ಶ್ರೀಕೃಷ್ಣ ಜನ್ಮಾಷ್ಟಮಿ: ಕುಟ್ಟಿಕ್ಕೋಲ್‌ನಲ್ಲಿ ಧ್ವಜ ತೋರಣ ನಾಶ

ಕುಟ್ಟಿಕ್ಕೋಲ್: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಕ್ಷೇತ್ರ ಪರಿಸರದಲ್ಲಿ ಸ್ಥಾಪಿಸಲಾದ ಧ್ವಜ ತೋರಣಗಳನ್ನು ಬೈಕ್‌ಗಳಲ್ಲಿ ತಲುಪಿದ ತಂಡ ನಾಶಗೊಳಿಸಿದೆ. ಈ ಘಟನೆಗೆ ಸಂಬಂಧಿಸಿ ೧೫ ಮಂದಿ ವಿರುದ್ಧ ಬೇಡಗಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೯ ಗಂಟೆ ವೇಳೆ ಕುಟ್ಟಿಕ್ಕೋಲ್ ಶ್ರೀ ಮಹಾವಿಷ್ಣು ಕ್ಷೇತ್ರ ಪರಿಸರದಲ್ಲಿ ಘಟನೆ ನಡೆದಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ ಅಂಗವಾಗಿ ಪ್ರತೀ ವರ್ಷದಂತೆ ಈ ಬಾರಿಯೂ  ಕ್ಷೇತ್ರ ಪರಿಸರದಲ್ಲಿ ಧ್ವಜ, ತೋರಣಗಳಿಂದ ಅಲಂಕರಿಸಲಾಗಿತ್ತು. ೮ ಬೈಕ್‌ಗಳಲ್ಲಿ  ತಲುಪಿದ ೧೫ ಮಂದಿ ತಂಡ …

ನಾಡಿನಾದ್ಯಂತ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಾಸರಗೋಡು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಇಂದು ನಾಡಿನಾದ್ಯಂತ ವಿವಿಧ ಕಾರ್ಯ ಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಜಿಲ್ಲೆಯ ೧೫೩ ಕೇಂದ್ರಗಳಲ್ಲಿ ಬಾಲಗೋಕುಲಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಲಿದೆ. ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಗಳು ನಡೆಯು ತ್ತಿದೆ. ಕಾಸರಗೋಡು ನಗರ, ಮೊಗ್ರಾ ಲ್ ಪುತ್ತೂರು, ಬೋವಿಕ್ಕಾನ, ಕಾರಡ್ಕ, ಅಡೂರು, ಬದಿಯಡ್ಕ, ಸೂರಂಬೈಲು, ಪರವನಡ್ಕ, ಕೋಳಿ ಯಡ್ಕ, ಮೇಲ್ಪರಂಬ. ಕುಂಡಂಕುಳಿ, ಕುಟ್ಟಿಕ್ಕೋಲ್, ಬಂದಡ್ಕ, ಕಾಞಂಗಾ ಡ್ ಸಹಿತ ವಿವಿಧೆಡೆಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದೆ.

ಸನಾತನ ಧರ್ಮ ವಿವಾದ :ಕರ್ನಾಟಕ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧವೂ ಎಫ್‌ಐಆರ್

ರಾಮ್‌ಪುರ್(ಯುಪಿ): ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡು ಸಚಿವ ಡಿ.ಎಂ.ಕೆ ನಾಯಕ ಉದಯನಿಧಿ ಸ್ಟಾಲಿನ್ ಮತ್ತು ಅವರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿ ಕಾರ್ಜನ ಖರ್ಗೆಯವರ ಪುತ್ರನೂ, ಕರ್ನಾ ಟಕ ಸಚಿವರಾದ ಪ್ರಿಯಾಂಕ ಖರ್ಗೆ  ವಿರುದ್ಧ ಉತ್ತರಪ್ರದೇಶದ ರಾಮ್‌ಪುರ್  ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಎಫ್‌ಐಆರ್) ದಾಖಲು ಗೊಂಡಿದೆ.  ಐಪಿಸಿ ಸೆಕ್ಷನ್ ೨೯೫ ಎ (ಧಾರ್ಮಿಕ ಭಾವನೆಗಳನ್ನು ಉದ್ದೇಶ ಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು), ೧೫೩ ಎ (ವಿವಿಧ …

