ಪ್ಲಾಸ್ಟಿಕ್‌ಗೆ ಬೆಂಕಿ ಪಂ.ಅಧಿಕಾರಿಗಳಿಂದಲೇ ಆರೋಪಿಗಳ ಪತ್ತೆ

ಮುಳಿಯಾರು: ಪಂಚಾಯ ತ್‌ನ ಒಂದನೇ ವಾರ್ಡ್ ವ್ಯಾಪ್ತಿಯ ಮಾಸ್ತಿಕುಂಡ್ ಚೂರಿಮೂಲೆಯಲ್ಲಿ ಇತರ ಸ್ಥಳಗಳಿಂದ ತಂದ ಪ್ಲಾಸ್ಟಿಕ್ ಸಹಿತದ ತ್ಯಾಜ್ಯವನ್ನು ಉರಿಸುತ್ತಿರುವು ದನ್ನು ಪಂಚಾಯತ್ ಅಸಿಸ್ಟೆಂಟ್ ಸೆಕ್ರೆಟರಿ ಪಿ.ವಿ. ಶ್ರೀನಿವಾಸನ್‌ರ ನೇತೃತ್ವದಲ್ಲಿ ನೌಕರರು ನೇರವಾಗಿ ತಲುಪಿ ಪತ್ತೆ ಹಚ್ಚಿದರು.  ಆರೋಪಿಗಳನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇತರ ಸ್ಥಳಗಳಿಂದ ತ್ಯಾಜ್ಯಗಳನ್ನು ವಾಹನಗಳಲ್ಲಿ ತಂದು ಹಾಕಿ ಇಲ್ಲಿ ಉರಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ  ಪಂಚಾಯತ್ ಅಧಿಕಾರಿಗಳು ರಾತ್ರಿ ವೇಳೆ ಸ್ಥಳಕ್ಕೆ ತಲುಪಿದ್ದಾರೆ. ಆದೂರು ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಗಳ ವಿರುದ್ಧ …

ಧರ್ಮತ್ತಡ್ಕ ಶಾಲೆಯಲ್ಲಿ ಶಾಲಾ ಕಲೋತ್ಸವ

ಧರ್ಮತ್ತಡ್ಕ; ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ರೌಢಶಾಲಾ ವಿಭಾಗದ ಶಾಲಾ ಕಲೋತ್ಸವವು ಇಂದು ಆರಂ ಭಗೊಂಡಿತು. ಯಕ್ಷಗಾನ ಕಲಾವಿದ ಜಯಪ್ರಕಾಶ ಶೆಟ್ಟಿ ಪೆರ್ಮುದೆ ಉದ್ಘಾ ಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಯೊಂದು ಮಗುವಿ ನಲ್ಲಿಯೂ ಕೂಡಾ ಸುಪ್ತವಾದ ಪ್ರತಿಭೆ ಇರುತ್ತದೆ,ಮರೆಯಲ್ಲಿರುವ ಅಂತಹ ಪ್ರತಿಭೆಯನ್ನು ಹೊರ ತರುವಲ್ಲಿ ಶಾಲಾ ಕಲೋತ್ಸವವು ವೇದಿಕೆಯನ್ನು ಒದಗಿಸುತ್ತದೆ. ಇಂತಹ ವೇದಿಕೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ಅನೇಕರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ .ಪಠ್ಯ ವಿಷಯಗಳಲ್ಲಿ ಸಾಧನೆಯನ್ನು ಮಾಡುವುದರೊಂದಿಗೆ ಪಠ್ಯೇತರ …

ಕೋಳಿತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ದುರ್ನಾತ: ಕ್ರಿಯಾ ಸಮಿತಿಯಿಂದ ಚಳವಳಿ

