ತೃಶೂರಿನಲ್ಲಿ ಗೂಂಡಾಗಳ ಅಟ್ಟಹಾಸ ಇಬ್ಬರ ಕಗ್ಗೊಲೆ, ಓರ್ವನಿಗೆ ಗಂಭೀರ

ತೃಶೂರು: ತೃಶೂರಿನ ಎರಡೆಡೆಗಳಲ್ಲಿ ಗೂಂಡಾಗಳು ನಡೆಸಿದ ದಾಳಿಯಲ್ಲಿ ಇಬ್ಬರು ಬರ್ಬರವಾಗಿ ಕೊಲೆಗೈಯ್ಯ ಲ್ಪಟ್ಟು ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ತೃಶೂರು ಪುತ್ತೋಳ್ ಬಿಎಸ್‌ಎನ್‌ಎಲ್ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ಕರುಣಾಮಯನ್ ಅಲಿಯಾಸ್ ವಿಷ್ಣು (೨೫) ಮತ್ತು ಕುಮ್ಮಟ್ಟಿ ಮುಳಯಂ ನಿವಾಸಿ ಅಖಿಲ್ (೨೮) ಕೊಲೆಗೈಯ್ಯಲ್ಪಟ್ಟ ದುರ್ದೈವಿ ಗಳು. ಕಣಿಮಂಗಲಂ ಮಾಂಕುಳ ಸೇತುವೆ ಬಳಿಯ ರೈಲು ಹಳಿ ಬಳಿ ಇರಿತಕ್ಕೊ ಳಗಾಗಿ  ಗಂಭೀರಾವಸ್ಥೆಯಲ್ಲಿದ್ದ ವಿಷ್ಣು ನಿನ್ನೆ ಸಂಜೆ ಪತ್ತೆಯಾಗಿದ್ದಾನೆ. ಅದನ್ನು ಕಂಡವರು ಈತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ, ತುರ್ತು ಚಿಕಿತ್ಸೆ …

ಫರ್ಹಾಸ್‌ನ ಅಪಘಾತ ಮರಣ:ಎಸ್‌ಐ, ಕುಟುಂಬಕ್ಕೆ ಕೊಲೆ ಬೆದರಿಕೆ; ಸ್ಕೂಟರ್‌ನಲ್ಲಿ ತಲಪಿದ ತಂಡದ ವಿರುದ್ಧ ಕೇಸು ದಾಖಲು

ಕುಂಬಳೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಕಾರು ಅಪಘಾತದಲ್ಲಿ ಮೃತಪಟ್ಟ ಘಟನೆ ಯಲ್ಲಿ ಆರೋಪವಿಧೇಯರಾದ ಎಸ್‌ಐ, ಅವರ ಕುಟುಂಬಕ್ಕೆ ಕೊಲೆ ಬೆದರಿಕೆ  ಉಂಟಾಗಿದೆ. ಎಸ್‌ಐಯ ಪತ್ನಿಯ ತಂದೆಯ ದೂರಿನಂತೆ ಸ್ಕೂಟರ್‌ನಲ್ಲಿ ತಲುಪಿದ ಇಬ್ಬರ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಆರೋಪಿಗಳೆಂದು ಶಂಕಿಸುವವರ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿದೆ. ಆರೋಪಿ ಗಳಿಗಾಗಿ ತನಿಖೆ ತೀವ್ರಗೊಳಿಸಿ ರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ. ವಿದ್ಯಾರ್ಥಿಯ ಸಾವಿಗೆ ಸಂಬಂಧಿಸಿ ಆರೋಪಿತನಾದ ಎಸ್‌ಐ ಹಾಗೂ …

ಯುವಕ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಬಂದಡ್ಕ ಮಾರಿಪಡ್ಪು ಕನಿಯಾಪರಂಬಿಲ್ ಹೌಸ್‌ನ ಜನಾರ್ದನನ್-ದೀಪಾ ದಂಪತಿ ಪುತ್ರ ಅದ್ವೈತ್ (೨೧) ನಿನ್ನೆ ಮನೆ ಪಕ್ಕದ ಮರಕ್ಕೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮೃತನು ಮಾನಸಿಕ ರೋಗಿಯೆಂದು ಪೊಲೀಸರು ತಿಳಿಸಿದ್ದಾರೆ. ಮೃತನು ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಅರ್ಜುನ್, ಆದಿತ್ಯ, ದೀಪೇಶ್, ದಿವ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.  ಬೇಡಗಂ ಪೊಲೀಸರು ತನಿಖೆ ನಡೆಸಿದ್ದು, ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.

