ರಾಜ್ಯ ಶಾಲಾ ಕಲೋತ್ಸವ  ಜನವರಿ 7ರಿಂದ ತೃಶೂರಿನಲ್ಲಿ

ತಿರುವನಂತಪುರ: 64ನೇ ಕೇರಳ ರಾಜ್ಯ ಶಾಲಾ ಕಲೋತ್ಸವದ ದಿನಾಂಕಗಳನ್ನು ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಘೋಷಿಸಿದ್ದಾರೆ. 2026 ಜನವರಿ 7ರಿಂದ 11ರ ವರೆಗೆ ತೃಶೂರು ಜಿಲ್ಲೆಯಲ್ಲಿ ಕಲೋತ್ಸವ ನಡೆಯಲಿದೆ. ಕಲೋತ್ಸವಕ್ಕೆ 25ರಷ್ಟು ವೇದಿಕೆಗಳನ್ನು ನಿರ್ಮಿಸಲಾಗುವುದು. ಸಂಸ್ಕೃತೋತ್ಸವ, ಅರಬಿಕ್ ಸಾಹಿತ್ಯೋತ್ಸವವನ್ನು ಇದರೊಂದಿಗೆ ನಡೆಸಲಾಗುವುದು. ರಾಜ್ಯ ಕಲೋತ್ಸವದ ಪೂರ್ವಭಾವಿಯಾಗಿ ಶಾಲಾ ಮಟ್ಟದ ಸ್ಪರ್ಧೆಗಳನ್ನು ಸೆಪ್ಟಂಬರ್ ತಿಂಗಳಲ್ಲೂ, ಉಪಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಅಕ್ಟೋಬರ್ ದ್ವಿತೀಯ ವಾರದಲ್ಲೂ, ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ನವಂಬರ್ ತಿಂಗಳ ಮೊದಲ ವಾರ ಪೂರ್ತಿಗೊಳಿಸಬೇಕಾಗಿದೆ.  2025-26ನೇ ಶೈಕ್ಷಣಿಕ …

ದೆಹಲಿಯಲ್ಲಿ ಸಂಸದೆಯ ಮಾಲೆ ಅಪಹರಿಸಿದ ಆರೋಪಿ ಸೆರೆ

ದೆಹಲಿ: ಅತ್ಯಂತ ಭದ್ರತೆ ಇರುವ ಸ್ಥಳದಲ್ಲಿ ಕಾಂಗ್ರೆಸ್ ಸಂಸದೆ ಆರ್. ಸುಧಾರ ಕುತ್ತಿಗೆಯಿಂದ ಮಾಲೆ ಅಪಹರಿಸಿದ ಘಟನೆಯಲ್ಲಿ ಆರೋಪಿ ಸೆರೆಯಾಗಿದ್ದಾನೆ. ಆರೋಪಿಯಿಂದ ಪೊಲೀಸರು ಮಾಲೆ ಯನ್ನು ಪತ್ತೆಹಚ್ಚಿದ್ದಾರೆ. ಸೋಮವಾರ ಮುಂಜಾನೆ ನಡೆಯಲೆಂದು ತೆರಳುತ್ತಿದ್ದ ಸಂಸದೆಯ ಕುತ್ತಿಗೆಯಲ್ಲಿದ್ದ ೪ ಪವನ್‌ನ ಚಿನ್ನದ ಮಾಲೆಯನ್ನು ಅಪಹರಿಸಲಾಗಿದೆ. ಸ್ಕೂಟರ್‌ನಲ್ಲಿ ತಲುಪಿದ ತಂಡ ಮಾಲೆ ಅಪಹರಿಸಿ ಪರಾರಿಯಾಗಿದೆ. ತಮಿಳು ನಾಡಿನ ಮೈಲಾಡುತುರೈಯಿಂ ದಿರುವ  ಸಂಸದೆಯಾಗಿದ್ದಾರೆ ಸುಧಾ ರಾಮಕೃಷ್ಣನ್. ಇವರು ದೆಹಲಿ ಪೊಲೀಸರಿಗೆ ಹಾಗೂ ಅಮಿತ್ ಷಾರಿಗೆ ದೂರು ನೀಡಿದ್ದರು. ಅಲ್ಲದೆ ಆ ದಾರಿಯಲ್ಲಿ …

