ಪಿಕಪ್‌ಗೆ ಬಸ್ ಢಿಕ್ಕಿ: ಪಿಕಪ್ ಚಾಲಕ ಮೃತ್ಯು

ಪೆರ್ಲ: ಅಡ್ಕಸ್ಥಳದಲ್ಲಿ ಪಿಕಪ್ ಗೆ ಕರ್ನಾಟಕ ಸರಕಾರಿ ಬಸ್ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತ ದಲ್ಲಿ ಓರ್ವ ಮೃತಪಟ್ಟಿದ್ದು, ಇನ್ನೋರ್ವರು ಗಾಯಗೊಂಡಿ ದ್ದಾರೆ. ಟೆಂಪೋ ಚಾಲಕ ಮಣಿಯಂ ಪಾರೆ ನಿವಾಸಿ ಮುಸ್ತಫ ತಜ್ಜಾನ (೪೩) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ಎದುರು ಭಾಗದಿಂದ ಬಂದ ಕಾರೊಂದನ್ನು ತಪ್ಪಿಸುವ ವೇಳೆ ಬಸ್ ಅಡಿಕೆ ಸಸಿಗಳನ್ನು ಹೇರಿಕೊಂಡು ಬರುತ್ತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂ ದಾಗಿ ಚಾಲಕನ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಪಿಕಪ್‌ನಲ್ಲಿದ್ದ ಇನ್ನೋರ್ವರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ …

ಹೋಟೆಲ್‌ಗೆ ನುಗ್ಗಿ ನಾಶ: ಮಾಲಕ, ಕಾರ್ಮಿಕರಿಗೆ ಹಲ್ಲೆ

ಬದಿಯಡ್ಕ:  ಹೋಟೆಲ್‌ಗೆ ನುಗ್ಗಿ  ಆಕ್ರಮಣ ನಡೆಸಿ ನೌಕರರಿಗೆ ಹಲ್ಲೆ ನಡೆಸಿರುವುದಾಗಿ ದೂರಲಾ ಗಿದೆ. ಚೆರ್ಲಡ್ಕದ ರೋಯಲ್ ಫ್ಯಾಮಿಲಿ ಹೋಟೆಲ್ ಮಾಲಕ ಚೆಂಗಳದ ಅನ್ವರ್ ಸಾದತ್‌ರ ದೂರಿ ನಂತೆ  ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಹೋಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ತಂಡ ಕುರ್ಚಿಯ ಕಾಲುಗಳಿಂದ ಫ್ಲೆಕ್ಸ್‌ನ್ನು ನಾಶಪಡಿಸಿದ್ದು, ಈ ವೇಳೆ ತಡೆಯಲು ಹೋದ ಹೋಟೆಲ್ ಮಾಲಕ, ಕಾರ್ಮಿಕರಾದ ಬೈಜು, ಸುಬಿನ್, ಬಿಜೋಯ್, ನಸೀರ್ ಎಂಬಿವರಿಗೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ೫೦ …

ಕಾರು ಮಗುಚಿಬಿದ್ದು ಅಸಿಸ್ಟೆಂಟ್ ಕಲೆಕ್ಟರ್ ಮತ್ತು ಗನ್‌ಮ್ಯಾನ್ ಜಖಂ

ಕಾಸರಗೋಡು: ಕಾರು ಮಗುಚಿಬಿದ್ದು ಕಾಸರಗೋಡು ಅಸಿಸ್ಟೆಂಟ್ ಕಲೆಕ್ಟರ್ ಮತ್ತು ಅವರ ಗನ್‌ಮ್ಯಾನ್ ಗಾಯಗೊಂಡ ಘಟನೆ ಚೆಮ್ನಾಡ್ ಬಳಿ ನಿನ್ನೆ ನಡೆದಿದೆ. ಅಸಿಸ್ಟೆಂಟ್ ಕಲೆಕ್ಟರ್ ಚೆಂಗನಾಶ್ಶೇರಿ ನಿವಾಸಿ ದಿಲೀಪ್ ಕೆ ಕೈನಿಕರ (೨೯) ಮತ್ತು ಅವರ ಗನ್‌ಮ್ಯಾನ್ ಚೆರ್ವತ್ತೂರಿನ ರಂಜಿತ್ ಕುಮಾರ್ (೩೧) ಗಾಯಗೊಂಡಿದ್ದು, ಇವರನ್ನು ಮೊದಲು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ದಾಖಲಿಸಲಾಗಿದೆ.  ನಿನ್ನೆ ಸಂಜೆ ೩.೩೦ರ ಚೆಮ್ನಾಡ್ ಲೇಸ್ಯತ್ ತಿರುವು ದಾರಿಯಲ್ಲಿ ಈ …

ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಕೋಟಿಗಟ್ಟಲೆ ರೂ.ಗಳ ವಂಚನಾ ಪ್ರಕರಣ: ಸಿಪಿಎಂ ನೇತಾರ ಸೆರೆ: ಇನ್ನೂ ಹಲವರು ಇ.ಡಿ ನಿಗಾದಲ್ಲಿ

ಕೊಚ್ಚಿ: ತೃಶೂರು ಕರುವನ್ನೂರು ಸಹಕಾರಿ ಬ್ಯಾಂಕ್‌ನಲ್ಲಿ ನಡೆದ ಕೋಟಿಗಟ್ಟಲೆ ರೂ.ಗಳ ವಂಚನೆ ಹಗರಣಕ್ಕೆ ಸಂಬಂಧಿಸಿ ಸಿಪಿಎಂ ನೇತಾರ, ವಡಕಾಂಚೇರಿ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಆರ್. ಅರವಿಂ ದಾಕ್ಷನ್‌ರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್  (ಇಡಿ) ಬಂಧಿಸಿದೆ.  ಈ ಹಗರಣಕ್ಕೆ ಸಂಬಂಧಿಸಿ ಇ.ಡಿ ಮೊದಲು ಅವರನ್ನು ತಮ್ಮ ಕಚೇರಿಗೆ ಕರೆಸಿ ತೀವ್ರ ವಿಚಾರಣೆಗೊಳಪಡಿಸಿತ್ತು. ಬಳಿಕ ಅವರನ್ನು ನಿನ್ನೆ  ಅವರ ಮನೆಯಿಂದಲೇ ಇ.ಡಿ ಬಂಧಿಸಿದೆ. ನಂತರ ಅವರನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಇದೇ ಹಗರಣಕ್ಕೆ ಸಂಬಂಧಿಸಿ ಕರುವನ್ನೂರು ಸಹಕಾರಿ ಬ್ಯಾಂಕ್‌ನ ಸೀನಿಯರ್  ಅಕೌಂಟೆಂಟ್ …

೮.೬೪ ಲೀಟರ್ ಕರ್ನಾಟಕ ಮದ್ಯ ವಶ ಓರ್ವ ಸೆರೆ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಇನ್ಸ್‌ಪೆಕ್ಟರ್ ಅನು ಕುಮಾರ್ ಪಿ.ಆರ್.ರ ನೇತೃತ್ವದ ಅಬಕಾರಿ ತಂಡ ಕಾಸರಗೋಡು ಕೋಟೆಕಣಿಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ೮.೬೪ ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಶಿರಿಬಾಗಿಲು ಗ್ರಾಮದ ಎಸ್.ಟಿ ಕಾಲನಿ ರಸ್ತೆ ಬಳಿಯ ರಾಧಾಕೃಷ್ಣನ್ ಜೆ.ಆರ್. (೨೯) ಎಂಬಾತನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಅಬಕಾರಿ ಪ್ರಿವೆಂಟಿವ್ ಆಫೀಸರ್ ರಾಜೀವನ್ ಎ.ವಿ,  ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮೊದೀನ್ ಸಾಧಿಕ್, ರಾಜೇಶ್ ಪಿ. …

ಹೋಟೆಲ್‌ಗೆ ನುಗ್ಗಿ ನಾಶ: ಮಾಲಕ, ಕಾರ್ಮಿಕರಿಗೆ ಹಲ್ಲೆ

ಬದಿಯಡ್ಕ:  ಹೋಟೆಲ್‌ಗೆ ನುಗ್ಗಿ  ಆಕ್ರಮಣ ನಡೆಸಿ ನೌಕರರಿಗೆ ಹಲ್ಲೆ ನಡೆಸಿರುವುದಾಗಿ ದೂರಲಾ ಗಿದೆ. ಚೆರ್ಲಡ್ಕದ ರೋಯಲ್ ಫ್ಯಾಮಿಲಿ ಹೋಟೆಲ್ ಮಾಲಕ ಚೆಂಗಳದ ಅನ್ವರ್ ಸಾದತ್‌ರ ದೂರಿ ನಂತೆ  ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿದ್ದಾರೆ. ಮೊನ್ನೆ ರಾತ್ರಿ ಘಟನೆ ನಡೆದಿದೆ. ಹೋಟೆಲ್‌ಗೆ ಅತಿಕ್ರಮಿಸಿ ನುಗ್ಗಿದ ತಂಡ ಕುರ್ಚಿಯ ಕಾಲುಗಳಿಂದ ಫ್ಲೆಕ್ಸ್‌ನ್ನು ನಾಶಪಡಿಸಿದ್ದು, ಈ ವೇಳೆ ತಡೆಯಲು ಹೋದ ಹೋಟೆಲ್ ಮಾಲಕ, ಕಾರ್ಮಿಕರಾದ ಬೈಜು, ಸುಬಿನ್, ಬಿಜೋಯ್, ನಸೀರ್ ಎಂಬಿವರಿಗೆ ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ೫೦ …