ಕೊಲೆ ಪ್ರಕರಣದ ಆರೋಪಿಯ ತಂದೆ ನೇಣು ಬಿಗಿದು ಆತ್ಮಹತ್ಯೆ

ಕಣ್ಣೂರು: ಕೊಲೆ ಪ್ರಕರಣದ ಆರೋಪಿಯ ತಂದೆಯನ್ನು ಶಾಲಾ ಬಾವಿಯಲ್ಲಿ  ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಕುಡಿಯಾನ್‌ಮಲ, ತಟ್ಟುಕ್ಕುನ್ನು ನಿವಾಸಿ ಸೆಬಾಸ್ಟಿಯನ್ (೫೫)ನನ್ನು ಖಾಸಗಿ ಶಾಲೆಯ ಬಾವಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹವನ್ನು ಪತ್ತೆಹಚ್ಚಲಾಗಿರುವುದು. ದೇಹದ ಅರ್ಧಭಾಗ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿ ಕಂಡುಬಂದಿದೆ. ಮೋಟಾರ್ ಪಂಪ್‌ನ ಹಗ್ಗದಲ್ಲಿ ನೇಣು ಬಿಗಿದಿದ್ದಾರೆ. ಮೃತದೇಹಕ್ಕೆ ಮೂರು ದಿನದ  ಹಳಮೆಯಿದೆ ಯೆಂದು ಹೇಳಲಾಗುತ್ತಿದೆ. ಶಾಲೆ ಯಲ್ಲಿ ಇಂದು ಆರಂಭಿಸಿದ ಎನ್‌ಸಿಸಿ ಶಿಬಿರಕ್ಕಾಗಿ ನೀರು ತೆಗೆಯಲೆಂದು ತಲುಪಿದಾಗ ಮೃತದೇಹ ಪತ್ತೆಯಾಗಿದೆ. ಈ ತಿಂಗಳ …

ಪೊಲೀಸ್ ಠಾಣೆಗಳಲ್ಲಿ ಠಾಣಾಧಿಕಾರಿ ಹೊಣೆಗಾರಿಕೆ ಮತ್ತೆ ಎಸ್‌ಐಗಳಿಗೆ

ಕಾಸರಗೋಡು: ರಾಜ್ಯದ ಪೊಲೀಸ್ ಠಾಣೆಗಳ ಠಾಣಾಧಿಕಾ ರಿಗಳ ಹೊಣೆಗಾರಿಕೆಯನ್ನು ವರ್ಷಗಳ ಹಿಂದೆ ಇದ್ದ ಅದೇ ರೀತಿಯಲ್ಲಿ ಮತ್ತೆ ಸಬ್ ಇನ್‌ಸ್ಪೆಕ್ಟರ್ (ಎಸ್‌ಐ)ಗಳಿಗೆ ವಹಿಸಿಕೊಡಲಾಗುವುದು. ವರ್ಷಗಳ ಹಿಂದೆ ಪೊಲೀಸ್ ಠಾಣೆಗಳ ಠಾಣಾಧಿಕಾರಿ (ಸ್ಟೇಷನ್ ಹೌಸ್ ಆಫೀಸರ್) ಹೊಣೆಗಾರಿಕೆ ಎಸ್‌ಐಗಳು ನಿರ್ವವಹಿಸುತ್ತಿದ್ದರು. ಆದರೆ ಲೋಕನಾಥ್ ಬೆಹ್ರಾ ಅವರನ್ನು   ರಾಜ್ಯದ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ)ರಾಗಿ ನೇಮಕ ಗೊಂಡ ನಂತರ ಅವರು ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳ ಹೊಣೆಗಾರಿಕೆಯ ಎಸ್‌ಐಗಳನ್ನು  ಹೊರತುಪಡಿಸಿ ಇನ್‌ಸ್ಪೆಕ್ಟರ್ (ಐಪಿ)ಗಳಿಗೆ ವಹಿಸಿಕೊಟ್ಟಿ ದ್ದರು. ಲೋಕನಾಥ್ ಬೆಹ್ರಾ ಇತ್ತೀಚೆಗೆ ಪೊಲೀಸ್ …

