ಕೊಡಿಮಾರ್- ಉಪ್ಪಳ ರಸ್ತೆ ಡಾಮರೀಕರಣಗೊಳಿಸಲು ಡಿಫಿ ಚಿನಾಲ ಯೂನಿಟ್ ಆಗ್ರಹ

ಉಪ್ಪಳ: ಚಿನಾಲ ಕೋಡಿಮಾರ್ ಕುಳೂರು- ಉಪ್ಪಳ ರಸ್ತೆ ಶೀಘ್ರ ಡಾಮರೀಕರಣ ಗೊಳಿಸಬೇಕೆಂದು ಡಿಫಿ ಚಿನಾಲ ಯೂನಿಟ್ ಸಮ್ಮೇಳನ ಒತ್ತಾಯಿಸಿದೆ. ಚಿನಾಲದಲ್ಲಿ ನಡೆದ ಸಮ್ಮೇಳನವನ್ನು ಬ್ಲೋಕ್ ಕಾರ್ಯದರ್ಶಿ ವಿನಯ ಕುಮಾರ್ ಉದ್ಘಾಟಿಸಿದರು. ಯೂನಿಟ್ ಉಪಾಧ್ಯಕ್ಷ ಚಂದ್ರಹಾಸ ಧ್ವಜಾರೋಹಣಗೈದರು. ಕಾರ್ಯದರ್ಶಿ ಸಂದೀಪ್ ಕುಮಾರ್ ಸ್ವಾಗತಿಸಿದರು. ಚಿದಾಕಾಂತ್, ದೀಕ್ಷಾ ವಿವಿಧ ಠರಾವು ಮಂಡಿಸಿದರು. ಚಂದ್ರಹಾಸ ಅಧ್ಯಕ್ಷತೆ ವಹಿಸಿದರು. ಲೋಕೇಶ ಸಿ, ಪದ್ಮಜಾ ಸುಧಾಕರ, ಉದಯ ಮಾತನಾಡಿದರು. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂದೀಪ್ ಕುಮಾರ್, ಚರಣ್ ವರದಿ …

ನಿವೃತ್ತ ಪಂಚಾಯತ್ ಕಾರ್ಯದರ್ಶಿ ನಿಧನ

ಕಾಸರಗೋಡು: ನಿವೃತ್ತ ಪಂಚಾಯತ್ ಕಾರ್ಯದರ್ಶಿ ರಾಮ ಎನ್.ಎ. (76) ನಿಧನ ಹೊಂದಿದರು. ನೆಲ್ಲಿಕುಂಜೆ ನಿವಾಸಿಯಾದ ಇವರು ಪ್ರಸ್ತುತ ಮೀಯಪದವಿನಲ್ಲಿ ವಾಸವಾಗಿದ್ದರು. ನೆಲ್ಲಿಕುಂಜೆ ಕೋಮರಾಡಿ ದೈವಸ್ಥಾನದ ಸದಸ್ಯರಾಗಿದ್ದರು. ಶನಿವಾರ ರಾತ್ರಿ ಅಸೌಖ್ಯ ಉಲ್ಬಣಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ನಿಧನ ಸಂಭವಿಸಿದೆ. ಮೃತರು ಪತ್ನಿ ಸತ್ಯವತಿ, ಮಕ್ಕಳಾದ ಶೈಲೇಶ್ ಎನ್. (ಪೈವಳಿಕೆ ಪಂಚಾಯತ್ ವಿಇಒ), ರಾಜೇಶ್ ಎನ್.ಆರ್, ಸೊಸೆ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ನಿಧನ

