ಖಾಲಿಸ್ತಾನಿ ಉಗ್ರರ ವಿರುದ್ಧ ಮುಂದುವರಿದ  ಬೃಹತ್ ಕಾರ್ಯಾಚರಣೆ: ದೇಶಬಿಟ್ಟು ಪರಾರಿಯಾದ ೧೯ ಮಂದಿಯ ಆಸ್ತಿ ಜಪ್ತಿಗೆ ಸಿದ್ಧತೆ

ಹೊಸದಿಲ್ಲಿ: ಖಾಲಿಸ್ತಾನಿ ಭಯೋತ್ಪಾದಕ ಮತ್ತು  ನಿಷೇಧಿತ ಪ್ರತ್ಯೇಕವಾದಿ ಸಂಘಟನೆಯಾದ ಸಿಖ್ ಫಾರ್ ಜಸ್ಟೀಸ್ ಮುಖ್ಯಸ್ಥ   ಗುರು ಪತ್ವಂತ್ ಸಿಂಗ್ ಪನ್ನೂನ್ ವಿರುದ್ಧ ಕ್ರಮ ಕೈಗೊಂಡ ಬೆನ್ನಲ್ಲೇ ಭಾರತ ದೇಶ ಬಿಟ್ಟು ವಿದೇಶಕ್ಕೆ  ಪರಾರಿಯಾದ ೧೯ ಮಂದಿ ಖಾಲಿಸ್ತಾನಿ ಉಗ್ರರ ವಿರುದ್ಧ ಕೇಂದ್ರ ಸರಕಾರ ಕ್ರ್ಯಾಕ್‌ಡೌನ್ ಕಾರ್ಯಾಚರಣೆಗೆ ಮುಂದಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ ಬ್ರಿಟನ್,ಅಮೇರಿಕ, ಕೆನಡಾ ಮತ್ತು ದುಬೈಯಲ್ಲಿ ನೆಲೆಸಿರುವ ೧೯ ಮಂದಿ ಖಾಲಿಸ್ತಾನಿ ಭಯೋತ್ಪಾದಕ ಪಟ್ಟಿ ತಯಾರಿಸಿದ್ದು, ಅವರ ಭಾರತದಲ್ಲಿ ರುವ ಅವರ ಆಸ್ತಿ-ಪಾಸ್ತಿ ಸೇರಿದಂತೆ  ಪಾಕಿಸ್ತಾನ …

ಕರುವನ್ನೂರು ಬ್ಯಾಂಕ್ ಪ್ರಕರಣ: ಸಿಪಿಎಂ ಮುಖಂಡನ ವಿಚಾರಣೆ

ತೃಶೂರು: ಕರುವನ್ನೂರು ಸೇವಾ ಸರ್ವೀಸ್‌ಬ್ಯಾಂಕ್‌ನ ವಂಚನೆಗೆ ಸಂಬಂಧಿಸಿ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಎಂ.ಕೆ. ಕಣ್ಣನ್‌ರನ್ನು ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ ವಿಚಾರಣೆ ನಡೆಸುತ್ತಿದೆ. ಕರುವನ್ನೂರು ಬ್ಯಾಂಕ್ ವಂಚನೆಗೆ ಸಂಬಂಧಿಸಿ ಕಣ್ಣನ್ ಅಧ್ಯಕ್ಷರಾದ ತೃಶೂರು ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಒಂದು ವಾರದ ಹಿಂದೆ ಇ.ಡಿ. ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಕೊಚ್ಚಿಯ ಕಚೇರಿಗೆ ತಲುಪಬೇಕೆಂದು ಇ.ಡಿ. ಅವರಿಗೆ  ತಿಳಿಸಿದೆ. ಕೇರಳ ಬ್ಯಾಂಕ್ ಉಪಾಧ್ಯಕ್ಷರಾಗಿರುವ ಮಾಜಿ ಶಾಸಕರಾಗಿದ್ದ ಎಂ.ಕೆ. ಕಣ್ಣನ್ ಕರುವನ್ನೂರು ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ

ಬೀಗ ಜಡಿದ ಮನೆಯಿಂದ ಕಳವು

ಕಾಸರಗೋಡು: ಮೊಗ್ರಾಲ್ ಪುತ್ತೂರು ಚೌಕಿ ಸಿಪಿಸಿಆರ್‌ಐ  ಬಳಿಯಿರುವ ನಾಸರ್ ಎಂಬ ವರ ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ ಭಾರೀ ಬೆಲೆಬಾಳುವ ರೊಲಾಕ್ಸ್ ವಾಚ್ ಹಾಗೂ ಉಂಗುರವನ್ನು ಕಳವುಗೈದಿ ರುವುದಾಗಿ ಪೊಲೀಸರಿಗೆ ದೂರು ನೀಡಲಾಗಿದೆ. ಇದರಂತೆ ಪೊಲೀಸರು ಆ ಮನೆಗೆ ಸಾಗಿ ತನಿಖೆ ಆರಂಭಿಸಿದ್ದಾರೆ.

