ಮನೆಯಿಂದ ೧.೭೫ ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಇಬ್ಬರ ಸೆರೆ
ಮಂಜೇಶ್ವರ: ಮನೆಗೆ ಕಳ್ಳರು ನುಗ್ಗಿ ೧,೭೫,೦೦೦ ರೂ. ಮೌಲ್ಯದ ಆರು ಗೋಣಿ ಚೀಲಗಳಲ್ಲಿ ತುಂಬಿಸಿಡ ಲಾಗಿದ್ದ ಅಡಿಕೆ ಕಳವುಗೈದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ವರ್ಕಾಡಿ ನಲ್ಲೆಂಗಿಪದವಿನ ಸಾಜಿದ್ ಕಾಂಪೌಂಡ್‌ನ ರೆಹ್ಮಾನ್ ಸಹೀಂ ಎಂಬವರು ಈ ಬಗ್ಗೆ ದೂರು ನೀಡಿದ್ದು ಅದರಂತೆ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟಂಬರ್ ೫ಮತ್ತು ೬ರ ನಡುವಿನ ಸಮಯದಲ್ಲಿ ಕಳ್ಳರು ತಮ್ಮ ಮನೆಯ ಬಾಗಿಲ ಬೀಗ ಮುರಿದು ಒಳನುಗ್ಗಿ ಕೊಠಡಿಯೊಳಗಿರಿಸಲಾಗಿದ್ದ ಅಡಿಕೆ ಕಳವಗೈದಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ರೆಹ್ಮಾನ್ ಸಹೀಂ ತಿಳಿಸಿದ್ದಾರೆ. …
Read more “ಮನೆಯಿಂದ ೧.೭೫ ಲಕ್ಷ ರೂ. ಮೌಲ್ಯದ ಅಡಿಕೆ ಕಳವು: ಇಬ್ಬರ ಸೆರೆ”