ಮಾವನ ತಲೆಗೆ ಹೊಡೆದು ಕೊಲೆ
ಕಾಸರಗೋಡು: ಅಳಿಯ ಮಾವನ ತಲೆಗೆ ಹೊಡೆದು ಕೊಲೆಗೈದ ಘಟನೆ ತೃಕ್ಕರಿಪುರ ಬಳಿ ಇಂದು ಬೆಳಿಗ್ಗೆ ನಡೆದಿದೆ. ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಎಂಬವರ ಪುತ್ರ ಬಾಲಕೃಷ್ಣನ್ (೫೪) ಎಂಬವರು ಕೊಲೆಗೈಯ್ಯಲ್ಪಟ್ಟ ವ್ಯಕ್ತಿ. ಇವರು ಇಂದು ಬೆಳಿಗ್ಗೆ ಮನೆಯಲ್ಲಿ ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ನೀಡಿದರೂ ಆ ವೇಳೆ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೃತ ಬಾಲಕೃಷ್ಣನ್ ವೆಲ್ಡಿಂಗ್ ಕಾರ್ಮಿಕನಾ ಗಿದ್ದಾರೆ. ಪತ್ನಿಯೊಂದಿಗೆ ವಿರಸಗೊಂಡು ಅವರು ಮನೆಯಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು. …