ಜಿಲ್ಲೆಯ ಉತ್ತಮ ಕ್ಷೀರ ಸಂಘಗಳಿರುವ ಪ್ರಶಸ್ತಿ ವಿತರಣೆ
ಕಾಸರಗೋಡು: ಜಿಲ್ಲೆಯ ಆನಂದ್ ಮಾದರಿ ಕ್ಷೀರ ಸಂಘದ ಅಧ್ಯಕ್ಷರ ಸಭೆಯಲ್ಲಿ ವಿವಿಧ ಕ್ಷೀರ ಸಂಘಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಸಂಗ್ರಹಿಸಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಬ್ಡಾಜೆ ಕ್ಷೀರ ಸಂಘಕ್ಕೂ, ಉತ್ತಮ ಬಲ್ಕ್ ಮಿಲ್ಕ್ ಕಲರ್ ಪ್ರಶಸ್ತಿಯನ್ನು ವರ್ಕಾಡಿ ಸಂಘಕ್ಕೂ, ಹೆಚ್ಚು ಮಿಲ್ಮಾ ಉತ್ಪನ್ನಗಳನ್ನು ಮಾರಾಟ ಮಾಡಿದ ಸಂಘಕ್ಕಿರುವ ಪ್ರಶಸ್ತಿಯನ್ನು ಕುಂಜತ್ತೂರು ಸಂಘಕ್ಕೂ ಹಸ್ತಾಂತರಿಸಲಾಯಿತು. ಈ ವೇಳೆ ಈ ಸಂಘಗಳ ಅಧ್ಯಕ್ಷ, ಕಾರ್ಯದರ್ಶಿ ಗಳಾದ ಫಾರೂಕ್, ವೇಣುಗೋಪಾಲ್ ಭಟ್ (ಕುಂಬ್ಡಾಜೆ), ಎನ್. ಕೃಷ್ಣ ಮೂರ್ತಿ, ವಿ. ಸೌಮ್ಯ …