ಕುಂಬಳೆ: ಅನಂತಪುರ ಕೈಗಾರಿಕಾ ಪಾರ್ಕ್‌ನಲ್ಲಿ ಕಾರ್ಯಾ ಚರಿಸುವ ಕೋಳಿ ತ್ಯಾಜ್ಯ ಸಂಸ್ಕರಣೆ ಪ್ಲಾಂಟ್‌ನಿಂದ ಹೊರಸೂಸುವ ದುರ್ನಾತಕ್ಕೆ ಪರಿಹಾರ ಕಾಣಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ಅನಿರ್ದಿಷ್ಟಾವಧಿ ಚಳವಳಿಗೆ ಮುಂದಾಗಿದೆ. ಇದರಂತೆ ಸೇವ್ ಅನಂತಪುರ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅಕ್ಟೋಬರ್ ೨ರಂದು  ಕೈಗಾರಿಕಾ ಘಟಕದ ಮುಂದೆ ಅನಿರ್ದಿಷ್ಟಾವಧಿ ಚಳವಳಿ ಆರಂಭಗೊಳ್ಳಲಿದೆ. ಜಿಲ್ಲಾಧಿಕಾರಿ ಸಹಿತ ವಿವಿಧ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸಮಸ್ಯೆಗೆ ಪರಿಹಾರ ಕಾಣದ ಹಿನ್ನೆಲೆಯಲ್ಲಿ ಚಳವಳಿಗೆ ಮುಂದಾ ಗಿರುವುದಾಗಿ   ಕ್ರಿಯಾ ಸಮಿತಿ ಅಧ್ಯಕ್ಷ ಟಿ. ಶರೀಫ್, ಕಾರ್ಯದರ್ಶಿ ಸುನಿಲ್ …

ಕೇರಳ ವಿದ್ಯುತ್ ಮಜ್ದೂರ್ ಸಂಘ್‌ನಿಂದ ವಿದ್ಯುತ್ ಭವನ ಧರಣಿ

ಕಾಸರಗೋಡು: ಅಖಿಲ ಭಾರತ್ ವಿದ್ಯುತ್ ಮಜ್ದೂರ್ ಮಹಾಸಂಘ್ ನೇತೃತ್ವದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಆಂದೋಲನದಂಗವಾಗಿ ಕಾಸರಗೋಡು ವಿದ್ಯುತ್ ಭವನದಲ್ಲಿ ಧರಣಿ ನಡೆಸಲಾಯಿತು. ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸುವುದಕ್ಕಿರುವ ಕೇಂದ್ರ ಕೇರಳ ಸರಕಾರಗಳ ಯತ್ನವನ್ನು ಕೊನೆಗೊಳಿಸಬೇಕು, ವಿದ್ಯುತ್ ಕಾನೂನು ತಿದ್ದುಪಡಿ ಬಿಲ್‌ನ ಆತಂಕಗಳನ್ನು ಪರಿಹರಿಸಬೇಕು, ಸ್ಮಾರ್ಟ್ ಮೀಟರ್ ಆತಂಕಗಳನ್ನು ಪರಿಹರಿಸಿ ಜ್ಯಾರಿಗೊಳಿಸಬೇಕು, ತಡೆಹಿಡಿದಿದ್ದ  ಡಿಎ ಲೀವ್ ಸರಂಡರ್ ಸೌಲಭ್ಯ ಕೂಡಲೇ ನೀಡಬೇಕು, ಪ್ರಮೋಷನ್ ಸಮಯಾನುಸಾರ ನಡೆಸಬೇಕು, ಅನಧಿಕೃತವಾಗಿ ಕಡಿತಗೊಳಿಸಿದ ನೌಕರರನ್ನು ಪುನರ್ ಸ್ಥಾಪಿಸಬೇಕು ಮೊದಲಾದ ೧೫ ಬೇಡಿಕೆಗಳನ್ನು ಮುಂದಿಟ್ಟು ನಿನ್ನೆ ಧರಣಿ …

