ಬಾಳಿಗೆ ಅಸೀಸ್ ಕೊಲೆ ಪ್ರಕರಣ೧೬ ಆರೋಪಿಗಳ ಪೈಕಿ ೧೧ ಮಂದಿಯ ಖುಲಾಸೆ

ಕಾಸರಗೋಡು: ಪೈವಳಿಕೆ ಬಾಯಿಕಟ್ಟೆಯ ಬಾಳಿಗೆ ಅಸೀಸ್ ಕೊಲೆ ಪ್ರಕರಣದ ೧೬ ಮಂದಿ ಆರೋಪಿಗಳ ಪೈಕಿ ೧೧ ಮಂದಿಯ ಮೇಲಿನ ಆರೋಪ ವಿಚಾರಣೆಯಲ್ಲಿ ಸಾಬೀತುಗೊಳ್ಳದ ಹಿನ್ನೆಲೆಯಲ್ಲಿ  ಅವರನ್ನು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೨) ಖುಲಾಸೆಗೊಳಿಸಿ ತೀರ್ಪು ನೀಡಿದೆ. ಈ ಪ್ರಕರಣದ ಇತರ ಐವರು ಆರೋಪಿಗಳು ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗಲಿಲ್ಲ. ಆದ್ದರಿಂದಾಗಿ ಅವರ ಮೇಲಿನ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಪ್ರತ್ಯೇಕಗೊಳಿಸಿ ಮುಂದೂಡಿದೆ. ೨೦೧೪ ಜನವರಿ ೨೫ರಂದು  ರಾತ್ರಿ ೯ ಗಂಟೆಗೆ ಪೈವಳಿಕೆ ಚೇವಾರು ರಸ್ತೆ ಜಂಕ್ಷನ್‌ನಲ್ಲಿ …

ಗಾಂಧಿ ಜಯಂತಿ: ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಗಣ್ಯರಿಂದ ನಮನ

ನವದೆಹಲಿ: ಮಹಾತ್ಮಾಗಾಂಧಿ ಅವರ ೧೫೪ನೇ  ಜನ್ಮ ದಿನವನ್ನು ಇಂದು ದೇಶಾದ್ಯಂತ ಶುಚಿತ್ವ ಅಭಿ ಯಾನ ಇತ್ಯಾದಿ ವಿಶೇಷ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಗುತ್ತಿದೆ. ಜನ್ಮ ದಿನದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರಮೋದಿ, ಇತರ  ಹಲವು ಗಣ್ಯರು ಇಂದು ದೆಹಲಿಯ ರಾಜ್‌ಘಾಟ್‌ಗೆ ತೆರಳಿ ಗಾಂಧಿ ಸ್ಮಾರಕಕ್ಕೆ ಪುಷ್ಪಾರ್ಚನೆ ನಡೆಸಿ ನಮನ ಸಲ್ಲಿಸಿದರು. ಮಹಾತ್ಮಾಗಾಂಧಿಯವರ  ಕಾಲಾತೀತ ಬೋಧನೆಗಳು ನಮ್ಮ ಮಾರ್ಗವನ್ನು ಬೆಳಗಿಸುತ್ತಲೇ ಇರುತ್ತದೆ. ಅವರ ಕನಸು ನನಸಾಗಲು ನಾವು ಯಾವಾಗಲೂ ಕೆಲಸ ಮಾಡೋಣ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರು …

ಹೋಮ್ ನರ್ಸ್‌ನ ಕೊಲೆ: ಓರ್ವನಿಗೆ ಜೀವಾವಧಿ ಹಾಗೂ ಇನ್ನೋರ್ವನಿಗೆ ಐದು ವರ್ಷ ಸಜೆ

ಕಾಸರಗೋಡು: ಚೆರುವತ್ತೂರಿನ ಹೋಮ್ ನರ್ಸಿಂಗ್ ಸಂಸ್ಥೆಯ ಸಿಬ್ಬಂದಿ ತೃಕರಿಪುರ ಒಳವರ ಮಾವಿಲಂಗಾಡ್ ಕಾಲನಿಯ ಸಿ. ರಜನಿ (೩೪) ರನ್ನು ಕೊಂದು ಹೂತು ಹಾಕಿದ ಪ್ರಕರಣದ ಒಂದನೇ ಆರೋಪಿ ಆದೇ ಹೋಮ್ ನರ್ಸ್ ಸಂಸ್ಥೆಯ ಮಾಲಕ ನೀಲೇಶ್ವರ ಕಣಿಚ್ಚಿರದ ಪೈನಿ ವೀಡಿನ ಪಿ. ಸತೀಶನ್ (೪೮)ನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಜೀವಾವಧಿ ಸಜೆ ಮತ್ತು ಐದು ವರ್ಷ ಕಠಿಣ ಸಜೆ ಹಾಗೂ ಎರಡು ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದ …

