ಯುವಕನಿಗೆ ತಂಡದಿಂದ ಹಲ್ಲೆ: ಗಾಯಾಳು ಆಸ್ಪತ್ರೆಯಲ್ಲಿ

ಸೀತಾಂಗೋಳಿ: ಗಣೇಶೋ ತ್ಸವದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮರಳುತ್ತಿದ್ದ ಯುವಕನಿಗೆ ತಂಡವೊಂದು ಹಲ್ಲೆಗೈದು ಗಾಯಗೊಳಿಸಿದೆ. ಸೂರಂಬೈಲು ನಿವಾಸಿ ಸಂದೀಪ್ (೨೨) ತಂಡದ ಹಲ್ಲೆಯಿಂದ ಗಾಯಗೊಂಡು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ದ್ದಾರೆ. ಇಂದು ಮುಂಜಾನೆ ೨.೩೦ರ ವೇಳೆ  ಗಣೇಶೋತ್ಸವ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಸಂದೀಪ್ ಮುಜುಂಗಾವು ಕ್ಷೇತ್ರ ಸಮೀಪ ಆಹಾರ ಸೇವಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಅಲ್ಲಿಗೆ ತಲುಪಿದ ಪೆರ್ಣೆಯ ನಿತಿನ್ ಹಾಗೂ ಸೀತಾಂಗೋಳಿಯ ದೀಕ್ಷಿತ್ ಎಂಬಿವರು ಹಲ್ಲೆಗೈದುದಾಗಿ ದೂರಲಾಗಿದೆ. ಪೂರ್ವದ್ವೇಷವೇ ಹಲ್ಲೆಗೆ ಕಾರಣವೆನ್ನಲಾಗಿದೆ.

ಅಕ್ರಮವಾಗಿ ಸಾಗಿಸುತ್ತಿದ್ದ ಮರಳು  ಸಹಿತ ಎರಡು ವಾಹನ ವಶ

ಕಾಸರಗೋಡು: ಕಾಸರಗೋಡು ಮತ್ತು ಮೇಲ್ಪರಂಬ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಗ ಳಲ್ಲಾಗಿ ಅನಧಿಕೃತವಾಗಿ ಸಾಗಿಸುತ್ತಿದ್ದ ಎರಡು ಲೋಡ್ ಮರಳು ವಶಪಡಿಸಿಕೊಂಡಿದ್ದಾರೆ. ಮೊಗ್ರಾಲ್ ಪುತ್ತೂರಿನಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚಣೆಯಲ್ಲಿ ಟೆಂಪೋದಲ್ಲಿ ಸಾಗಿಸುತ್ತಿದ್ದ ಹೊಯ್ಗೆ ವಶಪಡಿಸಿದ್ದಾರೆ. ಆಗ ಆ ವಾಹನವನ್ನು ಚಾಲಕ   ಅಲ್ಲೇ ಉಪೇಕ್ಷಿಸಿ ಪರಾರಿಯಾಗಿದ್ದಾನೆ. ಬಳಿಕ ಆ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಇದೇ ರೀತಿ ಪೊಯಿನಾಚಿ ಸಮೀಪದ ಇಡವುಂಗಾಲ್-ಚಾತಂಗೈ ರಸ್ತೆಯಲ್ಲಿ ರಾತ್ರಿ ವೇಳ ಮೇಲ್ಪರಂಬ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಟಿಪ್ಪರ್ ಲಾರಿಯಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಳೆ …

ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರಿಂದ ಉಪವಾಸ ಸತ್ಯಾಗ್ರಹ ಆರಂಭ

ಕಾಸರಗೋಡು: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ಕೊನೆಗೊಳಿಸಬೇಕು, ಸಮಾನ ನಾಗರಿಕ ಸಂಹಿತೆ ಜ್ಯಾರಿಗೊಳಿಸುವ ನಿರ್ಧಾರದಿಂದ ಕೇಂದ್ರ ಸರಕಾರ ಹಿಂಜರಿಯಬೇಕು ಮುಂತಾದ ಬೇಡಿಕೆಗಳನ್ನು ಮುಂದಿರಿಸಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ನೇತೃತ್ವದಲ್ಲಿ ೨೪ ಗಂಟೆಗಳ ಕಾಲ ನಡೆಯುವ ಉಪವಾಸ ಸತ್ಯಾಗ್ರಹ ಇಂದು ಬೆಳಿಗ್ಗೆ ಊರಂಭಗೊಂಡಿತು. ವಿದ್ಯಾನಗರ ಡಿಸಿಸಿ ಕಚೇರಿ ಪರಿಸರದಲ್ಲಿ ನಡೆಯುವ ಸತ್ಯಾಗ್ರಹವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಉದ್ಘಾಟಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸಿದರು. ಮಹಾರಾಷ್ಟ್ರ ಪ್ರದೇಶ್ ಕಾಂಗ್ರೆಸ್ ಉಪಾಧ್ಯಕ್ಷ ಮುಹಿಸಿಂ ಹೈದರ್, ಎಐಸಿಸಿ ಸೆಕ್ರೆಟರಿ …

