ್ಲಿ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ‘ವಾಲಿಮೋಕ್ಷ-ಇಂದ್ರಜಿತು ಕಾಳಗ’ ಪ್ರದರ್ಶನಗೊಳ್ಳಲಿದೆ. ೭ರಿಂದ ಭಜನೆ, …

ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ಫೆ. ೪ರಿಂದ

ಕುಂಬಳೆ: ಬಂದ್ಯೋಡು ಬಳಿಯ ಇಚ್ಲಂಗೋಡು ಪಚ್ಚಂಬಳ ಬಾವ ಫಕೀರ್ ವಲಿಯುಲ್ಲಾಗಿ ಅಳರಮಿ ಮಖಾಂ ಉರೂಸ್ ೨೦೨೪ ಫೆಬ್ರವರಿ ೪ರಿಂದ ೧೮ರವರೆಗೆ ಜರಗಲಿದೆಯೆಂದು ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ತಿಂಗಳ ೨೧ರಂದು ನಡೆದ ಧ್ವಜಾರೋಹಣದೊಂದಿಗೆ ಉರೂಸ್‌ಗಿರುವ ಸಿದ್ಧತೆಗಳು ಆರಂಭಗೊಂಡಿದೆ. ಉರೂಸ್ ನಡೆಯುವ ದಿನಗಳಲ್ಲಿ ಮತಪಂಡಿತರಿಂದ ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಮೊದಲಾದ ಕಾರ್ಯಕ್ರಮ ನಡೆಯಲಿದೆ. ೧೮ರಂದು ಅನ್ನದಾನವಿರುವುದು. ಕರ್ನಾಟಕದಿಂದಲೂ, ಜಿಲ್ಲೆಯ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ಇಚ್ಲಂಗೋಡು …

ವಾಟ್ಸಪ್ ಸಂದೇಶ ನೀಡಿ ಪೊಲೀಸ್ ಚಾಲಕ ಆತ್ಮಹತ್ಯೆ

ಮೂವಾಟುಪುಳ: ಕಳಮಶ್ಶೇ ರಿಯ ಏರ್ ಕ್ಯಾಂಪ್‌ನ ಪೊಲೀಸ್ ಚಾಲಕ ಮನೆಯೊಳಗೆ ನೇಣುಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾ ಗಿದೆ. ಮೂವಾಟುಪುಳ ವಾಳಗಂ ರಾಖಾಡ್ ಮುರಿಙೋತ್ತಿಲ್‌ನ ಜೋಬಿ ಡಿ ದಾಸ್ (೪೮) ಮೃತಪಟ್ಟವರು. ಸಹೋ ದ್ಯೋಗಿಗಳು ನನ್ನ ಮರಣಕ್ಕೆ ಕಾರಣವೆಂದು ಡೈರಿಯಲ್ಲಿ  ಬರೆದಿರು ವುದು ಪತ್ತೆಹಚ್ಚಲಾಗಿದೆ. ನಿನ್ನೆ ಮಧ್ಯಾಹ್ನ ೨ ಗಂಟೆಗೆ ತಲುಪಿದ ಪೊಲೀಸರು ಜೋಬಿಯನ್ನು ನೇಣಿಬಿಗಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಇದಕ್ಕೂ ಮೊದಲು ಇವರು ತಾನು ಸಾಯುತ್ತೇನೆಂದು ಪೊಲೀಸ್ ಚಾಲಕರ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ಕಳುಹಿಸಿದ್ದರು. ಇದನ್ನು ತಿಳಿದು ಪೊಲೀಸರು …

