ಇಂದು ಬೆಳಿಗ್ಗೆ ಕಾಸರಗೋಡಿನಿಂದ ಪ್ರಾಯೋಗಿಕ ಸಂಚಾರ ನಡೆಸಿದ ವಂದೇ ಭಾರತ್ ಎಕ್ಸ್‌ಪ್ರೆಸ್

ಕಾಸರಗೋಡು: ಕೇಂದ್ರ ರೈಲ್ವೇ ಇಲಾಖೆ ಕೇರಳಕ್ಕೆ ಕೊಡುಗೆಯಾಗಿ ನೀಡಿರುವ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಯ ಸೇವೆ ರವಿವಾರದಂದು ಉದ್ಘಾಟನೆ ಗೊಳ್ಳಲಿರುವಂತೆಯೇ ಆ ರೈಲು ಇಂದು ಬೆಳಿಗ್ಗೆ ೭ ಗಂಟೆಗೆ ಕಾಸರಗೋ ಡಿನಿಂದ ತಿರುವನಂತಪು ರದತ್ತ ಪ್ರಾಯೋಗಿಕ ಸಂಚಾರ ನಡೆಸಿತು. ಕಾಸರಗೋಡು ರೈಲ್ವೇ ಪೊಲೀಸರು, ರೈಲ್ವೇ ಭದ್ರತಾಪಡೆ ಮತ್ತು ರೈಲ್ವೇ ಇಲಾಖೆಯ ಅಧಿಕಾರಿಗಳು ಇದಕ್ಕೆ ಸ್ವಾಗತ ನೀಡಿದರು. ಈ ರೈಲು ನಿನ್ನೆ ರಾತ್ರಿ ೧೧.೪೨ಕ್ಕೆ ಕಾಸರಗೋಡು ನಿಲ್ದಾಣಕ್ಕೆ ಆಗಮಿಸಿತ್ತು.  ಈ ರೈಲು ಸೇವೆಯ ಉದ್ಘಾಟನೆಯನ್ನು ಪ್ರಧಾನಮಂತ್ರಿ ನರೇಂದ್ರಮೋದಿಯವರು  …

ಎಂಡೋಸಲ್ಫಾನ್ ಸಂತ್ರಸ್ತರಿಗೆ ಮನೆ: ವರದಿ ನೀಡದ ಜಿಲ್ಲಾಧಿಕಾರಿಗೆ ನ್ಯಾಯಾಲಯದಿಂದ ವಿಮರ್ಶೆ

ಕೊಚ್ಚಿ: ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿದ ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿವೆಯೆಂಬ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಈ ವಿಷಯದಲ್ಲಿ ಕಾಸರಗೋಡು ಜಿಲ್ಲಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದೆ. ಎಂಡೋಸಲ್ಫಾನ್ ಸಂತ್ರಸ್ತರಿಗೆ ಶ್ರೀ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್ ನಿರ್ಮಿಸಿ ನೀಡಿದ ಮನೆ ಗಳನ್ನು ಯಥಾ ಸಮಯ ಹಸ್ತಾಂತರಿಸದಿರುವುದರಿಂದ ಮನೆಗಳು ಅಪಾಯಕಾರಿ ಸ್ಥಿತಿಯ ಲ್ಲಿವೆ ಯೆಂದು ತಿಳಿಸಿ ಸತ್ಯಸಾಯಿ ಆರ್ಫನೇಜ್ ಟ್ರಸ್ಟ್  ಅರ್ಜಿ ಸಲ್ಲಿಸಿತ್ತು. ಇದರಂತೆ ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾಧಿಕಾರಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದರೆ ಜಿಲ್ಲಾಧಿಕಾರಿ ಯಿಂದ ಯಾವುದೇ ವರದಿ …

