ಬೇಪೂರು ಆಳ ಸಮುದ್ರದಲ್ಲಿ ಬೆಂಕಿ ತಗಲಿದ ಹಡಗಿನಲ್ಲಿ ಮಾರಕ ವಿಷ ಪದಾರ್ಥಗಳು: ಕರಾವಳಿಯಲ್ಲಿ ಭಾರೀ ಆತಂಕ ಸೃಷ್ಟಿ, ಈಗಲೂ ಹೊತ್ತಿ ಉರಿಯುತ್ತಿರುವ ಹಡಗು

ಕಲ್ಲಿಕೋಟೆ: ಇಲ್ಲಿಗೆ ಸಮೀಪದ ಬೇಪೂರು ಸಮುದ್ರ ತೀರದಿಂದ 88 ನೋಟಿಕಲ್ ಮೈಲು ದೂರದ ಆಳ ಸಮುದ್ರದಲ್ಲಿ ಬೆಂಕಿ ಅವಘಡಕ್ಕೊಳಗಾದ ಶ್ರೀಲಂಕಾದ ಕೊಲಂಬೋದಿAದ ಮುಂಬೈಗೆ ಹೋಗುತ್ತಿದ್ದ ಸಿಂಗಾಪುರ್ ನೋಂದಾಯಿತ ಸರಕು ಹಡಗಿನಲ್ಲಿರುವ ಕಂಟೈನರ್ಗಳಲ್ಲಿ ಭಾರೀ ಮಾದಕ ವಿಷ ದ್ರವ್ಯಗಳು ಒಳಗೊಂಡಿದ್ದು, ಅದು ಕೇರಳದ ಕರಾವಳಿ ಪ್ರದೇಶಗಳಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಈ ಸರಕು ಹಡಗಿನಲ್ಲಿ ಸುಮಾರು 650 ಕಂಟೈನರ್ಗಳಿದ್ದು, ಇಂಟರ್ ನೇಶನಲ್ ಮ್ಯಾರಿಟೈಂ ಆರ್ಗನೈಸೇಶನ್ನ ಮಾರ್ಗಸೂಚಿ ಪ್ರಕಾರ ಕ್ಲಾಸ್ 6.1ರಲ್ಲಿ ಒಳಪಡುವ ಭಾರೀ ವಿಷಕಾರಿ ಕೀಟನಾಶಗಳು ಈ ಕಂಟೈನರ್ಗಳಲ್ಲಿವೆ. …

ವಿವಾಹ ಕಾರ್ಯಕ್ರಮದಲ್ಲಿ ಬಡಿಸಿದ ಆಹಾರದಿಂದ 150 ಮಂದಿಗೆ ಹಳದಿ ಕಾಮಾಲೆ

ಕೊಚ್ಚಿ: ಎರ್ನಾಕುಳಂ ಮೂವಾಟು ಪುಳದಲ್ಲಿ ಒಂದು ತಿಗಳ ಹಿಂದೆ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗ ವಹಿಸಿದ 150 ಮಂದಿಗೆ ಹಳದಿ ಕಾಮಾಲೆ ಖಚಿತಪಡಿಸಲಾಗಿದೆ. ವಿವಾಹಕ್ಕೆ ಮುಂಚಿತವಾಗಿ ನಡೆದ ಸಿಹಿ ಹಂಚುವ ಕಾರ್ಯಕ್ರಮದಲ್ಲಿ ಬಡಿಸಿದ ಆಹಾರದಿಂದ ರೋಗ ಹರಡಿರ ಬೇಕೆಂದು ಶಂಕಿಸಲಾಗಿದೆ. ಮೇ 5ರಂದು ಆವೋಲಿ ಪಂಚಾಯತ್ ನಡುಕ್ಕರದಲ್ಲಿ ವಿವಾಹ ನಡೆದಿತ್ತು. ಇದರ ಪೂರ್ವ ಭಾವಿಯಾಗಿ 3ರಂದು ಮನೆಯಲ್ಲಿ ಗೆಳೆ ಯರಿಗಾಗಿ ಸಿಹಿ ಹಂಚುವ ಕಾರ್ಯ ಕ್ರಮ ನಡೆಸಲಾಗಿದ್ದು, ಜನಪ್ರತಿನಿಧಿಗಳ ಸಹಿತ ಹಲವರು ಭಾಗವಹಿಸಿದ್ದು, ಇವರಿಗೆ ರೋಗ ಖಚಿತಪಡಿಸಲಾಗಿದೆ.