ಚಿನ್ನ ಸಾಗಾಟ ಇಬ್ಬರ ಸೆರೆ

ಕಲ್ಲಿಕೋಟೆ: ಕರಿಪ್ಪೂರ್ ವಿಮಾನ ನಿಲ್ದಾಣದಲ್ಲಿ ಎರಡು ಕಿಲೋದಷ್ಟು ಚಿನ್ನವನ್ನು ಏರ್ ಕಸ್ಟಮ್ಸ್ ವಿಭಾಗ ವಶಪಡಿಸಿದೆ. ಗುದದ್ವಾರದಲ್ಲಿ ಬಚ್ಚಿಟ್ಟು, ಜ್ಯೂಸರ್‌ನಲ್ಲಿ ಅಡಗಿಸಿಟ್ಟು  ಚಿನ್ನ ಸಾಗಿಸಿದ ಇಬ್ಬರನ್ನು ಕಸ್ಟಡಿಗೆ ತೆಗೆಯಲಾಗಿದೆ. ದಮಾಂನಿಂದ ತಲುಪಿದ ಮಲಪ್ಪುರಂ ನಿವಾಸಿ ಅಮೀರ್ ಪಡಯಂಗಡಿ (೪೦) ಎಂಬಾತನನ್ನು ಶಂಕೆ ಆಧಾರದಲ್ಲಿ ಕಸ್ಟಮ್ಸ್ ಕಸ್ಟಡಿಗೆ ತೆಗೆದಿದೆ. ಈತನನ್ನು ಪರಿಶೀಲಿಸಿದಾಗ ೧೦೭೦.೨೪೦ ಗ್ರಾಂ ತೂಕದ ೪೦ ಕ್ಯಾಪ್ಸೂಲ್ ಚಿನ್ನ ಮಿಶ್ರಿತವನ್ನು ಪತ್ತೆಮಾಡಲಾಗಿದೆ. ಬಳಿಕ ಮಸ್ಕತ್‌ನಿಂದ ತಲುಪಿದ ವಿಮಾನದಿಂದ ಕಲ್ಲಿಕೋಟೆ ನಿವಾಸಿ ಮುಹಮ್ಮದ್ ರಮೀಸ್ (೨೮)ನನ್ನುಕಸ್ಟಡಿಗೆ ತೆಗೆದು ಪರಿಶೀಲಿಸಿದಾಗ ಜ್ಯೂಸರ್‌ನಲ್ಲಿ …

ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಂತೆ ಹೈಕೋರ್ಟ್ ನಿರ್ದೇಶ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳಿಗೆ ಶೀಘ್ರ ವಿದ್ಯುತ್ ಸಂಪರ್ಕ ಒದಗಿಸಲು ಅಗತ್ಯದ ಕ್ರಮ ಕೈಗೊಳ್ಳುವಂತೆ ರಾಜ್ಯ ಹೈಕೋರ್ಟ್ ಕಾಸರಗೋಡು ಜಿಲ್ಲಾಧಿಕಾರಿಗೆ ನಿರ್ದೇಶ ನೀಡಿದೆ. ಎಂಡೋಸಲ್ಫಾನ್ ಸಂತ್ರಸ್ತರ ಪುನರ್ವಸತಿಗಾಗಿ ತಾವು ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ನೀಡಲಾಗಿಲ್ಲವೆಂದು ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಕೊನೆಗೆ ಈ ನಿರ್ದೇಶ ನೀಡಿದ್ದಾರೆ. ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಲಾಗಿರುವ ಮನೆಗಳನ್ನು ಸಕಾಲದಲ್ಲಿ ಅವರಿಗೆ  ಹಸ್ತಾಂತರಿಸದ …

ಕುಂಬಳೆ ಉಪಜಿಲ್ಲಾ ಕ್ರೀಡಾಕೂಟಕ್ಕೆ ಚಾಲನೆ

ಬದಿಯಡ್ಕ : ಕ್ರೀಡೆ, ಆಟೋಟ ಗಳು ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಉತ್ತಮಪಡಿಸಲು ಪೂರಕ ಎಂದು ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಕಚೇರಿಯ ಹಿರಿಯ ಅಧಿಕಾರಿ ಕರುಣಾಕರ ಅಭಿಪ್ರಾಯ ಪಟ್ಟರು. ಬದಿಯಡ್ಕ ಬೋಳುಕಟ್ಟೆ ಕ್ರೀಡಾಂಗ ಣದಲ್ಲಿ ಕುಂಬಳೆ ಉಪ ಜಿಲ್ಲಾ ಕ್ರೀಡಾಕೂಟದ ಧ್ವಜಾ ರೋಹಣ ನೆರವೇರಿಸಿ ಅವರು ಮಾತನಾಡಿ ದರು. ಪಂಚಾಯತ್ ಸದಸ್ಯ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾ ಕಾರ್ಯ ದರ್ಶಿ ಶಶಿಕಾಂತ್, ಮುಖ್ಯ ಶಿಕ್ಷಕ ಸಂಘದ ವಿಷ್ಣು ಪಾಲ್, ಪಂಚಾ ಯತ್ ಶಿಕ್ಷಣ ಸಮಿತಿಯ ಸುಬ್ರಹ್ಮಣ್ಯ …