ಮಂಜೇಶ್ವರ ಸಹಿತ ಹಲವು ಚಿನ್ನದಂಗಡಿಗಳ ದರೋಡೆ ಪ್ರಕರಣ: ಕುಖ್ಯಾತ ಆರೋಪಿ ಸೆರೆ

ಮಂಜೇಶ್ವರ: ಮಂಜೇಶ್ವರ ಸೇರಿದಂತೆ ಹಲವು ಜ್ಯುವೆಲ್ಲರಿ ದರೋಡೆ ಪ್ರಕರಣದ ಕುಖ್ಯಾತ ಅಂತಾರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ನಾಮಕ್ಕಲ್ ನಿವಾಸಿ ವೇಲಾಯುಧನ್ ನಲ್ಲಮುತ್ತು (೪೭) ಬಂಧಿತ ಆರೋಪಿ ಯಾಗಿದ್ದಾನೆ. ಮಂಜೇಶ್ವರ, ತೃಶೂರು, ಕಲ್ಲೂರು, ಸೇಲಂ ಮತ್ತು ನಾಮಕ್ಕಲ್‌ನಲ್ಲಿ ಇತ್ತೀಚೆಗೆ ಹಲವು ಚಿನ್ನದಂಗಡಿಗಳಲ್ಲಿ ನಡೆದ ದರೋಡೆ ಪ್ರಕರಣಗಳ ಆರೋಪಿಯಾಗಿದ್ದಾನೆ ಬಂಧಿತ ವೇಲಾಯುಧನ್ ಎಂದು ಪೊಲೀಸರು ತಿಳಿಸಿದ್ದಾರೆ. ಕೊಯಂಬತ್ತೂರು ಉಕ್ಕಡದಿಂದ ಪಯ್ಯನ್ನೂರು ಪೊಲೀಸರು ಆರೋಪಿಯನ್ನು  ಬಂಧಿಸಿದ್ದಾರೆ. ಕಳೆದ ತಿಂಗಳ ೧೩ರಂದು ಪಯ್ಯನ್ನೂರಿನ ಚೇನಾಟ್ ಜ್ಯುವೆಲ್ಲರಿಯ ಚಿನ್ನದೊಡವೆ ನಿರ್ಮಾಣ ಕೊಠಡಿಗೆ ನುಗ್ಗಿ …

ಮಂಜೇಶ್ವರದಲ್ಲಿ ಎಸ್.ಐ.ಗೆ ಹಲ್ಲೆಗೈದ ಪ್ರಕರಣ: ಜಿಲ್ಲಾ ಪಂ. ಸದಸ್ಯನಾದ ಮುಸ್ಲಿಂ ಯೂತ್ ಲೀಗ್ ನೇತಾರ ಬಂಧನ

ಮಂಜೇಶ್ವರ: ರಾತ್ರಿ ಹೊತ್ತಿನಲ್ಲಿ ಗಸ್ತು ನಡೆಸುತ್ತಿದ್ದ ಎಸ್‌ಐ ಮೇಲೆ ಆಕ್ರಮಿಸಿ ಕೈಯ ಎಲುಬು ಮುರಿದ  ಪ್ರಕರಣಕ್ಕೆ ಸಂಬಂಧಿಸಿ  ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಜೊತೆ ಕಾರ್ಯದರ್ಶಿಯೂ, ಮಂಜೇಶ್ವರ ಜಿಲ್ಲಾ ಪಂಚಾಯತ್ ಡಿವಿಜನ್ ಸದಸ್ಯನಾದ  ಗೋಲ್ಡನ್ ಅಬ್ದುಲ್ ರಹಿಮಾನ್‌ರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಸೆರೆಗೀಡಾದ ಇವರನ್ನು ವೈದ್ಯಕೀಯ ತಪಾಸಣೆ ನಡೆಸಿದ ಬಳಿಕ ಕಾಸರಗೋಡು ನಗರ ಠಾಣೆಗೆ ತಲುಪಿಸಲಾಗಿದೆ. ಇಂದು ಬೆಳಿಗ್ಗೆ ಮಂಜೇಶ್ವರ  ಪೊಲೀಸರು ಅಬ್ದುಲ್  ರಹಿಮಾನ್‌ರನ್ನು ಮತ್ತೆ ವೈದ್ಯಕೀಯ ತಪಾಸಣೆಗೊಳಪಡಿಸಿದ  ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಿ ದರು. ಎಸ್‌ಐಗೆ …

