ಅರಣ್ಯದಲ್ಲಿ ವನ್ಯಜೀವಿ ಬೇಟೆ ನಾಡ ಬಂದೂಕು ಸಹಿತ ಮೂವರ ಸೆರೆ

ಕಾಸರಗೋಡು: ಅರಣ್ಯಕ್ಕೆ ಅಕ್ರಮವಾಗಿ ನುಗ್ಗಿ ವನ್ಯಜೀವಿಗಳ ಬೇಟೆಯಲ್ಲಿ ತೊಡಗಿದ್ದ ಮೂವರನ್ನು ಅರಣ್ಯ ಪಾಲಕರು ಸೆರೆ ಹಿಡಿದಿದ್ದಾರೆ. ಪನತ್ತಡಿ ಅರಣ್ಯ ವಿಭಾಗದ ಪೆನ್ನಿಕ್ಕರ ಅರಣ್ಯ ಪ್ರದೇಶದಲ್ಲಿ ರಾತ್ರಿ ವೇಳೆ ಕಾರ್ಯಾಚರಣೆ ನಡೆದಿದೆ. ಇದಕ್ಕೆ ಸಂಬಂಧಿಸಿ ರಾಜಪುರ ಪನತ್ತಡಿಗೆ ಸಮೀಪದ ಅಡ್ಕಂ ಪುದಿಯ ಕೊಡಿಯ ಕೆ. ಸತೀಶನ್ (೩೭), ಪೆರುಂಬಳ್ಳಿಯ ಕೆ. ವಿನೀತ್ (೩೨) ಮತ್ತು ಆರ್. ಶ್ರೀಜಿತ್ (೩೨) ಎಂಬಿವರನ್ನು ಅರಣ್ಯ ಪಾಲಕರು ಬಂಧಿಸಿದ್ದಾರೆ. ಇವರಿಂದ ಎರಡು ನಾಡ ಬಂದೂಕು, ಮೂರು ಬುಲ್ಲೆಟ್‌ಗಳು, ೩ ಟೋರ್ಚ್‌ಗಳನ್ನು  ವಶಕ್ಕೆ ತೆಗೆದುಕೊಳ್ಳಲಾಗಿದೆ. …

ಕಾರಿನಲ್ಲಿ ಸಾಗಿಸುತ್ತಿದ್ದ ೭೨ ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಕಾರಿನಲ್ಲಿ ಸಾಗಿಸುತ್ತಿದ್ದ ೭೨ ಲೀಟರ್ ಕರ್ನಾಟಕ ಮದ್ಯ ವಶ: ಓರ್ವ ಸೆರೆ ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ೭೨ ಲೀಟರ್ ಕರ್ನಾಟಕ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಸೆರೆ ಹಿಡಿದಿದ್ದಾರೆ. ಈ ಸಂಬಂಧ ಹೊಸದುರ್ಗ ಅಜಾನೂರು ಕಡಪ್ಪುರದ ನಿತಿನ್ ಪಿ (೨೭) ಎಂಬಾತನನ್ನು ಬಂಧಿಸಲಾಗಿದೆ. ಈತನ ಕೈಯಲ್ಲಿದ್ದ ೨೪,೫೦೦ ರೂಪಾಯಿಗಳನ್ನು ವಶಪಡಿಸಲಾಗಿದೆ. ನಿನ್ನೆ ಸಂಜೆ ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್‌ನ ಅಬಕಾರಿ ಇನ್ಸ್‌ಪೆಕ್ಟರ್ ಆರ್. ರಿನೋಶ್ ಹಾಗೂ ತಂಡ ನಡೆಸಿದ ವಾಹನ ತಪಾಸಣೆ ವೇಳೆ ಮದ್ಯ ವಶಪಡಿಸಲಾಗಿದೆ. ಕರ್ನಾಟಕ …