ಕೊಯಿಪ್ಪಾಡಿ ವಿಲ್ಲೇಜ್‌ನಲ್ಲಿ ತೆರಿಗೆ ಸ್ವೀಕಾರವಿಲ್ಲ : ವಿವಿಧ ಸವಲತ್ತುಗಳಿಂದ ವಂಚಿತರಾದ ಕೃಷಿಕರು

ಕುಂಬಳೆ: ಪಂಚಾಯತ್‌ನ ಕೊಯಿಪ್ಪಾಡಿ ಗ್ರಾಮ ಕಚೇರಿಯಲ್ಲಿ ತೆರಿಗೆ ಸ್ವೀಕರಿಸದ ಕಾರಣ ಕೃಷಿಕರಿಗೆ ಭಾರೀ ಸಮಸ್ಯೆಯಾಗುತ್ತಿದೆ ಎಂದು ಕೃಷಿಕರು ದೂರಿದ್ದಾರೆ. ಕೇಂದ್ರ ಸರಕಾರದ ಕಿಸಾನ್ ಸಮ್ಮಾನ್ ನಿಧಿಗಾಗಿ ಸೊತ್ತು ದಾಖಲೆ ಸಲ್ಲಿಸಲು ತೀರ್ವೆ ರಶೀದಿ ನೀಡಬೇಕಾಗಿದ್ದು, ಆದರೆ ತೀರ್ವೆ ವಿಲ್ಲೇಜ್ ಕಚೇರಿಯಲ್ಲಿ ಸ್ವೀಕರಿಸದ ಕಾರಣ ರಶೀದಿ ಲಭಿಸದೆ ಸಂಕಷ್ಟಕ್ಕೀಡಾಗಿದ್ದಾರೆ. ಇದರಿಂದಾಗಿ  ಕೇಂದ್ರದ ಸಹಾಯವಾದ ೨೦೦೦ ರೂ. ಕಳೆದ ೨೦೨೨ ಮಾರ್ಚ್‌ನಿಂದ ಈ ಪ್ರದೇಶದ ಕೆಲವ ಕೃಷಿಕರಿಗೆ ಲಭಿಸಿಲ್ಲವೆನ್ನಲಾಗಿದೆ. ರೀಸರ್ವೆ ನಡೆಸಲಿರುವ ಕಾರಣ ಸರ್ವೆ ಮುಗಿಯದೆ ತೆರಿಗೆ ಸ್ವೀಕರಿಸುವುದಿಲ್ಲವೆಂಬ ವಿಚಿತ್ರ …

ಪೋಸ್ಟಲ್ ಸೇವಿಂಗ್ಸ್‌ನಿಂದ ಹಣ ಅವ್ಯವಹಾರ: ಮಹಿಳಾ ಪೋಸ್ಟ್ ಮಾಸ್ಟರ್ ವಿರುದ್ಧ ಕೇಸು

ಕಾಸರಗೋಡು: ಪೋಸ್ಟಲ್ ಸೇವಿಂಗ್ಸ್‌ನಲ್ಲಿ ಹಣ ಜಮಾ ಮಾಡದೆ ಅವ್ಯವಹಾರ ನಡೆಸಿದ ದೂರಿನಂತೆ ಮಹಿಳಾ ಪೋಸ್ಟ್ ಮಾಸ್ತರ್ ವಿರುದ್ಧ ಚಂದೇರ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೆರ್ವತ್ತೂರು ತಿಮಿರಿ ಬ್ರಾಂಚ್ ಪೋಸ್ಟ್ ಮಾಸ್ತರ್ ಇ. ಸುಶೀಲ ಎಂಬವರ ವಿರುದ್ಧ ಈ ಕೇಸು ದಾಖಲಿಸಲಾಗಿದೆ. ೨೦೨೦ ಅಗೋಸ್ತ್ ೨೩ರಿಂದ ೨೦೨೩ ಜನವರಿ ೧೬ರ ತನಕದ ಅವಧಿಯಲ್ಲಿ ೧೬ ಮಂದಿಯ ಹಣ ಖಾತೆಗೆ ಜಮಾ ಮಾಡದೆ ವಂಚಿಸಿರುವುದಾಗಿ ಆರೋಪಿಸಿ ನೀಲೇಶ್ವರ ಅಂಚೆ ಕಚೇರಿಯ ಸಬ್ ಡಿವಿಶನಲ್ ಇನ್‌ಸ್ಪೆಕ್ಟರ್  ಅಪರ್ಣಾ ರವಿ ಅವರು ಪೊಲೀಸರಿಗೆ …

