ಮುಂಜಾನೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ಕಳ್ಳರು ಪರಾರಿ

ಕಾಸರಗೋಡು: ಮುಂಜಾನೆ ಮನೆ ಬಳಿ ಪಾತ್ರೆ ತೊಳೆಯುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಕಳ್ಳರು ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ನಡೆದಿದೆ. ನೀಲೇಶ್ವರ ಎರಿಕುಳಂನ ವೇಟ ಕ್ಕೊರುಮಗನ್ ಕೊಟ್ಟಾರಂ ಕ್ಷೇತ್ರ ಬಳಿಯ ಕಳರಿಕ್ಕೋತ್ ಸರೋಜಮ್ಮ (೬೮) ಎಂಬವರ ಚಿನ್ನದ ಸರವನ್ನು ಎಗರಿಸಲಾಗಿದೆ. ಮುಂಜಾನೆ ೪.೩೦ಕ್ಕೆ ನಾನು ಮನೆಯ ಹೊರಗೆ ಪಾತ್ರೆ ತೊಳೆಯುತ್ತಿದ್ದ ವೇಳೆ ಅಲ್ಲಿ ಬಂದ ಇಬ್ಬರು ಕಳ್ಳರು ತನ್ನ ಬಾಯಿ ಮತ್ತು ಮೂಗನ್ನು ಬಿಗಿಯಾಗಿ ಒತ್ತಿ ಹಿಡಿದು ನನ್ನ ಕುತ್ತಿಗೆಯಲ್ಲಿದ್ದ ಮೂರು ಪವನ್‌ನ ಚಿನ್ನದ ಸರ ಎಗರಿಸಲೆತ್ನಿಸಿದ್ದರು. …

ಕೊಡ್ಯಮ್ಮೆಯಲ್ಲಿ ಇಂಡೋರ್ ಸ್ಟೇಡಿಯಂ  ನಿರ್ಮಾಣ: ಮಣ್ಣು ಪರಿಶೋಧನೆ ಆರಂಭ

ಕುಂಬಳೆ: ಕೊಡ್ಯಮ್ಮೆ ಸರಕಾರಿ ಪ್ರೌಢ ಶಾಲೆ ಮೈದಾನಕ್ಕೆ ಆಧುನಿಕ ವ್ಯವಸ್ಥೆಗಳೊಂದಿಗೆ ನಿರ್ಮಿಸುವ ಮಲ್ಟಿ ಪರ್ಪಸ್ ಇಂಡೋರ್ ಸ್ಟೇಡಿಯಂನ ಆರಂಭಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಯೋಜನೆಯ ಪೂರ್ವಭಾವಿಯಾಗಿ ಮಣ್ಣು ಪರಿಶೀಲನೆ ಆರಂಭಿಸಲಾಗಿದೆ. ಕಾಸರಗೋಡು ಅಭಿವೃದ್ಧಿ, ಪ್ಯಾಕೇಜ್‌ನಲ್ಲಿ ಒಳಪಡಿಸಿ ಎರಡು ಕೋಟಿ ರೂಪಾಯಿ ಖರ್ಚಿನಲ್ಲಿ ಮಂಜೇಶ್ವರ ಮಂಡಲದ ಮೊದಲ ಮಲ್ಟಿ ಪರ್ಪಸ್ ಇಂಡೋರ್ ಸ್ಟೇಡಿಯಂ ನಿರ್ಮಿಸಲು ಯೋಜನೆಯಿರಿಸಲಾಗಿದೆ. ಈ ಯೋಜನೆಗೆ ಈ ಹಿಂದೆಯೇ ಆಡಳಿತಾನುಮತಿ ಲಭಿಸಿದೆ. ೨೦೧೫ರಲ್ಲಿ ಶಾಸಕರಾಗಿದ್ದ ಪಿ.ಬಿ. ಅಬ್ದುಲ್ ರಜಾಕ್ ನೀಡಿದ ಮನವಿಯ ಹಿನ್ನೆಲೆಯಲ್ಲಿ ಯೋಜನೆಗೆ ಸರಕಾರ …