ಪೆಟ್ರೋಲ್ ಬಂಕ್‌ನಲ್ಲಿ ದಾಂಧಲೆ: ೩೬,೦೦೦ ರೂ. ನಷ್ಟ

ಕಾಸರಗೋಡು: ನಗರದ ಪ್ರೆಸ್ ಕ್ಲಬ್ ಜಂಕ್ಷನ್‌ಬಳಿಯಿರುವ  ಪೆಟ್ರೋಲ್ ಬಂಕ್‌ಗೆ ಬೈಕ್‌ನಲ್ಲಿ ಪೆಟ್ರೋಲ್ ತುಂಬಿಸಿದ ಹಣದ ವಿಷಯದಲ್ಲಿ ಉಂಟಾದ ವಾಗ್ವಾದದಲ್ಲಿ ಯುವಕನೋರ್ವ ದಾಂಧಲೆ ಸೃಷ್ಟಿಸಿ ಭಾರೀ ನಷ್ಟ ಉಂಟುಮಾಡಿದ ಘಟನೆ ಮೊನ್ನೆ ರಾತ್ರಿ ನಡೆದಿದೆ. ಇದಕ್ಕೆ ಸಂಬಂಧಿಸಿ  ಪ್ರಸ್ತುತ ಪೆಟ್ರೋಲ್ ಬಂಕ್ ಸಿಬ್ಬಂದಿ ಅಡ್ಕತ್ತಬೈಲ್‌ನ ಅಭಿಜಿತ್ ನೀಡಿದ ದೂರಿನಂತೆ ಹಲವು ಪ್ರಕರಣಗಳ ಆರೋಪಿ ಹಾಗೂ ಕಾಪಾ ಪ್ರಕಾರ ಬಂಧಿತನಾಗಿ  ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ಬಟ್ಟಂಬಾರೆಯ ಮಹೇಶ್ (೩೨) ಎಂಬಾತನ ವಿರುದ್ಧ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈತ ಮೊನ್ನೆ …

ಧಾರ್ಮಿಕ ಮುಂದಾಳು ಸದಾನಂದ ವೈದ್ಯರ್ ನಿಧನ

ಉಪ್ಪಳ: ಕೈಕಂಬದಲ್ಲಿ ಜೀವಾಮೃತ ವೈದ್ಯ ಶಾಲೆಯ ವೈದ್ಯ ಕೈಕಂಬ ನಿವಾಸಿ ಸದಾನಂದ ವೈದ್ಯರ್ (೮೩) ಶನಿವಾರ ಸಂಜೆ ಸ್ವಗೃಹದಲ್ಲಿ ನಿಧನರಾದರು. ಸುಮಾರು ಅರ್ಧ ಶತಕಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು ಸಾಮಾಜಿಕ, ಧಾರ್ಮಿಕ ಮುಂದಾಳು ಆಗಿದ್ದಾರೆ. ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ಲಯನ್ಸ್ ಕ್ಲಬ್ ಉಪ್ಪಳ ಮಂಜೇಶ್ವರ ಇದರ ಸ್ಥಾಪಕ ಸದಸ್ಯ ಮತ್ತು ಮಾಜಿ ಅಧ್ಯಕ್ಷರೂ ಆಗಿದ್ದರು. ಮಕ್ಕಳಾದ ವಾಣಿಶ್ರೀ, ಡಾ| ದೀಪಶ್ರೀ, ಡಾ|ದಿವ್ಯಶ್ರೀ, ಡಾ| …

