ಮಕ್ಕಳನ್ನು ಉಪೇಕ್ಷಿಸಿ ಊರು ಬಿಟ್ಟ ಯುವತಿ, ಪ್ರಿಯತಮ ಸೆರೆ

ಕಾಸರಗೋಡು: ಪ್ರಾಯಪೂ ರ್ತಿಯಾಗದ ಮಕ್ಕಳನ್ನು ಉಪೇಕ್ಷಿಸಿ ಊರು ಬಿಟ್ಟ ಯುವತಿಯನ್ನು ಆಕೆಯ ಪ್ರಿಯತಮನ ಸಹಿತ ಚಂದೇರ ಪೊಲೀಸರು ಸೆರೆ ಹಿಡಿದಿದ್ದಾರೆ. ಪಡನ್ನ ಕಾವುಂತಾಲಿನ ಟಿ.ಕೆ. ಹಸೀನಾ (೩೩) ಮತ್ತು ಎ.ಕೆ. ಅಬ್ದುಲ್ ಸಮದ್ (೪೦) ಬಂಧಿತರಾದ ಜೋಡಿಗಳು. ಚಂದೇರಾ ಪೊಲೀಸ್ ಠಾಣೆಯ ಎಸ್‌ಐ ಎಂ.ವಿ. ಶ್ರೀದಾಸ್ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ. ಈ ತಿಂಗಳ ೬ರಂದು ಹಸೀನಾ ನಾಪತ್ತೆಯಾಗಿದ್ದಳೆಂದು ದೂರಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ಸೈಬರ್ …

ಲಾಟರಿ ಬಹುಮಾನ ಬಂದಿದೆಯೆಂದು ತಿಳಿದು ತಕ್ಷಣ ಬಂದ ಬೈಕ್ ಕಳ್ಳ ಪೊಲೀಸರ ವಶಕ್ಕೆ

ಕಾಸರಗೋಡು: ಲಾಟರಿ ಬಹುಮಾನ ಬಂದಿದೆಯೆಂದು ತಿಳಿದು ತಕ್ಷಣ ಬಂದ ಬೈಕ್ ಕಳ್ಳನನ್ನು ನಾಗರಿಕರು ಕೈಯಾರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರಿಯಾಟಡ್ಕದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ ನಿವಾಸಿಯೂ ಪೆರಿಯಾಟಡ್ಕದಲ್ಲಿ ವಾಸಿಸುವ ಬಿಮ್ಮು ಎಂಬಾತ ಪೊಲೀಸರ ಕಸ್ಟಡಿಯಲ್ಲಿದ್ದ್ದು ಈತನನ್ನು ತನಿಖೆ ನಡೆಸಲಾಗುತ್ತಿದೆ. ಒಂದು ವಾರ ಹಿಂದೆ ಹಾಡಹಗಲೇ ಚೆರುಂಬಾ ನಿವಾಸಿ ಬಷೀರ್‌ರ ಬೈಕ್ ಪೆರಿಯಾಟಡ್ಕ ಪೇಟೆಯಿಂದ ಕಳವಿಗೀಡಾಗಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಪೇಟೆಯ ಸಿಸಿ …

ಮಂಜೇಶ್ವರ: ಅನ್ಯರಾಜ್ಯ ಕಾರ್ಮಿಕರ ಮಾಹಿತಿ ಸಂಗ್ರಹ

ಮಂಜೇಶ್ವರ : ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅನ್ಯ ರಾಜ್ಯ ಕಾರ್ಮಿಕರ ಮಾಹಿತಿ ಯನ್ನು ಸಂಗ್ರಹಿಸಲಾಯಿತು. ಮಂಜೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅದರಲ್ಲೂ ಕರ್ನಾಟಕ ಕೇರಳ ಗಡಿ ಪ್ರದೇಶಗಳಲ್ಲಿ ಅತ್ಯಧಿಕ ಮಂದಿ ಅನ್ಯ ರಾಜ್ಯ ಕಾರ್ಮಿಕರುಗಳು ಕುಟುಂಬ ಸಮೇತರಾಗಿ ಹಾಗೂ ಏಕಾಂಗಿಯಾಗಿ ವಾಸಿಸುತಿದ್ದಾರೆ.ಇತ್ತೀಚಿನ ದಿನಗಳಲ್ಲಿ ಅನ್ಯ ರಾಜ್ಯ ಕಾರ್ಮಿಕರು ಅಪರಾಧ ಕೃತ್ಯಗಳಲ್ಲಿ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಇವರಿಂದ ಮಾಹಿತಿ ಯನ್ನು ಸಂಗ್ರಹಿಸಲು ಆರಂಭಿಸಿದ್ದಾರೆ. ಕುಂಜತ್ತೂರು ಮಾಸ್ಕೋ ಸಭಾಂಗಣದಲ್ಲಿ ಮಂಜೇಶ್ವರ ಎಸ್.ಐ. ಎನ್ ಅನ್ಸಾರ್ ಹಾಗೂ ಜನ ಮೈತ್ರಿ …

ಹೊಸಂಗಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭ : ಕಟ್ಟಿನಿಂತ ಮಳೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ

ಮಂಜೇಶ್ವರ: ಹೊಸಂಗಡಿಯಲ್ಲಿ ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಕೆಲಸ ಮತ್ತೆ ಆರಂಭಗೊAಡಿದೆ. ವ್ಯಾಪಕ ಮಳೆಯಿಂದಾಗಿ ಹಾಗೂ ನೀರು ತುಂ ಬಿಕೊಂಡಿರುವ ಹಿನ್ನೆಲೆಯಲ್ಲಿ ಹೆದ್ದಾರಿ ಕಾಮಗಾರಿ ಯನ್ನು ತತ್ಕಾಲಿಕವಾಗಿ ನಿಲುಗಡೆಗೊಳಿ ಸಲಾಗಿತ್ತು. ಇದೀಗ ಮತ್ತೆÀ ಕಾಮಗಾರಿ ಆರಂಭಿಸಿದ್ದಾರೆ. ಇಲ್ಲಿ ನಿರ್ಮಿಸ ಲಾದ ಬೃಹತ್ ಸಂಕದ ಒಂದು ಭಾಗದಲ್ಲಿ ಮಣ್ಣು ತೆರವುಗೊಳಿಸುವ ಕೆಲಸ ಭರದಿಂದ ನಡೆಯುತ್ತಿದೆ. ಅಲ್ಲದೆ ಭಾರೀ ಪ್ರಮಾಣದಲ್ಲಿ ಕಟ್ಟಿ ನಿಂತ ಮಳೆ ನೀರನ್ನು ಹರಿದು ಬಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. ನೀರು ರಸ್ತೆ ಮೂಲಕ ಹರಿದು ಚರಂಡಿ ಸೇರುತ್ತಿದೆ. ಇದರಿಂದ …

ವೇತನ ವಿಳಂಬ: ಕೆಎಸ್‌ಆರ್‌ಟಿಸಿ ನೌಕರರಿಂದ ೨೬ರಂದು ಮುಷ್ಕರ

ತಿರುವನಂತಪುರ: ಕೆಎಸ್‌ಆರ್‌ಟಿಸಿ ನೌಕರರು ಈ ತಿಂಗಳ ೨೬ರಂದು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.  ಪ್ರತಿ ತಿಂಗಳ ೫ರ ಮುಂಚಿತ ವೇತನ ವಿತರಿಸುವುದಾಗಿ ಮುಖ್ಯಮಂತ್ರಿ ಭರವಸೆ ಪಾಲಿಸದಿರುವುದನ್ನು ಪ್ರತಿಭಟಿಸಿ ಮುಷ್ಕರ ನಡೆಸುವುದಾಗಿ ತಿಳಿಸಲಾಗಿದೆ. ಐಎನ್‌ಟಿಯುಸಿ, ಸಿಐಟಿಯು ಸಂಘಟ ನೆಗಳು ಒಳಗೊಂಡ ಸಂಯುಕ್ತ ಮುಷ್ಕರ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಹತ್ತನೇ ತಾರೀಕು ಕಳೆದರೂ ಜುಲೈ ತಿಂಗಳ ವೇತನ ಲಭಿಸಿಲ್ಲ. ಕಳೆದ ವರ್ಷದ ಓಣಂ ಸೌಲಭ್ಯಗಳು ಇನ್ನೂ ಲಭಿಸಿಲ್ಲವೆಂದು ಮುಷ್ಕರ ಸಮಿತಿ  ತಿಳಿಸಿದೆ. ವೇತನ ನಿಗದಿತ ಸಮಯ ದೊಳಗೆ ನೀಡಬೇಕು, ಓಣಂ …