ತಲೆಮರೆಸಿದ್ದ ಆರೋಪಿಯನ್ನು ಮನೆಗೆ ಸುತ್ತುವರಿದು ಸೆರೆಹಿಡಿದ ಪೊಲೀಸರು

ಕಾಸರಗೋಡು: ಹಲವು ಕಳವು ಪ್ರಕರಣಗಳ ಆರೋಪಿಯೋರ್ವನನ್ನು ಕಾಸರಗೋಡು ಪೊಲೀಸ್ ಠಾಣೆ ಎಸ್.ಐ. ಎಂ.ವಿ. ವಿಷ್ಣುಪ್ರಸಾದ್‌ರ ನೇತೃತ್ವದ ಪೊಲೀಸರು ಆತನ ಮನೆಯನ್ನು ಸುತ್ತುವರಿದು ಸೆರೆ ಹಿಡಿದಿದ್ದಾರೆ. ಮೊಗ್ರಾಲ್‌ಪುತ್ತೂರು ಕಲ್ಲಂಗೈ ಬಳಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಅಬ್ದುಲ್ ಜಂಶೀದ್ (೨೮) ಬಂಧಿತನಾದ ಆರೋಪಿ. ಈತನ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ನಾಲ್ಕು ಕೇಸುಗಳಿವೆ. ಇದರಲ್ಲಿ ಒಂದು ಕಳವು ಪ್ರಕರಣವಾಗಿದೆ. ಇದರ ಹೊರತಾಗಿ ಮಲಪ್ಪುರ ಕುಟ್ಟಿಪುರದಲ್ಲೂ ಈತನ ವಿರುದ್ಧ ಕೇಸು ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಮೂಲತಃ ಚೌಕಿ ಆಜಾದ್ …

ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅರೆಸ್ಟ್

ವಿಶಾಖಪಟ್ಟಣಂ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ, ತೆಲುಗುದೇಶಂ ಪಾರ್ಟಿ (ಟಿಡಿಪಿ) ವರಿಷ್ಠ ಚಂದ್ರಬಾಬು ನಾಯ್ಡುರನ್ನು ಇಂದು ಮುಂಜಾನೆ ಆಂಧ್ರ ಸಿಐಡಿ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಮಧ್ಯರಾತ್ರಿ ೧೨ ಗಂಟೆಗೆ ಚಂದ್ರಬಾಬುರನ್ನು ಬಂಧಿಸಲು ಪೊಲೀಸರು ತಲುಪಿದ್ದು, ನಂತರ ಭಾರೀ ಹೈಡ್ರಾಮಾದ ನಡುವೆ ಇಂದು ಮುಂಜಾನೆ ೩ ಗಂಟೆಗೆ ಬಂಧಿಸಿದ್ದಾರೆ. ಬಂಧನದ ವೇಳೆ ವಾಗ್ದಾಳಿ ನಡೆಸಿದ ಚಂದ್ರಬಾಬು ನಾಯ್ಡು ಸಿಐಡಿ ಪೊಲೀಸರು ನನ್ನ ಹಕ್ಕು ಕಸಿಯುವ ಕೆಲಸ ಮಾಡಿದ್ದಾರೆ.  ಎಫ್‌ಐಆರ್ ಮಾಡಿಲ್ಲ. ಯಾವುದೇ ನೋಟೀಸು ನೀಡಿಲ್ಲ ಮತ್ತು ಯಾಕೆ ನನ್ನನ್ನು ಬಂಧಿಸುತ್ತೀರಾ…? …