ಅಸೌಖ್ಯ: ಯುವಕ ನಿಧನ

ಪೆರ್ಲ: ಅಸೌಖ್ಯ ನಿಮಿತ್ತ ಚಿಕಿತ್ಸೆಯಲ್ಲಿದ್ದ ಸೇರಾಜೆ ನಿವಾಸಿ, ಕೂಲಿ ಕಾರ್ಮಿಕ ಸತೀಶ (೪೦) ನಿಧನಹೊಂದಿದರು. ಕಳೆದ ಕೆಲವು ದಿನಗಳಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದರು, ಮೊನ್ನೆ ರೋಗ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಕಣ್ಣೂರು ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಅವರ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಅವಿವಾಹಿತರಾದ ಮೃತರ ತಂದೆ ಮಾಣಿ, ತಾಯಿ ಕಮಲಾ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಸಹೋದರ ಗಣೇಶ, ಸಹೋದರಿಯರಾದ ಶಕೀಲಾ, ಸುಶೀಲಾ, ಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ‘ಕಾರವಲ್’ ಪತ್ರಿಕೆಯ ತುಳು ವಿಭಾಗದಲ್ಲಿ …

ಬೆಳ್ಳೂರು ಪಂ. ಮಾಜಿ ಸದಸ್ಯ ಶತಾಯುಷಿ ನಿಧನ

ಮುಳ್ಳೇರಿಯ: ಬೆಳ್ಳೂರು ಸಬ್ರಕಜೆ ನಿವಾಸಿ ಶತಾಯುಷಿ ದೇವರಗುತ್ತು ರಾಮಕೃಷ್ಣ ರೈ (೧೦೧) ನಿಧನಹೊಂದಿದರು. ಬೆಳ್ಳೂರು ಪಂ. ಮಾಜಿ ಸದಸ್ಯರಾಗಿದ್ದ ಇವರು ಸಾಮಾಜಿಕ, ಧಾರ್ಮಿಕ, ರಾಜ ಕೀಯ  ರಂಗದಲ್ಲಿ ಸಕ್ರಿಯರಾಗಿದ್ದರು. ಪ್ರಗತಿಪರ ಕೃಷಿಕರಾಗಿದ್ದರು.  ಪತ್ನಿ ಚಂದ್ರಬಾಗಿ ಈ ಹಿಂದೆ ನಿಧನಹೊಂದಿದ್ದಾರೆ. ಮೃತರು ಮಕ್ಕಳಾದ ಶ್ರೀಧರ ರೈ, ದಾಮೋ ದರ ರೈ, ಪುರಂದರ ರೈ, ಹೇಮಾವತಿ, ಸಾವಿತ್ರಿ,ಭವಾನಿ, ಶಾರದ, ಇಂದಿರಾ, ಅಳಿಯಂದಿರಾದ ಗಂಗಾಧರ ರೈ, ರಘುನಾಥ ರೈ, ಶುಭಕರ ಮಾಡ, ಸೊಸೆಯಂದಿರಾದ ಪ್ರೇಮಾವತಿ, ದೇವಕಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. …

ಹಿಮಾಚಲ ಪ್ರದೇಶದಲ್ಲಿ ಭೂಕಂಪ

ಸಿಮ್ಲಾ: ಹಿಮಾಚಲ ಪ್ರದೇಶದ ಲೌಹೌಲ್ ಸ್ಥಿತಿ ಜಿಲ್ಲೆಯಲ್ಲಿ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ರಿಕ್ಟರ್ ಮಾಪಕದಲ್ಲಿ ೩.೪ ತೀವ್ರತೆಯಲ್ಲಿ  ಭೂಕಂಪ ಸಂಭವಿಸಿದೆಯೆಂದು ಹೇಳಿದೆ. ಲೌಹೌಲ್ ಸ್ಥಿತಿಯಲ್ಲಿ ಕಂಪನದಿಂದಾಗಿ ಇದ್ದಕ್ಕಿದ್ದಂತೆ ರಾತ್ರಿ ಮನೆಗಳು ನಡುಗಲಾರಂಭಿಸಿದವು. ಜನರು ಭಯಭೀತರಾಗಿ ಮನೆಯಿಂದ ಹೊರ ಓಡಿದ್ದಾರೆ.  ಭಾರತೀಯ ಕಾಲಮಾನ ಪ್ರಕಾರ ನಿನ್ನೆ ರಾತ್ರಿ ೧೧.೨೦ಕ್ಕೆ  ೧೧ ಸೆಕೆಂಡು ಕಂಪನದ ಅನುಭವವಾಗಿದೆ. ಆದರೆ ಇದರಿಂದ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ …

ಅವಿಶ್ವಾಸ ಗೊತ್ತುವಳಿ : ಸಂಸತ್‌ನಲ್ಲಿ ಪ್ರಧಾನಿ  ಉತ್ತರ ಇಂದು

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸರಕಾರವನ್ನು ಮೂಲೆಗುಂಪು ಮಾಡುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಪ್ರಧಾನಮಂತ್ರಿ ನರೇಂದ್ರಮೋದಿ ಸಂಸತ್‌ನಲ್ಲಿ ಇಂದು ಉತ್ತರ ನೀಡಲಿದ್ದಾರೆ.  ಮಣಿಪುರದಲ್ಲಿ ಕೇಂದ್ರ ಸರಕಾರ ದೊಡ್ಡ ವಿಭಜನೆಯನ್ನು ಸೃಷ್ಟಿಸುತ್ತಿದೆಯೆಂದು ವಿರೋಧಪಕ್ಷಗಳು ಕಳೆದ ಎರಡು ದಿನಗಳಿಂದ ಸಂಸತ್‌ನಲ್ಲಿ ಸರಕಾರದ ವಿರುದ್ಧ ರಂಗಕ್ಕಿಳಿದಿದೆ. ಅದಕ್ಕೆ ಪ್ರತಿಯಾಗಿ ಸಚಿವ  ಅಮಿತ್ ಷಾ ಸೇರಿದಂತೆ ಸರಕಾರವು ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡಿದೆ. ಸರಕಾರ ಪ್ರಾಥಮಿಕವಾಗಿ ತನ್ನ ಕಲ್ಯಾಣ ಕಾರ್ಯಗಳ ಮೇಲೆ  ಗಮನಹರಿಸಿದೆ. ನಿನ್ನೆ ಸಂಸತ್‌ನ್ನು ಉದ್ದೇಶಿಸಿ ಮಾತನಾಡಿದ …

ಪುದುಪಳ್ಳಿ ವಿಧಾನಸಭೆಗೆ ಉಪ ಚುನಾವಣೆ: ಚಾಂಡಿ ಉಮ್ಮನ್ ಯುಡಿಎಫ್ ಉಮೇದ್ವಾರ

ತಿರುವನಂತಪುರ: ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‌ನ ಹಿರಿಯ ನೇತಾರ ಉಮ್ಮನ್‌ಚಾಂಡಿಯವರ ನಿಧನದಿಂದ ತೆರವುಗೊಂಡ ಕೋಟಯಂ ಜಿಲ್ಲೆಯ ಪುದುಪಳ್ಳಿ ವಿಧಾನಸಭೆಗೆ ಸೆಪ್ಟಂಬರ್ ೫ರಂದು ಉಪ ಚುನಾವಣೆ ನಡೆಯಲಿದೆ. ಪುದುಪಳ್ಳಿ ವಿಧಾನಸಭಾ ಕ್ಷೇತ್ರವನ್ನು ಸತತ ೫೨ ವರ್ಷದ ದೀರ್ಘಕಾಲ ಶಾಸಕರಾಗಿ ಪ್ರತಿನಿಧಿಕರಿಸಿದ್ದ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿಯವರ ಪುತ್ರ ಚಾಂಡಿ ಉಮ್ಮನ್‌ರನ್ನೇ ಉಪ ಚುನಾವಣೆಯಲ್ಲಿ ಉಮೇದ್ವಾರರನ್ನಾಗಿ ಕಣಕ್ಕಿಳಿಸಲು ಯುಡಿಎಫ್ ತೀರ್ಮಾನಿಸಿದೆ. ಎಡರಂಗ ಉಮೇದ್ವಾರರನ್ನು ಇನ್ನಷ್ಟೇ ತೀರ್ಮಾನಿಸಬೇಕಾಗಿದೆ.  ೨೦೨೧ರಲ್ಲಿ ನಡೆದ ಚುನಾವಣೆಯಲ್ಲಿ ಪುದುಪಳ್ಳಿ ವಿಧಾನಸಭೆಯಲ್ಲಿ ೧,೭೫, ೯೫೯ ಮತದಾರರ ಪೈಕಿ ೧,೩೧,೭೯೭ ಮಂದಿ ತಮ್ಮ …

