ಅಸ್ವಸ್ಥ ಸ್ಥಿತಿಯಲ್ಲಿದ್ದ ಬಿಜೆಪಿ ಮುಖಂಡ ನಿಧನ

ಮುಳಿಯಾರು: ಅಸ್ವಸ್ಥ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಬಿಜೆಪಿ ಮುಖಂಡ ಮೃತಪಟ್ಟರು. ಮುಳಿಯಾರು ಚಿಪ್ಲಿಕಯ ನಿವಾಸಿ ಹಾಗೂ ಬಿಜೆಪಿ ಮುಳಿಯಾರು ಮಂಡಲ ಸಮಿತಿ ಸದಸ್ಯ ಅಚ್ಯುತನ್ (63) ಮೃತಪಟ್ಟ ವ್ಯಕ್ತಿ. ಶನಿವಾರ ರಾತ್ರಿ ಇವರನ್ನು ಅಸ್ವಸ್ಥ ಸ್ಥಿತಿಯಲ್ಲಿ ಚೆರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜೀವವುಳಿಸಲು ಸಾಧ್ಯವಾಗಲಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ಕಾಸರಗೋಡು ಜನರಲ್ ಪಂಚಾಯತ್ ಸಿಬ್ಬಂದಿಯಾಗಿ ನಿವೃತ್ತರಾಗಿದ್ದರು. ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತರಾಗಿದ್ದರು. ಮೃತರು ಪತ್ನಿ ಜಲಜಾಕ್ಷಿ, ಮಕ್ಕಳಾದ ಅಜಯ್ ಕುಮಾರ್, ಅಕ್ಷಯ್ ಕುಮಾರ್, ಸಹೋದರಿ ಕಾರ್ತ್ಯಾಯಿನಿ …

ಮೀಂಜ ಬಿಜೆಪಿ ವತಿಯಿಂದ ಪಿ.ವಿ. ಭಟ್ ಸಂಸ್ಮರಣೆ

ಮೀಂಜ: ಮೀಂಜ ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ಮೀಂಜ ದಲ್ಲಿ ಪಿ.ವಿ. ಭಟ್ ಸಂಸ್ಮರಣೆ ಜರಗಿತು. ಬಿಜೆಪಿ ಮಂಡಲ ಮಾಜಿ ಪ್ರಧಾನ ಕಾರ್ಯ ದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದ ಇವರು ಇಂದಿನ ನಾಯಕರಿಗೆ ಮಾದರಿ ಎಂದು ಬಿಜೆಪಿ ಮುಖಂಡ ವಿಜಯ ರೈ ಹೇಳಿದರು.  ನಿನ್ನೆ ಸಂಜೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಸ್ಮರಣೆ ಸಭೆ ಜರಗಿದೆ. ಮೀಂಜ ಪಂಚಾಯತ್ ಸಮಿತಿ ಅಧ್ಯಕ್ಷ ಬೆಜ್ಜ ಚಂದ್ರಹಾಸ, ಮಂಡಲ ಬಿಜೆಪಿ ಅಧ್ಯಕ್ಷ ಆದರ್ಶ್ ಬಿ.ಎಂ, ಮುಖಂಡರಾದ ಹರೀಶ್ಚಂದ್ರ ಮಂಜೇ ಶ್ವರ, ತಿಮ್ಮಪ್ಪ …

