ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಾರ್ಚ್
ಉಪ್ಪಳ: ಮುಸ್ಲಿಂ ಲೀಗ್ ಆಡಳಿತದ ವೈಫಲ್ಯ ಹಾಗೂ ದುರಾಡಳಿತದ ವಿರುದ್ದ ಮಂಗಲ್ಪಾಡಿ ಪಂಚಾಯತ್ ಕಚೇರಿಗೆ ಬಿಜೆಪಿ ಮಂಗಲ್ಪಾಡಿ ಪಂಚಾಯತ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬೆಳಿಗ್ಗೆ ಮಾರ್ಚ್ ನಡೆಸಲಾಯಿತು. ಕೈಕಂಬದಿAದ ಹೊರಟ ಮಾರ್ಚ್ ಪಂಚಾಯತ್ ಕಚೇರಿ ತನಕ ನಡೆಯಿತು. ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಬಿಜೆಪಿ ಪಂಚಾಯತ್ ಸಮಿತಿ ಅಧ್ಯಕ್ಷ ರಾಮಚಂದ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಮುSಂಡರಾದ ಸುನಿಲ್ ಕುಮಾರ್ ಅನಂತಪುರ, ವಸಂತ ಕುಮಾರ್ ಮಯ್ಯ, ಅನಿಲ್ …