ಕೋಳಿತ್ಯಾಜ್ಯ: ಪ್ಲಾಂಟ್ ವಿರುದ್ಧ ಅನಂತಪುರದಲ್ಲಿ ಸತ್ಯಾಗ್ರಹ

ಕುಂಬಳೆ: ಅನಂತಪುರ  ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯಾ ಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್ ವಿರುದ್ಧ ಸೇವ್ ಅನಂತಪುರ ಕ್ರಿಯಾ ಸಮಿತಿ ಕೈಗಾರಿಕಾ ಪರಿಸರದಲ್ಲಿ ಸತ್ಯಾಗ್ರಹ ಆರಂಭಿಸಿದೆ. ಗಾಂಧಿಜಯಂತಿ ದಿನವಾದ ಇಂದು ನಡೆಯುವ ಸತ್ಯಾಗ್ರ ಹದಲ್ಲಿ ಮಕ್ಕಳು, ಮಹಿಳೆಯರು ಸಹಿತ ನೂರಾರು ಮಂದಿ ಭಾಗವಹಿಸಿದರು. ಪಂಚಾಯತ್ ಸದಸ್ಯ ಜನಾರ್ದನ ಪೂಜಾರಿ ಸತ್ಯಾಗ್ರಹ ಉದ್ಘಾಟಿಸಿದರು. ಸುನಿಲ್ ಕುಮಾರ್, ಶರೀಫ್ ಮಾತನಾಡಿದರು.

ಲಕ್ಷಾಂತರ ರೂ. ಮೌಲ್ಯದ ತಂಬಾಕು ಉತ್ಪನ್ನ ವಶ: ಇಬ್ಬರ ಸೆರೆ

ಕಾಸರಗೋಡು: ಕರ್ನಾಟಕ ದಿಂದ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ ಲಕ್ಷಾಂತರ ರೂ. ಬೆಲೆಯ ೨೬,೮೬೫ ಪ್ಯಾಕೇಟ್ ತಂಬಾಕು ಉತ್ಪನ್ನವನ್ನು ನೀಲೇಶ್ವರದಿಂದ ವಾಹನ ತಪಾಸಣೆ ವೇಳೆ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಆ ಕಾರಿನಲ್ಲಿದ್ದ ಕಾಸರಗೋಡು ಚೆಟ್ಟುಂಗುಳಿ ನಿವಾಸಿಗಳಾದ  ಮೊಹಮ್ಮದ್ ಅಸರುದ್ದೀನ್ (೨೭) ಮತ್ತು ನಾಸಿಂ (೨೯) ಎಂಬವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶ್ವಹಿಂದೂ ಪರಿಷತ್ ಬಜರಂಗದಳ ಶೌರ್ಯ ಜಾಗರಣ ರಥಯಾತ್ರೆ ಮಂಜೇಶ್ವರದಿಂದ ಆರಂಭ

ಉಪ್ಪಳ: ವಿಶ್ವಹಿಂದೂ ಪರಿಷತ್ ಸ್ಥಾಪನೆಗೊಂಡು ೬೦ನೇ ವರ್ಷ ಪೂರ್ತಿಯÁದ ಅಂಗವಾಗಿ ಬಜರಂಗದಳ,ಮಾತೃಶಕ್ತಿ ಮತ್ತು ದುರ್ಗಾವಾಹಿನಿ ನೇತೃತ್ವದಲ್ಲಿ ಶೌರ್ಯ ಜಾಗರಣ ರಥಯಾತ್ರೆ ಮಂಜೇಶ್ವರ ಶ್ರೀಮದ್ ಅನಂತೇಶ್ವರ ದೇವಸ್ಥಾನ ಪರಿಸರದಿಂದ ತಿರುವನಂತಪುರಕ್ಕೆ ನಿನ್ನೆ ಆರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಧಾರ್ಮಿಕ ಮುಂದಾಳು ರವೀಶ್ ತಂತ್ರಿ ಕುಂಟಾರು ದೀಪ ಪ್ರಜ್ವಲನೆಗೊಳಿಸಿದರು. ವೇದಮೂರ್ತಿ ಚಕ್ರಪಾಣಿ ದೇವಪೂಜಿತ್ತಾಯ ಆರಿಕ್ಕಾಡಿ ಅಧ್ಯಕ್ಷತೆ ವಹಿಸಿದರು. ಬಜರಂಗದಳ ರಾಷ್ಟಿçÃಯ ಸಹ ಸಂಯೋಜಕ್ ಸೂರ್ಯ ನಾರಯಣ.ಜಿ ದಿಕ್ಸೂಜಿ ಭಾಷಣ ಮಾಡಿದರು. ವಿಶ್ವಹಿಂದೂ ಕರ್ನಾಟಕ …

