ಬಂಡೆಕಲ್ಲು ಸಹಿತ ಗುಡ್ಡೆ ಕುಸಿತ: ನಿರ್ಮಾಣ ಹಂತದ ಮನೆಗೆ  ಹಾನಿ

ಪುತ್ತಿಗೆ: ನಿನ್ನೆ ಸುರಿದ ಧಾರಾಕಾರ ಮಳೆ ವೇಳೆ ಗುಡ್ಡೆಯೊಂದು ಕುಸಿದುಬಿದ್ದು ನಿರ್ಮಾಣ ಹಂತದ ಮನೆಗೆ ವ್ಯಾಪಕ ನಾಶ ಸಂಭವಿಸಿದೆ. ಬಾಡೂರು ನಾಟೆಕಲ್ಲು ಎಂಬಲ್ಲಿ ನಿನ್ನೆ ಅಪರಾಹ್ನ ೨ ಗಂಟೆಗೆ ಈ ಘಟನೆ ನಡೆದಿದೆ. ಅಂಗಡಿಮೊಗರು ದೇಲಂಪಾಡಿಯ ಫ್ರಾನ್ಸಿಸ್ ಕ್ರಾಸ್ತಾರ ಮನೆ ಅಪಾಯಕ್ಕೀಡಾಗಿದೆ. ನಿನ್ನೆ ಧಾರಾಕಾರ ಮಳೆ ಸುರಿಯುತ್ತಿದ್ದಂತೆ ಸಮೀಪದ ಗುಡ್ಡೆ ಕುಸಿದು ಮನೆ ಮೇಲೆ ಬಿದ್ದಿದೆ. ಭಾರೀ ಗಾತ್ರದ ಬಂಡೆಕಲ್ಲು ಸಹಿತ ಮಣ್ಣು ಕುಸಿದುಬಿದು ಪರಿಣಾಮ ಮನೆಗೆ  ಹಾನಿಯುಂಟಾಗಿದೆ. ಇದರಿಂದ ಭಾರೀ ನಾಶನಷ್ಟ ಉಂಟಾಗಿದೆ. ಪುತ್ತಿಗೆ ಪಂಚಾಯತ್ …

ಮುಂದುವರಿಯುತ್ತಿರುವ ಮಳೆ : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಯೆಲ್ಲೋ ಅಲರ್ಟ್

ಕಾಸರಗೋಡು: ರಾಜ್ಯದಲ್ಲಿ ಮಳೆ ಇನ್ನೂ ಮುಂದುವರಿಯುತ್ತಿದ್ದು, ಅದರಿಂದಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕೇಂದ್ರ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಾಗೂ ಸುಂಟರಗಾಳಿ ಪ್ರತೀತಿ ಉಂಟಾಗಿದ್ದು, ಅದುವೆ ರಾಜ್ಯದಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳಲು  ಕಾರಣವೆಂದು ಹವಾಮಾನ ಇಲಾಖೆ ತಿಳಿಸಿದೆ.

ಮಾವನ ಕೊಲೆಗೈದ ಅಳಿಯ ಸೆರೆ

ಕಾಸರಗೋಡು: ಪತ್ನಿ ತಂದೆಯನ್ನು ತಲೆಗೆ ಹೊಡೆದು ಕೊಲೆಗೈದ  ಪ್ರಕರಣದ ಆರೋಪಿಯಾದ ಅಳಿಯನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ತೃಕ್ಕರಿಪುರ ವೈಕದ ರಜೀಶ್ (೩೬) ಬಂಧಿತ ಆರೋಪಿ. ಕಳೆದ ಮಂಗಳವಾರ ರಾತ್ರಿ ಉದಿನೂರು ಪರುತ್ತಿಚ್ಚಾ ಲಿನ ಎಂ.ವಿ. ಬಾಲಕೃಷ್ಣನ್ (೫೪) ಎಂಬವರನ್ನು ಅವರ ಮನೆಯೊಳಗೆ ತಲೆಗೆ ಹೊಡೆದು ಕೊಲೆಗೈಯ್ಯಲಾಗಿತ್ತು. ತಲೆಗೆ ಬಲವಾದ ಏಟು ಬಿದ್ದು   ವಿಪರೀತ ರಕ್ತಸ್ರಾವ ಉಂಟಾ ಗಿರುವುದೇ ಸಾವಿಗೆ ಕಾರಣ ವಾಗಿತ್ತೆಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ. ಕೊಲೆಗೈಯ್ಯಲ್ಪಟ್ಟ ಬಾಲಕೃಷ್ಣನ್ ಮತ್ತು ಅಳಿಯ ರಜೀಶ್‌ನ ನಡುವೆ ಆಸ್ತಿ …