ಕಾಸರಗೋಡಿನಲ್ಲಿ ಮಹೋತ್ಸವವಾದ ವಂದೇ ಭಾರತ್ ರೈಲಿನ ಉದ್ಘಾಟನಾ ಸಮಾರಂಭ

ಕಾಸರಗೋಡು: ಓಣಂ ಹಬ್ಬದ ಸಲುವಾಗಿ ಕೇಂದ್ರ ಸರಕಾರ ಕೇರಳಕ್ಕೆ ಕೊಡುಗೆಯಾಗಿ ನೀಡಿದ ದ್ವಿತೀಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಸೇವೆಯ ಉದ್ಘಾಟನಾ ಸಮಾರಂಭ ನಿನ್ನೆ ಒಂದು ಮಹಾ ಉತ್ಸವವಾಗಿ ಮಾರ್ಪಟ್ಟಿತು. ಕಾಸರಗೋಡಿನಿಂದ ಆಲಪ್ಪುಳ ದಾರಿಯಾಗಿ ತಿರುವನಂತಪುರ, ಸೇರಿದಂತೆ ೧೧ ರಾಜ್ಯಗಳಲ್ಲಿ ಹೊಸದಾಗಿ ಮಂಜೂರು ಮಾಡಲಾದ ೯ ವಂದೇ ಭಾರತ್ ರೈಲು ಸೇವೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ದಿಲ್ಲಿಯಿಂದಲೇ  ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ವರ್ಚುವಲ್ ಆಗಿ ಚಾಲನೆ ನೀಡಿದರು. ದೇಶದಲ್ಲಿ ಇಂದು ೨೫ ವಂದೇ ಭಾರತ್ …

ಬಿಲ್ಲವ ಸೇವಾ ಸಂಘದಿಂದ ಉದ್ಯೋಗ ಮಾಹಿತಿ ಶಿಬಿರ

ಪೆರ್ಲ: ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಮಿತಿ ಪೆರ್ಲ ಹಾಗೂ ಬಿಲ್ಲವ ಮಹಿಳಾ ಸಮಿತಿ ಪೆರ್ಲ ಇವುಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿ ಗಾಗಿ ಉಚಿತ ಉ ದ್ಯೋಗ ಮಾಹಿತಿ ಶಿಬಿರ ಅಕ್ಟೋಬರ್ 2ರಂದು ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ವಠಾರದಲ್ಲಿ ಜರುಗಲಿದೆ. ಕೇರಳ ಲೋಕ ಸೇವಾ ಆಯೋಗದ ನಿವೃತ್ತ ಅಂಡರ್ ಸೆಕ್ರೆಟರಿ ಗಣೇಶ್ ಪ್ರಸಾದ್ ಪಾಣೂರು ಶಿಬಿರದಲ್ಲಿ ಮಾಹಿತಿ ನೀಡುವರು. ಅಂದು ಬೆಳಿಗ್ಗೆ 9.15ಕ್ಕೆ ಉದ್ಯೋಗಾರ್ಥಿಗಳ ಹೆಸರು ನೋಂದಾವಣೆ ನಡೆಯಲಿದೆ. ಶಿಬಿರ ವನ್ನು ಕುಕ್ಕಾಜೆ …

ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ ೨೮.೯೨ ಲಕ್ಷ ಲಾಭ, ಶೇ. ೧೫ ಡಿವಿಡೆಂಟ್ ಘೋಷಣೆ

ಮಂಗಲ್ಪಾಡಿ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ೨೦೨೨ -೨೦೨೩ನೇ ಸಾಲಿನಲ್ಲಿ ೨೮.೯೨ ಲಕ್ಷ ಲಾಭ ಗಳಿಸಿದ್ದು ಸದಸ್ಯರಿಗೆ ೧೫ ಶೇ. ಡಿವಿಡೆಂಟನ್ನು ಸಂಘದ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಘೋಷಿಸಿದರು. ಶನಿ ವಾರ ಬ್ಯಾಂಕಿನ ಸಮೀಪ ಇರುವ ಜಿ ಎಚ್ ಡಬ್ಲ್ಯೂ ಎಲ್ ಪಿ ಶಾಲೆಯಲ್ಲಿ ಜರಗಿದ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಟ್ಟು ೭೪.೦೭ ಕೋಟಿ ಸಾಲ ವಿತರಣೆ ಮಾಡಿ ಸಾಲ ವಸೂಲಾತಿಯಲ್ಲಿ ೯೩ ಶೇ. ಶೇಕಡ ಪ್ರಗತಿ ಸಾಧಿಸಿ …

ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗೆ ಸನ್ಮಾನ

ಬದಿಯಡ್ಕ: ಬದಿಯಡ್ಕ ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡಿರುವ ಠಾಣಾದಿsಕಾರಿ ವಿನೋದ್ ಕುಮಾರ್‌ರನ್ನು ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಸನ್ಮಾನಿಸಲಾಯಿತು. ಗಣಪತಿ ಪ್ರಸಾದ ಕುಳಮರ್ವ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಮಾಸ್ಟರ್ ಅಗಲ್ಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಮಕೃಷ್ಣ ಹೆಬ್ಬಾರ್ ಸ್ವಾಗತಿಸಿ, ರಮೇಶ್ ಕಳೇರಿ ನಿರೂಪಿಸಿದರು. ಬಾಲಗೋಪಾಲ ಏಣಿಯರ್ಪು, ಸುರೇಶ್ ಮಿಮಿಕ್ರಿ, ಶಿಶುಮಂದಿರದ ಪೋಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕೊಯ್ಲಿಗೆ ಸಿದ್ಧವಾದ ಅಡಕೆ ನಾಶ ವ್ಯಾಪಕ