ನವಜೀವನ ಹೈಯರ್ ಸೆಕೆಂಡರಿ ಶಾಲೆ ಶಾಲಾ ಕಲೋತ್ಸವಕ್ಕೆ ಚಾಲನೆ

ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲಾ ಕಲೋತ್ಸವ ವನ್ನು ಬದಿಯಡ್ಕ ಪಂಚಾಯತ್ ಸದಸ್ಯ ಶಾಮಪ್ರಸಾದ್ ಮಾನ್ಯ ಉದ್ಘಾಟಿಸಿದರು. ಅವರು ಮಾತನಾಡಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಕಲಾಪ್ರತಿಭೆಯನ್ನು ಪ್ರಸ್ತುತಪಡಿಸುವ ವೇದಿಕೆಯಾಗಿದೆ ಶಾಲಾ ಕಲೋತ್ಸವ. ಅದನ್ನು ಸದುಪಯೋಗಪಡಿಸಿಕೊಂಡು ಶಾಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಪ್ರಸರಿಸಬೇಕು ಎಂದು ಕರೆ ನೀಡಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಸಲೀಂ ಎಡನೀರು ಅಧ್ಯಕ್ಷತೆ ವಹಿಸಿದರು. ಸ್ಟಾಫ್ ಕಾರ್ಯದರ್ಶಿಗಳಾದ ಪ್ರಭಾಕರ ನಾಯರ್, ಪ್ರಭಾವತಿ ಕೆದಿಲಾಯ, ಹಿರಿಯ ಅಧ್ಯಾಪಿಕೆ ಶಾಹಿದ ಬಿ.ವಿ., ಕೇಶವ, ಸರ್ವಮಂಗಲ, ಕಲೋತ್ಸವ ಸಂಚಾಲಕಿ ಶ್ರೀಜಾ ಶುಭ ಹಾರೈಸಿದರು. …

ನಾರಂಪಾಡಿ ನಿವಾಸಿ ಮಹಿಳೆ, ಪುತ್ರನ ದರೋಡೆ:ಆರೋಪಿಗಳಲ್ಲೋರ್ವ ಕೊಲೆ ಪ್ರಕರಣದಲ್ಲಿ ಸೆರೆಗೀಡಾಗಿ ಪರೋಲ್‌ನಲ್ಲಿ ಬಿಡುಗಡೆಗೊಂಡಾತ

ಬದಿಯಡ್ಕ: ನಾರಂಪಾಡಿ ನಿವಾಸಿ ಮಹಿಳೆ ಹಾಗೂ ಅವರ ಮಗನನ್ನು ಕಟ್ಟಿ ಹಾಕಿದ ಬಳಿಕ ಕೋವಿ ತೋರಿಸಿ ಬೆದರಿಕೆಯೊಡ್ಡಿ ಚಿನ್ನಾಭರಣ ಹಾಗೂ ಹಣ ದರೋಡೆ ನಡೆಸಿದ ಆರೋಪಿಗಳ ತಂಡದಲ್ಲಿ ಪರೋಲ್‌ನಲ್ಲಿ ಬಿಡುಗಡೆಗೊಂಡ ಕೊಲೆ ಪ್ರಕರಣದ ಆರೋಪಿಯೂ ಒಳಗೊಂಡಿದ್ದಾನೆ. ಕರ್ನಾಟಕ ಪೊಲೀಸ್‌ನ ಪ್ರತ್ಯೇಕ ತಂಡ ಸೀತಾಂಗೋಳಿ ಬಳಿಯ ಬಾಡೂರಿನಿಂದ ಕಸ್ಟಡಿಗೆ ತೆಗೆದ ಓರ್ವ ಯುವಕನನ್ನು ಸಮಗ್ರವಾಗಿ ತನಿಖೆ ನಡೆಸಿದಾಗ ಬೆಚ್ಚಿ ಬೀಳಿಸುವ ವಿಷಯ ಬಹಿರಂಗಗೊಂಡಿದೆ. ಈ ಹಿನ್ನೆಲೆಯಲ್ಲಿ  ದರೋಡೆ ಪ್ರಕರಣದ ತನಿಖೆಯನ್ನು ಕರ್ನಾಟಕ ಪೊಲೀಸರು ಜೈಲಿಗೆ ವಿಸ್ತರಿಸಿದ್ದಾರೆ. ಈ ತಿಂಗಳ …