ಕುಂಬಳೆಯ ವೈದ್ಯರ ಎರಡೂವರೆ ಲಕ್ಷ ರೂಪಾಯಿ ವಂಚನೆ

ಕುಂಬಳೆ: ಔಷಧಿ ಕಳುಹಿಸಿಕೊಡುವುದಾಗಿ  ತಿಳಿಸಿ ಖಾಸಗಿ ವೈದ್ಯರ ೨,೫೦,೦೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಕುಂಬಳೆ ಪೇಟೆಯ ಸ್ಟಾರ್ ಕ್ಲಿನಿಕ್ ಮಾಲಕ ಡಾ| ಅಬ್ದುಲ್ ಹಮೀದ್‌ರ ದೂರಿನಂತೆ ಕುಂಬಳೆ ಪೊಲೀಸರು  ಬೆಂಗಳೂರಿನ ಎಕ್ಸಸ್ ಹೆಲ್ತ್ ಇಂಟರ್‌ನ್ಯಾಶನಲ್ ಕಂಪೆನಿ ಮೆನೇಜರ್ ಸುರೇಂದ್ರ ಎಂಬವರ ವಿರುದ್ಧ ಕೇಸು ದಾಖಲಿಸಿದ್ದಾರೆ. ಔಷಧಿ ಕಳುಹಿಸಿ ಕೊಡಲು ಆನ್‌ಲೈನ್ ಮೂಲಕ ಹಣ ಕಳುಹಿಸಿಕೊಟ್ಟಿರುವುದಾಗಿಯೂ ಆದರೆ ಔಷಧಿ ಕಳುಹಿಸದೆ ವಂಚಿಸಿ ರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಲೋಕಸಭಾ ಚುನಾವಣೆಗೆ ಎಡರಂಗ ಸಿದ್ಧತೆ ಮುಖ್ಯಮಂತ್ರಿ, ಸಚಿವರು ಅಖಾಡಕ್ಕೆ

ಕಾಸರಗೋಡು: ಲೋಕಸಭಾ ಚುನಾವಣೆ ಯಾವುದೇ ಸಮಯದಲ್ಲಿ ಘೋಷಿಸಬಹುದೆಂಬ ಲೆಕ್ಕ ಹಾಕಿ ಎಡರಂಗ ಚುನಾವಣೆ ಸಿದ್ಧತೆಗಳಲ್ಲಿ ತೊಡಗಿದೆ. ಇದರ ಅಂಗವಾಗಿ ಮುಖ್ಯಮಂತ್ರಿ ಹಾಗೂ ಸಚಿವರು ವಿಧಾನಸಭಾ ಮಂಡಲ ಪರ್ಯಟನೆ ನಡೆಸಲಿದ್ದಾರೆ. ಮಂಡಲ ಮಟ್ಟದಲ್ಲಿ ಮಂಡಲ ಸದಸ್ಸ್ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ನ.೧೮ರಿಂದ ಡಿಸೆಂಬರ್ ೨೪ರವರೆಗಿರುವ ದಿನಾಂಕಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿದಿನ ೫ ಮಂಡಲಗಳಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಭಾಗವಹಿಸುವರು.೧೮ರಂದು ಮಂಜೇಶ್ವರ ಮಂಡಲದಿಂದ ಮಂಡಲ ಸದಸ್ಸ್‌ಗೆ ಚಾಲನೆ ನೀಡಲಾಗುವುದು. ವಿವಿಧ ವಲಯಗಳಲ್ಲಿರುವ ಗಣ್ಯರೊಂದಿಗೆ ಮುಖ್ಯಮಂತ್ರಿ, ಸಚಿವರು ಚರ್ಚೆ ನಡೆಸುವರು. …

ಕೇಂದ್ರ ಸಹಕಾರ ಸಂಸ್ಥೆಗೆ ಕೋರ್ಡಿನೇಟರ್‌ಗಳ ಆಯ್ಕೆ

ಮಂಜೇಶ್ವರ: ಕೇಂದ್ರ ಸಹಕಾರ ಇಲಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನೇಶನಲ್ ಫೆಡರೇಶನ್ ಓಫ್ ಟೂರಿಸಂ ಆಂಡ್ ಟ್ರಾನ್ಸ್ ಪೋರ್ಟ್ ಕೋಪರೇಟಿವ್ಸ್ ಆಫ್ ಇಂಡಿಯಾ ಲಿಮಿಟೆಡ್ ಎಂಬ ಸಹಕಾರ ಸಂಸ್ಥೆ ಜ್ಯಾರಿಗೊಳಿಸುತ್ತಿರುವ ಜನೋಪಕಾರಪ್ರದವಾದ ೨೦ ಯೋಜನೆಗಳಿಗೆ ಕೋರ್ಡಿನೇಟರ್‌ಗಳನ್ನು ಆಯ್ಕೆ ಮಾಡಲಾಗುವುದು. ಆರೋಗ್ಯ, ವಿದ್ಯಾಭ್ಯಾಸ, ಕೈಗಾರಿಕೆ, ಕೃಷಿ, ಟೂರಿಸಂ ಹಾಗೂ ಸಾರಿಗೆ ಎಂಬೀ ವಲಯಗಳಲ್ಲಿ ಈ ಯೋಜನೆಯಿದೆ. ಮಂಜೇಶ್ವರ, ವರ್ಕಾಡಿ, ಕುಂಬಳೆ ಪಂಚಾಯತ್‌ಗಳಿಗೆ ಕೋರ್ಡಿನೇಟರ್‌ಗಳು ಹಾಗೂ ವಾರ್ಡ್‌ಗಳಿಗೆ ಕೋರ್ಡಿನೇಟರ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಸಮಾಜಸೇವೆಯೊಂದಿಗೆ ಆದಾಯವನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ೯೬೪೫೬೦೪೯೮೨ ಸಂಖ್ಯೆಯನ್ನು  …