ಕೆಎಸ್‌ಆರ್‌ಟಿಸಿಯಲ್ಲಿ ಉಪವಾಸ ಮುಷ್ಕರ

ಕಾಸರಗೋಡು: ಜುಲೈ ತಿಂಗಳ ವೇತನ ಅಗೋಸ್ತ್ ೧೦ ಕಳೆದರೂ ವಿತರಿಸದಿರುವುದನ್ನು ಹಾಗೂ ಓಣಂ ಹಬ್ಬದ ಸೌಲಭ್ಯಗಳನ್ನು ಕೆಎಸ್ ಆರ್‌ಟಿಸಿ ನೌಕರರಿಗೆ ಸತತವಾಗಿ ನಿಷೇಧಿಸುವುದನ್ನು  ಪ್ರತಿಭಟಿಸಿ  ಟಿಟಿ ಡಿಎಫ್ ರಾಜ್ಯ ಸಮಿತಿಯ ತೀರ್ಮಾ ನದಂತೆ ಕೆಎಸ್‌ಆರ್‌ಟಿಸಿ ಕಾಸರಗೋಡು ಡಿಪೋ ದಲ್ಲಿ ಉಪವಾಸ ಮುಷ್ಕರ ನಡೆಸಲಾಯಿತು. ಪ್ರತಿಭಟ ನೆಯಂಗವಾಗಿ ಡಿಪೋದಲ್ಲ್ಲಿ ಗಂಜಿ ತಯಾರಿಸಿ ವಿತರಿಸ ಲಾಯಿತು. ಮುಷರವನ್ನು ಡಿಸಿಸಿ ಅಧ್ಯಕ್ಷ ಎಕೆ. ಫೈಸಲ್ ಉದ್ಘಾಟಿಸಿದರು. ಎಡರಂಗ ಸರಕಾರ ಕೆಎಸ್‌ಆರ್‌ಟಿಸಿಯನ್ನು ನಾಶಪಡಿಸುತ್ತಿದೆಯೆಂದವರು ಆರೋಪಿಸಿದರು. ಟಿಡಿಎಫ್ ಅಧ್ಯಕ್ಷ ಪಿ.ಕೆ. ಶಂಸುದ್ದೀನ್ ಅಧ್ಯಕ್ಷತೆ ವಹಿಸಿದರು. …

ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ

ಮುಳ್ಳೇರಿಯ: ಕಾರಡ್ಕ ಕರ್ಮಂತೋಡಿಯಲ್ಲಿ ಬಸ್ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಮುಳ್ಳೇರಿಯ -ಕಾಞಂಗಾಡ್ ರೂಟ್‌ನಲ್ಲಿ ಸಂಚರಿಸುವ ಸೈಂಟ್ ಮೇರೀಸ್ ಬಸ್ ಅಪಘಾತಕ್ಕೀಡಾಗಿದೆ. ಚಾಲಕ ನೆಟ್ಟಣಿಗೆ ನಿವಾಸಿ ಶರತ್ ಗಾಯಗೊಂಡಿದ್ದಾರೆ. ಖಾಲಿ ಬಸ್ ಇಂದು ಬೆಳಿಗ್ಗೆ ಸಂಚಾರ ಆರಂಭಿಸಲು ತೆರಳುವಾಗ ಅಪಘಾತ ಸಂಭವಿಸಿದೆ.

ಇನ್ನು ಕೇರಳ ಅಲ್ಲ ಕೇರಳಂ

ತಿರುವನಂತಪುರ: ಕೇರಳ ರಾಜ್ಯದ ಅಧಿಕೃತ ಹೆಸರನ್ನು ಕೇರಳ ಬದಲಾಗಿ ಕೇರಳಂ ಎಂದು ಬದಲಾಯಿಸುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡುವ ನಿರ್ಣಯವನ್ನು  ರಾಜ್ಯ ವಿಧಾನಸಭೆ ನಿನ್ನೆ ಆಡಳಿತ ಮತ್ತು ವಿಪಕ್ಷಗಳು ಅವಿರೋಧವಾಗಿ ಅಂಗೀಕರಿಸಿದೆ. ಈಗಿರುವ ಕೇರಳ ಎಂಬ ಹೆಸರಲ್ಲಿ ತಿದ್ದುಪಡಿತಂದು  ಕೇರಳಂ ಎಂದಾಗಿ ಬದಲಾಯಿಸುವಂತೆ ಕೇಂದ್ರ ಸರಕಾರದೊಂದಿಗೆ ವಿನಂತಿಸುವ ಈ ನಿರ್ಣಯವನ್ನು   ಸ್ವತಃ ಮುಖ್ಯಮಂತ್ರಿಯವರೇ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ.   ಸರಕಾರಿ ದಾಖಲೆಗಳಲ್ಲಿ ಕೇರಳಂ ಎಂದು ಬಳಕೆಯಾಗುತ್ತಿದ್ದು ಈ ಬದಲಾವಣೆಯಿಂದ ಸಂವಿಧಾನದಲ್ಲಿ ಪ್ರತಿಫಲಿಸುತ್ತಿದೆ ಮತ್ತು ಅಧಿಕೃತವಾಗಿ ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲೂ ಬರೆಯಲಾಗುತ್ತದೆ. …