ಕಾಸರಗೋಡು: ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಾಲಕ್ಕಾಡ್ ಫಿಶರೀಸ್ ಡೆಪ್ಯೂಟಿ ಡೈರೆಕ್ಟರ್ ನಿಧನ ಹೊಂದಿದರು. ಕಯ್ಯೂರು ಪಾಲೋತ್ ನಿವಾಸಿ ಪಿ.ವಿ. ಸತೀಶನ್ (50) ಮೃತಪಟ್ಟವರು. ಹೊಟ್ಟೆ ಸಂಬಂಧವಾದ ಅಸೌಖ್ಯ ಹಿನ್ನೆಲೆಯಲ್ಲಿ  ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಇಂದು ಬೆಳಿಗ್ಗೆ ಸಾವು ಸಂಭವಿಸಿದೆ. ಈ ಮೊದಲು ಕಾಸರಗೋಡು ಫಿಶರೀಸ್ ಡೆಪ್ಯುಟಿ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ವಿನ್ನಿ, ಮಕ್ಕಳಾದ ಶ್ರೀದತ್, ಶ್ರೀನಿಧಿ, ಸಹೋದರ ಪಿ.ವಿ. ಸುನಿಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಗುರುವಾರದಿಂದ ತೀವ್ರ ಮಳೆಗೆ ಸಾಧ್ಯತೆ

ಕಾಸರಗೋಡು: ರಾಜ್ಯದಲ್ಲಿ ಗುರುವಾರದಿಂದ ತೀವ್ರ ಮಳೆ ಸುರಿಯ ಲಿದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ಕಾಸರಗೋಡು, ಕಣ್ಣೂರು, ವಯನಾಡ್, ಮಲಪ್ಪುರಂ, ಇಡುಕ್ಕಿ, ಕೋಟ್ಟಯಂ, ಆಲಪ್ಪುಳ, ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಆಗಿರುವುದು. ಅದೇ ರೀತಿ ಅಂದು ಎರ್ನಾಕುಳಂ, ತೃಶೂರು, ಪಾಲಕ್ಕಾಡ್, ಕಲ್ಲಿಕೋಟೆ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಆಗಿರುವುದು. ಶುಕ್ರವಾರ ಕಾಸರಗೋಡು, ಕಣ್ಣೂರು, ವಯನಾಡ್, ಕಲ್ಲಿಕೋಟೆ, ಮಲಪ್ಪುರಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್, ಇತರ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಆಗಿರುವುದು.

ಎಡನೀರು ಶ್ರೀಗಳ ಪಂಚಮ ಚಾತುರ್ಮಾಸ್ಯ ಯಶಸ್ವಿಗೆ  ಕರೆ

ಎಡನೀರು: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಜುಲೈ ೧೦ರಿಂದ ಸೆ.೭ರವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಡನೀರು ಮಠದಲ್ಲಿ ಜರಗಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಕ್ತರ ಮಹಾಸಭೆ ಇತ್ತೀಚೆಗೆ ಎಡನೀರು ಮಠದಲ್ಲಿ ಜರಗಿತು. ಪ್ರೊ. ಎ.ಶ್ರೀನಾಥ್, ಮಾಧವ ಹೇರಳ, ಕೆ.ವಿ. ಬಾಲಕೃಷ್ಣನ್, ಅರ್ಜುನ್ ತಾಯಲಂಗಾಡಿ, ಶಂಕರ ನಾರಾಯಣ ಭಟ್, ದಿವಾಣ ಶಿವಶಂಕರ ಭಟ್, ಸತೀಶ್ ಎಡನೀರು, ಗಿರೀಶ್ ಮುನಿಯಾಲ, ಹರೀಶ್ ಬೊಳಂತಿಮೊಗರು, ವಿನಯ, ಪುರುಷೋತ್ತಮ ಭಟ್, ಮಹೇಶ್ ವಳಕುಂಜ …