ಹೆದ್ದಾರಿ ಸೂಚನಾ ಫಲಕಗಳಲ್ಲಿ ಕಣ್ಮರೆಯಾಗುತ್ತಿರುವ ಕನ್ನಡ: ಗಡಿ ಪ್ರಾಧಿಕಾರದಿಂದ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ

ಕಾಸರಗೋಡು: ಸ್ಥಳ ನಾಮಗಳು, ಸೂಚನಾ ಫಲಕಗಳು ಆ ಪ್ರದೇಶದ ಭಾಷಾ ಪರವಾದ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕರ್ನಾಟಕ ಕೇರಳದ ಗಡಿ ಪ್ರದೇಶವಾದ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಾಯಕರ ಹೋರಾ ಟದ ಫಲವಾಗಿ ಕಂಡುಬರುತ್ತಿದ್ದ ಸ್ಥಳ ಸೂಚಕ ಫಲಕಗಳು ಈಗ ಕಣ್ಮರೆ ಯಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಬದಿ ಯಲ್ಲಿ ಅಲ್ಲಲ್ಲಿ ಕಂಗೊಳಿಸುತ್ತಿದ್ದ ಕನ್ನಡ ಅಕ್ಷರಗಳು ಹೆದ್ದಾರಿ ಅಭಿವೃದ್ಧಿ ವೇಳೆ ಮಣ್ಣಿನಡಿಗೆ ಬಿದ್ದಿದ್ದು, ಈಗ ಅದು ಕಣ್ಮರೆ ಯಾಗಿದೆ. ಹೆದ್ದಾರಿ ನವೀಕೃತಗೊಂಡು ಸಂಚಾರಕ್ಕೆ ತೆರೆದುಕೊಡಲು  ಸಿದ್ಧತೆ ನಡೆಯುತ್ತಿರುವ ಮಧ್ಯೆ ಅಲ್ಲಲ್ಲಿ …

ನಾಗರಿಕರ ತೀವ್ರ ಒತ್ತಾಯದ ಬಳಿಕ ಆರಂಭಿಸಿದ ತಂಗುದಾಣ ನಿರ್ಮಾಣ ಅಪೂರ್ಣ

ಕುಂಬಳೆ: ಸಾರ್ವಜನಿಕರ ದೀರ್ಘ ಕಾಲದ ಬೇಡಿಕೆ ಬಳಿಕ ಕುಂಬಳೆ ಭಾಸ್ಕರನಗರದಲ್ಲಿ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿ ದ್ದರೂ ಅದಿನ್ನೂ ಪೂರ್ಣ ಗೊಂಡಿಲ್ಲ. ತಂಗುದಾಣದ ಅರ್ಧ ಕೆಲಸ ಮಾತ್ರವೇ ನಡೆದಿದೆ. ಇದೇ ವೇಳೆ ನೆಲಕ್ಕೆ ಹಾಸಿದ ಟೈಲ್ಸ್‌ಗಳು ಕಳಚಿಕೊಳ್ಳಲು ತೊಡಗಿದೆ. ಇಲ್ಲಿ ಬೀದಿ ದೀಪ ಅಳವಡಿಸಿಲ್ಲ. ಇದರಿಂದ ರಾತ್ರಿ ಹೊತ್ತಿನಲ್ಲಿ ಈ ಪ್ರದೇಶ ಕತ್ತಲೆ ಆವರಿಸಿರುತ್ತದೆ. ಇದೇ ವೇಳೆ ಬಸ್ ಪ್ರಯಾಣಿಕರ ತಂಗುದಾಣ ಎಂಬ ಫಲಕ ಕೂಡಾ ಸ್ಥಾಪಿಸಿಲ್ಲ. ಇದರಿಂದ ಇಲ್ಲಿ ಕೆಲವು ಬಸ್‌ಗಳನ್ನು  ನಿಲ್ಲಿ …