ವ್ಯಕ್ತಿಯಿಂದ ರಸ್ತೆ ಸ್ವಾಧೀನ: ಅದಾಲತ್‌ನಲ್ಲಿ ಉಪ ಜಿಲ್ಲಾಧಿಕಾರಿಗೆ ಸ್ಥಳೀಯರಿಂದ ದೂರು

ಬದಿಯಡ್ಕ: ಗ್ರಾಮ ಭೇಟಿ ಕಾರ್ಯಕ್ರಮದಂಗವಾಗಿ ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ ಬದಿಯಡ್ಕ ವಿಲ್ಲೇಜ್ ಕಚೇರಿ ಸಂದರ್ಶಿಸಿದರು. ಈ ವೇಳೆ ವ್ಯಕ್ತಿಯೊಬ್ಬರು ರಸ್ತೆ ಸ್ವಾಧೀನ ಪಡಿಸಿದ ಬಗ್ಗೆ ಸ್ಥಳೀಯರು ದೂರು ನೀಡಿದರು. ಅಲ್ಲದೆ ಲೈಫ್ ಮಿಶನ್, ಪಟ್ಟೆ, ಬಿಪಿಎಲ್ ಕಾರ್ಡ್, ವಿದ್ಯುತ್ ಸಂಪರ್ಕ, ವೈದ್ಯಕೀಯ ನೆರವು, ಬೀಳಲು ಸಿದ್ಧವಾಗಿರುವ ಮರಗಳನ್ನು ಕಡಿದು ತೆರವುಗೊಳಿಸುವ ಬಗ್ಗೆ, ರಸ್ತೆ ಬದಿಯ ಬೋರ್ಡ್‌ಗಳಲ್ಲಿ ಕನ್ನಡ ಭಾಷೆಯನ್ನು ಸೇರಿಸುವುದು ಮೊದಲಾದವುಗಳ ಬಗ್ಗೆ ದೂರು ನೀಡಲಾಗಿದೆ. ಇದೆಲ್ಲ ಸೇರಿ ಒಟ್ಟು ನಲ್ವತ್ತು ದೂರುಗಳು ಸಹಾಯಕ ಜಿಲ್ಲಾಧಿಕಾರಿಗೆ …

ರಾಜ್ಯದಲ್ಲಿ ಒಟ್ಟು ೨.೭೬ ಕೋಟಿ ಮತದಾರರು

ಕಾಸರಗೋಡು: ರಾಜ್ಯದಲ್ಲಿ ೨.೭೬ ಕೋಟಿ ಮತದಾರರಿದ್ದಾರೆ. ರಾಜ್ಯ ಚುನಾವಣಾ ಆಯೋಗ ನಿನ್ನೆ ಪ್ರಕಟಿಸಿದ ಸ್ಥಳೀಯಾಡಳಿತ ಸಂಸ್ಥೆಗಳ ಕರಡು ಮತದಾರರ ಪಟ್ಟಿಯಲ್ಲಿ ಈ ಬಗ್ಗೆ ತಿಳಿಸಲಾಗಿದೆ. ಇದೇ ವೇಳೆ ಪುರುಷರಿಗಿಂತ ೧೩,೧೩,೨೬೨ ಮಹಿಳೆಯರು ಹೆಚ್ಚಿದ್ದಾರೆ. ೧.೩೧ ಕೋಟಿ ಪುರುಷರು, ೧.೪೪ ಕೋಟಿ ಮಹಿಳಾ ಮತದಾರರಿದ್ದಾರೆ. ಇದೇ ವೇಳೆ ೨೪೦ ಟ್ರಾನ್ಸ್ ಜೆಂಡರ್‌ಗಳಿದ್ದಾರೆಂದು ತಿಳಿಸಲಾಗಿದೆ. ಪಟ್ಟಿಯಲ್ಲಿ ಒಳಪಡದವರಿಗೆ ಹೆಸರು ಸೇರ್ಪಡೆಗೊಳಿಸಲು ೨೩ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ೨೦೨೩ ಜನವರಿ ೧ ಅಥವಾ ಅದಕ್ಕಿಂತ ಮುಂಚೆಯೇ ೧೮ ವರ್ಷ ಪೂರ್ತಿಯಾದವರಿಗೆ …

ಚಪ್ಪರ ಬಿಚ್ಚುವ ಮಧ್ಯೆ ಶಾಕ್ ತಗಲಿ ಮೂವರು ಮೃತ್ಯು

ಆಲಪ್ಪುಳ: ಎಸ್ ಎನ್‌ಡಿಪಿ ಯೋಗಂ ಉಪಾಧ್ಯಕ್ಷ ತುಷಾರ್ ವೆಳ್ಳಾಪಳ್ಳಿಯವರ ಪುತ್ರಿಯ ವಿವಾಹ ಸಂಬಂಧ ಹಾಕಿದ್ದ ಚಪ್ಪರವನ್ನು ಬಿಚ್ಚುವಾಗ ಶಾಕ್ ತಗಲಿ ಮೂರು ಮಂದಿ ಅನ್ಯರಾಜ್ಯ ಕಾರ್ಮಿಕರು ನಿಧನರಾಗಿದ್ದಾರೆ. ಮೂರು ಮಂದಿಗೆ ಗಂಭೀರ ಗಾಯವುಂಟಾಗಿದೆ. ಬಿಹಾರ ನಿವಾಸಿಗಳಾದ ಆದಿತ್ಯನ್, ಕಾಶಿರಾಂ, ಪಶ್ಚಿಮಬಂಗಾಲದ ಧನಂಜಯನ್ ಮೃತಪಟ್ಟವರಾದರೆ, ಜಾದುಲಾಲ್, ಅನೂಪ್, ಜಯನ್ (ಇವರೆಲ್ಲ ಬಿಹಾರ ನಿವಾಸಿಗಳು) ಗಾಯ ಗೊಂಡಿದ್ದಾರೆ. ಚಪ್ಪರ ತೆಗೆಯುವಾಗ ಕಬ್ಬಿಣದ ಸರಳು  ತಂತಿಗೆ ತಾಗಿರುವುದೇ ದುರಂತಕ್ಕೆ ಕಾರಣವಾಗಿರುವುದಾಗಿ ಹೇಳ ಲಾಗುತ್ತಿದೆ.