ದ್ವಿತೀಯ ವಂದೇ ಭಾರತ್ ರೈಲಿನ ಚೊಚ್ಚಲ ಸೇವೆ ಆರಂಭ

ಕಾಸರಗೋಡು: ಕಳೆದ ಭಾನುವಾರದಂದು ಪ್ರಧಾನಮಂತ್ರಿ ವರ್ಚುವಲ್ ಮೂಲಕ ಉದ್ಘಾಟಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಚೊಚ್ಚಲ ಸೇವೆ ಇಂದು ಬೆಳಿಗ್ಗೆ ಕಾಸರಗೋಡು ರೈಲು ನಿಲ್ದಾಣದಿಂದ ತಿರುವನಂತಪುರಕ್ಕೆ ಆರಂಭಿಸಿದೆ. ಈ ರೈಲು ನಿನ್ನೆ ಸಂಜೆ ೪.೦೫ಕ್ಕೆ ತಿರುವನಂ ತಪುರದಿಂದ ಕಾಸರಗೋಡಿನತ್ತ ಪ್ರಯಾಣ ಆರಂಭಿಸಿ  ಬಳಿಕ ನಿನ್ನೆ ರಾತ್ರಿ ೧೧.೫೮ಕ್ಕೆ ಕಾಸರಗೋಡಿಗೆ ಆಗಮಿಸಿದೆ. ನಂತರ ಇಂದು ಬೆಳಿಗ್ಗೆ ೭ಕ್ಕೆ ಇಲ್ಲಿಂದ ತಿರುವನಂತಪುರಕ್ಕೆ ಚೊಚ್ಚಲ ಸೇವೆ ಆರಂಭಿಸಿದೆ. ಈ ರೈಲಿನ ಚೇಯರ್‌ಕಾರ್‌ನಲ್ಲಿ ೯೬ ಆಸನಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ೧೧ ಸೀಟುಗಳಿವೆ. …

ನೀರ್ಚಾಲು-ಕೋಟೆಕಣಿ ರಸ್ತೆಯಲ್ಲಿ ಇಂದಿನಿಂದ ವಾಹನ ಸಂಚಾರ ನಿಷೇಧ

ಬದಿಯಡ್ಕ: ನೀರ್ಚಾಲು ಕೋಟೆಕಣಿ ರಸ್ತೆಯಲ್ಲಿರುವ ಮೋರಿಸಂಕ ಜೀರ್ಣಗೊಂಡ ಕಾರಣ ಅಪಾಯಸ್ಥಿತಿ ಯಲ್ಲಿದೆ. ಆದುದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರ ಇಂದಿನಿಂದ ಪೂರ್ಣವಾಗಿ ನಿಷೇಧಿಸಲಾಗಿದೆ. ಬದಿಯಡ್ಕದಿಂದ ಬರುವ ವಾಹನಗಳು ಬಲಭಾಗದಿಂದ ಕೋಟೆಕಣಿ ಜಂಕ್ಷನ್‌ನಿಂದ ಮಧೂರು ಪಟ್ಲ ಕೊಲ್ಲಂಗಾನ ರಸ್ತೆಯಾಗಿ ಸಾಗಬೇಕಾಗಿದೆ. ಕಾಸರಗೋಡಿನಿಂದ ತೆರಳುವ ವಾಹನಗಳು ಮಧೂರು ಕ್ಷೇತ್ರ ಬಳಿಯ ಎಡಭಾಗದ ರಸ್ತೆ ಮೂಲಕ ಪಟ್ಲ ಕೊಲ್ಲಂಗಾನ ರಸ್ತೆ ಮೂಲಕ ಸಾಗಬೇಕೆಂದು ಕಾಸರಗೋಡು ಲೋಕೋಪಯೋಗಿ  ರಸ್ತೆ ವಿಭಾಗ ಅಸಿಸ್ಟೆಂಟ್ ಇಂಜಿನಿಯರ್ ತಿಳಿಸಿದ್ದಾರೆ.