ರಾತ್ರಿ ಮರೆಯಲ್ಲಿ ಏಕಕಾಲದಲ್ಲಿ ಮೂರು ರೈಲುಗಳಿಗೆ ಕಲ್ಲು ತೂರಾಟ: ಮೂವರ ವಶ

ಕಾಸರಗೋಡು: ರೈಲುಗಳ ಮೇಲೆ ಸಮಾಜ ದ್ರೋಹಿಗಳು ಕಲ್ಲೆಸೆದು ಹಾನಿಗೊಳಿಸುವ ದುಷ್ಕೃತ್ಯಗಳು ಎಗ್ಗಿಲ್ಲದೆ ಇನ್ನೂ ಮುಂದುವರಿಯುತ್ತಿದೆ. ನಿನ್ನೆ ಮಾತ್ರವಾಗಿ ರಾತ್ರಿ ಮರೆಯಲ್ಲಿ ಒಂದೇ ಸಮಯದಲ್ಲಿ ಪುಂಡರು ಮೂರು ರೈಲುಗಳಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದ್ದಾರೆ.  ಇದಕ್ಕೆ ಸಂಬಂಧಿಸಿ  ಆರ್‌ಪಿಎಫ್ ಕಣ್ಣೂರಿನಿಂದ ಮೂವ ರನ್ನು ಸೆರೆಹಿಡಿದು ತೀವ್ರ ವಿಚಾರಣೆಗೊಳ ಪಡಿಸುತ್ತಿದೆ. ಮಂಗಳೂರಿನಿಂದ ಚೆನ್ನೈಗೆ ಹೋಗುತ್ತಿದ್ದ ಚೆನ್ನೈ ಸುಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಾಡಿಯ ಹವಾನಿ ಯಂತ್ರಿತ ಬೋಗಿಗಳಿಗೆ ಕಲ್ಲೆಸೆತದಿಂದ ಕಿಟಿಕಿ ಗಾಜುಗಳು ಪುಡಿಗೈಯ್ಯಲ್ಪಟ್ಟಿದೆ. ಕಣ್ಣೂರು-ವಳಪಟ್ಟಣಂ ಮಧ್ಯೆ ಕಲ್ಲೆಸೆತ ನಡೆದಿದೆ. ಓಘಾ-ಎರ್ನಾಕುಳಂ ಎಕ್ಸ್‌ಪ್ರೆಸ್ ರೈಲಿಗೆ …

ಜ್ವರಕ್ಕೆ ಮನೆ ಯಜಮಾನ ಬಲಿ

ಕಾಸರಗೋಡು: ಹಳದಿ ಕಾಮಾಲೆಗೆ ಸಂಬಂಧಿಸಿದ ಚಿಕಿತ್ಸೆ ಕಳೆದು ಮನೆಗೆ ಹಿಂತಿರುಗಿದ ಮನೆ ಯಜಮಾನ ಬಳಿಕ ಜ್ವರ ತಗಲಿ ಸಾವನ್ನಪ್ಪಿದ್ದಾರೆ. ಕೇರಳ ಜಲಪ್ರಾಧಿಕಾರದ ಗುತ್ತಿಗೆ ಕಾರ್ಮಿಕ ಹೊಸದುರ್ಗ  ಅಳರಾಯಿಯ ಎಚ್.ವಿ. ಕಮಲಾಕ್ಷನ್ (೬೭) ಸಾವನ್ನಪ್ಪಿದ ವ್ಯಕ್ತಿ. ಇವರಿಗೆ ಹಳದಿಕಾಮಲೆ ತಗಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಯಿತಾಗಿತ್ತು. ಅದರಲ್ಲಿ ಗುಣಮುಖಗೊಂಡು ಮೂರು ದಿನಗಳ ಹಿಂದೆಯಷ್ಟೇ ಮನೆಗೆ  ಹಿಂತಿರುಗಿದ್ದರು. ನಂತರ ಅವರಿಗೆ ಜ್ವರ ಅನುಭವಗೊಂಡಿತ್ತು. ಅದರಿಂದಾಗಿ ಅವರನ್ನು ಹೊಸದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ  ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು …

ಅಪರಿಚಿತ ವ್ಯಕ್ತಿಯ ಮೃತದೇಹ ರೈಲು ಹಳಿಯಲ್ಲಿ ಪತ್ತೆ

ಕುಂಬಳೆ: ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಕುಂಬಳ ರೈಲು ಹಳಿಯಲ್ಲಿ ಪತ್ತೆಯಾಗಿದೆ. ಕುಂಬಳೆ ರೈಲು ನಿಲ್ದಾಣ ಸಮೀಪ ಇಂದು ಮುಂಜಾನೆ ೩.೩೦ರ ವೇಳೆ ಮೃತದೇಹ ಪತ್ತೆಯಾಗಿದೆ. ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿದೆ. ಸುಮಾರು ೫೦ ವರ್ಷ ಪ್ರಾಯ ಅಂದಾಜಿಸಲಾಗಿದೆ. ಮೃತದೇಹದಲ್ಲಿ  ಲುಂಗಿ ಹಾಗೂ ನೀಲಿ ಗೆರೆಯುಳ್ಳ ಶರ್ಟ್ ಇದೆ. ಇದು  ಮುಂಜಾನೆ ೩ ಗಂಟೆಗೆ ಸಂಚರಿಸಿದ ಮರಂತೊ ಎಕ್ಸ್‌ಪ್ರೆಸ್ ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿ ರಬಹುದೆಂದು ಸಂಶಯಿಸಲಾಗಿದೆ. ಮೃತದೇಹವನ್ನು ಪೊಲೀಸರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಿದ್ದಾರೆ.