ಕಣಿಪುರೇಶನ ಬ್ರಹ್ಮಕಲಶ,ವಾರ್ಷಿಕೋತ್ಸವ ಫೆ. ೧೬ರಿಂದ

ಕುಂಬಳೆ: ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಉತ್ಸವ ೨೦೨೪ ಫೆಬ್ರವರಿ ೧೬ರಿಂದ ೨೮ರ ವರೆಗೆ ನಡೆಯಲಿದೆಯೆಂದು ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಕುಂಬಳಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ. ಫೆಬ್ರವರಿ ೨೧ರಂದು ಮಧ್ಯಾಹ್ನ ೧೨.೨೧ರಿಂದ ೧.೪೨ರ ವರೆಗಿನ ಶುಭ ಮುಹೂರ್ತದಲ್ಲಿ ಪುನರ್ ಪ್ರತಿಷ್ಠೆ ನಡೆಯಲಿದೆ. ೨೪ರಂದು ಬ್ರಹ್ಮಕಲಶಾಭಿಷೇಕ ನಡೆಯಲಿದೆ. ೨೫ರಿಂದ ೨೯ರ ವರೆಗೆ ವಾರ್ಷಿಕೋತ್ಸವ, ೨೮ರಂದು ರಾತ್ರಿ ಬೆಡಿಸೇವೆ ನಡೆಯಲಿದೆ. ಸಾಮಾನ್ಯವಾಗಿ ಜನವರಿ ೧೪ರಿಂದ ೧೮ರ ವರೆಗೆ ಕ್ಷೇತ್ರದ ವಾರ್ಷಿಕ ಉತ್ಸವ ನಡೆಯುತ್ತಿದೆ. ಆದರೆ ಬ್ರಹ್ಮಕಲಶಾಭಿಷೇಕ …

ಮಂಜೇಶ್ವರದಿಂದ ತಿರುವನಂತಪುರ ತನಕ ಬಜರಂಗದಳ ಶೌರ್ಯ ಜಾಗರಣಾ ರಥ ಯಾತ್ರೆ, ಬೈಕ್ ರ‍್ಯಾಲಿ: ಅ.೧ರಂದು ಮಂಜೇಶ್ವರದಿಂದ ಚಾಲನೆ

ಕಾಸರಗೋಡು: ವಿಶ್ವ ಹಿಂದೂ ಪರಿಷತ್ ಸ್ಥಾಪನೆಗೊಂಡು ಇದೀಗ ೬೦ನೇ ವರ್ಷದ ಷಷ್ಠಿಪೂರ್ತಿ ಕಾರ್ಯಕ್ರಮದ ಅಂಗವಾಗಿ ಬಜರಂಗದಳದ ನೇತೃತ್ವದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ ಮತ್ತು ಬೈಕ್ ರ‍್ಯಾಲಿ ನಡೆಸಲು ತೀರ್ಮಾನಿಸಲಾಗಿದೆ. ಮಾತೃಶಕ್ತಿ ಮತ್ತು ದುರ್ಗಾವಾಹಿನಿಯ ಸಹಕಾರದೊಂದಿಗೆ ಇದನ್ನು ನಡೆಸಲಾಗು ವುದು. ಸೇವಾ, ಸುರಕ್ಷಾ, ಸಂಸ್ಕಾರ ಎಂಬ ಧ್ಯೇಯವಾಕ್ಯ ಗಳೊಂದಿಗೆ ಈ ರಥ ಯಾತ್ರೆ ನಡೆಸಲಾಗುವುದು. ಹಿಂದೂ ಸಮಾಜಕ್ಕೆ ಸವಾಲಾಗಿರುವ ಡ್ರಗ್ಸ್ ಮಾಫಿಯಾ, ಭೂ ಮಾಫಿಯಾ, ಲವ್ ಜಿಹಾದ್ ಇತ್ಯಾದಿಗಳು ನಮ್ಮ ಯುವಕ-ಯುವತಿಯರನ್ನು ದಾರಿ ತಪ್ಪಿಸುತ್ತಿದೆ. ಇದರ ಹೊರತಾಗಿ ಕೇರಳವನ್ನು …