ಸಾಮಾಜಿಕ ಜಾಲತಾಣದಲ್ಲಿ ಪರಿಚಯಗೊಂಡ ಯುವತಿಯನ್ನು ವಸತಿಗೃಹಕ್ಕೆ ಕರೆತಂದು ಕೊಲೆ: ಯುವಕ ಸೆರೆ

ಕೊಚ್ಚಿ: ಸಾಮಾಜಿಕ ಜಾಲತಾಣ ದಲ್ಲಿ ಪರಿಚಯಗೊಂಡ ಯುವತಿಯನ್ನು ಯುವಕನೋರ್ವ ಕೊಚ್ಚಿ ನಗರದ ವಸತಿಗೃಹವೊಂದಕ್ಕೆ ಕರೆಸಿ ಅಲ್ಲಿ ಆಕೆಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ. ಚಂಗನಾಶ್ಶೇರಿ ನಿವಾಸಿ ಹಾಗೂ ಎರ್ನಾಕುಳಂನ ಲ್ಯಾಬ್ ಒಂದರ ಅಟೆಂಡರ್ ಆಗಿರುವ ರೇಷ್ಮಾ (೨೭) ಕೊಲೆಗೈಯ್ಯಲ್ಪಟ್ಟ ಯುವತಿ. ಈ ಕೊಲೆಗೆ ಸಂಬಂಧಿಸಿ ಕಲ್ಲಿಕೋಟೆಯ ಬಾಲುಶ್ಶೇರಿ ನಿವಾಸಿ ನೌಶಾದ್ (೩೧) ಎಂಬಾತನನ್ನು ಪೊಲೀಸರು ಬಂಧಿಸಿ ದ್ದಾರೆ. ಈತ ಕೊಲೆ ನಡೆದ ವಸತಿಗೃಹದ ಕೇರ್‌ಟೇಕರ್ ಕೂಡಾ ಆಗಿದ್ದಾನೆ. ಕೊಚ್ಚಿ ನಗರದ ವಿಳಿಮರಕರೆಯ ಬಯೋ ಅಪಾರ್ಟ್‌ಮೆಂಟ್‌ನಲ್ಲಿ ನಿನ್ನೆ ರಾತ್ರಿ  …

ಕಣ್ಣೂರು ವಿಮಾನ ನಿಲ್ದಾಣದಲ್ಲಿ ಮುಂದುವರಿದ ಬೇಟೆ: ೭೯ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆ; ಇಬ್ಬರು ವಶಕ್ಕೆ

ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಳ್ಳ ಸಾಗಾಟವಾಗಿ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುವ ದಂಧೆ ಇನ್ನೂ ಎಗ್ಗಿಲ್ಲದೆ ಮುಂದುವರಿಯುತ್ತಿದೆ. ನಿನ್ನೆ ಇದೇ ವಿಮಾನ ನಿಲ್ದಾಣದಲ್ಲಿ  ಏರ್ ಪೋರ್ಟ್ ಪೊಲೀಸರು ಮತ್ತು ಕಸ್ಟಮ್ಸ್ ನಡೆಸಿದ ಎರಡು ಭಿನ್ನ ಕಾರ್ಯಾಚರಣೆಗಳಲ್ಲಾಗಿ ಒಟ್ಟು ೭೯ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಲಾಗಿದೆ. ಈ ಸಂಬಂಧ ಕಾಸರಗೋಡು ನಿವಾಸಿ ಸೇರಿದಂತೆ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಏರ್‌ಪೋರ್ಟ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ೪೬ ಲಕ್ಷ ರೂ. ಮೌಲ್ಯದ ೭೮೨.೯ ಗ್ರಾಂ ಚಿನ್ನ …