ಬಿಎಂಎಸ್ ಕುಂಬ್ಡಾಜೆ ಪಂ. ಸಮಿತಿ ಕುಟುಂಬ ಸಂಗಮ

ಕುಂಬ್ಡಾಜೆ: ಬಿಎಂಎಸ್ ಕುಂಬ್ಡಾಜೆ ಪಂಚಾಯತ್ ಸಮಿತಿ ಕುಟುಂಬ ಸಂಗಮ ಪೊಡಿಪ್ಪಳ್ಳ ಶ್ರೀ ಶಾರದಾಂಬ ಬಾಲಗೋಕುಲದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಸಹ ಕಾರ್ಯದರ್ಶಿ ದಿನೇಶನ್ ಉದ್ಘಾಟಿಸಿದರು. ಬಿಎಂಎಸ್ ಪಂ. ಸಮಿತಿ ಅಧ್ಯಕ್ಷ ನಾರಾಯಣ ಪದ್ಮಾರ್, ವಲಯ ಕಾರ್ಯದರ್ಶಿ ಸದಾಶಿವ ಪಣಿಯೆ, ಆರ್‌ಎಸ್‌ಎಸ್ ಕುಂಬ್ಡಾಜೆ ಮಂಡಲ ಕಾರ್ಯ ವಾಹ್ ಕೃಷ್ಣಪ್ರಸಾದ್, ವಲಯ ಸದಸ್ಯ ರಾಮಕೃಷ್ಣ ಪೊಡಿಪ್ಪಳ್ಳ, ಕೋಶಾಧಿಕಾರಿ ವಿಜಯ ಕುಮಾರ್ ಕುರುಮುಜ್ಜಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಎಂಎಸ್‌ನ ಹಿರಿಯ ಸದಸ್ಯ ಕೃಷ್ಣ ರೈ ಬೆಳಿಂಜ ಇವರನ್ನು ಸನ್ಮಾನಿಸಲಾಯಿತು. ಬಿಎಂಎಸ್ ಕುಂಬ್ಡಾಜೆ ಪಂ. …

ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ತುರ್ತಾಗಿ ಡಾಕ್ಟರ್‌ಗಳ ನೇಮಕಕ್ಕೆ ಎನ್‌ಎಂಸಿ ಆಗ್ರಹ

ಕುಂಬಳೆ: ಗ್ರಾಮ ಹಾಗೂ ನಗರಗಳಲ್ಲಿ ಜನರು ಜ್ವರ ಬಾಧಿಸಿ ಸಂಕಷ್ಟ ಅನುಭವಿಸುವಾಗ ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇನ್ನಷ್ಟು ಸಮಸ್ಯೆಗೆ ಕಾರಣವಾಗಿದೆ. ಸಂಜೆ ೫  ಗಂಟೆ ಬಳಿಕ ಇಲ್ಲಿ ಡಾಕ್ಟರ್‌ಗಳು ಇಲ್ಲದ ಸ್ಥಿತಿಯಿದೆ. ಇದರಿಂದಾಗಿ ಬಡ ಜನರು ಖಾಸಗಿ ಆಸ್ಪತ್ರೆಗಳನ್ನು ಆಶ್ರಯಿಸಬೇಕಾಗುತ್ತಿದ್ದು, ಅಲ್ಲಿನ ಬೃಹತ್ ಮೊತ್ತ ನೀಡಲು ಸಾಧ್ಯವಾಗದೆ ತೊಂದರೆಗೀಡಾಗಿ ದ್ದಾರೆ. ಕುಂಬಳೆ ಸರಕಾರಿ ಆಸ್ಪತ್ರೆಯಲ್ಲಿ ಹೆಚ್ಚುವರಿ ಡಾಕ್ಟರ್‌ಗಳನ್ನು ಹಾಗೂ ನೌಕರರನ್ನು ನೇಮಕಗೊಳಿಸಬೇ ಕೆಂದು ಆಗ್ರಹಿಸಿ ಎನ್‌ಸಿಪಿಯ ಮಹಿಳಾ ಸಂಘಟನೆಯಾದ ಎನ್‌ಎಂಸಿ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ …

ಮಗುವಿಗೆ ಜನ್ಮ ನೀಡಿದ 17ರ ಬಾಲಕಿ; ಕುಂಬ್ಡಾಜೆ ನಿವಾಸಿ ಯುವಕ ಪೋಕ್ಸೋ ಪ್ರಕಾರ ಬಂಧನ : ಮಗುವನ್ನು ಅನಾಥಾಲಯಕ್ಕೆ ಹಸ್ತಾಂತರಿಸಲಿರುವ ಪ್ರಯತ್ನ ವಿಫಲ

ಬದಿಯಡ್ಕ:  ಲೈಂಗಿಕ ದೌರ್ಜನ್ಯಕ್ಕೊಳ ಗಾದ 17ರ ಹರೆಯದ ಬಾಲಕಿ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ.  ಈ ವಿಷಯ ವನ್ನು ಗುಟ್ಟಾಗಿರಿಸಿ ಮಗುವನ್ನು ಅನಾಥಾಲ ಯಕ್ಕೆ  ಹಸ್ತಾಂತರಿಸಲಿರುವ  ಪ್ರಯತ್ನದ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿ ಗರ್ಭಿಣಿಯಾಗಲು  ಕಾರಣಕರ್ತನಾದ  ರಕ್ತಸಂಬಂ ಧವಿರುವ ಯುವಕನನ್ನು ಬದಿಯಡ್ಕ ಪೊಲೀಸರು ಪೋಕ್ಸೋ ಪ್ರಕಾರ ಬಂಧಿಸಿದ್ದಾರೆ. ಕುಂಬ್ಡಾಜೆ ಪಂಚಾಯತ್ ವ್ಯಾಪ್ತಿಯ ನಿವಾಸಿಯೂ ಪತ್ನಿ ಹಾಗೂ ಮೂವರು ಮಕ್ಕಳಿರುವ 39 ರ ಹರೆಯದ ಯುವಕ ಸೆರೆಗೀ ಡಾಗಿದ್ದಾನೆ. ಆರೋಪಿ ಬದಿಯಡ್ಕ ಪೊಲೀಸ್ ಠಾಣೆ …

9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ: ಆಟೋ ಚಾಲಕ ಬಂಧನ

ಕಾಸರಗೋಡು:  9ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆಟೋ ರಿಕ್ಷಾ ಚಾಲಕನನ್ನು ಪೊಕ್ಸೋ ಪ್ರಕಾರ ಬಂಧಿಸಲಾಗಿದೆ. ಮಾತಮಂಗಲದಲ್ಲಿ ಆಟೋ ರಿಕ್ಷಾ ಚಾಲಕನಾಗಿರುವ ಕಾನಾಯಿ ನಿವಾಸಿ ಅನೀಶ್ (40) ಬಂಧಿತ ಆರೋಪಿ. ಜೂನ್ ೪ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ. ಅನೀಶ್ ಬಾಲಕಿಯ ತಾಯಿಯನ್ನು ಈ ಹಿಂದೆ ಸೋಶ್ಯಲ್ ಮೀಡಿಯಾ ಮೂಲಕ ಪರಿಚಯಗೊಂಡಿದ್ದನು.  ಅನಂತರ ಅನೀಶ್, ಬಾಲಕಿಯ ತಾಯಿಯಾದ ಯುವತಿ ಹಾಗೂ ಮೂವರು ಮಕ್ಕಳು ಪರಶ್ಶಿನಿ ಕಡವಿಗೆ ತೆರಳಿ ಅಲ್ಲಿನ ಲಾಡ್ಜ್‌ನಲ್ಲಿ ತಂಗಿದ್ದರು. ಮುಂಜಾನೆ ೨ ಗಂಟೆ …