ಐದು ರಾಜ್ಯಗಳ ೧೪ ಕಡೆಗಳಲ್ಲಿ ಎನ್‌ಐಎ ಏಕ ಕಾಲದಲ್ಲಿ ದಾಳಿ

ತಿರುವನಂತಪುರ: ಕೇರಳ, ಕರ್ನಾಟಕ ಸೇರಿದಂತೆ ಐದು ರಾಜ್ಯಗಳಲ್ಲಾಗಿ ೧೪ ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪೋಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕೇಂದ್ರಗಳಿಗೆ ದಾಳಿ ನಡೆಸಿದೆ. ಕೇರಳದಲ್ಲಿ ಕಣ್ಣೂರಿನ ಮನೆಗಳು ಮತ್ತು ಮಲಪ್ಪುರದ ತಿರೂರಿನ ಐದು ಮನೆಗಳು ಎನ್‌ಐಎ ದಾಳಿ ನಡೆಸಿದೆ. ಇದರ ಹೊರತಾಗಿ ಕೊಲ್ಲಂನ ಕೇಂದ್ರವೊಂದಕ್ಕೂ  ದಾಳಿ ನಡೆದಿದೆ.  ಹೀಗೆ ದಾಳಿ ನಡೆದ ಮನೆಗಳ ಮಾಲಕರನ್ನು ಎನ್‌ಐಎ ತನ್ನ ಕಚೇರಿಗೆ ಸಾಗಿಸಿ ಅವರ  ಹೇಳಿಕೆ ದಾಖಲಿಸಿಕೊಂಡಿದೆ. ಈ ಕಾರ್ಯಾಚರಣೆಗೆ ಕೇರಳ ಪೊಲೀಸರೂ ಸಹಾಯ ಒದಗಿಸಿದ್ದಾರೆ. …

ಕಾರುಗಳು ಢಿಕ್ಕಿ ಹೊಡೆದು ಆರು ಮಂದಿ ಜಖಂ

ಕಾಸರಗೋಡು: ಚಟ್ಟಂಚಾಲ್‌ಗೆ ಸಮೀಪದ ತೆಕ್ಕಿಲ್ ಆಲಟ್ಟಿ ರಸ್ತೆಯಲ್ಲಿ ನಿನ್ನೆ ಸಂಜೆ ಕಾರುಗಳೆರಡು ಪರಸ್ಪರ ಢಿಕ್ಕಿ ಹೊಡೆದು ಆರು ಮಂದಿ ಗಾಯಗೊಂಡಿದ್ದಾರೆ. ವೈಶಾಖ್ ಎಂಬಾತ ಚಲಾಯಿಸುತ್ತಿದ್ದ ಕಾರು ಹಾಗೂ ಇನ್ನೊಂದು ಕಾರು ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಚೂರಿತ್ತೋಡು ನಿವಾಸಿ ವೈಶಾಖ್,  ಬಾರೋಟ್ಟಿಯ ಪ್ರತಾಪ್, ಚೂರಿತ್ತೋಡಿನ ಹೋಟೆಲ್ ವ್ಯಾಪಾರಿ ಯೂಸುಫ್, ಪಾಂಡಿಕಂ ಡದ ಮಹಮ್ಮದ್ ಕುಂಞಿ, ಮೊಯ್ದೀನ್ ಕುಂಞಿ ಮತ್ತು ಹಬೀಬ್ ಎಂಬವರು ಗಾಯಗೊಂ ಡಿದ್ದು, ಅವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಬ್ಯಾಂಕ್‌ಮೆನೇಜರ್ ಸಾವು: ಆತ್ಮಹತ್ಯೆ ಕುರಿತು ಪತ್ರ ಪತ್ತೆ