ಬೀಚ್ ರಸ್ತೆಗೆ ಜಸ್ಟೀಸ್ ಯು.ಎಲ್. ಭಟ್‌ರ ಹೆಸರು ನೀಡಲು ಸಿಪಿಐ ಒತ್ತಾಯ

ಕಾಸರಗೋಡು: ಕಾಸರಗೋಡಿನಲ್ಲಿ ಈ ಹಿಂದೆ ರಾಜಕೀಯ, ಸಾಂಸ್ಕೃತಿಕ ವಲಯಗಳಲ್ಲಿ ಖ್ಯಾತರಾಗಿದ್ದ ಪಂಚಾಯತ್ ಅಧ್ಯಕ್ಷ ಹಾಗೂ ಕಾಸರಗೋಡು ಪಂಚಾಯತ್‌ನ್ನು ನಗರಸಭೆಯಾಗಿ ಭಡ್ತಿಗೊಳಿಸಿದಾಗ ಅಡ್ವೈಸರಿ ಬೋರ್ಡ್ ಚೆಯರ್‌ಮೆನ್ ಆಗಿದ್ದ ದಿ| ಜಸ್ಟೀಸ್ ಯು.ಎಲ್. ಭಟ್‌ರ ಸ್ಮರಣೆಯನ್ನು ಚಿರಸ್ಥಾಯಿಗೊಳಿ ಸಲು ಅವರ ಕಚೇರಿ ಕಾರ್ಯಾ ಚರಿಸುತ್ತಿದ್ದ ಬೀಚ್ ರಸ್ತೆಗೆ ಜಸ್ಟೀಸ್ ಯು.ಎಲ್. ಭಟ್ ರಸ್ತೆ ಎಂದು ನಾಮಕರಣ ಗೈಯ್ಯಬೇಕೆಂದು ಸಿಪಿಐ ಮಂಡಲ ಸಮ್ಮೇಳನ ನಗರಸಭೆಯೊಂ ದಿಗೆ ಆಗ್ರಹಿಸಿದೆ. ನಿರ್ಮಾಣದ ಕುಂದುಕೊರತೆ ಗಳನ್ನು ಪರಿಹರಿಸಿ ಅಪಾಯರಹಿತವಾದ ರೀತಿಯಲ್ಲಿ ಹೆದ್ದಾರಿ ನಿರ್ಮಾಣ ಪೂರ್ತಿಗೊಳಿಸಬೇಕು, ಸರಕಾರಿ …

ಮೋದಿ ಅಧಿಕಾರಕ್ಕೇರಿ 11 ವರ್ಷ: ನಮೋ ಫ್ಯಾನ್ಸ್ ಕಾಸರಗೋಡಿನಿಂದ ವಿಶೇಷ ಕಾರ್ತಿಕಪೂಜೆ

ಕಾಸರಗೋಡು: ಮೋದಿ ಫ್ಯಾನ್ಸ್ ಕಾಸರಗೋಡು ಇದರ ಆಶ್ರಯದಲ್ಲಿ  ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರ ಹೆಸರಲ್ಲಿ ಪ್ರತೀ ತಿಂಗಳು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾರ್ತಿಕಪೂಜೆ ನಡೆಸಲಾಗುತ್ತಿದ್ದು, 11 ವರ್ಷ ತುಂಬಿದ ಈ ತಿಂಗಳ ೯ರಂದು ವಿಶೇಷ ಕಾರ್ತಿಕಪೂಜೆ ಹಮ್ಮಿಕೊಳ್ಳಲಾಗಿತ್ತು. ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಪೂಜೆ ನೆರವೇರಿಸಿದರು. ಜಯಶಂಕರ ಅಡಿಗ ಪ್ರಾರ್ಥಿಸಿದರು. ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್, ಕಾರ್ಯದರ್ಶಿ ಸುನಿಲ್ ಪಿ. ಅವರನ್ನು ಗೌರವಿಸಲಾಯಿತು. ನಗರಸಭಾ ಸದಸ್ಯರಾದ ಶ್ರೀಲತಾ …