ಕುಂಬಳೆ: ಈಗ ಉದುರುತ್ತಿರುವುದು ಅಡಕೆಯಲ್ಲ. ಬದಲಿಗೆ ಅಡಕೆ ಕೃಷಿಕರ ಕಣ್ಣೀರಾಗಿದೆ. ರಾಶಿ ರಾಶಿಯಾಗಿ ತೋಟದಲ್ಲಿ ಕಂಡುಬರುವ ಉದುರಿದ ಅಡಕೆಗಳನ್ನು ಕಂಡಾಗ ಕೃಷಿಕನಿಗೆ ಕಣ್ಣೀರು ಸುರಿಸಲಷ್ಟೇ ಸಾಧ್ಯ. ಮುಂದಿನ ತಿಂಗಳು ಅಥವಾ ಡಿಸೆಂಬರ್‌ನೊಳಗೆ ಕೊಯ್ಲು ನಡೆಸಬೇಕಾದ ಅಡಕೆಗಳು ಬಿದ್ದು ಹೋಗುತ್ತಿರುವುದು ಅಡಕೆ ಕೃಷಿಕರ ನಿರೀಕ್ಷೆಯನ್ನೇ ಹುಸಿಯಾಗಿಸಿದೆ. ಬಲಿಯುವುದಕ್ಕಿಂತ ಮೊದಲು ಈ ಹಿಂದೆ ಅಡಕೆ ಬೀಳುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಈಗ ಬಲಿತ ಮೇಲೆ ಬೀಳುತ್ತಿರುವುದು ಕಂಡು ಬಂದಿದೆ. ಕುಂಬಳೆ ಬಳಿಯ ಶಿವರಾಮ ಭಟ್‌ರ ತೋಟದಲ್ಲಿ ಉದುರಿದ ಅಡಕೆಯ ಚಿತ್ರವಾಗಿದೆ ಇದರ …

ಮುಖ್ಯಮಂತ್ರಿ ಇಂದು ಜಿಲ್ಲೆಯಲ್ಲಿ

ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಜಿಲ್ಲೆಯಲ್ಲಿದ್ದು ವಿವಿಧ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಕುಂಡಂಕುಳಿ ಫಾರ್ಮರ್ಸ್ ಬ್ಯಾಂಕ್ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿರ್ವಹಿಸಿದರು.  ಅನಂತರ ಪೆರಿಯಾಟಡ್ಕಕ್ಕೆ ತೆರಳಿದ ರು. ಸಂಜೆ ೩.೩೦ಕ್ಕೆ ವೆಳ್ಳಿಕ್ಕೋತ್, ೫.೩೦ಕ್ಕೆ ಕಾಲಿಕಡವ್ ಎಂಬಿಡೆಗಳಲ್ಲಿ ನಡೆಯುವ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವರು. ೪.೩೦ಕ್ಕೆ ಮಡಿಕೈ ಕಾಞಿರಪೊಯಿಲ್ ಸರಕಾರಿ ಹೈಯ ರ್ ಸೆಕೆಂಡರಿ ಶಾಲೆಯ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ನಿರ್ವಹಿಸಲಿದ್ದಾರೆ. ಹಲವು ತಿಂಗಳುಗಳ ಬಳಿಕ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದ್ದಾರೆ.

ವೈದ್ಯರಿಗೆ ಬೆದರಿಕೆಯೊಡ್ಡಿದ ಆರೋಪ: ಜಿಲ್ಲಾ ಪಂ. ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮತ್ತೆ ಕೇಸು ದಾಖಲು

ಮಂಜೇಶ್ವರ: ಆಸ್ಪತ್ರೆಯಲ್ಲಿ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆಯೊಡ್ಡಿದ ಆರೋಪದಂತೆ ಜಿಲ್ಲಾ ಪಂಚಾಯತ್ ಸದಸ್ಯನೂ ಯೂತ್ ಲೀಗ್ ನೇತಾರನಾದ ಗೋಲ್ಡನ್ ಅಬ್ದುಲ್ ರಹ್ಮಾನ್ ವಿರುದ್ಧ ಮಂಜೇಶ್ವರ ಪೊಲೀಸರು ಜಾಮೀನುರಹಿತ ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ| ಪ್ರಣವ್ ಲಾಲ್‌ರ ದೂರಿನಂತೆ ಈ ಕೇಸು ದಾಖಲಿಸಲಾಗಿದೆ. ಈ ತಿಂಗಳ ೧೯ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಗೋಲ್ಡನ್ ಅಬ್ದುಲ್ ರಹ್ಮಾನ್ ೧೯ರಂದು ಸಂಜೆ ಮಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಪಾಸಣೆ ನಡೆಸಿದ …