ಟ್ರಾವೆಲ್ ಏಜೆನ್ಸಿಗಳಿಗೆ ಪಂಗನಾಮ ಹಾಕಿ ೩೦ ಲಕ್ಷ ರೂ. ಎಗರಿಸಿದ ಪ್ರಕರಣ: ಯುವಕ ಸೆರೆ

ಕಾಸರಗೋಡು: ಟ್ರಾವೆಲ್ ಏಜೆನ್ಸಿಗಳಿಗೆ ಪಂಗನಾಮ ಹಾಕಿ ೩೦ ಲಕ್ಷ ರೂ. ಕಬಳಿಸಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ತೃಶೂರು ನಿವಾಸಿ ಹಾಗೂ ಈಗ ತಮಿಳುನಾಡಿನ ಡಿಂಡಿಕ್ಕಲ್‌ನಲ್ಲಿ ವಾಸಿಸುತ್ತಿರುವ ಕಾರ್ತಿಕ್ ಪಂಕಜಾಕ್ಷನ್ (೩೦) ಬಂಧಿತನಾದ ಆರೋಪಿಯಾಗಿದ್ದಾನೆ. ಕಣ್ಣೂರು ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಪಿ.ಎ. ಬಿನು ಮೋಹನನ್‌ರ ನೇತೃತ್ವದ ಪೊಲೀಸರು ಈತನನ್ನು ತೃಶೂರಿನಿಂದ ಬಂಧಿಸಿದ್ದಾರೆ. ಕಾಸರಗೋಡು, ಪಯ್ಯನ್ನೂರು, ಕಣ್ಣೂರು, ಕಲ್ಲಿಕೋಟೆ, ಎರ್ನಾಕುಳಂ ಮತ್ತು ಮಧುರೈ ಎಂಬೆಡೆಗಳ ಹಲವು ಟ್ರಾವೆಲ್ಸ್ ಏಜೆನ್ಸಿಗಳನ್ನು ವಂಚಿಸಿ ಆರೋಪಿ ೩೦ ಲಕ್ಷ ರೂ. ಎಗರಿಸಿದ್ದನೆಂದು …

ಕನಿಯಾಲ-ಧರ್ಮತ್ತಡ್ಕ ಮಧ್ಯೆ ಅಪಘಾತ ಕೇಂದ್ರ : ನಿಯಂತ್ರಣ ತಪ್ಪಿ ವಾಲಿ ನಿಂತ ಮೇಳದ ಬಸ್

ಬಾಯಾರು: ಧರ್ಮತ್ತಡ್ಕ-ಕನಿ ಯಾಲ ಮಧ್ಯೆಗಿನ ಇಳಿಜಾರು ತಿರುವಿನಲ್ಲಿ ಬಸ್ಸೊಂದು  ಅಪಘಾತಕ್ಕೀಡಾಗಿದೆ.  ಆದರೆ ಪ್ರಯಾಣಿಕರು ಗಾಯಗಳಿಲ್ಲದೆ ಪಾರಾಗಿದ್ದಾರೆ. ಯಕ್ಷಗಾನ ಮೇಳ ವೊಂದರ ಬಸ್ ಧರ್ಮತ್ತಡ್ಕ ದಿಂದ ಬಾಯಾರು  ಭಾಗಕ್ಕೆ ತೆರಳುತ್ತಿದ್ದಾಗ ಇಲ್ಲಿ ನಿಯಂತ್ರಣ ತಪ್ಪಿ  ರಸ್ತೆ ಬದಿಗೆ ವಾಲಿ ನಿಂತಿದೆ. ಅಗಲಕಿರಿದಾಗಿ ಇಕ್ಕಟ್ಟಾಗಿರುವ ರಸ್ತೆಯಲ್ಲಿ ತಿರುವು ಇದ್ದು, ಎದುರಿನಿಂದ ಬರುವ ವಾಹನಗಳಿಗೆ ಸಾಗಲು ಅಸಾಧ್ಯವಾಗುತ್ತಿದೆ. ರಸ್ತೆ ಬದಿಯಲ್ಲಿ ಆಳವಾದ ಇಳಿಜಾರು ಆಗಿದ್ದು, ಅಕಸ್ಮಾತ್ ರಸ್ತೆಯಿಂದ ತಪ್ಪಿದರೆ ದುರಂತ ಕಟ್ಟಿಟ್ಟ ಬುತ್ತಿ. ಇಲ್ಲಿ ನಿರಂತರ ಅಪಘಾತ ಸಂಭವಿಸುತ್ತಿದೆ. ಎರಡು ವಾರಗಳ …

