ಗಾಂಜಾ ಸಹಿತ ಸೆರೆಗೀಡಾದ ಯುವಕ ಗಂಟೆಗಳೊಳಗೆ ಬಿಡುಗಡೆ: ನಾಗರಿಕರಿಗೆ ಬೆದರಿಕೆಯೊಡ್ಡಿದಾಗ ವಾರಂಟ್ ಪ್ರಕರಣದಲ್ಲಿ ಬಂಧನ
ಕುಂಬಳೆ: ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ ಯುವಕ ಗಂಟೆಗಳೊಳಗೆ ಬಿಡುಗಡೆಗೊಂಡನು. ಮರಳಿ ಬಂದು ನಾಗರಿಕರಿಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಪೊಲೀಸರು ವಾರಂಟ್ ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಂದ್ಯೋಡು ಅಡ್ಕ ಜಂಕ್ಷನ್‌ನ ಬಾಡಿಗೆ ಮನೆಯಲ್ಲಿ ವಾಸಿಸುವ ಫಯಾಸ್ (೨೬) ಎಂಬಾತನನ್ನು ಕುಂಬಳೆ ಪೊಲೀಸರು ಸೆರೆಹಿಡಿದಿ ದ್ದಾರೆ. ಮೊನ್ನೆ ರಾತ್ರಿ ಫಯಾಸ್‌ನನ್ನು ಎರಡು ಪ್ಯಾಕೆಟ್ ಗಾಂಜಾ ಸಹಿತ ನಾಗರಿಕರು ಸೆರೆಹಿಡಿದು ಪೊಲೀಸರಿಗೆ ಹಸ್ತಾಂತರಿಸಿದ್ದರು. ಆದರೆ ಗಾಂಜಾ ಸಣ್ಣ ಪ್ರಮಾಣದಲ್ಲಿದೆಯೆಂದು ತಿಳಿಸಿ ಆತನನ್ನು ಪೊಲೀಸರು ಗಂಟೆಗಳೊಳಗೆ ಬಿಡುಗಡೆಗೊಳಿಸಿದ್ದಾರೆ. ಅನಂತರ …