ಗೆಳೆಯನ ತಂದೆಗೆ ರಕ್ತದಾನ ಮಾಡಿದ ಮರುಕ್ಷಣ ಯುವಕ ಹೃದಯಾಘಾತದಿಂದ ನಿಧನ

ಕೊಲ್ಲಂ: ಗೆಳೆಯನ ತಂದೆಯ ಜೀವ ಉಳಿಸಲು ರಕ್ತದಾನ ಮಾಡಿದ ಮರು ಕ್ಷಣದಲ್ಲೇ ಹೃದಯಾಘಾತದಿಂದ ಯುವಕ ಮೃತಪಟ್ಟನು. ಪುನಲೂರು ಮಣಿಯಾರ್ ಪರವಟ್ಟಂ ಮಹೇಶ್ ಭವನ್ ನಿವಾಸಿ ದಿ| ಮನೋಹರ- ಶ್ಯಾಮಳ ದಂಪತಿ ಪುತ್ರ ಮಹೇಶ್ (36) ಮೃತಪಟ್ಟ ಯುವಕ. ಪುನಲೂರು ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ಮಧ್ಯಾಹ್ನ ಘಟನೆ ನಡೆದಿದೆ. ಪುನಲೂರು ತಾಲೂಕು ಆಸ್ಪತ್ರೆಯ ಪಾಲಿಯೇಟಿವ್ ಕೇರ್ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದ ಗೆಳೆಯನ ತಂದೆಗೆ ರಕ್ತದಾನ ಮಾಡಲು ಮಹೇಶ್ ಆಸ್ಪತ್ರೆಗೆ ತಲುಪಿದ್ದರು. ರಕ್ತ ಸಂಗ್ರಹದ ಮುಂಚಿತ ಯುವಕನನ್ನು ವೈದ್ಯಾಧಿಕಾರಿ ಗಳು ಪರಿಶೀಲಿಸಿದ್ದರು. …

ನುಳ್ಳಿಪ್ಪಾಡಿ ಕ್ಷೇತ್ರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಾಲೋಚನಾ ಸಭೆ 15ರಂದು

ಕಾಸರಗೋಡು: ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವ ಸಮಾಲೋಚನಾ ಸಭೆ ಹಾಗೂ ಸಮಿತಿ ರೂಪೀಕರಣ ಸಭೆ ಈ ತಿಂಗಳ 15ರಂದು ಸಂಜೆ 3 ಗಂಟೆಗೆ ಕ್ಷೇತ್ರ ಪರಿ ಸರದಲ್ಲಿ ನಡೆಯಲಿದೆ. ಬ್ರಹ್ಮಶ್ರೀ ಉಳಿ ಯತ್ತಾಯ ವಿಷ್ಣು ಆಸ್ರ ಉಪಸ್ಥಿತರಿ ರುವರು. 2011ರಲ್ಲಿ ನವೀಕರಣ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಜರಗಿದ್ದು, ಮುಂದಿನ ಬ್ರಹ್ಮಕಲಶ 2026 ಎಪ್ರಿಲ್‌ನಲ್ಲಿ ನಡೆಸಲು ತೀರ್ಮಾನಿಸಲಾ ಗಿದ್ದು, ಸಭೆಯನ್ನು ಯಶಸ್ವಿ ಗೊಳಿಸಬೇಕೆಂದು ಪದಾಧಿಕಾರಿಗಳು ವಿನಂತಿಸಿದ್ದಾರೆ.