ಪುತ್ತಿಗೆ, ಮುಗುನಲ್ಲಿ ಕೋಳಿ ಅಂಕ : 4 ಕೋಳಿಗಳ ಸಹಿತ 4 ಮಂದಿ ಸೆರೆ

ಸೀತಾಂಗೋಳಿ: ಪುತ್ತಿಗೆ, ಮುಗು, ಪೊಟ್ಟುವಳದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ೪ ಮಂದಿಯನ್ನು ಸೆರೆ ಹಿಡಿಯಲಾಗಿದೆ. ಸ್ಥಳದಿಂದ ೪ ಕೋಳಿಗಳನ್ನು ಹಾಗೂ 6800 ರೂ. ಪೊಲೀಸರು ವಶಪಡಿಸಿದ್ದಾರೆ. ಕುಂಬಳೆ ಗೋಪಾಲಕೃಷ್ಣ ಕ್ಷೇತ್ರ ರಸ್ತೆಯ ನಿವಾಸಿ ಪ್ರವೀಣ್ ಕುಮಾರ್ (36), ಬೇಳ ಕೊಡಿಂಞಾರ್‌ನ ಕೆ. ಗೋಪಾಲ (64), ಸೂರಂಬೈಲು ಪೆರ್ಣೆಯ ಪಿ. ಶ್ರೀಧರ (42), ನೀರ್ಚಾಲು ನಡುವಳ ಬೇರಿಗೆ ಹೌಸ್‌ನ ಬಿ. ಉದಯ (35) ಎಂಬಿವರನ್ನು ಬದಿಯಡ್ಕ ಎಸ್‌ಐ ಸುಮೇಶ್ ಬಾಬು ನೇತೃತ್ವದಲ್ಲಿ ಸೆರೆ ಹಿಡಿಯಲಾಗಿದೆ. ಪೊಲೀಸ್ ತಂಡದಲ್ಲಿದ್ದ ಪ್ರೊಬೇಶನಲ್ …

ರಾಜ್ಯದಲ್ಲಿ ಇಂದು ರಾತ್ರಿಯಿಂದ ಟ್ರೋಲಿಂಗ್ ನಿಷೇಧ

ಕಾಸರಗೋಡು: ಮಳೆಗಾಲ  ಮೀನುಗಳ ಸಂತಾನೋತ್ಪತ್ತಿ ಋತುವಾಗಿರುವ ಹಿನ್ನೆಲೆಯಲ್ಲಿ   ಮತ್ಸ್ಯ ಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತೀ ವರ್ಷ ಸಮುದ್ರದಲ್ಲಿ ಮೀನುಗಾರಿಕೆಗೆ (ಟ್ರೋಲಿಂಗ್) ನಿಷೇಧ  ಹೇರಲಾಗುವುದು. ಇದರಂತೆ ಇಂದು ರಾತ್ರಿ 12 ಗಂಟೆಗೆ ಜಾರಿಗೆ ಬರಲಿದೆ. ಇದು ಮುಂದಿನ ೫೨ ದಿನಗಳ ತನಕ ಮುಂದುವರಿಯಲಿದೆ. ಪರಂಪರಾಗತವಾದ ರೀತಿಯಲ್ಲಿ ನಾಡ ದೋಣಿಯಲ್ಲಿ ಮೀನುಗಾರಿಕೆ ನಡೆಸುವ ಬೆಸ್ತರಿಗೆ ಈ ನಿಷೇಧ ಅನ್ವಯಗೊಳಿಸಲಾಗಿಲ್ಲ. ಆದರೆ ಇತರ ರೀತಿಯ ಮೀನುಗಾರಿಕೆಗೆ ಇದನ್ನು ಕಡ್ಡಾಯವಾಗಿ ಅನ್ವಯಗೊಳಿಸಲಾಗಿದೆ.

ಪ್ರಧಾನಿಯಾಗಿ ಇಂದಿಗೆ 11 ವರ್ಷ ಪೂರೈಸಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರಮೋದಿ ನೇತೃತ್ವದ ಎನ್ಡಿಎ ಸರಕಾರ ಇಂದಿಗೆ 11 ವರ್ಷ ಪೂರೈಸಿದೆ. ಇದರಂಗವಾಗಿ ಕೇಂದ್ರ ಸರಕಾರ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಇಂದು ಚಾಲನೆ ನೀಡಿದೆ.ಪ್ರಧಾನಮಂತ್ರಿ ಮೋದಿ ನೇತೃತ್ವದ ಮೂರನೇ ಸರಕಾರ ಇದಾಗಿದೆ. ಈ 11 ವರ್ಷಗಳಲ್ಲಿ ಮೋದಿ ಸರಕಾರ ಸಾಧನೆಗಳ ಕುರಿತು ಬಿಜೆಪಿ ನೇತೃತ್ವದಲ್ಲಿ ದೇಶದಾದ್ಯಂತ ಇಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾತ್ರವಲ್ಲ ಮೋದಿ ಸರಕಾರದ ಮೂರನೇ ಅವಧಿಯ ಸಾಧನೆಗಳ ಮಾಹಿತಿಯನ್ನೂ ನೇತರರು ನೀಡತೊಡಗಿದ್ದಾರೆ.ಕಳೆದ ಒಂದು ವರ್ಷದ ಅವಧಿಯಲ್ಲಿ ಮೋದಿ ಸರಕಾರದ ಪ್ರಧಾನ ಸಾಧನೆಗಳೆಂದರೆ ಬಲಿಷ್ಠ …