ದಾನಿಗಳ, ಸರಕಾರದ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

ಸೀತಾಂಗೋಳಿ: ಅಸೌಖ್ಯ ಬಾಧಿತ ತಾಯಿ ಹಾಗೂ ಪುತ್ರ ವಾಸಿಸುವ ಮನೆಯೊಂದು ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಮುಖಾರಿಕಂಡದಲ್ಲಿ ಪರಿಶಿಷ್ಟ ಜಾತಿಗೊಳಪಟ್ಟ ಕಮಲ (೬೦) ಹಾಗೂ ಪುತ್ರ ರಮೇಶ್ (೪೦) ವಾಸಿಸುವ ಮನೆಯ ಸ್ಥಿತಿ ಇದಾಗಿದೆ. ಕಮಲರಿಗೆ ಪಕ್ಷವಾತ ಬಾಧಿಸಿ ನಡೆದಾಡಲು ಸಾಧ್ಯವಾಗುತ್ತಿಲ್ಲ. ಗಾಲಿಕುರ್ಚಿ ಮೂಲಕವೇ ಅತ್ತಿತ್ತ ಸಾಗಬೇಕಾಗಿದೆ. ಇವರ ಪುತ್ರ ರಮೇಶನಿಗೂ ಅಸೌಖ್ಯ ಬಾಧಿಸಿದ್ದು, ಇದರಿಂದ ಕೂಲಿ ಕಾರ್ಮಿಕನಾದ ಇವರಿಗೆ ಹೆಚ್ಚು ದುಡಿಯಲು ಸಾಧ್ಯವಾಗುತ್ತಿಲ್ಲ. ಆದರೂ ಜೀವನ ಸಾಗಿಸಲು ರಮೇಶ ಕೆಲಸಕ್ಕೆ …

ಗೂಡಂಗಡಿ ಮೇಲೆ ದಾಳಿ: ಪ್ರಕರಣ ದಾಖಲು 

ಕಾಸರಗೋಡು: ಪಾಣತ್ತೂರಿನಲ್ಲಿ  ಗೂಡಂಗಡಿ ನಡೆಸುತ್ತಿರುವ ಚೆಂಬೇರಿಯ ಪಿ.ಸಿ. ಶಾಜಿ ಎಂಬವರ ಮೇಲೆ ಹಲ್ಲೆ ನಡೆಸಿ ಅವರ ಗೂಡಂಗಡಿಗೆ ಹಾನಿಗೊಳಿಸಿ ಆ ಮೂಲಕ ೫೦೦೦ ರೂ. ನಷ್ಟ ಉಂಟುಮಾಡಿದ ದೂರಿನಂತೆ ಯುವಕನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ದೂರಿನಂತೆ ಚೆಂಬೇರಿಯ ರಿಯಾಸ್ ಎಂಬಾತನ ವಿರುದ್ಧ ರಾಜಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಹಾನಿ: ೨ ಲಕ್ಷ ರೂ. ನಷ್ಟ

ಕಾಸರಗೋಡು: ವಿದ್ಯಾನಗರ ಸಮೀಪದ ಉದಯಗಿರಿಯಲ್ಲಿ ಸ್ಟೇಟ್ ಲೈಬ್ರೆರಿ ಕೌನ್ಸಿಲ್‌ಗಾಗಿ ನೂತನವಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದೊಳಗೆ ನುಗ್ಗಿ ಅದರ ಬಾಗಿಲು, ಕಿಟಿಕಿ ಗಾಜು, ಫ್ಯಾನ್ ಇತ್ಯಾದಿಗಳನ್ನು ಒಡೆದು ಹಾನಿಗೊಳಿಸಲಾಗಿದೆಯೆಂದು ದೂರಿ ಪ್ರಸ್ತುತ ಕಟ್ಟಡದ ನಿರ್ಮಾಣ ಹೊಣೆಗಾರಿಕೆ ಹೊಂದಿರುವ ಸಂಸ್ಥೆಯ ಸೈಟ್ ಮೆನೇಜರ್ ಸತೀಶನ್ ಕೆ.ವಿ. ಕಾಸರಗೋಡು ಪೊಲೀಸರಿಗೆ ದೂರು ನೀಡದ್ದಾರೆ.  ಇದರಿಂದ ಎರಡು ಲಕ್ಷ ರೂ.ಗಳ  ನಷ್ಟ ಲೆಕ್ಕಹಾಕಲಾಗಿದೆ. ಇದು ಸಮಾಜಘಾತಕ ಕೃತ್ಯವಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.