ಪುದುಪಳ್ಳಿ ಉಪಚುನಾವಣೆ: ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇ. ಮತದಾನ

ಕೋಟ್ಟಯಂ: ಉಪ ಚುನಾವಣೆ ನಡೆಯುತ್ತಿರುವ ಪುದುಪ್ಪಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸಾಧಾರಣ ರೀತಿಯಲ್ಲಿ ಮತದಾನ ನಡೆಯುತ್ತಿದೆ.   ಮೊದಲ ನಾಲ್ಕು ಗಂಟೆಗಳಲ್ಲಿ ೩೦ ಶೇಕಡಾ ಮತದಾನ ನಡೆದಿದೆ. ಬೆಳಿಗ್ಗೆ ೭ ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ ೬ ಗಂಟೆವರೆಗೆ ಮುಂದುವರಿಯಲಿದೆ. ಈ ಮಂಡಲದಲ್ಲಿರುವ ೮ ಪಂಚಾಯತ್‌ಗಳಲ್ಲಾಗಿ ೧೮೨ ಮತಗಟ್ಟೆಗಳಿವೆ. ಯುಡಿಎಫ್ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಚಾಂಡಿ ಉಮ್ಮನ್, ಎಲ್‌ಡಿಎಫ್ ಅಭ್ಯರ್ಥಿಯಾಗಿ ಸಿಪಿಎಂನ ಜೈಕ್ ಥೋಮಸ್, ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯ ಜಿ. ಲಿಜಿನ್‌ಲಾಲ್, ಎಎಪಿಯಿಂದ  ಲೂಕ್ ಥೋಮಸ್ ಹಾಗೂ ಮೂವರು ಸ್ವತಂತ್ರರು ಸ್ಪರ್ಧಾಕಣದಲ್ಲಿದ್ದಾರೆ.

ಮರದಿಂದ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು

ಮುಳ್ಳೇರಿಯ: ಜೀಗುಜ್ಜೆ ಕೊಯ್ಯಲೆಂದು ಮರಕ್ಕೆ ಹತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ನೆಟ್ಟಣಿಗೆ ಬಳಿಯ ಮಿತ್ತಜಾಲು ಎಂಬಲ್ಲಿನ ಕೊರಗ ಬೆಳ್ಚಪ್ಪಾಡ ಎಂಬವರ ಪುತ್ರ ರಾಘವ (೪೨) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈ ತಿಂಗಳ ೧ರಂದು ಸಂಜೆ ಮನೆ ಬಳಿಯ ಬೇರೊಬ್ಬರ ತೋಟದಲ್ಲಿ ಜೀಗುಜ್ಜೆ ಕೊಯ್ಯಲೆಂದು ರಾಘವ ಮರಕ್ಕೆ ಹತ್ತಿದರು. ಈ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾ …

ಕುಂಬಳೆ ಠಾಣೆಗೆ ಯುಡಿಎಫ್ ಮಾರ್ಚ್: ೫೩ ಮಂದಿ ವಿರುದ್ಧ ಕೇಸು

ಕುಂಬಳೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಫರ್ಹಾಸ್ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಪವಿಧೇಯರಾದ ಪೊಲೀಸರ ವಿರುದ್ಧ ಕೊಲೆಕೃತ್ಯಕ್ಕೆ ಕೇಸು ದಾಖಲಿಸಬೇಕೆಂದು ಒತ್ತಾಯಿಸಿ  ಕುಂಬಳೆ ಪೊಲೀಸ್ ಠಾಣೆಗೆ ಮಾರ್ಚ್ ನಡೆಸಿದ ಘಟನೆಯಲ್ಲಿ ಡಿಸಿಸಿ ಅಧ್ಯಕ್ಷ ಸಹಿತ ೫೩ ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್, ಕಾರ್ಯಕರ್ತರಾದ ಪ್ರದೀಪ್ ಕುಮಾರ್, ಇ.ಕೆ. ಮೊಹಮ್ಮದ್, ಸಿದ್ದಿಕ್ ದಂಡೆಗೋಳಿ, ಸುಲೈಮಾನ್, ಅಸೀಸ್, ಇರ್ಷಾದ್ ಮೊಗ್ರಾಲ್,  ಸವಾದ್ ಅಂಗಡಿಮೊಗರು, ಪೃಥ್ವೀರಾಜ್, ಶೆರಿಲ್ …