ವಾಗ್ವಾದ ವೇಳೆ ಬಿದ್ದು ಗಾಯಗೊಂಡ ವ್ಯಕ್ತಿ ಮೃತ್ಯು

ಕಾಸರಗೋಡು: ಪರಸ್ಪರ ವಾಗ್ವಾದದ ವೇಳೆ   ದೂಡಿ ಹಾಕಿದ ಪರಿಣಾಮ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖ ಲಾಗಿದ್ದ  ಪೈಂಟಿಂಗ್ ಕಾರ್ಮಿಕ  ಸಾವನ್ನಪ್ಪಿದ ಘಟನೆ  ನಡೆದಿದೆ.   ಕೇಳುಗುಡ್ಡೆ ಅಯ್ಯಪ್ಪನಗರ ನಿವಾಸಿ   ಪೈಂಟಿಂಗ್ ಕಾರ್ಮಿಕ ಸದಾನಂದ (೬೪) ಸಾವನ್ನಪ್ಪಿದ ದುರ್ದೈವಿ.  ಘಟನೆ ಬಗ್ಗೆ ಪೊಲೀಸರು ಹೀಗೆ ಹೇಳುತ್ತಿದ್ದಾರೆ: ಸೆಪ್ಟಂಬರ್ ೨೬ರಂದು ಕೇಳುಗುಡ್ಡೆ ಅಯ್ಯಪ್ಪನಗರದಲ್ಲಿ ಸದಾನಂದ ಮತ್ತು ಪೈಂಟಿಂಗ್ ಕಾರ್ಮಿಕ ಅಯ್ಯಪ್ಪನಗರ ನಿವಾಸಿಯಾಗಿರುವ ಸೂರಜ್ (೩೭)ರ ಮಧ್ಯೆ    ಪರಸ್ಪರ ವಾಗ್ವಾದ ಉಂಟಾಗಿತ್ತೆಂದೂ,  ಆಗ ಸೂರಜ್ ಸದಾನಂದರನ್ನು ದೂಡಿಹಾಕಿದ್ದನು. ಆಗ …

ಕಾಸರಗೋಡು, ಕುಂಬಳೆ ಸಹಿತ ರಾಜ್ಯದ ವಿವಿಧೆಡೆ ಕಳವು ನಡೆಸಿದ ಆರೋಪಿ ಕರ್ನಾಟಕದಲ್ಲಿ ಸೆರೆ

ಕಾಸರಗೋಡು: ಕಾಸರಗೋಡು ಸಹಿತ ಕೇರಳದ ವಿವಿಧೆಡೆಗಳಲ್ಲಿ ಮನೆ ಕಳವು ನಡೆಸಿದ ಆರೋಪಿ ಕರ್ನಾಟಕದ ಬೆಳ್ತಂಗಡಿ ಯಲ್ಲಿ ಸೆರೆಗೀಡಾಗಿದ್ದಾನೆ. ತಮಿಳುನಾಡಿನ ಕನ್ಯಾಕುಮಾರಿ ಅಗತೀಶ್ವರಂ ಎಂಬಲ್ಲಿನ ಉಮೇಶ್ ಯಾನೆ ಉಮೇಶ್ ಬಳಗಾರ (೪೭) ಎಂಬಾತ ಬಂಧಿತ ಆರೋಪಿಯಾ ಗಿದ್ದಾನೆ. ಈತ ಕಾಸರಗೋಡು, ಕುಂಬಳೆ, ಪಾಲಕ್ಕಾಡ್, ತೃಶೂರು, ತಿರುವನಂ ತಪುರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಂದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಕರ್ನಾಟಕದ ಪುತ್ತೂರು ನಗರಠಾಣೆ, ಸುಳ್ಯ, ಬಂಟ್ವಾಳ, ಮಂಗಳೂ ರು ಬಂದರು, ಉರ್ವ, ಮೂಡಬಿದಿರೆ ಠಾಣೆ ವ್ಯಾಪ್ತಿಯಲ್ಲೂ, ತಮಿಳುನಾಡಿನ …