ಮಂಜೇಶ್ವರದಲ್ಲಿ ತತ್ಸಮಾನ ಲಾಟರಿ ಕೇಂದ್ರಗಳಿಗೆ ದಾಳಿ: ಇಬ್ಬರ ಸೆರೆ; ಆರೋಪಿಗಳಿಗೆ ನ್ಯಾಯಾಂಗ ಬಂಧನ

ಮಂಜೇಶ್ವರ: ಎರಡು ಕಡೆಯ ತತ್ಸಮಾನ ಲಾಟರಿ ಕೇಂದ್ರಗಳಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ೩೨,೫೧೦ ರೂ. ಇವರಿಂದ ವಶಪಡಿಸಲಾಗಿದೆ. ಮಂಜೇಶ್ವರ ಕನಿಲ, ಮಿತ್ತಕನಿಲ ಹೌಸ್‌ನ ರವೀಣ್ ಕುಮಾರ್ (42), ಆಚಾರಿಮೂಲೆ ನಿವಾಸಿ ಸಚಿನ್ ಕುಮಾರ್ (44) ಎಂಬಿವರನ್ನು ಮಂಜೇಶ್ವರ ಎಸ್‌ಐ ಕೆ.ಜಿ. ರತೀಶ್ ಹಾಗೂ ತಂಡ ಸೆರೆ ಹಿಡಿದಿದೆ. ಶುಕ್ರವಾರ ರಾತ್ರಿ 8 ಗಂಟೆ ವೇಳೆಗೆ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿ ಸಮೀಪದ ಲಾಟರಿ ಸ್ಟಾಲ್ ಸಮೀಪದಿಂದ ಸಚಿನ್ ಕುಮಾರ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನಿಂದ …

ಬಿಜೆಪಿ ಜಿಲ್ಲಾ ಮಾಜಿ ಕೋಶಾಧಿಕಾರಿ ಜಿ. ಚಂದ್ರನ್ ನಿಧನ

ಕಾಸರಗೋಡು: ಬಿಜೆಪಿ ಜಿಲ್ಲಾ ಮಾಜಿ ಕೋಶಾಧಿಕಾರಿ, ಜಿಲ್ಲಾ ಕಾರ್ಯದರ್ಶಿ, ಕಾಸರಗೋಡು ಟೌನ್ ಬ್ಯಾಂಕ್ ಮಾಜಿ ನಿರ್ದೇಶಕ ಪಯ್ಯನ್ನೂರು ಚೆಂಬಿಲ್ಲಂ ಪಡಿಂ ಞಾರ್ ತರವಾಡು ಅಧ್ಯಕ್ಷರಾಗಿದ್ದ ಕಡಪ್ಪುರಂ ಚೀರುಂಬಾ ಭಜನಾ ಮಂದಿರ ರಸ್ತೆ ನಿವಾಸಿ ಜಿ. ಚಂದ್ರನ್ (73) ನಿಧನ ಹೊಂದಿದರು. ಮೃತರು ಪತ್ನಿ ಸುಚಿತ್ರಾ, ಮಕ್ಕಳಾದ ವಿವೇಕ್ ಚಂದ್ರನ್, ವಿಜೇಶ್ ಚಂದ್ರನ್, ವಿಶಾಖ್ ಚಂದ್ರನ್, ಸೊಸೆ ನಿಮ್ಮಿ, ಸಹೋದರರಾದ ಗಣೇಶನ್, ದಿವಾ ಕರನ್, ರಾಮದಾಸ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.