ಎಕೆಪಿಎ ವೆಸ್ಟ್ ಯೂನಿಟ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್ ವೆಸ್ಟ್ ಯೂನಿಟ್ ಇದರ ವತಿಯಿಂದ ವಿಶ್ವ ಪರಿಸರದಿನವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಪರಿಸರದಲ್ಲಿ ಗಿಡ ನೆಡುವ ಮೂಲಕ ಆಚರಿಸಲಾಯಿತು. ಆಸ್ಪತ್ರೆ  ಸುಪರಿಂಟೆಂಡೆಂಟ್ ಡಾ| ಶ್ರೀಕುಮಾರ್ ಮುಕುಂದನ್ ಗಿಡ ನೆಟ್ಟರು. ಯೂನಿಟ್ ಅಧ್ಯಕ್ಷ ವಂತ್ ಕೆರೆಮನೆ, ಎಕೆಪಿಎ ವಲಯ ಕೋಶಾಧಿಕಾರಿ ಮನು, ಯೂನಿಟ್ ನಿರೀಕ್ಷಕ ಶ್ರೀಜಿತ್, ಎಕೆಪಿಎ ಜಿಲ್ಲಾ ಸ್ಪೋರ್ಟ್ಸ್ ಕೋ-ಆರ್ಡಿನೇಟರ್ ರತೀಶ್, ವಲಯ ಸಮಿತಿ ಸದಸ್ಯ ಸುಬ್ರಹ್ಮಣ್ಯ ಎಂ.ಎಸ್, ಮೈಂದಪ್ಪ, ಸಾಂತ್ವನ ಕೋ-ಆರ್ಡಿನೇಟರ್ ಶಾಲಿನಿ ರಾಜೇಂದ್ರನ್, ವಾಸು ಎ, ಸಮಿತಿ …

ಗುಜರಾತ್‌ನಲ್ಲಿ ಪ್ರಬಲ ಭೂಕಂಪ: ಮನೆಯಿಂದ ಹೊರ ಓಡಿದ ಜನರು

ಅಹಮದಾಬಾದ್: ಗುಜರಾತ್‌ನ ಗಿರ್ ಸೋಮನಾಥ ಜಿಲ್ಲೆಯಲ್ಲಿ ನಿನ್ನೆ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.4ರಷ್ಟು ದಾಖಲಿಸಲಾಗಿದೆ. ಭೂಕಂಪಕ್ಕೆ ಹೆದರಿ ಜನರು ಮನೆಯಿಂದ ಹೊರ ಓಡಿದ್ದಾರೆ. ತಲಾಲ ಮತ್ತು ಗ್ರಾಮೀಣ ಪ್ರದೇಶಗಳಲ್ಲೂ ಪ್ರಬಲ ಭೂಕಂಪದ ಅನುಭವವಾಗಿದೆ. ತಲಾಲದ ೫ ಕಿ.ಮೀ. ಆಳದಲ್ಲಿ ಈ ಭೂಕಂಪದ ಪ್ರಧಾನ ಕೇಂದ್ರವಾಗಿದೆಯೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಕಿಡ್ನಿ ರೋಗಿಗಳಿಗೆ ನೆರವಾಗುತ್ತಿರುವ ಕಾರಡ್ಕ ಬ್ಲೋಕ್ ಪಂ. ಡಯಾಲಿಸಿಸ್ ಘಟಕ

ಮುಳ್ಳೇರಿಯ: ಕಾರಡ್ಕ ಬ್ಲೋಕ್ ಪಂಚಾಯತ್ನ ‘ಕರುದಲ್’ ಡಯಾಲಿಸಿಸ್ ಘಟಕ ಆರಂಭಗೊAಡು ಐದು ವರ್ಷ ಗಳಾಗಿದ್ದು, ಇದು ಹಲವಾರು ರೋಗಿಗಳಿಗೆ ಪ್ರಯೋಜ ಕಾರಿ ಯಾಗಿದೆ. ಇದುವರೆಗೆ 76 ಮಂದಿ ಕಿಡ್ನಿ ರೋಗಿಗಳಿಗೆ ಒಟ್ಟು 12785 ಡಯಾಲಿಸಿಸ್ ನಡೆಸಲಾಗಿದೆ ಎಂದು ಸಂಬAಧಪಟ್ಟವರು ತಿಳಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಮಾತ್ರ 331 ಡಯಾಲಿಸಿಸ್ ನಡೆಸಲಾಗಿದೆ.ಕಾರಡ್ಕ ಬ್ಲೋಕ್ ವ್ಯಾಪ್ತಿಯ ವಿವಿಧ ಪಂಚಾಯತ್ಗಳಲ್ಲಿರುವ ಕಿಡ್ನಿ ರೋಗಿಗಳಿಗೆ ಡಯಾಲಿಸಿಸ್ಗಾಗಿ ಹಲವು ಗಂಟೆಗಳ ಕಾಲ ದೂರದ ಆಸ್ಪತ್ರೆಗಳಿಗೆ ಪ್ರಯಾಣಿಸಬೇಕಾಗಿ ಬರುತ್ತಿದ್ದ ಹಿನ್ನೆಲೆಯಲ್ಲಿ ಕೋವಿಡ್ ಮಹಾಮಾರಿ ತೀವ್ರಗೊಂಡ ಸಂದರ್ಭದಲ್ಲಿ …