ಬದಿಯಡ್ಕ: ಎಡನಾಡು ಸೇವಾ ಸಹಕಾರಿ ಬ್ಯಾಂಕ್‌ನ ಕಳತ್ತೂರು ಶಾಖೆ ಮೆನೇಜರ್ ನಾರಂಪಾಡಿ ನೆಲ್ಲಿಯಡ್ಕ ಪಳ್ಳದ ಪಿ. ರಾಮಚಂದ್ರ (೪೬) ಬಚ್ಚಲು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುರಿತು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಕಳೆದ ಶುಕ್ರವಾರ ಸಂಜೆ ರಾಮಚಂದ್ರ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ    ಪತ್ತೆಯಾಗಿ ದ್ದರು.  ಬದಿಯಡ್ಕ ಎಸ್.ಐ. ಪಿ.ಕೆ. ವಿನೋದ್ ಕುಮಾರ್‌ರ ನೇತೃತ್ವದಲ್ಲಿ   ನಡೆದ ತನಿಖೆಯಲ್ಲಿ ರಾಮಚಂದ್ರ ಕನ್ನಡದಲ್ಲಿ ಬರೆದಿಟ್ಟಿರುವುದಾಗಿ ಸಂಶಯಿಸುವ ಪತ್ರವೊಂದು ಮನೆಯೊಳಗೆ ಪತ್ತೆಯಾಗಿದೆ. ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ಪತ್ರದಲ್ಲಿ …

ಕಾರ್ಮಿಕ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚೆರ್ಕಳಕ್ಕೆ ಸಮೀಪದ ಬೇರ್ಕದ ಕ್ವಾರ್ಟರ್ಸ್ ಒಂದರಲ್ಲಿ ವಾಸಿಸುತ್ತಿರುವ ಹೋಟೆಲ್ ಕಾರ್ಮಿಕ ಮೂಲತಃ ಮಡಿಕೇರಿ ನಿವಾಸಿ ಖದೀಜಾ ಎಂಬವರ ಪತಿ ಹಸೈನಾರ್ (೫೪) ಎಂಬವರು ನಿನ್ನೆ ರಾತ್ರಿ ಕ್ವಾರ್ಟರ್ಸ್ ಬಳಿಯ ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಸೈನಾರ್ ಅವರು ಮೂಲತಃ ಮಡಿಕೇರಿ ನಿವಾಸಿಯಾಗಿದ್ದಾರೆ. ಕಳೆದ ೩೫ ವರ್ಷಗಳಿಂದ ಅವರು ಬೇರ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸಿ, ಅಲ್ಲೇ ಪಕ್ಕದ ಹೋಟೆಲ್ ಒಂದರಲ್ಲಿ ದುಡಿಯುತ್ತಿದ್ದರು. ನಿನ್ನೆ ಬೆಳಿಗ್ಗಿನಿಂದ ಅವರು ನಾಪತ್ತೆಯಾಗಿದ್ದರು. ಶಂಕೆಗೊಂಡ ಅವರ ಮನೆಯವರು ಹುಡುಕಾಟ ನಡೆಸಿದಾಗ ನಿನ್ನೆ ರಾತ್ರಿ ಅದೇ …

ತಿರುಪತಿ: ತಂದೆ ತಾಯಿ ಜೊತೆ ನಡೆದು ಹೋಗುತ್ತಿದ್ದ ಬಾಲಕಿ ಚಿರತೆಯ ಆಕ್ರಮಣಕ್ಕೆ ಬಲಿ

ಹೈದರಾಬಾದ್: ತಿರುಪತಿಗೆ ತೀರ್ಥಾಟನೆಗೆ ತಲುಪಿದ ಆರರ ಹರೆಯದ ಬಾಲಕಿಯನ್ನು ಚಿರತೆ ಆಕ್ರಮಿಸಿ ಕೊಂದ ದಾರುಣ ಘಟನೆ ನಡೆದಿದೆ. ಆಂಧ್ರ ನಿವಾಸಿ ಲಕ್ಷಿತ ಎಂಬ ಬಾಲಕಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ನಿನ್ನೆ ಸಂಜೆ ಆಲಿಪಿರಿವಾಕ್ ವೇನಲ್ಲಿ  ಘಟನೆ ನಡೆದಿದೆ. ತಂದೆ ತಾಯಿ ಜೊತೆ ಬಾಲಕಿ ನಡೆದು ಹೋಗುತ್ತಿದ್ದಂತೆ ಚಿರತೆ ದಾಳಿ ನಡೆಸಿದೆ. ಚಿರತೆ ಬಾಲಕಿಯನ್ನು ಕಚ್ಚಿ ಕಾಡಿನತ್ತ  ಎಳೆದೊಯ್ದಿದೆ. ಪೊಲೀಸರು ತಲುಪಿ ನಡೆಸಿದ ಶೋಧ ವೇಳೆ  ಬಾಲಕಿಯ  ಮೃತದೇಹದ ಅವಶಿಷ್ಟಗಳು ಕಾಡಿನಲ್ಲಿ ಪತ್ತೆಯಾಗಿದೆ.  ಕಳೆದ ತಿಂಗಳು ಕೂಡಾ ತಿರುಪತಿಯಲ್ಲಿ ಒಂದು …