ಜಿಲ್ಲಾ ಶಿಕ್ಷಣ ಉಪನಿರ್ದೇಶಕ ಎನ್. ನಂದಿಕೇಶನ್‌ರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ

ಕಾಸರಗೋಡು: ರೋಟರಿ ಕಾಸರಗೋಡಿನ ಈ ವರ್ಷದ ರೋಟರಿ ನೇಶನ್ ಬಿಲ್ಡರ್ ಪ್ರಶಸ್ತಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಸರಗೋಡು ಜಿಲ್ಲಾ ಉಪನಿರ್ದೇಶಕ (ಡಿಡಿಇ) ಎನ್.ನಂದಿಕೇಶನ್ ಅವರಿಗೆ ಪ್ರದಾನ ಮಾಡಲಾಗಿದೆ. ಕಾಸರಗೋಡು ರೋಟರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಹಾಯಕ ಗವರ್ನರ್ ಸಿ.ಎ. ವಿಶಾಲ್ ಕುಮಾರ್ ಪ್ರಶಸ್ತಿ ಪ್ರದಾನ ಮಾಡಿದರು.ಅಧ್ಯಕ್ಷ ಗೌತಮ ಭಕ್ತ ಅಧ್ಯಕ್ಷತೆ ವಹಿಸಿದ್ದರು. ಸರ್ವಮಂಗಳರಾವ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಂದಿಕೇಶನ್, ಜಿಲ್ಲೆಯ ಹತ್ತು ಸಾವಿರಕ್ಕೂ ಹೆಚ್ಚು ಶಿಕ್ಷಕರಪರವಾಗಿ ಪ್ರಶಸ್ತಿ ಸ್ವೀಕರಿಸುತ್ತಿರುವುದಾಗಿ ತಿಳಿಸಿದರು.ಎಂ.ಕೆ.ರಾಧಾಕೃಷ್ಣನ್, ಜಂಟಿ …

ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ಗೆ ೧೪೫ ಕೋಟಿ ರೂ. ವ್ಯವಹಾರ

ವರ್ಕಾಡಿ: ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್‌ನ ೨೦೨೨-೨೩ನೇ ವಾರ್ಷಿಕ ಮಹಾಸಭೆ ನಡೆಯಿತು. ಬ್ಯಾಂಕ್‌ನ ಅಧ್ಯಕ್ಷ ದಿವಾಕರ ಎಸ್.ಜೆ. ಅಧ್ಯಕ್ಷತೆ ವಹಿಸಿದರು. ಈ ವರ್ಷದಲ್ಲಿ ಬ್ಯಾಂಕ್ ೧ ಕೋಟಿ ೯ ಲಕ್ಷ ರೂಪಾಯಿ ಲಾಭ ಗಳಿಸಿದ್ದು, ೧೪೫ ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದು ತಿಳಿಸಲಾಯಿತು. ವರದಿ ವಾಚನೆ, ಜಮಾ-ಖರ್ಚು, ವ್ಯಾಪಾರ ವಹಿವಾಟು, ಲಾಭ ನಷ್ಟ, ಕರಡು ಬಜೆಟ್‌ಗಿಂತ ಹೆಚ್ಚಾದ ಖರ್ಚಿಗೆ ಉಪ ಬಜೆಟ್, ೨೦೨೪-೨೫ ಕರಡು ಬಜೆಟ್‌ನ್ನು ಕಾರ್ಯದರ್ಶಿ ಮಂಡಿಸಿದರು. ಸಭೆಯಲ್ಲಿ ಅಗಲಿದ ಬ್ಯಾಂಕ್‌ನ ಸದಸ್ಯರಿಗೆ ಶ್ರದ್ಧಾಂಜಲಿ …

ಜಿಲ್ಲಾ ಕೇರಳೋತ್ಸವ: ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನಾ ಸಭೆ ಅ.೩ರಂದು

ಕಾಸರಗೋಡು: ಸ್ಥಳೀಯ ಆಡಳಿತ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಸಹಯೋಗ ದೊಂದಿಗೆ ರಾಜ್ಯ ಯುವಜನ ಕಲ್ಯಾಣ ಮಂಡಳಿಯ ನೇತೃತ್ವದಲ್ಲಿ ನಡೆಯುವ ಜಿಲ್ಲಾ ಕೇರಳೋತ್ಸವ ೨೦೨೩ರ ಜಿಲ್ಲಾ ಮಟ್ಟದ ಸ್ವಾಗತ ಸಮಿತಿ ರಚನಾ ಸಭೆ ಅಕ್ಟೋಬರ್ ೩ರಂದು ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