ಕಾರು ಅಪಘಾತ: ನಾಲ್ವರು ವಿದ್ಯಾರ್ಥಿಗಳಿಗೆ ಗಾಯ

ಕುಂಬಳೆ: ಕಾಲೇಜು ವಿದ್ಯಾರ್ಥಿ ಗಳು ಸಂಚರಿಸಿದ ಕಾರು ಅಪಘಾತಕ್ಕೊ ಳಗಾಗಿ ನಾಲ್ಕು ಮಂದಿ ಗಾಯಗೊಂಡ ಘಟನೆ ಸಂಭವಿಸಿದೆ. ಬಂದ್ಯೋಡು ನಿವಾಸಿಗಳೂ, ಕುಂಬಳೆಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾದ ಮುಹಾ ಫಿಸ್ (೧೯), ಶಂಸುದ್ದೀನ್ (೧೯), ಇನಾನ್ (೧೯), ಅರ್ಸು (೧೯) ಎಂಬಿ ವರು ಗಾಯಗೊಂಡಿದ್ದು, ಇವರಿಗೆ ಕುಂಬಳೆ ಜಿಲ್ಲಾ  ಸಹಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಲಾಯಿತು.  ನಾಲ್ಕು ಮಂದಿ ಸಂಚರಿಸಿದ ಕಾರು ನಿನ್ನೆ ಅಪರಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆ ಸೇತುವೆ ಸಮೀಪ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು …

ರಾಹುಲ್‌ಗೆ ಮತ್ತೆ ಸಂಕಷ್ಟ: ಸಂಸತ್ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ

ನವದೆಹಲಿ: ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರನ್ನು ಸಂಸತ್ ಸದಸ್ಯರನ್ನಾಗಿ ಮರು ನೇಮಿಸಿದ ಲೋಕಸಭೆಯ ಸಚಿವಾಲಯದ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಸಂಸದರು ಒಮ್ಮೆ ಕಾನೂನಿನ ಕಾರ್ಯಾಚರಣೆಯಿಂದ ತಮ್ಮ ಸ್ಥಾನ ಕಳೆದುಕೊಂಡರೆ  ಆರೋಪಗಳಿಂದ ಮುಕ್ತರಾಗುವವರೆಗೆ ಅವರನ್ನು ಸಂಸದರಾಗಿ ಮರುನೇಮಿಸಲು ಸಾಧ್ಯವಿಲ್ಲವೆಂಬ ವಾದವನ್ನು ಅರ್ಜಿಯಲ್ಲಿ ಮಂಡಿಸಲಾಗಿದೆ.  ಈ ಗೌರವಾನ್ವಿತ ನ್ಯಾಯಾಲಯದ ದಯೆಯ ಪರಿಗಣನೆಗೆ ಇನ್ನೊಂದು ಪ್ರಶ್ನೆಯೆಂದರೆ ಶಿಕ್ಷೆಗೊಳಗಾದ ಶಾಸಕರ ಯಾ ಸಂಸದರ ಸದಸ್ಯತ್ವವನ್ನು ಕಳೆದುಕೊಳ್ಳುವ ಅಧಿಸೂಚನೆಯನ್ನು ಸಂಬಂಧಪಟ್ಟ ಸದನದ ಅಧ್ಯಕ್ಷರು (ಸ್ಪೀಕರ್) ಸೂಚಿಸುತ್ತಾರೆಯೇ ಅಥವಾ ಇದು …