ಜೂಜಾಟ :ಮೂವರ ಸೆರೆ

ಕಾಸರಗೋಡು: ಬಟ್ಟ ತ್ತೂರು-ಚಂದ್ರಪುರಂ ರಸ್ತೆಯ ಸಾರ್ವಜನಿಕ ಪ್ರದೇಶದಲ್ಲಿ ಹಣವಿರಿಸಿ ಜೂಜಾಟ ನಡೆಸುತ್ತಿದ್ದ ಕೇಂದ್ರಕ್ಕೆ ಬೇಕಲ ಎಸ್.ಐ ಎಂ. ಬಾಲಚಂದ್ರನ್ ನೇತೃತ್ವದ ಪೊಲೀಸರು ದಾಳಿ ನಡೆಸಿ  ಮೂವರನ್ನು ಬಂ ಧಿಸಿದ್ದಾರೆ. ಜೂಜಾಟ ಅಡ್ಡೆ ಯಿಂದ ೧೬೭೦ ರೂ. ನಗದು ಹಾಗೂ ಇತರ ಸಾಮಗ್ರಿಗಳನ್ನು ವಶಪಡಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಅಳತೆ, ತೂಕ ಇಲಾಖೆಯಿಂದ ವ್ಯಾಪಕ  ದಾಳಿ: ೭೭೭ ಸಂಸ್ಥೆಗಳ ವಿರುದ್ಧ ಕೇಸು

ಕಾಸರಗೋಡು: ಅಳತೆ ಮತ್ತು ತೂಕ (ಲೀಗಲ್ ಮೆಟ್ರೋಲಜಿ) ಇಲಾಖೆಯ ವಿಶೇಷ ತಂಡ ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಾಗಿ ಒಟ್ಟು ೩೩೩೭ ವ್ಯಾಪಾರ ಸಂಸ್ಥೆಗಳಿಗೆ  ಮಿಂಚಿನ ದಾಳಿ ಮಾಡಿ ಪರಿಶೀಲನೆ ನಡೆಸಿದೆ. ಪರಿಶೀಲನೆಯಲ್ಲಿ ಕಾನೂ ನು ಉಲ್ಲಂಘನೆ ನಡೆಸಿರುವುದಾಗಿ ಪತ್ತೆಹಚ್ಚಲಾದ ೭೭೭ ವ್ಯಾಪಾರ ಸಂಸ್ಥೆಗಳ ವಿರುದ್ಧ ಕೇಸು ದಾಖಲಿಸ ಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಗೆ ಸಂಬಂಧಿಸಿ ೩೦,೩೪,೫೦೦ ರೂ. ಜುಲ್ಮಾನೆ ಯನ್ನು ವಸೂಲಿ ಮಾಡಲಾಗಿದೆ ಎಂದು ಲೀಗಲ್ ಮೆಟ್ರೋಲಜಿ ಇಲಾಖೆಯ …

ಚೆರ್ಕಳದಲ್ಲಿ ಪೊಲೀಸ್ ಕಾರ್ಯಾಚರಣೆ: ನಿಷೇಧಿತ ಪಾನ್‌ಮಸಾಲೆ ವಶ

ಕಾಸರಗೋಡು: ವಿದ್ಯಾ ನಗರದಲ್ಲಿ ಎಸ್‌ಐ ವಿಜಯನ್ ಮೇಲೋತ್ತ್‌ರ ನೇತೃತ್ವದ ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧ ಹೇರಲಾದ ೮೨ ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಚೆರ್ಕಳದ ಅಂಗಡಿ ಯೊಂದರ ಕಾರ್ಮಿಕ ಶಾಫಿ ಬಿ. (೫೨) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದೇ ರೀತಿ ಕೊಲ್ಲಂಗಾನದಲ್ಲಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ೯೫ ಪ್ಯಾಕೆಟ್ ತಂಬಾಕು ಉತ್ಪನ್ನಗಳೊಂದಿಗೆ ಮಾಲಿಂಗ (೫೬) ಎಂಬಾತನನ್ನು ಸೆರೆ ಹಿಡಿದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.