ಅಣ್ಣ ತಂಗಿಯರ ಪುತ್ರಿಯರು ನಿಗೂಢವಾಗಿ ನಾಪತ್ತೆ: ತನಿಖೆ ಆರಂಭ

ಕುಂಬಳೆ: ಅಣ್ಣ ತಂಗಿಯರ ಮಕ್ಕ ಳಾದ ೧೫ರ ಹರೆಯದ ಹಾಗೂ ೨೨ರ ಹರೆಯದ ಮಕ್ಕಳು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ  ಕುಂಬಳೆ ಹಾಗೂ ಮಂಜೇಶ್ವರ  ಪೊಲೀಸರು ಎರಡು ಪ್ರಕರಣಗಳನ್ನು ನೋಂದಾಯಿಸಿ ತನಿಖೆ ಆರಂಭಿಸಿದ್ದಾರೆ. ೧೫ರ ಬಾಲಕಿ  ವರ್ಕಾಡಿ ನಿವಾಸಿಯಾಗಿದ್ದಾಳೆ. ಕಳೆದ ೨೪ ರಂದು ಈಕೆಯ ಹೆತ್ತವರು ಉಳ್ಳಾಲದಲ್ಲಿ ನಡೆದಿದ್ದ ವಿವಾಹಕ್ಕೆ ತೆರಳಿದ್ದರು.  ಇಬ್ಬರು ಹೆಣ್ಮಕ್ಕಳ ಸಹಿತ ನಾಲ್ಕು ಮಕ್ಕಳನ್ನು ಮನೆಯಲ್ಲಿ ನಿಲ್ಲಿಸಿ ಅವರು ವಿವಾಹಕ್ಕೆ  ತೆರಳಿದ್ದರು. ಸಂಜೆ ವೇಳೆ ಹಿಂತಿರುಗುವಾಗ ಮಗಳು ನಾಪತ್ತೆಯಾ ಗಿದ್ದಾಳೆ. ಉಳಿದ ಮಕ್ಕಳಲ್ಲಿ   ಪ್ರಶ್ನಿಸಿ …

ಭಾರತಕ್ಕೆ ಐದನೇ ಚಿನ್ನ ಶೂಟಿಂಗ್‌ನಲ್ಲಿ ವಿಶ್ವದಾಖಲೆ

ಹ್ಯಾಂಗ್‌ಚೌ: ಏಷ್ಯನ್ ಗೇಮ್ಸ್‌ನ ಶೂಟಿಂಗ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನ ಗಳಿಸಿದ ಭಾರತದ ಸಿಪ್ಟ್‌ಕೌಸಂರ ಶೂಟಿಂಗ್‌ನ ೫೦ ಮೀಟರ್ ರೈಫಲ್ ೩ ಪೊಸಿಷನ್‌ನಲ್ಲಿ ವೈಯಕ್ತಿಕ ವಿಭಾಗ ದಲ್ಲಿ ೪೬೯.೬ ಪಾಯಿಂಟ್‌ನೊಂದಿಗೆ ಸಿಪ್ಟ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದ ರೊಂದಿಗೆ ಕಳೆದ ಮೇಯಲ್ಲಿ ಬಾಕೂನಲ್ಲಿ ಬ್ರಿಟೀಷ್ ಕ್ರೀಡಾಳು ಸಿಯೋನೈದ್ ಮಾರ್ಕಿಂಡೋಶ್ ಗಳಿಸಿದ ೪೬೭ ಪಾಯಿಂಟ್‌ನ ವಿಶ್ವದಾಖಲೆಯನ್ನು ಸಿಪ್ಟ್  ದಾಟಿದರು. ಈ ಮೊದಲು ಇದೇ ವಿಭಾಗದಲ್ಲಿ ತಂಡಕ್ಕಾಗಿ ಸಿಪ್ಟ್ ಬೆಳ್ಳಿ ಪದಕ ಗಳಿಸಿದ್ದರು. ಭಾರತದ ಆಶಿಚೌಕ್‌ಸೇ ಕಂಚಿನ ಪದಕ ಗಳಿಸಿದ್ದಾರೆ. ಚೈನಾದ ಸಾಂಗಿ …