ಮಿತಿಗಿಂತ ಹೆಚ್ಚು ಮಕ್ಕಳ ಹೇರಿ ಸಂಚರಿಸಿದ ವಾಹನಗಳಿಗೆ ಕಡಿವಾಣ

ಕಾಸರಗೋಡು: ಜಿಲ್ಲೆಯ ಶಾಲಾ ವಾಹನಗಳಲ್ಲಿ ವಿದ್ಯಾರ್ಥಿಗಳನ್ನು ಒತ್ತೊತ್ತಾಗಿ ಹೇರಿ ಸಂಚರಿಸುವುದರ ವಿರುದ್ಧ ಕಂದಾಯ- ಮೋಟಾರು ವಾಹನ ಇಲಾಖೆಗಳ ನೇತೃತ್ವದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಕಾಸರಗೋಡು- ಹೊಸದುರ್ಗ ತಾಲೂಕಿನಲ್ಲಿ ನಿನ್ನೆ ನಡೆಸಿದ ತಪಾಸಣೆಯಲ್ಲಿ ೨೮ ವಾಹನಗಳನ್ನು ವಶಪಡಿಸಲಾಗಿದೆ. ೧೧,೦೦೦ ದಂಡ ವಸೂಲಿ ಮಾಡಲಾಗಿದೆ. ಕಂದಾಯ- ಆರ್‌ಟಿಒ, ಎನ್‌ಫೋರ್ಸ್‌ಮೆಂಟ್ ತಂಡ ಎಂಬಿವುಗಳ ನೇತೃತ್ವದಲ್ಲಿ ತಪಾಸಣೆ ನಡೆಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ ಆರ್‌ಡಿಒ ಅತುಲ್ ಎಸ್. ನಾಥ್‌ರ ನೇತೃತ್ವದಲ್ಲಿಯೂ  ಹೊಸದುರ್ಗ ತಾಲೂಕಿನಲ್ಲಿ ಸಬ್ ಇನ್ಸ್‌ಪೆಕ್ಟರ್ ಸೂಫಿಯಾನ್ ಅಹಮ್ಮದ್‌ರ ನೇತೃತ್ವದಲ್ಲೂ ತಪಾಸಣೆ ನಡೆಸಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ …

ಕಾಟುಕುಕ್ಕೆಯಲ್ಲಿ ಘರ್ಷಣೆ: ಇಬ್ಬರು ಆಸ್ಪತ್ರೆಯಲ್ಲಿ

ಬದಿಯಡ್ಕ:  ಕಾಟುಕುಕ್ಕೆಯ ಗೆರಟೆ ಕಂಪೆನಿಗೆ ಸಂಬಂಧಿಸಿ  ಉಂಟಾದ ತರ್ಕದ ಹೆಸರಲ್ಲಿ   ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇವರನ್ನು ಕಾಸರಗೋಡು ಹಾಗೂ ಕುಂಬಳೆಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗೆರಟೆ ಕಂಪೆನಿ ಮಾಲಕನ ಸಂಬಂಧಿಕನಾದ ಕಾಟುಕುಕ್ಕೆಯ ಉಮೇಶ್‌ರನ್ನು ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲೂ,  ಕಂಪೆನಿ ಪರಿಸರದ ನಿವಾಸಿಯಾದ ಉಮೇಶ್ ನಾಕ್ ರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೊನ್ನೆ ಈ ಘಟನೆ ನಡೆದಿದೆ. ಉಮೇಶ್‌ರ ದೂರಿನಂತೆ ತಂಡವೊಂದರ ವಿರುದ್ಧ ಬದಿಯಡ್ಕ ಪೊಲೀಸರು ನರಹತ್ಯಾಯತ್ನ ಕೇಸು  ದಾಖಲಿಸಿಕೊಂಡಿದ್ದಾರೆ.

ಬಾಲಕಿಯೊಂದಿಗೆ ಪ್ರೇಮದ ನಾಟಕವಾಡಿ ಲೈಂಗಿಕ ಕಿರುಕುಳ: ಬಸ್ ಕಂಡಕ್ಟರ್ ಬಂಧನ

ಹೊಸದುರ್ಗ: ಬಸ್‌ನಲ್ಲಿ ದೈನಂದಿನ ಪ್ರಯಾಣಿಸುತ್ತಿದ್ದ ೧೭ ವರ್ಷದ  ಬಾಲಕಿ ಜತೆ ಪ್ರೇಮದ ನಾಟಕವಾಡಿ ಬಳಿಕ ಪುಸಲಾಯಿಸಿ ಕರೆದೊಯ್ದು ಆಕೆಗೆ ಲೈಂಗಿಕ ಕಿರುಕುಳ ನೀಡಿದ ಖಾಸಗಿ ಬಸ್ ಕಂಡಕ್ಟರ್‌ನನ್ನು ಚಕ್ಕರಕಲ್ ಪೊಲೀಸರು ಬಂಧಿಸಿ ಆತನ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಣ್ಣೂರು ಚಕ್ಕರಕ್ಕಲ್ ತಲಮುಂಡ ನಿವಾಸಿ ಖಾಸಗಿ ಬಸ್ ಕಂಡಕ್ಟರ್ ಇಸ್ಮಾಯಿಲ್ (೨೧) ಬಂಧಿತ ಆರೋಪಿ. ಆತ ದುಡಿಯುತ್ತಿರುವ ಬಸ್‌ನಲ್ಲಿ ದೈನಂದಿನ ಪ್ರಯಾಣಿಸುತ್ತಿದ್ದ ೧೭ರ ಹರೆಯದ ಬಾಲಕಿಯನ್ನು ಪರಿಚಯಗೊಂಡು ಸ್ನೇಹದ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನುಕಳೆದ …

ರೈಲಿನ ಅಡ್ಡವಾಗಿ ಜಿಗಿದ ನರಿ ಭಯಗೊಂಡ ಪ್ರಯಾಣಿಕರು

ಕಾಸರಗೋಡು: ಸಂಚರಿಸುತ್ತಿದ್ದ ರೈಲಿನ ಬೋಗಿಗೆ ನರಿಯೊಂದು ಜಿಗಿದು ಅದರಿಂದ ಭಾರೀ ದೊಡ್ಡ ಶಬ್ದ ಉಂ ಟಾಗಿ, ಅದು ಕಲ್ಲು ತೂರಾಟದಿಂದಾಗಿ ನಡೆದಿರಬಹು ದೆಂದು ಪ್ರಯಾಣಿಕರು ಭಾವಿಸಿ ಭಯಗೊಂಡ ಘಟನೆ ನಡೆದಿದೆ. ಮಂಗಳೂರಿನಿಂದ ಕಣ್ಣೂರಿಗೆ ಹೋಗುವ ಪ್ಯಾಸೆಂಜರ್ ರೈಲು ನಿನ್ನೆ ಸಂಜೆ ಕಾಸರಗೋಡಿನಿಂದ ಹೊಸ ದುರ್ಗ ರೈಲು ನಿಲ್ದಾಣಕ್ಕೆ ತಲುಪಿ ಅಲ್ಲಿಂದ ನೀಲೇಶ್ವರ ರೈಲು ನಿಲ್ದಾಣದತ್ತ ಸಾಗುತ್ತಿದ್ದ ದಾರಿ ಮಧ್ಯೆ ಪಡನ್ನಕ್ಕಾಡಿಗೆ ತಲುಪುತ್ತಿದ್ದಂತೆಯೇ ಆ ರೈಲಿನ ನಾಲ್ಕನೇ ಬೋಗಿ ಮೇಲೆ ಅಲ್ಲೇ ಎತ್ತರದ ಸ್ಥಳದಿಂದ ನರಿಯೊಂದು ದಿಢೀರ್ ಆಗಿ …

ತಲೆಮರೆಸಿಕೊಂಡ ಆರೋಪಿ ಕಾಸರಗೋಡಿನಲ್ಲಿ ಸೆರೆ

ಕಾಸರಗೋಡು: ಕಳವು ಪ್ರಕರಣ ಗಳಲ್ಲಿ ಆರೋಪಿಯಾಗಿ ತಲೆಮರೆಸಿ ಕೊಂಡಾತನನ್ನು ಕಾಸರಗೋಡಿನಿಂದ ಸೆರೆಹಿಡಿಯಲಾಗಿದೆ. ಮಂಗಳೂರು ನ್ಯೂ ಚಿತ್ರ ಟಾಕೀಸ್ ಬಳಿಯ ರಾಜೇಶ್ (೫೨) ಎಂಬಾತನನ್ನು ಕಾಸರಗೋಡು ನಗರ ಪೊಲೀಸರ ಸಹಾಯದೊಂದಿಗೆ ಮಂಗಳೂರು ಉತ್ತರ ಠಾಣೆ ಪೊಲೀಸರು ಅಡ್ಕತ್ತಬೈಲಿನಿಂದ ಸೆರೆಹಿಡಿದಿದ್ದಾರೆ.  ಕಳವು ಪ್ರಕರಣಗಳಲ್ಲಿ  ಆರೋಪಿಯಾದ ರಾಜೇಶ್ ೧೪ ವರ್ಷಗಳಿಂದ ತಲೆಮರೆಸಿಕೊಂಡಿದ್ದನು.