ಗಾಂಧೀಜಯಂತಿ: ವಿವಿಧೆಡೆ ಶುಚೀಕರಣ

ಕಾಸರಗೋಡು: ಗಾಂಧಿ ಜಯಂತಿಯಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳು, ನಗರಸಭೆ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಉರಾಳುಂಗಲ್ ಲೇಬರ್ ಕಾಂಟ್ರಾ ಕ್ಟ್ ಕೋ-ಆಪರೇಟಿವ್ ಸೊಸೈಟಿಯ ಹಾಗೂ ರಾಜ್ಯ ಹೆದ್ದಾರಿ ಕಣ್ಣೂರು ಪ್ರೊಜೆಕ್ಟ್ ಇಂಪ್ಲಿಮೆಂಟೇಶನ್ ಘಟಕ ಜಂಟಿಯಾಗಿ ಕಾಸರಗೋಡು ಬಸ್ ನಿಲ್ದಾಣ, ಕುಂಬಳ ರೈಲು ನಿಲ್ದಾಣ, ಪರಿಸರವನ್ನು ಶುಚಿಗೊಳಿಸಲಾಗಿದೆ. ಮುಳಿಯಾರು ಬಿಜೆಪಿ ಮಂಡಲ ಸಮಿತಿಯ ನೇತೃತ್ವದಲ್ಲಿ ವಿವಿಧ ಕಡೆಗಳಲ್ಲಿ ಶುಚೀಕರಣ ನಡೆಸಲಾಗಿದೆ. ಗಾಂಧಿರಾಮನ್ ನಾಯರ್ ಟ್ರಸ್ಟ್‌ನ  ಒಕ್ಕೂಟವಾದ ಆರ್ಟ್ ಎಂ ನೇತೃತ್ವ ದಲ್ಲಿ ಬೋವಿಕ್ಕಾನ ಪೇಟೆಯನ್ನು ಶುಚೀಕರಿಸ ಲಾಯಿತು. …

ಗೆಲುವು ಸಾಧ್ಯತೆಯುಳ್ಳವರಿಗೆ ಕೇರಳದಲ್ಲಿ ಸೀಟು-ಕೆ.ಸಿ. ವೇಣುಗೋಪಾಲ್

ದಿಲ್ಲಿ: ಲೋಕಸಭಾ ಚುನಾವಣೆ ಯಲ್ಲಿ ಕೇರಳದಲ್ಲಿ ಯಾರೆಲ್ಲ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನಿಸ ಲಿದೆಯೆಂದು  ಸಂಸದ ಕೆ.ಸಿ. ವೇಣು ಗೋಪಾಲ್ ತಿಳಿಸಿದ್ದಾರೆ. ಗೆಲುವು ಸಾಧ್ಯತೆಯುಳ್ಳ ಅಭ್ಯರ್ಥಿ ಗಳಿಗೆ ಆದ್ಯತೆ ನೀಡಲಾಗುವುದು. ರಾಹುಲ್ ಗಾಂಧಿ ಸಿಟ್ಟಿಂಗ್ ಸೀಟ್ ಆಗಿರುವ ವಯನಾಡ್‌ನಲ್ಲಿ ಸ್ಪರ್ಧಿಸಬೇಕೇ ಎಂದು ಶೀಘ್ರ ನಿರ್ಧರಿಸಲಾಗುವುದೆಂದೂ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಇದೇ ವೇಳೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಸ್ಪರ್ಧಿಸಲಿರುವ ಆಮ್ ಆದ್ಮಿ ಪಾರ್ಟಿಯ ನಿರ್ಧಾರ ವನ್ನು ಮರು ಪರಿಶೀಲಿಸಬೇಕೆಂದೂ ಅವರು ಆಗ್ರಹಪಟ್ಟಿದ್ದಾರೆ. ಎಲ್ಲಾ ಸೀಟುಗಳಲ್ಲೂ ಎಎಪಿ ಸ್ಪರ್ಧಿಸಿದರೆ ಅದರಿಂದ …