ಮಳೆಯಲ್ಲೇ ಶಾಲಾ ಕ್ರೀಡಾ-ಕಲಾ ಸ್ಪರ್ಧೆಗಳು: ವ್ಯಾಪಕ ರೋಷ

ಕಾಸರಗೋಡು: ಮಳೆಗೆ ಕ್ರೀಡಾಮೇಳ, ಕಲೋತ್ಸವ ನಡೆಸಲಿರುವ ಸರಕಾರದ ಕಡ್ಡಾಯ ಆಜ್ಞೆ ಅಧ್ಯಾಪಕರು ಹಾಗೂ ಹೆತ್ತವರು, ವಿದ್ಯಾರ್ಥಿಗಳನ್ನು ನಿರಾಶೆಗೊಳಿಸಿದೆ. ಕಲಾ-ಕ್ರೀಡಾ ಪ್ರೇಮಿಗಳು ಅತೃಪ್ತಿ ವ್ಯಕ್ತಪಡಿಸುತ್ತಾರೆ. ಕಳೆದ ಒಂದು ವಾರದಿಂದ ಹೆಚ್ಚಾಗಿ ಮಳೆ ತೀವ್ರವಾಗಿ ಸುರಿದು ಕೊಂಡಿದೆ. ಈ ಮಧ್ಯೆ ಶಾಲಾ ಮಟ್ಟದ ಕ್ರೀಡೋತ್ಸವ ಇಂದು ಪೂರ್ತಿಗೊಳಿಸಿ ನಾಳೆ ಸಂಜೆಯ ಮುಂಚಿತವಾಗಿ ಉಪಜಿಲ್ಲಾ ಮಟ್ಟದಲ್ಲಿ ಭಾಗವಹಿಸಲು ಅರ್ಹರಾದವರ ಯಾದಿಯನ್ನು ಸಂಬಂಧಪಟ್ಟವರಿಗೆ ಇ-ಮೇಲ್ ಮಾಡಬೇಕೆಂದು ಅಧಿಕಾರಿಗಳು ನಿರ್ದೇಶಿಸಿರುವುದಾಗಿ ಶಾಲಾ ಅಧಿಕಾರಿಗಳು ತಿಳಿಸುತ್ತಾರೆ.  ಎಡೆಬಿಡದೆ ಸುರಿವ ಮಳೆಗೆ ಯಾವ ಆಟವನ್ನು ಎಲ್ಲಿ ಹೇಗೆ …

ನೆಲ್ಲಿಕಟ್ಟೆಯಲ್ಲಿ ಶಾಲಾ ಬಸ್-ಕಾರು ಢಿಕ್ಕಿ

ಬದಿಯಡ್ಕ: ನೆಲ್ಲಿಕಟ್ಟೆ ಗುರುನಗರ ದಲ್ಲಿ  ಶಾಲಾ ಬಸ್ ಹಾಗೂ ಕಾರು ಢಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.  ಮಾನ್ಯ ಗ್ಲೋಬಲ್ ಶಾಲೆ ಯ ಬಸ್ ಹಾಗೂ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆದಿದ್ದು, ಅದೃಷ್ಟವ ಶಾತ್ ಯಾರೂ ಗಾಯಗೊಂಡಿಲ್ಲ.  ಈ ಎರಡು ವಾಹನಗಳನ್ನು ಬದಿಯಡ್ಕ ಪೊಲೀಸರು ಕಸ್ಟಡಿಗೆ ತೆಗೆದುಕೊಂ ಡಿದ್ದಾರೆ. ಇತ್ತೀಚೆಗೆ ಪಳ್ಳತ್ತಡ್ಕದಲ್ಲಿ ಐದು ಮಂದಿಯ ಸಾವಿಗೆ ಕಾರ ಣವಾದ ಅಪಘಾತಕ್ಕೊಳಗಾದುದೂ ಗ್ಲೋಬಲ್ ಶಾಲೆಯ ಬಸ್ ಆಗಿದೆ.