ಉರೂಸ್‌ನ ಫ್ಲೆಕ್ಸ್ ಬೋರ್ಡ್ ನಾಶಗೊಳಿಸಿ ಕೋಮು ಗಲಭೆಗೆ ಸಂಚು: ಇಬ್ಬರು ಆರೋಪಿಗಳ ಬಂಧನ

ಕುಂಬಳೆ: ಉರೂಸ್ ಕಾರ್ಯಕ್ರಮದ ಪ್ರಚಾರಾರ್ಥ ಸ್ಥಾಪಿಸಿದ್ದ ಫ್ಲೆಕ್ಸ್ ಬೋರ್ಡ್ ಉದ್ದೇಶಪೂರ್ವಕ ನಾಶಗೊಳಿಸಿ ನಾಡಿನಲ್ಲಿ ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಪಚ್ಚಂಬಳ ನಿವಾಸಿ ಫಾಯಿಸ್ (19), ಅಡ್ಕ ವೀರನಗರ ನಿವಾಸಿ ಅಬ್ದುಲ್ ಶರೀಕ್ (27) ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಕಳೆದ ಮೇ ೧ರಂದು ಪ್ರಕರಣಕ್ಕೆ  ಕಾರಣವಾದ ಘಟನೆ ನಡೆದಿದೆ. ವಳಯಂ ಮಖಾಂ ಉರೂಸ್‌ನ ಪ್ರಚಾರಾರ್ಥ ಅಡ್ಕ ವೀರನಗರದಲ್ಲಿ  ಸ್ಥಾಪಿಸಿದ್ದ ಫ್ಲೆಕ್ಸ್ …

ಮುಳ್ಳೇರಿಯ ಬಳಿಯ ಕಾರ್ಲೆಯಲ್ಲಿ ಕಾರು ಮಗುಚಿ 2 ವರ್ಷದ ಮಗು ದುರ್ಮರಣ

ಮುಳ್ಳೇರಿಯ: ಇಲ್ಲಿಗೆ ಸಮೀಪದ ಕಾರ್ಲೆಯಲ್ಲಿ ಕಾರೊಂದು ಮಗುಚಿ ಬಿದ್ದಾಗ ಅದರಡಿಗೆ ಸಿಲುಕಿ 2 ವರ್ಷದ ಮಗು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಲೆ ಪರಿಸರದಲ್ಲಿ ಶೋಕಸಾಗರ ಸೃಷ್ಟಿಸಿದೆ. ಹರಿ-ಶ್ರೀವಿದ್ಯಾ ದಂಪತಿ ಪುತ್ರಿ ಹೃದ್ಯಾನಂದ (2) ಮೃತಪಟ್ಟ ಮಗು. ನಿನ್ನೆ ಸಂಜೆ ೬ ಗಂಟೆ ವೇಳೆಗೆ ಸ್ಥಳೀಯರ ಕಣ್ಣಲ್ಲಿ ನೀರು ಹರಿಸಿದ ಈ ಅಪಘಾತ ಸಂಭವಿಸಿದೆ. ಹರಿ ಹಾಗೂ ಕುಟುಂಬ ಕಾರಿನಲ್ಲಿ ತೆರಳಿ ಹಿಂತಿರುಗಿದ್ದರು. ಪತ್ನಿ ಹಾಗೂ ಮಕ್ಕಳನ್ನು ಮನೆಗೆ ತಲುಪಿಸಿದ ಬಳಿಕ ಹರಿ ಕಾರು ಸಹಿತ ಮತ್ತೆ ತೆರಳಿದ್ದರು. …