ಕೆಂಪುಕೋಟೆಗೆ ನುಗ್ಗಲೆತ್ನಿಸಿದ ಐವರು ಬಾಂಗ್ಲಾ ಪ್ರಜೆಗಳ ಸೆರೆ

ನವದೆಹಲಿ:  ಕೆಂಪುಕೋಟೆಗೆ ಅಕ್ರಮವಾಗಿ ನುಗ್ಗಲೆತ್ನಿಸಿದ ಬಾಂಗ್ಲಾ ದೇಶದ ಐವರು ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬರುವ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಗೆ ಬಿಗಿ ಭದ್ರತೆ ಏರ್ಪಡಿಸ ಲಾಗಿದೆ. ಭದ್ರತಾ ಕ್ರಮಗಳ ನಡುವೆಯೇ ಕೆಂಪು ಕೋಟೆಯೊಳಗೆ ಅಕ್ರಮವಾಗಿ ನುಗ್ಗಲು  ಐವರು ಬಾಂಗ್ಲಾ ಪ್ರಜೆಗಳು ಯತ್ನಿಸುತ್ತಿರುವುದನ್ನು ಗಮನಿಸಿದ ಪೊಲೀಸರು ತಕ್ಷಣ ಅವರನ್ನು ಸೆರೆ ಹಿಡಿದಿದ್ದಾರೆ. ಬಂಧಿತರಾದ ಈ ಐವರು 20ರಿಂದ 25ರ ನಡುವಿನ ವಯೋಮಿತಿಯವರಾಗಿದ್ದಾರೆ. ಇವರು ನಾಲ್ಕು ತಿಂಗಳ ಹಿಂದೆ ಗಡಿ ಪ್ರದೇಶ ದಿಂದ ಅಕ್ರಮವಾಗಿ ಭಾರತದೊಳಗೆ ನುಸುಳಿ ಬಂದಿರುವುದಾಗಿ …

10 ತಿಂಗಳ ಹಿಂದೆ ನಾಪತ್ತೆಯಾಗಿ ಮರಳಿದ್ದ ಯುವತಿ ಮತ್ತೆ ನಾಪತ್ತೆ

ಬದಿಯಡ್ಕ: ಮೂರು ಮಕ್ಕಳ ತಾಯಿ ನಾಪತ್ತೆಯಾದ ಘಟನೆ ನಡೆದಿದೆ. ಬದಿಯಡ್ಕ ಬಳಿಯ ಅರ್ತಿಪಳ್ಳ ನಿವಾಸಿ ವಿಜಯಶ್ರೀ (33) ನಾಪತ್ತೆಯಾಗಿರುವುದಾಗಿ ದೂರು ನೀಡಲಾಗಿದೆ. ನಿನ್ನೆ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಇವರು ಹಿಂತಿರುಗಿರಲಿಲ್ಲ. ತಾನು ಇನ್ನು ಮನೆಗೆ  ಹಿಂತಿರುಗುವುದಿಲ್ಲವೆಂದು ಕಾಗದ ಬರೆದಿಟ್ಟು ತೆರಳಿದ್ದು, ಈ ಬಗ್ಗೆ ಪತಿ ಸತೀಶ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 10 ತಿಂಗಳ ಹಿಂದೊಮ್ಮೆ ನಾಪತ್ತೆಯಾಗಿದ್ದ ಈಕೆಯನ್ನು ಹುಡುಕಿ ಮರಳಿ ತರಲಾಗಿತ್ತು.