೩ ಕಿಲೋ ಚಿನ್ನಾಭರಣ ಅಪಹರಣ

ತೃಶೂರು: ಕಾರಿನಲ್ಲಿ ತಲುಪಿದ ತಂಡವೊಂದು ೩ ಕಿಲೋ ಚಿನ್ನವನ್ನು ಅಪಹರಿಸಿದ ಘಟನೆ ತೃಶೂರಿನಲ್ಲಿ ನಡೆದಿದೆ. ನಿನ್ನೆ ರಾತ್ರಿ ೧೧ ಗಂಟೆ ವೇಳೆ ಈ ಘಟನೆ ನಡೆದಿದ್ದು, ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿ ದ್ದಾರೆ.  ತೃಶೂರಿನ ಆಭರಣ ತಯಾರಿ ಕೇಂದ್ರದಿಂದ ಕನ್ಯಾಕುಮಾರಿಯ ಚಿನ್ನಾಭರಣ ಅಂಗಡಿಗಳಿಗೆ ಕೊಂಡೊಯ್ಯುತ್ತಿದ್ದ ಚಿನ್ನವನ್ನು ತಂಡ ಅಪಹರಿಸಿದೆ. ಆಭರಣ ತಯಾರಿ ಕೇಂದ್ರದ ಮೂವರು ನೌಕರರು ಚಿನ್ನ ದೊಂದಿಗೆ  ನಿನ್ನೆ ರಾತ್ರಿ ೧೧ ಗಂಟೆಗೆ ಹೊರಟಿದ್ದರು. ಆಭರಣ ತಯಾರಿಕೇಂದ್ರದಿಂದ ರೈಲ್ವೇ ನಿಲ್ದಾಣದತ್ತ ನಡೆದು ಹೋಗುತ್ತಿ ದ್ದಾಗ …

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್ ಭಯೋತ್ಪಾದಕನಿಗೆ ಗುಂಡಿಕ್ಕಿ ಹತ್ಯೆ

ಶ್ರೀನಗರ: ಪಾಕಿಸ್ತಾನ ಅಕ್ರಮಿತ ಕಾಶ್ಮೀರದ ಕಾವಲ್ಕೋಟ್‌ನ ಆಲ್-ಖುದಸ್ ಮಸೀದಿಯೊಳಗೆ ಅಪರಿಚಿತ ಬಂದೂಕುಧಾರಿಗಳು  ಲಷ್ಕರ್ ಎ ತೋಯ್ಬಾ (ಎಲ್ ಇಟಿ)ದ ಉನ್ನತ ಭಯೋತ್ಪಾದಕ ಕಮಾಂಡರ್‌ನನ್ನು ಗುಂಡಿಕ್ಕಿ ಕೊಂದಿದ್ದಾರೆ. ಈ ಭಯೋತ್ಪಾದ ಕನನ್ನು ರಿಯಾಜ್ ಅಲಿಯಾಸ್ ಅಬು ಖಾಸಿಂ ಎಂದು ಗುರುತಿಸಲಾಗಿದೆ. ಈತ ನಮಾಜು ಮಾಡಲೆಂದು ಮಸೀದಿಗೆ ಬಂದಿದ್ದ ವೇಳೆ ಆತನ ತಲೆಗೆ ಪಾಂಯಿಟ್  ಬ್ಲಾಂಕ್ ರೇಂಜ್‌ನಲ್ಲಿ ಗುಂಡು ಹಾಕಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.  ಜನವರಿ ೧ರಂದು ಧಂಗ್ರಿ ಭಯೋತ್ಪಾದಕ ದಾಳಿಯ ಹಿಂದಿನ ಪ್ರಧಾನ ಸೂತ್ರಧಾರ ಈತನಾಗಿದ್ದಾನೆಂದು ತಿಳಿಯಲಾಗಿದೆ.