ಮೊಯ್ದೀನ್‌ರಿಗೆ ಮತ್ತೆ ಇ.ಡಿ ನೋಟೀಸ್ ದಾಖಲೆ ಹಾಜರುಪಡಿಸಲು ನಿರ್ದೇಶ

ಕೊಚ್ಚಿ: ಕರುವನ್ನೂರು ವಂಚನೆ ಪ್ರಕರಣದಲ್ಲಿ ಸಿಪಿಎಂ ಮುಖಂಡ,   ಮಾಜಿ ಸಚಿವ, ಶಾಸಕ ಎ.ಸಿ. ಮೊಯ್ದೀನ್‌ರಿಗೆ ಮತ್ತೆ ಇ.ಡಿ ನೋಟೀಸು ನೀಡಿದೆ. ಸೋಮವಾರ ವಿಚಾರಣೆಗೆ ಹಾಜರಾಗಬೇಕೆಂದು, ೧೦ ವರ್ಷದ ತೆರಿಗೆ ದಾಖಲೆಗಳನ್ನು ಹಾಜರುಪಡಿಸಬೇಕೆಂದು ಇ.ಡಿ ನೀಡಿದ ನೋಟೀಸಿನಲ್ಲಿ ಸ್ಪಷ್ಟಪಡಿಸಿದೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಇಂದು ಹಾಜರಾಗಬೇಕೆಂದು ಇ.ಡಿ ಈ ಮೊದಲು ಮೊಯ್ದೀನ್‌ರಿಗೆ ನೋಟೀಸು ನೀಡಿತ್ತು. ಆದರೆ ಇಂದು ಹಾಜರಾಗಲು ಅಸೌಕರ್ಯವಿದೆಯೆಂದು ತೋರಿಸಿ ಇ-ಮೈಲ್ ಕಳುಹಿಸಿದ ಹಿನ್ನೆಲೆಯಲ್ಲಿ ಸೋಮವಾರ ಹಾಜರಾಗಬೇಕೆಂದು ಆಗ್ರಹಿಸಿ ಇ.ಡಿ  ಮತ್ತೆ ನೋಟೀಸು ಕಳುಹಿಸಿದೆ. ಕರುವನ್ನೂರು ಬ್ಯಾಂಕ್‌ನ  …

ಸುಪ್ರಿಂಕೋರ್ಟ್‌ನ ನಕಲಿ ವೆಬ್‌ಸೈಟ್

ದೆಹಲಿ: ಸುಪ್ರಿಂಕೋರ್ಟ್‌ನ ಔದ್ಯೋಗಿಕ ವೆಬ್‌ಸೈಟ್ ಎಂಬ ನೆಲೆಯಲ್ಲಿ ನಕಲಿ ವೆಬ್‌ಸೈಟ್ ಕಾರ್ಯಾಚರಿಸುತ್ತಿದೆ ಎಂದು ಸುಪ್ರಿಂಕೋರ್ಟ್  ತಿಳಿಸಿದೆ. ಈ ವೆಬ್‌ಸೈಟ್‌ನಲ್ಲಿ ಕ್ಲಿಕ್ ಮಾಡಿ ವಂಚಿತರಾಗಬಾರದೆಂದು ಆಗ್ರಹಿಸಿ ಸುಪ್ರಿಂಕೋರ್ಟ್ ರಿಜಿಸ್ಟ್ರಿ ಸಾರ್ವ ಜನಿಕ ನೋಟೀಸು ಹೊರಡಿಸಿದೆ. ನಕಲಿ ವೆಬ್‌ಸೈಟ್‌ನ ಹಿಂದೆ ಕಾರ್ಯಾಚರಿಸುವವರನ್ನು ಪತ್ತೆಹಚ್ಚಿ ಕಾನೂನಿನ ಮುಂದೆ ತರಬೇಕೆಂದು ಸುಪ್ರಿಂಕೋರ್ಟ್ ರಿಜಿಸ್ಟ್ರಾರ್ ಪೊಲೀಸರಿಗೆ ದೂರು ನೀಡಿದ್ದಾರೆ.