ಅನಧಿಕೃತ ಹೊಯ್ಗೆ ಸಂಗ್ರಹ ವಿರುದ್ದ ಪೊಲೀಸ್ ಕಾರ್ಯಾಚರಣೆ: 25 ಕಡವುಗಳು, 10 ದೋಣಿಗಳ ನಾಶ

ಕುಂಬಳೆ: ಮಳೆಗೆ ಅಲ್ಪ ಶಮನ ಉಂಟಾಗುತ್ತಿದ್ದಂತೆ ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವ ದಂಧೆ ಮತ್ತೆ ತೀವ್ರಗೊಂಡಿದೆ. ಇದರ ವಿರುದ್ದ ಕುಂಬಳೆ ಪೊಲೀಸ್ 25 ಅನಧಿಕೃತ ಕಡವುಗಳನ್ನು ಜೆಸಿಬಿ ಬಳಸಿ ನಾಶಗೊಳಿಸಲಾಗಿದೆ. ಹೊಯ್ಗೆ ಸಂಗ್ರಹಕ್ಕೆ ಬಳಸುತ್ತಿದ್ದ 10 ದೋಣಿಗಳನ್ನು ಪುಡಿಗೈಯ್ಯಲಾಗಿದೆ. ಹೊಯ್ಗೆ ಮಾಫಿಯಾ ತಂಡಗಳು ಕಡವು ಹಾಗೂ ಸಮೀಪದಲ್ಲಿ ಬಚ್ಚಿಟ್ಟಿದ್ದ 25ಲೋಡ್ ಹೊಯ್ಗೆ ಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.  ಇದರಲ್ಲಿ ಅರ್ಧದಷ್ಟು ಹೊಯ್ಗೆಯನ್ನು ಠಾಣೆ ಪರಿಸರಕ್ಕೆ ತಲುಪಿಸಲಾಗಿದೆ. ಬಾಕಿ ಹೊಯ್ಗೆಯನ್ನು ಹೊಳೆಗೆ ಸುರಿಯಲಾಯಿತು. ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ …

ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ, ನಗದು ಪತ್ತೆ: ಕಾರು ಸಹಿತ ಓರ್ವ ಕಸ್ಟಡಿಗೆ

ಬೃಹತ್ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನ, ನಗದು ಪತ್ತೆ: ಕಾರು ಸಹಿತ ಓರ್ವ ಕಸ್ಟಡಿಗೆಕಾಸರಗೋಡು: ಕಾಸರಗೋಡು ಮತ್ತು ವಿದ್ಯಾನಗರ ಪೊಲೀಸರು ನಿನ್ನೆ ನಡೆಸಿದ ಪ್ರತ್ಯೇಕ ಕಾರ್ಯಾಚರಣೆ ಗಳಲ್ಲಾಗಿ ಕೇರಳದಲ್ಲಿ ನಿಷೇಧ ಹೇರಲಾಗಿರುವ ಬೃಹತ್ ಪ್ರಮಾಣದ ತಂಬಾಕು ಉತ್ಪನ್ನ ಮತ್ತು ನಗದು ಪತ್ತೆಹಚ್ಚಲಾಗಿದೆ. ಇದಕ್ಕೆ ಸಂಬAಧಿಸಿ ಓರ್ವನನ್ನು ಕಾರು ಸಹಿತ ವಶಕ್ಕೆ ತೆಗೆದು ಕೇಸು ದಾಖಲಿಸಲಾಗಿದೆ.ಉಳಿಯತ್ತಡ್ಕ ಸಮೀಪದ ಚೆಟ್ಟುಂಗುಳಿ ಹಿದಾಯತ್ ನಗರದ ಜನವಾಸವಿಲ್ಲದ ಮನೆಯೊಂದಕ್ಕೆ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ. ಅಜಿತ್ರ ನೇತೃತ್ವದಲ್ಲಿ ಡಾನ್ಸಾಫ್ ಟೀಮ್ …