ಆಟೋರಿಕ್ಷಾ ಚಾಲಕರ ಸಂಘಟನೆ ಸಿಐಟಿಯು ಪೈವಳಿಕೆ ಪಂಚಾಯತ್ ಮಟ್ಟದ ಸಭೆ

ಪೈವಳಿಕೆ: ಪೈವಳಿಕೆ ಪಂಚಾಯತ್ ಮಟ್ಟದ ಆಟೋರಿಕ್ಷಾ ಚಾಲಕರ ಸಂಘಟನೆ ಸಿಐಟಿಯುನ ಸಭೆ ಪೈವಳಿಕೆ ಆಜಾದ್ ನಗರದಲ್ಲಿ ಜರಗಿತು. ಸಂಘಟನೆಯ ಅಧ್ಯಕ್ಷ ಪವಿತ್ರ ಬಲ್ಲಾಳ್ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಉದ್ಘಾಟಿಸಿ ಮಾತ ನಾಡಿದರು. ಸಿಐಟಿಯು ನೇತಾರ ಚಂದ್ರ ನಾಕ್ ಮಾನಿಪ್ಪಾಡಿ, ಕ್ಷೇಮ ನಿಧಿಗಳ ಬಗ್ಗೆ ಸಂಘಟನೆಯ ಉದ್ದೇಶಗಳ ಬಗ್ಗೆ ವಿವರಿಸಿದರು. ಸಿಪಿಎಂ ಪೈವಳಿಕೆ ಲೋಕಲ್ ಕಾರ್ಯದರ್ಶಿ ಅಬ್ದುಲ್ಲ ಕೆ. ಮಾತನಾಡಿದರು. ಎಲ್ಲಾ ಆಟೋರಿಕ್ಷಾ ಚಾಲಕರಿಗೂ ಸದಸ್ಯತನ ನೀಡಲು ತೀರ್ಮಾನಿಸಲಾಯಿತು. ಎಲ್ಲರನ್ನು ಕ್ಷೇಮನಿಧಿಗೆ …

ಸ್ಥಳೀಯಾಡಳಿತ ಸಂಸ್ಥೆಗಳ ಮತದಾರ ಯಾದಿ: ಅತೀ ಹೆಚ್ಚು ಮತದಾರರು ಒಳವಣ್ಣ ಪಂಚಾಯತ್‌ನಲ್ಲಿ, ಅತೀ ಕಡಿಮೆ ಇಲಮಲಕುಡಿಯಲ್ಲಿ

ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಮತದಾರ ಯಾದಿಯಲ್ಲಿ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇನ್ನು ರಾಜ್ಯದ ಗ್ರಾಮ ಪಂಚಾಯತ್‌ಗಳ ಪೈಕಿ ಅತೀ ಹೆಚ್ಚು ಎಂಬಂತೆ ಕಲ್ಲಿಕೋಟೆ ಜಿಲ್ಲೆಯ ಒಳವಣ್ಣ ಗ್ರಾಮ ಪಂಚಾಯತ್‌ನಲ್ಲಿ ೨೫೪೯೧ ಗಂಡಸರು ಮತ್ತು ೨೬೮೩೩ ಮಹಿಳೆಯರು ಮತ್ತು ಎರಡು ಮಂಗಳಮುಖಿಯರು ಸೇರಿದಂತೆ ಒಟ್ಟು ೫೨೩೨೬ ಮತದಾರರಿದ್ದಾರೆ. ಅತೀ ಕಡಿಮೆ ಎಂಬಂತೆ ಇಡುಕ್ಕಿ ಜಿಲ್ಲೆಯ ಇಡಮಲಕುಡಿ  ಪಂಚಾಯತ್‌ನಲ್ಲಿ ೯೪೧ ಗಂಡಸಲು ಮತ್ತು ೯೫೮ ಮಹಿಳೆಯರು ಸೇರಿದಂತೆ ಒಟ್ಟು ಕೇವಲ ೧೮೯೯ ಮತದಾರರು ಮಾತ್ರವೇ ಇದ್ದಾರೆ. …