ಬೆಂಗಳೂರು ಕಾಲ್ತುಳಿತ ದುರಂತ: ಆರ್‌ಸಿಬಿಯ ನಾಲ್ವರು ಆಯೋಜಕರ ಬಂಧನ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊನ್ನೆ ಐಪಿಎಲ್‌ನಲ್ಲಿ ಆರ್‌ಸಿಬಿಯ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 47ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರಂತ ಪ್ರಕರಣಕ್ಕೆ ಸಂಬಂಧಿಸಿ ಆರ್‌ಸಿಬಿಯ ನಾಲ್ವರು ಆಯೋಜಕರನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿ ದ್ದಾರೆ. ಆರ್‌ಸಿಬಿಯ ಆಯೋಜಕರಾದ  ನಿಖಿಲ್ ಸೋಸಲೆ, ಕಿರಣ್, ಸುನಿಲ್ ಮ್ಯಾಥ್ಯು ಮತ್ತು  ಸುಮಂತ್ ಎಂಬಿವರು ಬಂಧಿತರಾದವರು. ಕಬ್ಬನ್ ಪಾರ್ಕ್ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಯಲ್ಲಿ ಈ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ …

ರೈಲಿನಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ವ್ಯಕ್ತಿಯೋರ್ವ ರೈಲಿನಿಂದ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಝಾರ್ಖಂಡ್‌ನ ವೆಸ್ಟ್ ಸಿಂಗುಭೂಂ ಕೇರಲ್‌ಕೆಲ ಮಕ್ತಂಬೆರ ಎಂಬಲ್ಲಿನ ಉದಯ್ ಸಿಂಗ್ ಸಮದ್ ಎಂಬವರ ಪುತ್ರ ಶತ್ರುದ್ಧನ್ ಸಮದ್ (30) ಮೃತಪಟ್ಟ ವ್ಯಕ್ತಿಯೆಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಶಿರಿಯ- ಮುಟ್ಟಂ ಮಧ್ಯೆ ಕರಾವಳಿ ಪೊಲೀಸ್ ಠಾಣೆ ಸಮೀಪ ರೈಲು ಹಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇ ಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರಕ್ಕೆ ತಲುಪಿಸಿದ್ದಾರೆ.

ಹಲ್ಲೆ ಪ್ರಕರಣ: ತಲೆಮರೆಸಿದ್ದ ಆರೋಪಿ ಸೆರೆ

ಕುಂಬಳೆ: ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂ ಡಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಅತೀ ಸಾಹಸದಿಂದ ಸೆರೆಹಿಡಿದಿದ್ದಾರೆ. ಬಂದ್ಯೋಡು ನಿವಾಸಿ ಜಲೀಲ್ (35) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. 2019ರಲ್ಲಿ ಈತನ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ಮಹಿಳೆಗೆ ಹಲ್ಲೆಗೈದ ಹಾಗೂ ಹೊಡೆದಾಟ ಪ್ರಕರಣದಲ್ಲಿ ಈತ ಆರೋಪಿ ಯಾಗಿದ್ದನು. ಆದರೆ ಇದುವರೆಗೆ ಸೆರೆಹಿಡಿಯಲು ಸಾಧ್ಯವಾಗಿರಲಿಲ್ಲ.  ನಿನ್ನೆರಾತ್ರಿ ಈತ ಬಂದ್ಯೋಡಿನಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇದರಂತೆ ಕುಂಬಳೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಪ್ರೊಬೆಶನರಿ ಎಸ್‌ಐ ಅನಂತಕೃಷ್ಣನ್ ನೇತೃತ್ವದಲ್ಲಿ ಪೊಲೀಸರು …