ದುಷ್ಕರ್ಮಿಗಳಿಗೆ ಇನ್ನು ತಪ್ಪಿಸಲಸಾಧ್ಯ: ಜಿಲ್ಲೆಯ 2060 ಸಿಸಿ ಟಿವಿಗಳ ಮ್ಯಾಪಿಂಗ್ ನಡೆಸಿದ ಪೊಲೀಸರು

ಕಾಸರಗೋಡು: ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ, ದುಷ್ಕೃತ್ಯ ಕಳವು, ಮದ್ಯ ಮತ್ತು ಮಾದಕ ವಸ್ತು ವ್ಯವಹಾರಗಳನ್ನು ಪತ್ತೆಹಚ್ಚಲು ಸಮಗ್ರ ಹೆಜ್ಜೆ ಎಂಬಂತೆ ಪೊಲೀಸರು ಜಿಲ್ಲೆಯ ಪ್ರಧಾನ ಕೇಂದ್ರಗಳ 2060 ಸಿಸಿ ಟಿವಿ ಕ್ಯಾಮರಾಗಳ ಮ್ಯಾಪಿಂಗ್ ನಡೆಸಿದ್ದಾರೆ. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಈ ವಿಷಯ ತಿಳಿಸಿದ್ದಾರೆ. ಜಿಲ್ಲೆಯ ಗಡಿ ಪ್ರದೇಶವಾದ ತಲಪ್ಪಾಡಿಯಿಂದ ಆರಂಭಗೊಂಡು ಕಾಲಿಕಡವಿನ ತನಕದ ಪ್ರದೇಶಗಳ ಸಿಸಿಟಿವಿ ಕ್ಯಾಮರಾಗಳನ್ನು ಮ್ಯಾಪಿಂಗ್‌ನಲ್ಲಿ ಒಳಪಡಿಸಲಾಗಿದೆ. ಇದರಂತೆ ಈ ಎಲ್ಲಾ ಸಿಸಿಟಿವಿ ಕ್ಯಾಮರಾಗಳ ಮೇಲೆ ಪೊಲೀಸರು ಸದಾ ತೀವ್ರ ನಿಗಾ ಇರಿಸುವರು. …

ಮಲೆನಾಡು ಹೆದ್ದಾರಿಯಲ್ಲಿ ಸಂಚರಿಸುವ ಮಹಾಲಕ್ಷ್ಮಿ  ಬಸ್ ಲಾಲ್‌ಭಾಗ್ ವರೆಗೆ ತಲುಪಲು ಆಗ್ರಹ

ಪೈವಳಿಕೆ: ಕಾಸರಗೋಡಿನಿಂದ ವಿದ್ಯಾನಗರ ಮೂಲಕ ಸೀತಾಂಗೋಳಿಯಲ್ಲಾಗಿ ಮಲೆನಾಡು ಹೆದ್ದಾರಿಯಲ್ಲಿ ಸಂಚರಿಸುವ ಖಾಸಗಿ ಬಸ್ ಲಾಲ್‌ಭಾಗ್‌ವರೆಗೆ ತೆರಳಿ ಮರಳಿ ಮುಡಿಪುಗೆ ಸಂಚರಿಸಬೇಕೆಂದು ಸಿಪಿಎಂ ಆಗ್ರಹಿಸಿದೆ. ಈಗ ಪೈವಳಿಕೆ ಮೂಲಕ ಸಂಚರಿಸುವ ಬಸ್ ಲಾಲ್‌ಬಾಗ್ ವರೆಗೆ ಸಂಚರಿಸಿ ಹಿಂತಿರುಗಿದರೆ ಬಾಯಾರು, ಚಿಪ್ಪಾರು, ಲಾಲ್‌ಭಾಗ್ ಪ್ರದೇಶದ ಜನರಿಗೆ ಉಪಕಾರಪ್ರದವಾಗಬಹುದು. ಈಗ ಈ ಪ್ರದೇಶದ ಜನರು ಈ ಬಸ್‌ನಲ್ಲಿ ಸಂಚರಿಸಲು ಪೈವಳಿಕೆ ವರೆಗೆ ಇತರ ವಾಹನದಲ್ಲಿ ಸಂಚರಿಸಬೇಕಾಗುತ್ತಿದೆ. ಇದು ಸಮಯ ಹಾಗೂ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಬಸ್ ಲಾಲ್‌ಭಾಗ್ ವರೆಗೆ …