ಗಮಕ ಶ್ರಾವಣ ಸರಣಿ ಸಮಾರೋಪ

ಕುಂಬಳೆ: ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ, ಕಾಸರಗೋಡು ಹಾಗೂ ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕದ ಸಂಯುಕ್ತ ಆಶ್ರಯದಲ್ಲಿ ಈ ವರ್ಷ ನಡೆದ ಗಮಕ ಶ್ರಾವಣ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ದೈಗೋಳಿಯ ಶ್ರೀ ಸಾಯಿ ನಿಕೇತನ ಸೇವಾಶ್ರಮದ ಸಭಾಂಗಣದಲ್ಲಿ ತೆಕ್ಕೆಕೆರೆ ಶಂಕರನಾರಾಯಣ ಭಟ್‌ರ ಅಧ್ಯಕ್ಷತೆಯಲ್ಲಿ ಸಮಾಪ್ತಿ ಯಾಯಿತು. ಸೇವಾಶ್ರಮದ ಸ್ಥಾಪಕ ಡಾ| ಉದಯಕುಮಾರ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಡಾ| ಗೋವಿಂದ ಪ್ರಸಾದ ಕಜೆ ಗಮಕ ಕಲೆಯ ಮಹತ್ವ ಹಾಗೂ ಔಚಿತ್ಯಗಳ …

ಪಾರೆ ಶ್ರೀ ಭಗವತಿ ಆಲಿ ಚಾಮುಂಡಿ ಕ್ಷೇತ್ರ ಜೀರ್ಣೋದ್ಧಾರ ಚಟುವಟಿಕೆಗಳಿಗೆ ಚಾಲನೆ

ಕುಂಬಳೆ: ಆರಿಕ್ಕಾಡಿ ಶ್ರೀ ಭಗವತಿ ಆಲಿಚಾಮುಂಡಿ ಕ್ಷೇತ್ರದಲ್ಲಿ ಜೀರ್ಣೋದ್ಧಾರ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಇದರಂಗವಾಗಿ ಈ ತಿಂಗಳ ೨೪ರಂದು ಬೆಳಿಗ್ಗೆ ೧೧ ಗಂಟೆಗೆ ಕ್ಷೇತ್ರದಲ್ಲಿ ವಿನಂತಿ ಪತ್ರ ಬಿಡುಗಡೆ ನಡೆಯಲಿದೆ. ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ ಭಾಗವಹಿಸುವರು. ಜೀರ್ಣೋದ್ಧಾರ ಚಟುವಟಿಕೆಗಳಿಗಾಗಿ ಬ್ರಹ್ಮಶ್ರೀ ಕಲ್ಕುಳ ಬೂಡು ಶಂಕರನಾರಾಯಣ ಕಡಮಣ್ಣಾಯ ಗೌರವಾಧ್ಯಕ್ಷರಾಗಿ ಸಮಿತಿ ರೂಪೀಕರಿಸಲಾಗಿದೆ. ಶ್ರೀ ಕ್ಷೇತ್ರದ ಮೂಲ ಆಲಯ, ಸುತ್ತುಗೋಪುರ, ಭಂಡಾರಮನೆ, ನಾಗ ಸನ್ನಿಧಿ, ಆಲಿ ಚಾಮುಂಡಿ ದೈವದ ಅಭಯಸ್ಥಾನ, ಗುಳಿಗ ಕಟ್ಟೆ ಎಂಬಿವು ಸೇರಿದಂತೆ …

ಕ್ಯಾಟರಾಕ್ಟ್ (ಕಣ್ಣಿನ ಪೊರೆ)

-ಡಾ.ಮುರಲೀ ಮೋಹನ್ ಚೂಂತಾರು, ಹೊಸಂಗಡಿ. ಕಣ್ಣಿನ ಒಳ ಭಾಗದಲ್ಲಿ ಇರುವ ಲೆನ್ಸ್ ಅಥವಾ ಮಸೂರ ನಮ್ಮ ದೃಷ್ಟಿಯ ಸೃಷ್ಟಿಯಲ್ಲಿ ಬಹು ಮುಖ್ಯ ಭೂಮಿಕೆ ವಹಿಸುತ್ತದೆ. ಈ ಮಸೂರದ ಒಳಭಾಗದಲ್ಲಿ ಪ್ರೋಟಿನ್ ಒಡೆದುಕೊಂಡು ಉಂಟಾಗುವ ಪೊರೆಯನ್ನು ಕ್ಯಾಟರಾಕ್ಟ್ ಎನ್ನುತ್ತಾರೆ. ಇದರಿಂದ ದೃಷ್ಟಿಯ ಸಮಸ್ಯೆ ಉಂಟಾಗುತ್ತದೆ. ಇದೊಂದು ವಯೋ ಸಹಜ ಕಾಯಿಲೆಯಾಗಿದ್ದು, ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಈ ಪೊರೆ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕ್ಯಾಟರಾಕ್ಟ್ ಒಂದು ಕಣ್ಣಿನಲ್ಲಿ ಅಥವಾ ಎರಡೂ ಕಣ್ಣಿನಲ್ಲಿ ಉಂಟಾಗ ಬಹುದು. ಆದರೆ ಒಂದು ಕಣ್ಣಿನಿಂದ …