ಮೇಲ್ಸೇತುವೆಯಲ್ಲಿ ಅಪಘಾತ ನಾಲ್ಕು ಕಾರುಗಳು ನುಚ್ಚುನೂರು

ಕಾಸರಗೋಡು: ನೀಲೇಶ್ವರ ರಾಷ್ಟ್ರೀಯ ಹೆದ್ದಾರಿಯ ಪಳ್ಳಿಕ್ಕೆರೆ ಮೇಲ್ಸೇತುವೆಯಲ್ಲಿ ನಿನ್ನೆ ಉಂಟಾದ ವಾಹನ ಅಪಘಾತದಲ್ಲಿ ನಾಲ್ಕು ಕಾರುಗಳು ನುಚ್ಚು ನೂರಾಗಿವೆ. ಈ ಮೇಲ್ಸೇತುವೆಯಲ್ಲಿ ಕಾರ್ಯಂಗೋಡಿನತ್ತ ಇಳಿಯುವ ಭಾಗದಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ಮೊದಲು  ಡಿವೈಡ ರ್‌ಗೆ ಢಿಕ್ಕಿ ಹೊಡೆದಿದೆ. ಆ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಇನ್ನೊಂದು ಕಾರು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಢಿಕ್ಕಿಹೊಡೆದು ಅದೂ ನುಚ್ಚು ನೂರಾಗಿದೆ. ಹೀಗೆ ಹಾನಿಗೀಡಾದ ಕಾರಿನ  ಪೈಕಿ ಒಂದರ ಮಾಲಕ ಕರ್ನಾಟಕ ಭಟ್ಕಳ ನಿವಾಸಿ ಮೊಹ ಮ್ಮದ್ ಖಲೀಲ್ …

ಪ್ರಿಯತಮನೊಂದಿಗೆ ಗೃಹಿಣಿ ಪರಾರಿ

ಹೊಸದುರ್ಗ: ತವರು ಮನೆಗೆ ತೆರಳುವುದಾಗಿ ತಿಳಿಸಿ ಪತಿ ಮನೆಯಿಂದ ಹೊರಟ ಗೃಹಿಣಿ ಪ್ರಿಯತಮನೊಂದಿಗೆ ಪರಾರಿಯಾದ ಘಟನೆ ನಡೆದಿದೆ.  ಅಂಬಲತ್ತರ ಮುಟ್ಟಿಚರಲಿಲ್ ನಲ್ಲಿ ಪತಿ ಹಾಗೂ ಪುತ್ರನೊಂದಿಗೆ ವಾಸಿಸುತ್ತಿದ್ದ ಪರಿಯಾರಂ ಆರ್ತಿಪರಂಬ ನಿವಾಸಿಯಾದ ೩೬ರ ಹರೆಯದ ಯುವತಿ ತಿರುವನಂತಪುರ ನಿವಾಸಿಯಾದ ೩೦ರ ಹರೆಯದ ಯುವಕ ನೊಂದಿಗೆ ಪರಾರಿಯಾಗಿರು ವುದು. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಪರಿಯಾರಂ ಪೊಲೀಸ್ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಓಣಂನ ಮೊದಲ ದಿನ ಯುವತಿ ಪತಿ ಗೃಹದಿಂದ ತವರು ಮನೆಗೆ ತೆರಳುವುದಾಗಿ ತಿಳಿಸಿ …

ನೀರಲ್ಲಿ ಮುಳುಗಿ ಯುವಕ ದಾರುಣ ಮೃತ್ಯು

ಮಂಜೇಶ್ವರ: ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದ ಯುವಕ ನೋರ್ವ ಕೆಸರಿನಲ್ಲಿ ಹೂತುಹೋಗಿ ಮೃತಪಟ್ಟ ಘಟನೆ ನಡೆದಿದೆ. ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ ದಿ| ಸುಬ್ರಾಯ ಆಚಾರ್ಯರ ಪುತ್ರ ಹರಿಪ್ರಸಾದ್ ಆಚಾರ್ಯ [36] ಮೃತಪಟ್ಟ ದುರ್ದೆÊವಿ.ವೆಲ್ಡಿಂಗ್ ಕಾರ್ಮಿಕರಾದ ಇವರು ಸೋಮವಾರ ಸಂಜೆ ರಾಷ್ಟಿçÃಯ ಹೆದ್ದಾರಿ ಕೆಳಗಿನ ತಲಪಾಡಿಯ ಖಾಸಗಿ ವ್ಯಕ್ತಿಯ ಜಾಗದಲ್ಲಿರುವ ಕೊಳದಲ್ಲಿ ಸ್ನಾನ ಮಾಡಲೆಂದು ನೀರಿಗಿಳಿದಾಗ ಕೆಸರಿನಲ್ಲಿ ಹೂತು ಹೋಗಿ ಮೃತಪಟ್ಟಿದ್ದಾರೆ. ಮಂ ಗಳೂರಿನಿಂದ ಅಗ್ನಿಶಾಮಕ ದಳದ ವರು ತಲುಪಿ ಮೃತದೇಹವನ್ನು ಮೇಲೆತ್ತಿದ್ದಾರೆ. ಈ ಸಂಬAಧ ಉಳ್ಳಾಲ …